Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
18 ವರ್ಷಗಳ ಬಳಿಕ ಭೂಮಿ ಪುತ್ರ ಮಂಗಳನಿಂದ ಮಹಾ ಯೋಗ: ಲಕ್ಷ್ಮಿ ಆಶೀರ್ವಾದ ಪಡೆಯುವ ರಾಶಿಗಳಿವು
ಗ್ರಹಗಳ ಚಲನೆಯಿಂದ ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುತ್ತವೆ. ಅದ್ರಲ್ಲೂ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಹಲವು ಗ್ರಹಗಳ ಚಲನೆ ನೋಡಬಹುದು. ಇದರಿಂದ ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡಲಿದೆ. ಹಾಗೆ ಗ್ರಹಗಳಲ್ಲಿ ಪ್ರಮುಖವಾಗಿ ನಾವಿಂದು ಮಂಗಳ ಗ್ರಹದ ಸಂಚಾರ ಕುರಿತಾಗಿ ತಿಳಿದುಕೊಳ್ಳೋಣ.
ಗ್ರಹಗ ಅಧಿಪತಿಯಾದ ಮಂಗಳವನ್ನು ಒಂಬತ್ತು ಗ್ರಹಗಳಲ್ಲಿ ಬಹಳ ಮುಖ್ಯವಾದ ಗ್ರಹವೆಂದು ಪರಿಗಣಿಸಲಾಗಿದೆ. ಅಕ್ಟೋಬರ್ 27 ರಂದು ಗ್ರಹಗಳ ಅಧಿಪತಿಯಾದ ಮಂಗಳವು ತನ್ನ ರಾಶಿ ಬದಲಾಯಿಸಿತು ಮತ್ತು ತನ್ನದೇ ಆದ ವೃಶ್ಚಿಕ ರಾಶಿಯನ್ನು ಪ್ರವೇಶಿಸಿದೆ. ಈ ಸಂಚಾರವು ಅತ್ಯಂತ ಮಹತ್ವ ಎನಿಸಿದೆ. ಗ್ರಹವೊಂದು ತನ್ನ ಸ್ವಂತ ರಾಶಿಗೆ ಚಲಿಸಿದಾಗ ಅದರ ಪ್ರಭಾವ ಹೆಚ್ಚಾಗುತ್ತದೆ.

ಈಗ ಮಂಗಳನು ಡಿಸೆಂಬರ್ 7ರ ವರೆಗೂ ವೃಶ್ಚಿಕ ರಾಶಿಯಲ್ಲಿ ಚಲಿಸಲಿದ್ದಾನೆ. ಇದರಿಂದ ಹಲವು ರಾಶಿಗಳಲ್ಲಿ ಬದಲಾವಣೆಗಳು ನೋಡಬಹುದು. ಅದ್ರೆ ಈ ಸಮಯದಲ್ಲಿ ಮತ್ತೊಂದು ಗ್ರಹದೊಂದಿಗೆ ಸಂಯೋಗವಾಗುವುದು ಸಹ ನೋಡಬಹುದು. ಪ್ರಸ್ತುತ ಸೂರ್ಯ ಮತ್ತು ಬುಧ ಮಂಗಳನೊಂದಿಗೆ ವೃಶ್ಚಿಕದಲ್ಲಿ ಚಲಿಸುತ್ತಿದ್ದಾರೆ.
ನವೆಂಬರ್ 20 ರಂದು ಚಂದ್ರನು ಸಹ ಈ ರಾಶಿಯನ್ನು ಪ್ರವೇಶಿಸುತ್ತಾನೆ. ಮಂಗಳ ಮತ್ತು ಚಂದ್ರನ ಈ ಸಂಯೋಗವು ಮಹಾಲಕ್ಷ್ಮಿ ರಾಜಯೋಗವನ್ನು ಸೃಷ್ಟಿಸುತ್ತದೆ. ಈ ರಾಜಯೋಗವು ಕೆಲವು ರಾಶಿ ಜನರಿಗೆ ವಿಶೇಷ ಆಶೀರ್ವಾದಗಳನ್ನು ನೀಡಬಹುದು. ವೈದಿಕ ಜ್ಯೋತಿಷ್ಯದ ಪ್ರಕಾರ ನವೆಂಬರ್ 20 ರಂದು ಚಂದ್ರನು ಬೆಳಗ್ಗೆ 4:13 ಕ್ಕೆ ವೃಶ್ಚಿಕ ರಾಶಿಗೆ ಪ್ರವೇಶಿಸುತ್ತಾನೆ, ಮಂಗಳನೊಂದಿಗೆ ಸಂಯೋಗವನ್ನು ರೂಪಿಸುತ್ತಾನೆ, ಮಹಾಲಕ್ಷ್ಮಿ ರಾಜಯೋಗವನ್ನು ಸೃಷ್ಟಿಸುತ್ತಾನೆ. ಈ ರಾಜಯೋಗವು ಸುಮಾರು 54 ಗಂಟೆಗಳ ಕಾಲ ಇರುತ್ತದೆ, ಆದರೆ ಅದರ ಪರಿಣಾಮಗಳು ದೀರ್ಘಕಾಲ ಇರುತ್ತವೆ.
ಹಾಗಾದ್ರೆ ಈ ರಾಜಯೋಗದಿಂದ ಯಾರಿಗೆಲ್ಲಾ ಶುಭದಾಯಕ ಯಾವೆಲ್ಲಾ ರಾಶಿಗಳಿಗೆ ಅನುಕೂಲಕರ ದಿನಗಳು ಬರಲಿವೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಕರ ರಾಶಿ
ಮಕರ ರಾಶಿ ಜನರ ಜಾತಕದಲ್ಲಿ ಮಂಗಳ ಮತ್ತು ಚಂದ್ರನ ಸಂಯೋಗವು 11ನೇ ಮನೆಯಲ್ಲಿ ಸಂಭವಿಸುತ್ತದೆ. ಪರಿಣಾಮವಾಗಿ ಈ ರಾಶಿ ಚಿಹ್ನೆಯಡಿಯಲ್ಲಿ ಜನಿಸಿದ ಜನರಿಗೆ ಮಹಾಲಕ್ಷ್ಮಿ ರಾಜಯೋಗವು ಸಾಕಷ್ಟು ಪ್ರಯೋಜನಕಾರಿಯಾಗಿದೆ. 10 ಮನೆಯಲ್ಲಿ ಶುಕ್ರನು ಮಾಲವ್ಯ ರಾಜಯೋಗವನ್ನು ಸೃಷ್ಟಿಸಿದ್ದಾನೆ. ಗುರು 7ನೇ ಮನೆಯಲ್ಲಿ ಹಂಸ ರಾಜಯೋಗ ಕೂಡ ಸೃಷ್ಟಿಸುತ್ತಾನೆ. ಈ ಎರಡೂ ಯೋಗಗಳು ಮಕರ ರಾಶಿಯವರಿಗೆ ಅಧಿಕ ಲಾಭವಿದೆ. ನಿಮ್ಮಲ್ಲಿ ಅನಿರೀಕ್ಷಿತ ರೀತಿಯಲ್ಲಿ ಧನಲಾಭ ನೋಡಬಹುದು. ನಿಮ್ಮ ಆರ್ಥಿಕ ವಿಚಾರದಲ್ಲಿ ಶುಭವಾಗಲಿದೆ. ಬಹುಸಮಯದಿಂದ ನಿಮಗೆ ಬರಬೇಕಿದ್ದ ಹಣವೊಂದು ಕೈ ಸೇರಲಿದೆ. ಲಕ್ಷ್ಮಿಯ ಆಶಿರ್ವಾದದಿಂದ ನಿಮ್ಮ ಕೌಟುಂಬಿಕ ಸಮಸ್ಯೆ ಕೂಡ ದೂರಾಗಲಿದೆ.
ಕನ್ಯಾ ರಾಶಿ
ಈ ರಾಶಿ ಜನರ ಜಾತಕದ ಮೂರನೇ ಮನೆಯಲ್ಲಿ ಮಹಾಲಕ್ಷ್ಮಿ ರಾಜಯೋಗ ರೂಪುಗೊಳ್ಳುತ್ತಿದೆ. ಪರಿಣಾಮವಾಗಿ ಕನ್ಯಾ ರಾಶಿ ಜನರಿಗೆ ಮಂಗಳ ಮತ್ತು ಚಂದ್ರನ ಸಂಯೋಗವು ಹಲವು ವಿಧಗಳಲ್ಲಿ ಮಹತ್ವದ್ದಾಗಿರಬಹುದು. ನಿಮ್ಮ ವ್ಯಾಪಾರದಲ್ಲಿದ್ದ ಅಡ್ಡಿ ನಿವಾರಣೆಯಾಗಲಿದೆ, ಹಾಗೆ ಉದ್ಯೋಗ ಸಂಬಂಧಿತ ವಿಚಾರದಲ್ಲಿಯೂ ನಿಮಗೆ ಒತ್ತಡವೊಂದು ನಿವಾರಣೆಯಾಗಲಿದೆ. ಪ್ರೀತಿ ವಿಚಾರದಲ್ಲಿ ಶುಭವಿದೆ. ಹೊಸದಾಗಿ ಆರಂಭಿಸಿರುವ ವ್ಯಾಪಾರ, ವ್ಯವಹಾರವು ನಿಮಗೆ ಲಾಭ ತರಲಿದೆ. ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಸಹ ಪಡೆಯಬಹುದು. ನಿಮ್ಮ ಶತ್ರುಗಳ ಮೇಲೆ ನೀವು ಜಯಗಳಿಸಬಹುದು.
ವೃಶ್ಚಿಕ ರಾಶಿ
ಮಂಗಳ ಮತ್ತು ಚಂದ್ರನ ಮಹಾಲಕ್ಷ್ಮಿ ರಾಜಯೋಗವು ಈ ರಾಶಿ ಜನರಿಗೆ ಅತ್ಯಂತ ಶುಭವೆಂದು ಸಾಬೀತುಪಡಿಸಬಹುದು. ಲಗ್ನ ಮನೆಯಲ್ಲಿ ಮಂಗಳ ಮತ್ತು ಚಂದ್ರನ ಸಂಯೋಗ ಮತ್ತು ಅದೃಷ್ಟದ ಮನೆಯಲ್ಲಿ ಗುರುವಿನ ಉಪಸ್ಥಿತಿಯು ಅದೃಷ್ಟವನ್ನು ತರಲಿದೆ. ನೀವು ಬಹು ಸಮಯದಿಂದ ಅರ್ಧಕ್ಕೆ ನಿಲ್ಲಿಸಿರುವ ಹಲವು ಕೆಲಸಗಳು ಮುಂದುವರೆಸಲಿದ್ದೀರಿ. ಜೀವನದಲ್ಲಿ ಹೊಸ ಸಂತೋಷಗಳನ್ನು ತರುತ್ತದೆ. ಲಕ್ಷ್ಮಿ ದೇವಿಯ ಆಶೀರ್ವಾದದಿಂದ, ಹೊಸ ಆದಾಯದ ಮೂಲಗಳು ತೆರೆದುಕೊಳ್ಳಬಹುದು, ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಬಹುದು. ಪೂರ್ವಜನರ ಆಸ್ತಿ ಕುರಿತಾದ ವಿಚಾರದಲ್ಲಿ ನಿಮಗೆ ಶುಭವಿದೆ. ಆರೋಗ್ಯ ಸುಧಾರಣೆ ನೋಡಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications