Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಸಂಕ್ರಾಂತಿ ಬಳಿಕ ಮರುಕಳಿಸಲಿದೆ ಅದೃಷ್ಟ: ಯಾವ ರಾಶಿಯವರಿಗೆ ಈ ಸಂಕ್ರಾಂತಿ ಶುಭಕರ!
ಜ್ಯೋತಿಷ್ಯ ಶಾಸ್ತ್ರದಲ್ಲಿ ಸಂಕ್ರಾಂತಿ ಹಬ್ಬವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಸಂಕ್ರಾಂತಿ ಹಬ್ಬದ ಮೊದಲ ದಿನದಂದು ಸೂರ್ಯನು ಧನು ರಾಶಿಯನ್ನು ಬಿಟ್ಟು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಮಕರ ರಾಶಿಯ ಅಧಿಪತಿ ಶನಿ. ಸೂರ್ಯ ಮತ್ತು ಶನಿ ದೇವನಿಗೆ ತಂದೆ-ಮಗನ ಸಂಬಂಧವಿದೆ. ಹಾಗೆ ಸಂಕ್ರಾಂತಿಯ ನಂತರ ಹಲವರ ಬದುಕು ಬದಲಾಗುವುದು ನಾವು ನೋಡಬಹುದು.
ಸಂಕ್ರಾಂತಿಯಲ್ಲಿನ ಗ್ರಹಗತಿಗಳ ಬದಲಾವಣೆಯು ಹಲವು ರಾಶಿಗಳ ಮೇಲೆ ಪರಿಣಾಮ ಬೀರುವುದು ನೋಡಬಹುದು. ಸೌರಮಂಡಲದಲ್ಲಿ ಸೂರ್ಯನ ಸಂಚಾರದಿಂದ ಆಗುವ ಬದಲಾವಣೆಯು ಹಲವು ರೀತಿಯಲ್ಲಿ ಪ್ರಭಾವ ಉಂಟು ಮಾಡುವುದು ನೋಡಬಹುದು. ಹಾಗೆ ಸೂರ್ಯನು ಈ ದಿನ ತಮ್ಮ ಪಥ ಬದಲಾಯಿಸುವುದು ಎಲ್ಲಾ ರಾಶಿಗಳಿಗೆ ಹೊಸ ರೀತಿಯಾದ ಜೀವನ ಸಿಗಬಹುದು.

ಈ ಸೌರ ಸಂಚಾರ ಸ್ವಲ್ಪ ವಿಶೇಷವಾಗಿದೆ ಏಕೆಂದರೆ ಸೂರ್ಯ ಸುಮಾರು 1 ವರ್ಷದ ನಂತರ ತನ್ನ ಮಗನ ಮಕರ ರಾಶಿಗೆ ಹೋಗುತ್ತಾನೆ. ಇದೆ ಸಮಯದಲ್ಲಿ ಶನಿ ಮೀನ ರಾಶಿಯಲ್ಲಿ ಪ್ರಯಾಣಿಸುತ್ತಾನೆ. ಸೂರ್ಯನು ಈ ರೀತಿ ಶನಿಯ ರಾಶಿಗೆ ಚಲಿಸುವ ಪ್ರಭಾವವು ಮೇಷ ರಾಶಿಯಿಂದ ಮೀನ ರಾಶಿಯವರೆಗಿನ 12 ರಾಶಿ ಜನರಿಗೆ ಅದರ ಪ್ರಭಾವ ನೋಡಬಹುದು. ಸೂರ್ಯನ ಈ ಚಲನೆಯು ಹಲವು ರಾಶಿಗಳ ಜನರ ಜೀವನ ಬದಲಿಸಬಹುದು. ಹಾಗಾದ್ರೆ ಈ ಸಂಕ್ರಾಂತಿಯ ಬಳಿಕ ಯಾರಿಗೆಲ್ಲಾ ಲಾಭದಾಯಕ ಯಾರ ಭವಿಷ್ಯ ಬದಲಾಗಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಮೇಷ ರಾಶಿ
ಸೂರ್ಯನು ಮೇಷ ರಾಶಿಯ 10 ನೇ ಮನೆಗೆ ಚಲಿಸುತ್ತಾನೆ. ಇದರಿಂದಾಗಿ ಈ ರಾಶಿ ಜನರ ಜೀವನದಲ್ಲಿ ಗಮನಾರ್ಹ ಪ್ರಯೋಜನ ಪಡೆಯಲಿದ್ದೀರಿ. ಕೆಲಸ ಮಾಡುವವರಿಗೆ ಬಡ್ತಿ ಮತ್ತು ಸಂಬಳ ಹೆಚ್ಚಳದ ಸಾಧ್ಯತೆಗಳಿವೆ. ಉದ್ಯೋಗವನ್ನು ಹುಡುಕುತ್ತಿರುವವರಿಗೆ ಉತ್ತಮ ಉದ್ಯೋಗ ಸಿಗುತ್ತದೆ. ಬಹಳ ಸಮಯದಿಂದ ನೀವು ಬಯಸಿದಂತಹ ಕೆಲಸವನ್ನು ಈ ಸಮಯದಲ್ಲಿ ಪಡೆಯಬಹುದು. ಉದ್ಯೋಗ ಸಂಬಂಧಿತ ವಿಚಾರದಲ್ಲಿ ಇದ್ದಂತಹ ಹಲವು ಸಮಸ್ಯೆಗಳು ನಿವಾರಣೆಯಾಗಲಿದೆ. ದಾಂಪತ್ಯ ವಿಚಾರದಲ್ಲಿ ನಿಮಗೆ ಇದ್ದ ಆಪತ್ತು ದೂರಾಗಲಿದೆ. ನಿಮ್ಮ ವ್ಯಾಪಾರ ಸಂಬಂಧಿತ ವಿಚಾರದಲ್ಲಿ ದೊಡ್ಡ ಲಾಭವಿದೆ. ನಿಮ್ಮ ಹೊಸ ವ್ಯವಹಾರಗಳು ನೀವು ಅಂದುಕೊಂಡ ಫಲಿತಾಂಶ ತರಲಿದೆ.
ವೃಷಭ ರಾಶಿ
ಸೂರ್ಯನು ವೃಷಭ ರಾಶಿಯ 9 ನೇ ಮನೆಗೆ ಸ್ಥಳಾಂತರಗೊಳ್ಳುತ್ತಾನೆ. ಇದು ಈ ರಾಶಿ ಜನರ ಅದೃಷ್ಟವನ್ನು ಬೆಳಗಿಸುತ್ತದೆ. ಪಿತ್ರಾರ್ಜಿತ ಆಸ್ತಿಯ ಸಮಸ್ಯೆಗಳು ಬಗೆಹರಿಯುತ್ತವೆ ಮತ್ತು ಅವರಿಗೆ ಉತ್ತಮ ಲಾಭ ಸಿಗುತ್ತದೆ. ಆಧ್ಯಾತ್ಮಿಕ ವಿಚಾರವಾಗಿ ಈ ವರ್ಷ ಬಹಳ ಬಲವಾದ ನಂಬಿಕೆ ಹೊಂದಿರುತ್ತೀರಿ. ನಿಮ್ಮ ಹಲವು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸರಿಯಾದ ಸಮಯ ಆಗಿರಲಿದೆ. ನಿಮ್ಮ ಹಲವು ಪ್ರಯತ್ನಗಳಲ್ಲಿ ಧನಾತ್ಮಕ ಬದಲಾವಣೆಗಳು ಇರಲಿದೆ. ನಿಮ್ಮ ಆರ್ಥಿಕ ವಿಚಾರದಲ್ಲಿನ ಅಡ್ಡಿಗಳು ನಿವಾರಣೆಯಾಗಲಿದೆ, ಇದರಿಂದ ನೀವು ಬಯಸಿದ್ದ ಹಣಕಾಸು ಸೌಲಭ್ಯಗಳ ಪಡೆಯಬಹುದು.
ಸಿಂಹ ರಾಶಿ
ಸೂರ್ಯನು ಸಿಂಹ ರಾಶಿಯ 6ನೇ ಮನೆಗೆ ಸ್ಥಳಾಂತರಗೊಳ್ಳುತ್ತಾನೆ. ಇದರಿಂದಾಗಿ ಈ ರಾಶಿ ಜನರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಉತ್ತಮ ಯಶಸ್ಸನ್ನು ನಿರೀಕ್ಷಿಸಬಹುದು. ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ನಿಮ್ಮ ಕೈಗೆ ದೊಡ್ಡ ಮೊತ್ತವೊಂದು ಕೈ ಸೇರಬಹುದು. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಬಹಳಷ್ಟು ಹಣವನ್ನು ಗಳಿಸುವ ಅವಕಾಶವಿರುತ್ತದೆ. ಒಟ್ಟಾರೆಯಾಗಿ ವೃತ್ತಿಪರವಾಗಿ ಮತ್ತು ಆರ್ಥಿಕವಾಗಿ ಉತ್ತಮ ಪ್ರಗತಿ ಇರುತ್ತದೆ. ನಿಮ್ಮ ಹೊಸ ವ್ಯವಹಾರಗಳಲ್ಲಿ ದುಪ್ಪಟ್ಟು ಲಾಭ ನೋಡಬಹುದು. ಪ್ರಮಾಣಿಕ ಪ್ರಯತ್ನಗಳು ನಿಮಗೆ ಉತ್ತಮ ಫಲಿತಾಂಶ ತರಲಿದೆ.
ಮಕರ ರಾಶಿ
ಸೂರ್ಯನು ಮಕರ ರಾಶಿಯ ಮೊದಲ ಮನೆಗೆ ಸ್ಥಳಾಂತರಗೊಳ್ಳುತ್ತಾನೆ. ಇದರಿಂದಾಗಿ ಈ ರಾಶಿ ಜನರ ಅದೃಷ್ಟ ಬದಲಾಗುತ್ತಿದೆ. ನಿಮ್ಮ ಹಲವು ಕೆಲಸಗಳು ಅದೃಷ್ಟದಿಂದ ಕೂಡಿರಲಿದೆ. ಹಲವು ಸಮಯದ ನಿಮ್ಮ ಹಣಕಾಸು ಸಂಬಂಧಿತ ಸಮಸ್ಯೆಯೊಂದರಿಂದ ಪರಿಹಾರ ಪಡೆಯುತ್ತೀರಿ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣ ಕೈ ಸೇರಲಿದೆ. ಆತ್ಮವಿಶ್ವಾಸ ಹೆಚ್ಚಾಗು ಕೆಲಸ ಮಾಡಲಿದ್ದೀರಿ. ಕೃಷಿ ಸಂಬಂಧಿತ ವಿಚಾರದಲ್ಲಿ ನೀವು ಲಾಭ ಗಳಿಸುವ ಸಮಯ ಇದಾಗಲಿದೆ. ದೀರ್ಘಕಾಲದ ಅನಾರೋಗ್ಯ ಸಮಸ್ಯೆಯೊಂದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಮಂದಿಗೆ ಈ ಸಮಯವು ಬಹಳ ಅನುಕೂಲಕರವಾಗಿರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











