ಚಂದ್ರಗ್ರಹಣ ಸಮಯದಲ್ಲಿ ಯಾವ ರಾಶಿಯವರಿಗೆ ಸಂಕಷ್ಟಕಾಲ: ಹಣಕಾಸು, ಕೌಟುಂಬಿಕದಲ್ಲಿ ಎಚ್ಚರಿಕೆ ಅಗತ್ಯ!

ವರ್ಷದ ಕೊನೆಯ ಚಂದ್ರಗ್ರಹಣವು ಭಾನುವಾರ, 7 ಸೆಪ್ಟೆಂಬರ್ 2025 ರಂದು ನಡೆಯಲಿದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುತ್ತದೆ. ಗ್ರಹಣ ಸಮಯದಲ್ಲಿ ಹಲವು ರೀತಿಯ ಆಚರಣೆಗಳ ಮಾಡುವುದು ನೀವು ನೋಡಬಹುದು. ಹಾಗೆ ಗ್ರಹಣ ಸಂದರ್ಭದಲ್ಲಿ ಗ್ರಹಗಳ ಮೇಲೆ ಯಾವ ರೀತಿಯ ಪರಿಣಾಮಗಳು ಬೀರುತ್ತವೆ ಎಂಬುದನ್ನು ಕೂಡ ನೋಡಬಹುದು.

ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಬದಲಾವಣೆಗೆ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ಹಾಗೆ ಗ್ರಹಗಳ ಚಲನೆಯಿಂದ ಯಾವೆಲ್ಲಾ ರೀತಿಯಾಗಿ ಪರಿಣಾಮ ಬೀರಲಿದೆ ಅನ್ನೋದು ಕೂಡ ಜ್ಯೋತಿಷ್ಯದಲ್ಲಿ ಬಹಳ ಮುಖ್ಯವಾಗಿದೆ. ಹಾಗೆ ಗ್ರಹಣ ಸಮಯದಲ್ಲಿ ಎಲ್ಲಾ ರಾಶಿಗಳ ಮೇಲೂ ಪ್ರಭಾವ ಉಂಟು ಮಾಡುವುದು ನೋಡಬಹುದು.

Lunar Eclipse Alert

ಇದೇ ಸೆಪ್ಟೆಂಬರ್ 7ರಮದು ಸಂಭವಿಸುತ್ತಿರುವ ರಾಹುಗ್ರಸ್ತ ಚಂದ್ರಗ್ರಹಣವು ಯಾರ ಮೇಲೆ ಹೆಚ್ಚಿನ ಪರಿಣಾಮ ಉಂಟು ಮಾಡುತ್ತಿದೆ. ಯಾರಿಗೆಲ್ಲಾ ಸಮಸ್ಯೆಯನ್ನ ತರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ವೃಷಭ ರಾಶಿ

ವೃಷಭ ರಾಶಿಯ ಜನರಲ್ಲಿ ಚಂದ್ರಗ್ರಹಣದಿಂದ ಮಿಶ್ರ ಫಲ ನಿರೀಕ್ಷಸಿಸಲಾಗಿದೆ. ಮೇಷ ರಾಶಿಯ 10ನೇ ಮನೆಯಲ್ಲಿ ಗ್ರಹಣ ಸಂಭವಿಸುತ್ತಿದೆ. ಈ ಕಾರಣದಿಂದಾಗಿ, ಇದು ಕೆಲಸದ ಸ್ಥಳದಲ್ಲಿ ಹಲವು ರೀತಿಯ ಸಮಸ್ಯೆಗಳ ತರಬಹುದು. ಆರೋಗ್ಯದಲ್ಲಿ ದಿಢೀರ್ ಏರುಪೇರು ನೋಡುವ ಸಾಧ್ಯತೆ ಇದೆ. ನಿಮಗೆ ಬರಬೇಕಾಗಿರುವ ಹಣ ಎಲ್ಲಾದರು ಸಿಲುಕಿದ್ದರೆ ಅದರಿಂದ ಆದಷ್ಟು ಬೇಗ ಮುಕ್ತಿ ಪಡೆಯಬಹುದು.

ಕರ್ಕ ರಾಶಿ

ಕರ್ಕ ರಾಶಿಯ 8ನೇ ಮನೆಯಲ್ಲಿ ಗ್ರಹಣ ರೂಪುಗೊಳ್ಳುವುದು ನೋಡಬಹುದು. ಇದರಿಂದ ಹಲವು ರೀತಿಯಲ್ಲಿ ಬದಲಾವಣೆಗಳು, ಹಲವು ಪ್ರಕಾರದ ಸಮಸ್ಯೆಗಳ ಎದುರಿಸಬಹುದು. ನಿಮ್ಮ ಆದಾಯದ ಮುಖ್ಯ ಮೂಲದಲ್ಲಿ ಸಮಸ್ಯೆ ಎದುರಾಗಬಹುದು. ವ್ಯಾಪಾರಿಗಳಿಗೆ ನಷ್ಟ ಅಥವಾ ಅಧಿಕ ಖರ್ಚು ಇರಬಹುದು. ಆಪ್ತರೊಬ್ಬರಿಗೆ ನೀಡಿದ್ದ ಹಣ ನಿಮ್ಮ ಕೈ ಸೇರುವುದು ಮತ್ತಷ್ಟು ದೂರಾಬಹುದು.

ಸಿಂಹ ರಾಶಿ

ಸಿಂಹ ರಾಶಿಯ 7ನೇ ಮನೆಯಲ್ಲಿ ಗ್ರಹಣ ಸಂಭವಿಸುವುದು ದಾಂಪತ್ಯ ಕುರಿತ ಸಮಸ್ಯೆಗಳಿಗೆ ಕಾರಣಾಗಬಹುದು. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ನೀವು ಕಾಳಜಿ ವಹಿಸಬೇಕಾಗುತ್ತದೆ. ಪಾಲುದಾರಿಕೆ ವ್ಯವಹಾರದಲ್ಲಿ ನೀವು ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ನಿಮ್ಮ ಕೋಪವನ್ನು ನಿಯಂತ್ರಿಸಬೇಕು ಮತ್ತು ಬುದ್ಧಿವಂತಿಕೆಯಿಂದ ನಿರ್ಧಾರಗಳ ತೆಗೆದುಕೊಳ್ಳಬೇಕು.

ತುಲಾ ರಾಶಿ

ತುಲಾ ರಾಶಿಯ 5ನೇ ಮನೆಯಲ್ಲಿ ಗ್ರಹಣ ರೂಪುಗೊಳ್ಳಲಿದೆ. ಇದರಿಂದ ಮಕ್ಕಳ ಕುರಿತಾದ,, ಆಸ್ತಿ ಸಂಬಂಧಿತ ವಿಚಾರದಲ್ಲಿ ಹಿನ್ನಡೆ ಎದುರಾಗಬಹುದು. ಬುದ್ಧಿವಂತಿಕೆಯಿಂದ ಕೆಲಸ ಮಾಡಿ ಮತ್ತು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು 10 ಬಾರಿ ಯೋಚಿಸಿ. ವಾಹನ ಸಂಬಂಧಿ ಖರ್ಚು ಹೆಚ್ಚಾಗುವಂತಹ ಅನಿವಾರ್ಯ ಸ್ಥಿತಿಗೆ ನೀವು ತಲುಪಬಹುದು.

ಮಕರ ರಾಶಿ

ಮಕರ ರಾಶಿಯವರ 2ನೇ ಮನೆಯಲ್ಲಿ ಚಂದ್ರ ಗ್ರಹಣ ಸಂಭವಿಸುತ್ತಿದೆ. ಇದು ನಿಮ್ಮ ಸಂಬಂಧಗಳಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಬಹುದು. ನಿಮ್ಮ ಮಾತನ್ನು ನಿಯಂತ್ರಿಸಿ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಉದ್ಭವಿಸಬಹುದು. ಸಾಲ ನೀಡುವುದು ಮತ್ತು ಪಡೆಯುವುದರಲ್ಲಿ ಜಾಗರೂಕರಾಗಿರಿ. ವೃತ್ತಿಜೀವನದಲ್ಲಿ ನಿಮ ಹೊಸ ಅವಕಾಶಗಳು ಸಿಗುತ್ತವೆ. ಕೆಲಸದ ಸ್ಥಳದಲ್ಲಿ ನಿಮಗೆ ಸಕಾರಾತ್ಮಕ ಫಲಿತಾಂಶಗಳು ದೊರೆಯುತ್ತವೆ.

ಕುಂಭ ರಾಶಿ

ಕುಂಭ ರಾಶಿಯವರ ಮೊದಲ ಮನೆಯಲ್ಲಿ ಗ್ರಹಣವು ನಿಮ್ಮ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರಬಹುದು. ಸಮಾಜದಲ್ಲಿನ ನಿಮ್ಮ ಗೌರವಕ್ಕೆ ಧಕ್ಕೆಯಾಗುವಂತಹ ಘಟನೆಗಳು ಎದುರಾಗಬಹುದು. ಮಾನಸಿಕ ನೆಮ್ಮದಿ ಹಾಳು ಮಾಡುವ ಜನರ ಭೇಟಿಯಾಗಬಹುದು, ಹಣಕಾಸಿನ ವಿಚಾರವಾಗಿ ಕಷ್ಟಗಳು ಇರಬಹುದು.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)

English summary

Lunar Eclipse Alert: Financial And Family Caution For These Zodiac Signs

Today, we will find out who will be affected the most by the Rahugrasta lunar eclipse that is happening on September 7th. Let's find out who will be affected.
Story first published: Monday, September 1, 2025, 20:55 [IST]
X
Desktop Bottom Promotion