Latest Updates
-
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ
ಇಂದು(ಸೆ.18) ರಾಹುಗ್ರಸ್ಥ ಚಂದ್ರಗ್ರಹಣ: ದ್ವಾದಶ ರಾಶಿಗಳಲ್ಲಿ ಯಾರಿಗೆ ಶುಭ,ಯಾರಿಗಲ್ಲ
ವರ್ಷದ 2ನೇ ಚಂದ್ರಗ್ರಹಣ ಸೆಪ್ಟೆಂಬರ್ 18ರಂದು ನಡೆಯುತ್ತಿದೆ. ಇದು ರಾಹುಗ್ರಸ್ಥ ಚಂದ್ರಗ್ರಹಣವಾಗಿದ್ದು ಮೀನ ರಾಶಿಯಲ್ಲಿ ಉಂಟಾಗಿದೆ. ಕನ್ಯಾ ಲಗ್ನ, ತುಲಾ, ವೃಶ್ಚಿಕ ಲಗ್ನದಲ್ಲಿ, ಭಾದ್ರಪದ ಮಾಸದ ಪೂರ್ಣಿಮೆಯಂದು ಈ ಗ್ರಹಣ ಸಂಭವಿಸಿದೆ.
ಈ ಚಂದ್ರ ಗ್ರಹಣದ ಸೂತಕ ಭಾರತದಲ್ಲಿ ಇಲ್ಲ , ಏಕೆಂದರೆ ಬೆಳಗ್ಗೆ ಸಂಭವಿಸುತ್ತಿದೆ, ಇದರ ಪ್ರಭಾವ ಯುರೋಪ ದೇಶಗಳಿಗೆ ಹಾನಿಯಾಗಲಿದೆ ಎಂದು ವೈದಿಕ ಶಾಸ್ತ್ರ ಹೇಳುತ್ತದೆ. ಚಂದ್ರ ಮತ್ತು ರಾಹುವಿನ ಸಂಯೋಗದ ಸಮಯದಲ್ಲಿ ಚಂದ್ರಗ್ರಹಣ ಉಂಟಾಗಿದ್ದು ಇಲ್ಲಿ ಸೂತಕವಿಲ್ಲವೆಂದರೂ ಪ್ರತಿಯೊಂದು ರಾಶಿಯ ಮೇಲೆ ಇದರ ಪ್ರಭಾವ ಇರಲಿದೆ.
ದ್ವಾದಶ ರಾಶಿಗಳಿಗೆ ಯಾರಿಗೆ ಶುಭ, ಯಾರಿಗೆ ಅಶುಭ ಎಂದು ನೋಡೋಣ:

ಮೇಷ ರಾಶಿ
ಮೇಷ ರಾಶಿಯವರಿಗೆ ಚಂದ್ರನು ನಾಲ್ಕನೇ ಮನೆಯ ಅಧಿಪತಿಯಾಗಿದ್ದು ರಾಹುವಿನ ಜೊತೆಗೆ ಹನ್ನೆರಡನೇ ಮನೆಯಲ್ಲಿ ಇದ್ದಾನೆ, ಹೀಗಾಗಿ ಈ ಗ್ರಹಣದ ಸಮಯದ ದಿನ ದೂರ ಪ್ರಯಾಣ ತಪ್ಪಿಸಿ. ದಾಂಪತ್ಯ ಜೀವನದಲ್ಲಿ ಕಲಹ ಉಂಟಾಗದಂತೆ ಜಾಗ್ರತೆವಹಿಸಿ, ವಿವಾಹೇತರ ಸಂಬಂಧದ ಆಕರ್ಷಣೆಯಿಂದ ದೂರವಿರಬೇಕು. ಹಣ ಉಳಿಸಲು ಕೂಡ ಕಷ್ಟವಾಗಬಹುದು. ಖರ್ಚು ಅಧಿಕವಿರಲಿದೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಚಂದ್ರ ಮೂರನೇ ಮನೆಯ ಅಧಿಪತಿಯಾಗಿದ್ದು ಈಗ ನಿಮ್ಮ ಹನ್ನೊಂದನೇ ಮನೆಯಲ್ಲಿದೆ. ಹನ್ನೊಂದನೇ ಮನೆಯಲ್ಲಿ ರಾಹು ಚಂದ್ರನೊಂದಿಗೆ ಸೇರಿಕೊಂಡಾಗ, ಅದು ವ್ಯಕ್ತಿಯ ಸಂಬಂಧಗಳು, ಸಾಮಾಜಿಕ ಜೀವನ ಮತ್ತು ವೈವಾಹಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಅವಧಿಯಲ್ಲಿ ನೀವು ನಷ್ಟವನ್ನು ಅನುಭವಿಸಬಹುದು ಅಥವಾ ಪೂರ್ವಜರ ಆಸ್ತಿಯಿಂದ ನಷ್ಟವನ್ನು ಅನುಭವಿಸಬಹುದು. ಆರೋಗ್ಯ ಸಂಬಂಧಿತ ಸಮಸ್ಯೆಗಳಿರಬಹುದು.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಚಂದ್ರ ಎರಡನೇ ಮನೆಯ ಅಧಿಪತಿಯಾಗಿದ್ದು ರಾಹು ಜೊತೆ ಹತ್ತನೇ ಮನೆಯಲ್ಲಿರುತ್ತಾನೆ. ಈ ಚಂದ್ರಗ್ರಹಣದಿಂದ ವೃತ್ತಿ ಮತ್ತು ಆರ್ಥಿಕ ಜೀವನದಲ್ಲಿ ಲಾಭವನ್ನು ನೀಡಲಿದೆ, ಕೆಲಸದಲ್ಲಿ ಪ್ರಗತಿ ಇರಲಿದೆ. ಕಣ್ಣಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆವಿರಬಹುದು.
ಕರ್ಕ ರಾಶಿ
ಈ ಗ್ರಹಣದ ಸಮಯದಲ್ಲಿ ಚಂದ್ರನು ಒಂಬತ್ತನೇ ಮನೆಯಲ್ಲಿ ರಾಹು ಜೊತೆ ಸೇರುತ್ತಾನೆ. ಈ ಗ್ರಹಣ ನಿಮ್ಮ ತಂದೆಯವರ ಮೇಲೆ ಪರಿಣಾಮ ಬೀರಬಹುದು, ಅವರಿಗೆ ಆರೋಗ್ಯ ಸಂಬಂಧಿತ ಸಮಸ್ಯೆ ಬಾಧಿಸಬಹುದು. ಕೆಲಸದ ಸ್ಥಳದಲ್ಲಿ ನೀವು ಬಹಳಷ್ಟು ಬದಲಾವಣೆಗಳನ್ನು ನೋಡಬಹುದು . ಉದ್ಯೋಗಗಳನ್ನು ಬದಲಾಯಿಸಬೇಕಾಗಬಹುದು. ಕೆಲಸದಲ್ಲಿ ಅತೃಪ್ತಿ ಇರಲಿದೆ.
ಸಿಂಹ ರಾಶಿ
ಸಿಂಹ ರಾಶಿಯಲ್ಲಿ ಚಂದ್ರನು 8ನೇ ಮನೆಯಲ್ಲಿದೆ ರಾಹು ಜೊತೆ ಸಂಯೋಗವಾಗಿದೆ, ಈ ಸಂಯೋಗ ಅನುಕೂಲಕರವಲ್ಲ. ಈ ಚಂದ್ರಗ್ರಹಣದ ಸಮಯದಲ್ಲಿ, ನಿಮ್ಮ ಮನಸ್ಸು ಚಂಚಲವಾಗಿರುತ್ತದೆ. ನಿಮ್ಮ ಆರ್ಥಿಕ ಜೀವನದಲ್ಲಿ ಸಾಕಷ್ಟು ಪರಿಣಾಮ ಬೀರುತ್ತದೆ ಮತ್ತು ಹಠಾತ್ ಹಣದ ನಷ್ಟವಾಗಬಹುದು. ಒಂದು ಬಗೆಯ ಆತಂಕ ಕಾಡಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯಲ್ಲಿ ಚಂದ್ರ 7ನೇ ಮನೆಯಲ್ಲಿ ಇರಲಿದೆ. ಕೆಲಸದಲ್ಲಿ ಒತ್ತಡ ಮತ್ತು ಮಾನಸಿಕ ಆತಂಕವಿರಬಹುದು. ಈ ಅವಧಿಯಲ್ಲಿ, ನಿಮ್ಮ ನಡವಳಿಕೆಯಲ್ಲಿ ನೀವು ದೊಡ್ಡ ಬದಲಾವಣೆ ಕಂಡು ಬರುವುದು, ಅದು ನಿಮಗೇ ಹಾನಿ, ಹಾಗಾಗಿ ಅಂಥ ನಡವಳಿಕೆಯಿಂದ ಹೊರಬನ್ನಿ. ವೈವಾಹಿಕ ಬದುಕು ತುಂಬಾ ಚೆನ್ನಾಗಿರಲಿದೆ.
ತುಲಾ ರಾಶಿ
ತುಲಾ ರಾಶಿಯವರಲ್ಲಿ ಚಂದ್ರನ ಆರನೇ ಮನೆಯಲ್ಲಿ ರಾಹು ಜೊತೆ ಸೇರುತ್ತದೆ. ಈ ಅವಧಿಯಲ್ಲಿ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯಲು ಕಷ್ಟವಾಗಬಹುದು. ಅತ್ಯಧಿಕ ಮಾನಸಿಕ ಒತ್ತಡವಿರಲಿದೆ. ಈ ಸಂಯೋಗದಿಂದ ನಿಮಗೆ ಕೆಟ್ಟ ಹೆಸರು ಬರಬಹುದು, ನಿಮಗೆ ಯಾರಾದರೂ ಶತ್ರುಗಳಿದ್ದರೆ ಅವರು ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯಲ್ಲಿ ಐದನೇ ಮನೆಯಲ್ಲಿ ಚಂದ್ರ ಮತ್ತು ರಾಹುವಿನ ಸಂಯೋಗವಿರುತ್ತದೆ. ಐದನೇ ಮನೆಯಲ್ಲಿ ರಾಹು ಮತ್ತು ಚಂದ್ರರು ಸಂಯೋಗ ಪಿತ್ರ ದೋಷವನ್ನು ಸೃಷ್ಟಿಸುತ್ತದೆ. ಪರಿಣಾಮವಾಗಿ, ನೀವು ಗರ್ಭಧಾರಣೆಯ ಸಂಬಂಧಿತ ಸಮಸ್ಯೆಗಳು ಅಥವಾ ಇತರ ಮಗುವಿಗೆ ಸಂಬಂಧಿಸಿದ ತೊಂದರೆಗಳು ಉಂಟಾಗಬಹುದು, ಪಿತೃದೋಷಕ್ಕೆ ಪರಿಹಾರ ಮಾಡಿದರೆ ಒಳ್ಳೆಯದು.
ಧನು ರಾಶಿ
ಧನು ರಾಶಿಯ ನಾಲ್ಕನೇ ಮನೆಯಲ್ಲಿ ರಾಹು ಜೊತೆ ಚಂದ್ರ ಇರುವಾಗ ಮನಸ್ಸು ಚಂಚಲವಾಗಿರುತ್ತದೆ. ಈ ಅವಧಿಯಲ್ಲಿ ನಿಮ್ಮ ತಾಯಿಯ ಆರೋಗ್ಯದ ಮೇಲೂ ಪರಿಣಾಮ ಬೀರುವುದು. ಕುಟುಂಬ ಸದಸ್ಯರ ನಡುವೆ ವಾದಗಳು ಮತ್ತು ವಾದ-ವಿವಾದಗಳು ಉಂಟಾಗಬಹುದು, ಇದರಿಂದಾಗಿ ಮನೆಯ ವಾತಾವರಣವು ಸಂಪೂರ್ಣವಾಗಿ ಹಾಳಾಗಬಹುದು.
ಮಕರ ರಾಶಿ
ಮಕರ ರಾಶಿಯಲ್ಲಿ ಚಂದ್ರನು ರಾಹು ಜೊತೆಗೆ ಮೂರನೇ ಮನೆಯಲ್ಲಿದೆ. ಈ ಸಂಯೋಗದ ಪ್ರಭಾವದಿಂದ ನಿಮ್ಮ ಮನಸ್ಸು ಖಿನ್ನತೆಗೆ ಒಳಗಾಗಬಹುದು. ಕೆಲಸದ ಕಡೆಗೆ ಗಮನಹರಿಸುವುದು ಕಷ್ಟವಾಗುವುದು, ಸಂಬಂಧವು ಹದಗೆಡುವ ಸಾಧ್ಯತೆಯಿದೆ. ಆರ್ಥಿಕ ಸಮಸ್ಯೆಗಳಿರಬಹುದು.
ಕುಂಭ ರಾಶಿ
ಕುಂಭ ರಾಶಿಯಲ್ಲಿ ಚಂದ್ರ ಮತ್ತು ರಾಹು 2ನೇ ಮನೆಯಲ್ಲಿ ಸಂಯೋಗವಾಗಿದೆ. ಈ ಸಮಯದಲ್ಲಿ ಕೆಟ್ಟ ಕೆಲಸಕ್ಕೆ ಮನಸ್ಸು
ಪ್ರೇರೇಪಿಸಬಹುದು, ಆದರೆ ವಿವೇಚನೆಯಿಂದ ಯೋಚಿಸುವುದು ಒಳ್ಳೆಯದು, ಕುಟುಂಬದಲ್ಲಿಯೂ ಕೆಲ ಸಮಸ್ಯೆಗಳಿರಬಹುದು, ಈ ದಿನ ಹಣವನ್ನು ಸಾಲವಾಗಿ ನೀಡಿದರೆ ಮರಳಿ ಸಿಗುವುದು ಕಷ್ಟವಾಗುವುದು.
ಮೀನ ರಾಶಿ
ಮೀನ ರಾಶಿಯಲ್ಲಿ ಚಂದ್ರ ಮತ್ತು ರಾಹು ಸಂಯೋಗವಾಗಿದೆ. ಹಾಗಾಗಿ ಈ ಚಂದ್ರಗ್ರಹಣ ಮೀನ ರಾಶಿಯಲ್ಲಿ ನಡೆಯುತ್ತಿದೆ. ಸ್ತ್ರೀಯರಿಂದ ನೀವು ಕೆಟ್ಟ ಹೆಸರು ಬರಬಹುದು, ಜಾಗ್ರತೆವಹಿಸಬೇಕು. ಕೆಲವೊಂದು ವಿಷಯಗಳು ಬೇಗನೆ ಕೋಪ ತರಬಹುದು, ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳನ್ನು ಹೊಂದಿರಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











