Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಂದ್ರಗ್ರಹಣದಲ್ಲಿ ಕಾದಿದೆ ಅಪಾಯ: ಈ 4 ರಾಶಿಯವರ ಜೀವನದಲ್ಲಿ ಬಿಕ್ಕಟ್ಟು, ಅಡ್ಡಿ ಆತಂಕ!
ಮಾರ್ಚ್ 3ರ ಹುಣ್ಣಿಮೆಯ ದಿನದಂದು ಚಂದ್ರಗ್ರಹಣ ಸಂಭವಿಸುತ್ತಿದೆ. ಈ ಚಂದ್ರಗ್ರಹಣವು ಅತ್ಯಂತ ಪ್ರಮುಖ ವಿದ್ಯಮಾನವಾಗಿ ನೋಡಲಾಗಿದೆ. ಭಾರತದಲ್ಲಿ ಗೋಚರವಾಗುವ ಈ ಚಂದ್ರಗ್ರಹಣವು ಎಲ್ಲಾ ಗ್ರಹ, ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡಲಿದೆ. ಮಾರ್ಚ್ 3 2026 ರಂದು ಮಧ್ಯಾಹ್ನ 3:20 ರಿಂದ ಸಂಜೆ 6:47 ರ ವರೆಗೆ ಸಂಪೂರ್ಣ ಚಂದ್ರಗ್ರಹಣ ಸಂಭವಿಸಲಿದೆ.
ಈ ಗ್ರಹಣವು ಮಾನಸಿಕ ಸ್ಥಿತಿ ಭಾವನೆಗಳು ಮತ್ತು ಕುಟುಂಬ ಜೀವನ, ವೃತ್ತಿ ಸಂಬಂಧಿತ ವಿಚಾರಗಳಿಗೆ ಸಂಬಂಧ ಹೊಂದಿದೆ. ಈ ಗ್ರಹಣವು 12 ರಾಶಿಗಳ ಮೇಲೆ ಶುಭ ಅಥವಾ ಅಶುಭ ಪರಿಣಾಮಗಳನ್ನು ಬೀರಬಹುದು. ಅದ್ರಲ್ಲೂ ಚಂದ್ರಗ್ರಹಣವು ಹಲವು ರೀತಿಯ ಪರಿಣಾಮಗಳನ್ನು ಉಂಟುಮಾಡುವುದು ನೋಡಬಹುದು. ಈ ಗ್ರಹಣವು ಎಲ್ಲಾ ರಾಶಿಯಲ್ಲಿ ಬದಲಾವಣೆಗಳ ತರುತ್ತಿದೆ.

ಗ್ರಹಣದ ಸಮಯದಲ್ಲಿನ ಗ್ರಹಗತಿಗಳಲ್ಲಿನ ಬದಲಾವಣೆಯಿಂದ ಹಲವು ರೀತಿಯ ಅಶುಭಗಳ ತರಬಹುದು. ಹಾಗಾದ್ರೆ ಈ ಚಂದ್ರಗ್ರಹಣದಿಂದ ಯಾರ ಜೀವನದಲ್ಲಿ ಸಮಸ್ಯೆಗಳು ಎದುರಾಗಲಿದೆ. ಯಾರಿಗೆ ಈ ಚಂದ್ರಗ್ರಹಣವು ಅಶುಭವನ್ನು ತರಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ವೃಷಭ ರಾಶಿ
ಜ್ಯೋತಿಷಿಗಳ ಪ್ರಕಾರ ವೃಷಭ ರಾಶಿಯವರು ಜಾಗರೂಕರಾಗಿರಬೇಕು. ಚಂದ್ರಗ್ರಹಣದ ಪರಿಣಾಮಗಳು ನಿಮಗೆ ಕೌಟುಂಬಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಅದ್ರಲ್ಲೂ ದೊಡ್ಡ ಮಟ್ಟದ ಕೌಟುಂಬಿಕ ವಿಚಾರದ ಮನಸ್ತಾಪವಿದೆ. ಈ ಸಮಯದಲ್ಲಿ ಪ್ರಯಾಣಗಳನ್ನು ತಪ್ಪಿಸಬೇಕಾಗುತ್ತದೆ, ಪೂರಕ ವಾತಾವರಣ ಇರದೆ ನೀವೇ ಮುಂದೂಡಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲಿನ ಅಡ್ಡಿಗಳು ಮತ್ತಷ್ಟು ಜಟಿಲವಾಗಬಹುದು. ಆರೋಗ್ಯ ಮತ್ತು ವ್ಯಾಪಾರ ಸಂಬಂಧಿತ ವಿಚಾರದಲ್ಲಿಯೂ ಕೂಡ ನಿಮಗೆ ಉತ್ತಮ ಫಲಿತಾಂಶಗಳು ಸಿಗುವುದಿಲ್ಲ. ಕೆಲಸದಲ್ಲಿ ಅಡೆತಡೆಗಳು ಅಥವಾ ಯೋಜನೆಗಳಲ್ಲಿ ವಿಳಂಬ ಸಾಧ್ಯ.
ಕನ್ಯಾ ರಾಶಿ
ಕನ್ಯಾ ರಾಶಿ ಜನರು ಹೊಸ ಕೆಲಸಗಳನ್ನು ಮಾಡುವಾಗ ಅಡ್ಡಿಗಳು ಹೆಚ್ಚಾಗಬಹುದು. ಉದ್ಯೋಗ ಸಂಬಂಧಿತ ಬಿಕ್ಕಟ್ಟು ಸೇರಿದಂತೆ ಹಣಕಾಸನ ವಿಚಾರದಲ್ಲಿನ ಬಿಕ್ಕಟ್ಟುಗಳು ಜಟಿಲವಾಗುತ್ತದೆ. ಮನೆ ನಿರ್ಮಾಣದಲ್ಲಿನ ವಿಚಾರವಾಗಿ ನೀವು ಅಂದುಕೊಂಡ ಕೆಲಸಗಳು ಈಡೇರದೆ ಇರಬಹುದು. ಮನೆಯ ವಾತಾವರಣವು ಕಲಹಗಳಿಂದ ಕೂಡಿರಬಹುದು. ಸ್ವಂತ ವ್ಯವಹಾರ ಸಂಬಂಧವಾಗಿ ನೀವು ತೆಗೆದುಕೊಳ್ಳುವ ನಿರ್ಧಾರವು ಭವಿಷ್ಯದಲ್ಲಿ ಸಮಸ್ಯೆ ತರಬಹುದು. ವಾಹನ ಖರೀದಿ ಸಂಬಂಧಿತ ನಿರ್ಧಾರವನ್ನು ಮುಂದೂಡುವುದು ಉತ್ತಮ. ನಿಮ್ಮ ಸಾಲದ ಪ್ರಮಾಣ ಏರಿಕೆಯಿಂದ ನಿಮ್ಮ ಮಾನಸಿಕ ನೆಮ್ಮದಿ ಹದಗೆಡಬಹುದು.
ಕುಂಭ ರಾಶಿ
ಕುಂಭ ರಾಶಿಯವರಿಗೆ ಇದು ಸವಾಲಿನ ಸಮಯವಾಗಿರುತ್ತದೆ. ನೀವು ಕೆಲಸಕ್ಕಾಗಿ ಹೆಚ್ಚು ಓಡಾಡಬೇಕಾಗಬಹುದು. ಈ ಸಮಯದಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗುತ್ತವೆ. ನಿಮ್ಮ ಕುಟುಂಬ ಜೀವನದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿ. ವ್ಯಾಪಾರ, ವ್ಯವಹಾರ ಸಂಬಂಧವಾಗಿ ನೀವು ಹಣಕಾಸಿನ ಬಿಕ್ಕಟ್ಟು ಎದುರಿಸಬಹುದು. ನಿರುದ್ಯೋಗಿಗಳು ಮತ್ತಷ್ಟು ಶ್ರಮ ಹಾಕಬೇಕಾಗಬಹುದು. ಕೌಟುಂಬಿಕ ವಿಚಾರದಲ್ಲಿ ಹಲವು ಬಾರಿ ತಾಳ್ಮೆ ಕಳೆದುಕೊಳ್ಳುವಿರಿ. ಆಸ್ತಿ, ನ್ಯಾಯಾಲಯ ವಿಚಾರವಾಗಿ ಹಿನ್ನಡೆ ಎದುರಿಸುತ್ತೀರಿ.
ಮೀನ ರಾಶಿ
ಮೀನ ರಾಶಿಯವರಿಗೆ ಈ ಚಂದ್ರಗ್ರಹಣವು ಹಲವು ರೀತಿಯಲ್ಲಿ ಅನಾನುಕೂಲಗಳ ತರಲಿದೆ. ನಿಮ್ಮ ಹಲವು ಕೆಲಸಗಳು ಅರ್ಧದಲ್ಲೇ ನಿಲ್ಲಲಿದೆ. ಹಣಕಾಸು ವಿಚಾರದಲ್ಲಿ ಅಡ್ಡಿಗಳ ಎದುರಿಸುವಿರಿ. ವಾಹನ ಸಂಬಂಧಿತ ವಿಚಾರವಾಗಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಕೌಟುಂಬಿಕ ಸಮಸ್ಯೆಗಳು ತಲೆದೂರಬಹುದು. ವಿವಾಹ ವಿಚಾರದಲ್ಲಿ ಮತ್ತಷ್ಟು ಚಿಂತೆಗಳು ಬರಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications