Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ಚಂದ್ರಗ್ರಹಣದಿಂದ ಅದೃಷ್ಟದ ಬಾಗಿಲು ತೆರೆಯಲಿದೆ: 4 ರಾಶಿಯವರಿಗೆ ದಿಢೀರ್ ಲಾಭದಾಯಕ!
ಈ ವರ್ಷದ ಕೊನೆಯ ಚಂದ್ರಗ್ರಹಣವು ಸೆಪ್ಟೆಂಬರ್ 7ರಂದು ಸಂಭವಿಸುತ್ತದೆ. ಇದು ಭಾರತದಲ್ಲೂ ಗೋಚರವಾಗುವ ಗ್ರಹಣವಾಗಿದೆ. ರಾತ್ರಿ 9:58ಕ್ಕೆ ಆರಂಭಗೊಂಡು ತಡರಾತ್ರಿಯವರೆಗೂ ಗ್ರಹಣ ಸಂಭವಿಸುತ್ತಿದೆ. ಈ ಸಮಯದಲ್ಲಿ ಹಲವು ರೀತಿಯ ಗ್ರಹಗತಿಗಳ ಬದಲಾವಣೆ ನೋಡಬಹುದು. ಅದ್ರಲ್ಲೂ ವಿಶೇಷವಾಗಿ ಹಲವು ಗ್ರಹಗಳ ಬದಲಾವಣೆ, ಸಂಯೋಗದಿಂದ ಹಲವರಲ್ಲಿ ಬದಲಾವಣೆ ನೋಡಬಹುದು.
ಇನ್ನು ಈ ದಿನ ಗ್ರಹಗಳ ಚಲನೆಯಲ್ಲಿ ಅದ್ರಲ್ಲೂ ಶನಿ ಗ್ರಹದ ಚಲನೆಯಲ್ಲಿಯೂ ಬದಲಾಬಣೆ ನೋಡಬಹುದು. ಶನಿ ಈಗ ಕುಂಭ ರಾಶಿಯಲ್ಲಿ ಚಲಿಸುತ್ತಿದ್ದಾನೆ. ಈ ಗ್ರಹಣ ಸಮಯದಲ್ಲಿ ಹಲವು ರಾಶಿಗಳಿಗೆ ಅಶುಭ ಹಾಗೂ ಶುಭ ಕಾರಕ ಎಂದು ಪರಿಗಣಿಸಲಾಗುತ್ತದೆ. ಕುಂಭ ರಾಶಿಯಲ್ಲಿ ಶನಿ ಚಲನೆಯು ಗ್ರಹಣ ಸಮಯದಲ್ಲಿ ಹಲವು ರಾಶಿಗಳಿಗ ಶುಭಕರವಾಗುತ್ತಿದೆ.

ಹಾಗಾದ್ರೆ ಈ ರಾಹುಗ್ರಸ್ತ ಸಂಪೂರ್ಣ ಚಂದ್ರಗ್ರಹಣವು ಯಾವೆಲ್ಲಾ ರಾಶಿಯವರಿಗೆ ಶುಭಕರವಾಗುತ್ತಿದೆ? ಯಾರಿಗೆ ಇದರಿಂದ ಲಾಭವಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಅದ್ರಲ್ಲೂ ಯಾರಿಗೆ ಗ್ರಹಣದ ನಂತರದ ದಿನಗಳಲ್ಲಿ ಶುಭವಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕರ್ಕ ರಾಶಿ
ಶನಿ ಕುಂಭ ರಾಶಿಯಲ್ಲಿ ಚಲಿಸುವುದು ಕರ್ಕ ರಾಶಿಯವರಲ್ಲಿ ಶುಭಕರ ಚಿಹ್ನೆಯಾಗಿ ಬದಲಾಗುತ್ತದೆ. ನಿಮ್ಮ ರಾಶಿಯವರಲ್ಲಿ ಜನರು ಆರ್ಥಿಕ ಪ್ರಗತಿಯ ಚಿಹ್ನೆಗಳನ್ನು ಪಡೆಯುತ್ತಾರೆ. ನಿಮ್ಮ ಸಂಪತ್ತು ಹೆಚ್ಚಾಗಬಹುದು. ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಕಡಿಮೆಯಾಗುತ್ತವೆ ಮತ್ತು ಸಂಬಂಧಗಳಲ್ಲಿ ಸಾಮರಸ್ಯವೂ ಹೆಚ್ಚಾಗುತ್ತದೆ. ಜೀವನದಲ್ಲಿ ಸೌಕರ್ಯಗಳು ಮತ್ತು ಐಷಾರಾಮಿ ವಸ್ತು ಖರೀದಿಯ ಲಾಭ ನೋಡಬಹುದು. ಬಹಳ ಸಮಯದ ನಿಮ್ಮ ಆರ್ಥಿಕ ಸಮಸ್ಯೆ ನಿವಾರಣೆಯಾಗಲಿದೆ. ಬುದ್ದಿವಂತಿಕೆಯಿಂದ ನಿಮ್ಮ ವ್ಯಾಪಾರಗಳು ಲಾಭದ ಹಾದಿ ಹಿಡಿಯಲಿದೆ. ಅವಿವಾಹಿತರಿಗೆ ಅಡ್ಡಿಯಾಗಿದ್ದ ಹಲವು ಸಮಸ್ಯೆಗಳು ದೂರಾಗಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ವ್ಯಾಪಾರ ಮತ್ತು ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಸಿಗುತ್ತವೆ. ಕೆಲಸದ ಸ್ಥಳದಲ್ಲಿ ನೀವು ವರ್ಗಾವಣೆ, ಬಡ್ತಿ, ವೇತನ ಹೆಚ್ಚಳದಂತಹ ನಿರೀಕ್ಷೆಯಲ್ಲಿದ್ದರೆ ಈ ಸಮಯದಲ್ಲಿ ಧನಾತ್ಮಕ ಬದಲಾವಣೆ ಇರಲಿದೆ. ವೃತ್ತೀಪರ ಜೀವನದಲ್ಲಿ ಯಶಸ್ಸು ಇರಲಿದೆ. ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತದೆ. ಹೊಸ ಆದಾಯ ಮೂಲಗಳು ನಿಮಗೆ ನೆಮ್ಮದಿ ತರಲಿದೆ. ವಾಹನ ಸಂಬಂಧಿ ಲಾಭಗಳಿವೆ. ಆಪ್ತರೊಬ್ಬರಿಂದ ನಿಮಗೆ ಎಲ್ಲಾ ವಿಚಾರವಾಗಿಯೂ ಸಹಕಾರ ಇರಲಿದೆ. ಮನೆಯಲ್ಲಿ ಸಂತೋಷ ನೋಡಬಹುದು.
ವೃಶ್ಚಿಕ ರಾಶಿ
ನಿಮ್ಮ ಕೆಲಸದ ವಿಚಾರವಾಗಿ ಅತ್ಯುತ್ತಮ ಸಮಯ. ನೀವು ನಿರುದ್ಯೋಗಿಗಳಾಗಿದ್ದರೆ ಆಪ್ತರೊಬ್ಬರ ಸಹಕಾರದಿಂದಾಗಿ ನಿಮಗೆ ಉತ್ತಮ ಅವಕಾಶ ಪಡೆಯಹುದು. ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ನಿಮ್ಮ ಭೂಮಿ, ವಾಹನ ಖರೀದಿಯ ಆಸೆಯು ಈಡೇರಲಿದೆ. ಯಾರೊಂದಿಗಾದರು ಹಣಕಾಸಿನ ವಿಚಾರದಲ್ಲಿ ಮನಸ್ತಾಪಗಳಿದ್ದರೆ ನಿವಾರಣೆಯಾಗಲಿದೆ. ಬಹಳ ಹಿಂದಿನಿಂದ ನೀವು ಯಾವುದಾದರು ಕೆಲಸಕ್ಕೆ ಮುಂದಾಗಲು ಧೈರ್ಯ ಮಾಡಿದ್ದರೆ ಈ ಸಮಯದಲ್ಲಿ ಮುಂದುವರೆಯಬಹುದು.
ಕುಂಭ ರಾಶಿ
ಶನಿ ಕುಂಭ ರಾಶಿಯಲ್ಲಿ ಚಲಿಸುವುದರಿಂದ ಗ್ರಹಣ ಸಮಯದ ನಂತರದ ಕಾಲದಲ್ಲಿ ನೀವು ಜೀವನದಲ್ಲಿ ಯಶಸ್ಸು ಪಡೆಯುತ್ತೀರಿ. ನಿಮ್ಮ ದೀರ್ಘಕಾಲದ ಅನಾರೋಗ್ಯ ಸಮಸ್ಯೆಯೊಂದು ನಿವಾರಣೆ ಆಗಲಿದೆ. ಅವಿವಾಹಿತರಲ್ಲಿ ವಿವಾಹ ಸಂಬಂಧವಾಗಿ ಶುಭ ಸುದ್ದಿ ಇರಲಿದೆ. ಮಕ್ಕಳ ಕುರಿತಾದ ಚಿಂತೆಯೊಂದು ದೂರಾಗಲಿದೆ. ವ್ಯಾಪಾರಿಗಳಿಗೆ ಈ ಸಮಯದಲ್ಲಿ ಲಾಭದಾಯಕ ದಿನಗಳಿವೆ. ದಾಂಪತ್ಯ ವಿಚಾರದಲ್ಲು ಸುಖವಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications











