Latest Updates
-
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು
'ಅ' ಅಕ್ಷರದಿಂದ ಹೆಸರು ಆರಂಭವಾದರೆ 2024ರಲ್ಲಿ ನಿಮ್ಮ ಪ್ರೀತಿ ಜೀವನ ಹೇಗಿರಲಿದೆ?
ಹಿಂದೂ ಧರ್ಮದಲ್ಲಿ ಪ್ರತಿಯೊಂದು ಆಚರಣೆ ಹಾಗೂ ಪ್ರತಿಯೊಂದು ನೀತಿ ನಿಯಮಗಳಿಗೂ ತನ್ನದೇ ಆದ ಅರ್ಥವಿದೆ. ನಮ್ಮ ಹೆಸರಿಡುವ ಕಾರ್ಯದಿಂದ ಹಿಡಿದು ಎಲ್ಲಾ ಆಚರಣೆಗಳಿಗೂ ಹಿಂದೂ ಧರ್ಮದ ಶಾಸ್ತ್ರಗಳಿಗೂ ಒಂದಿಲ್ಲೊಂದು ಸಂಬಂಧವಿರುತ್ತದೆ. ಇನ್ನು ನಮ್ಮ ಹೆಸರು ಸಹ ನಮ್ಮ ಭವಿಷ್ಯ ರೂಪಿಸಲು ಹಾಗೂ ನಮ್ಮ ನಡುವಳಿಕೆಯ ಕೇಂದ್ರಬಿಂದುವಾಗಿದೆ.
ಹೆಸರಿನ ಮೊದಲ ಅಕ್ಷರವು ನಮ್ಮ ನಡುವಳಿಕ, ವ್ಯಕ್ತಿತ್ವ, ಜೀವನ ಹಾಗೂ ಗುಣದ ಪ್ರತಿರೂಪವಾಗಿರುತ್ತದೆ. ನಮ್ಮ ಇಡೀ ಜೀವನದ ಸಾರ ಈ ಹೆಸರಿನ ಮೊದಲ ಅಕ್ಷರದಲ್ಲಿ ಅಡಗಿದೆ. ಹಾಗಾದರೆ ನಮ್ಮ ಹೆಸರಿನ ಮೊದಲ ಅಕ್ಷರ ನಮ್ಮ ಭವಿಷ್ಯ ಕುರಿತು ಏನು ಹೇಳುತ್ತವೆ. ನಿಮ್ಮ ಹೆಸರು ಅ ಅಕ್ಷರದಿಂದ ಆರಂಭವಾದರೆ 2024ರ ನಿಮ್ಮ ಭವಿಷ್ಯ ಯಾರು ರೀತಿಯಲ್ಲಿ ಇರಲಿದೆ ಎಂಬುದನ್ನು ನಾವಿಂದು ನೋಡೋಣ.

ಕನ್ನಡದಲ್ಲಿ ಅ ಮತ್ತು ಇಂಗ್ಲಿಷ್ ವರ್ಣಮಾಲೆಯಲ್ಲಿ A ಅಕ್ಷರದಿಂದ ನಿಮ್ಮ ಹೆಸರು ಆರಂಭವಾಗಿತ್ತಿದ್ದರೆ ನಿಮ್ಮ 2024ರ ಭವಿಷ್ಯ ಏನು ನುಡಿಯುತ್ತಿದೆ? ನಿಮ್ಮ ಈ ವರ್ಷ ಹೇಗೆ ಸಾಗಲಿದೆ ಎಂಬುದನ್ನು ನಾವಿಂದು ನೋಡೋಣ.
ಮೊದಲನೆಯದಾಗಿ ಆ ಅಕ್ಷರದಿಂದ ಪ್ರಾರಂಭವಾಗುವ ಜನರ ಬಗ್ಗೆ ತಿಳಿದುಕೊಳ್ಳೋಣ. ಅವರು ತುಂಬಾ ಭಾವನಾತ್ಮಕ ಸ್ವಭಾವದವರು, ಜೊತೆಗೆ ಬಹಳ ರೊಮ್ಯಾಂಟಿಕ್ ಮನೋಭಾವ ಹೊಂದಿದವರು. ಬೇರೆಯವರ ಭಾವನೆಯನ್ನು ಹೆಚ್ಚಾಗಿ ಗೌರವಿಸುವವರು. ಬಾಳ ಸಂಗಾತಿಯ ಮನಸ್ಸನ್ನು ಹೆಚ್ಚು ಅರ್ಥೈಸಿಕೊಂಡವರು ಎಂದು ಜ್ಯೋತಿಷ್ಯ ಶಾಸ್ತ್ರ ಉಲ್ಲೇಖಿಸುತ್ತದೆ.
ತಮ್ಮ ಸಂಗಾತಿಯ ಮೇಲಿನ ಅವರ ಅಚಲ ಪ್ರೀತಿ ಅವರನ್ನು ಇತರರಿಗಿಂತ ಭಿನ್ನವಾಗಿಸುತ್ತದೆ. ಅ ಅಕ್ಷರದ ಜನರು ಯಾವ ಬಟ್ಟೆ ಧರಿಸಿದರು ಸುಂದರವಾಗಿ ಕಾಣುವರು ಮತ್ತು ಅವರ ವ್ಯಕ್ತಿತ್ವವು ಗುಂಪಿನಿಂದ ಭಿನ್ನವಾಗಿರುವ ಜನರ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಇದಲ್ಲದೆ, ಅವರು ಬಲವಾದ ಮತ್ತು ಸ್ವತಂತ್ರ ಸ್ವಭಾವದವರಾಗಿದ್ದಾರೆ ಮತ್ತು ಅವರು ತಮ್ಮ ಪ್ರೀತಿ ಪಾತ್ರರಲ್ಲಿ ಅದೇ ಗುಣಗಳನ್ನು ಬಯಸುತ್ತಾರೆ. ಈ ಜನರು ಪ್ರೀತಿಯಲ್ಲಿ ಬಹಳ ನಿಷ್ಠಾವಂತರು, ಜೀವನದಲ್ಲಿ ಅವರ ಆದರ್ಶಗಳು ಅವರ ದೊಡ್ಡ ಆಸ್ತಿ ಮತ್ತು ಅವರು ತಮ್ಮ ಆದರ್ಶಗಳ ಮೇಲೆ ಮಾತ್ರ ತಮ್ಮ ಜೀವನವನ್ನು ನಡೆಸುತ್ತಾರೆ.
ಈ ವರ್ಷ ಅವರ ಪ್ರೀತಿಯ ಜೀವನ ಹೇಗಿರಲಿದೆ
ಅ ಹೆಸರಿನ ಜನರ ಪ್ರೀತಿಯ ಜೀವನದ ಬಗ್ಗೆ ಹೇಳುವುದಾದರೆ, ಅವರು ಇತರರಿಗಿಂತ ಸಾಕಷ್ಟು ಭಿನ್ನರಾಗಿರುತ್ತಾರೆ. ಅವರು ಯಾರ ಸಂಬಂಧದಲ್ಲಿಯೂ ಅನಗತ್ಯವಾಗಿ ಮೂಗು ತೂರಿಸುವ ಕೆಲಸ ಮಾಡುವುದಿಲ್ಲ. ಅಥವಾ ತಮ್ಮ ಸಂಬಂಧದಲ್ಲಿ ಇತರರು ಬರುವುದನ್ನು ಇಲ್ಲವೆ ಹಸ್ತಕ್ಷೇಪ ಮಾಡುವುದನ್ನು ಅವರು ಇಷ್ಟಪಡುವುದಿಲ್ಲ.
ಆದರೆ 2024ರಲ್ಲಿ ಇವರ ಪ್ರೀತಿಗೆ ಅನುಕೂಲಕರವಾದ ಪರಿಸ್ಥಿತಿ ಇಲ್ಲ ಎಂಬುದಾಗಿ ಜ್ಯೋತಿಷ್ಯ ಹೇಳುತ್ತದೆ. ಜನವರಿಯಿಂದ ಏಪ್ರಿಲ್ ವರೆಗೆ ನೀವು ಈ ಸಮಯವನ್ನು ನೋಡಬಹುದು. ನಿಮ್ಮ ಹೆಸರು A ಅಕ್ಷರದಿಂದ ಪ್ರಾರಂಭವಾಗಿದ್ದರೆ ಮತ್ತು ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ಅಥವಾ ಹೊಸ ಸಂಬಂಧವನ್ನು ಹೊಂದಲು ಮುಂದಾಗಿದ್ದರೆ, ತೊಡಕುಗಳಯ ಎದುರಾಗುವ ಸಂಭವವಿದೆ. ಏಪ್ರಿಲ್ ವರೆಗೂ ನೀವು ಪ್ರೀತಿಯ ವಿಚಾರದಲ್ಲಿ ಹಲವು ರೀತಿಯ ಹಿನ್ನಡೆ ಎದುರಿಸಬೇಕಾಗುತ್ತದೆ.
ಆದರೆ ಏಪ್ರಿಲ್ ಬಳಿಕ ನಿಮ್ಮ ಜೀವನದಲ್ಲಿ ನೀವಂದುಕೊಂಡತೆ ನಿಮ್ಮ ಪ್ರೀತಿ ಜೀವನ ಒಲಿಯಲಿದೆ. ಇನ್ನುಳಿದ ವರ್ಷದಲ್ಲಿ ನಿಮ್ಮ ಜೀವನ ಪ್ರೀತಿಯಿಂದ ತುಂಬಿರಲಿದೆ. ಅಲ್ಲದೆ ಹೊಸ ಸಂಬಂಧಕ್ಕೂ ಅನುಕೂಲಕರ ಸ್ಥಿತಿ ಉಂಟಾಗುತ್ತದೆ.
ಯಾವ ತಿಂಗಳಲ್ಲಿ ನಿಮ್ಮ ಸಂಬಂಧ ಗಟ್ಟಿಯಾಗಲಿದೆ
ಇನ್ನೂ ನೀವೇನಾದರು ಪ್ರೀತಿಪಾತ್ರರ ಮನಸ್ಸನ್ನು ಗೆಲ್ಲಲು ಮುಂದಾಗಿದ್ದರೆ, ಈ ವರ್ಷದ ಆಗಸ್ಟ್ ಮತ್ತು ಸೆಪ್ಟೆಂಬರ್ ನಡುವಿನ ಸಮಯವು ಅತ್ಯಂತ ಸೂಕ್ತ ಕಾಲ ಎಂದು ಶಾಸ್ತ್ರದ ಪ್ರಕಾರ ತಿಳಿಯುತ್ತದೆ. ಈ ತಿಂಗಳುಗಳಲ್ಲಿ ಇಬ್ಬರ ನಡುವಿನ ಹೊಂದಾಣಿಕೆ ಮತ್ತಷ್ಟು ಬಲಗೊಳ್ಳುತ್ತದೆ. ಇದು ನಿಮ್ಮಿಬ್ಬರ ನಡುವಿನ ಆಳವಾದ ತಿಳುವಳಿಕೆ ಮತ್ತು ಪ್ರೀತಿಯನ್ನು ಬಲಪಡಿಸುತ್ತದೆ. ನಿಮ್ಮನ್ನು ನೋಡುವ ಪ್ರತಿಯೊಬ್ಬರೂ ನಿಮ್ಮನ್ನು ಉದಾಹರಣೆಯಾಗಿ ತೆಗೆದುಕೊಳ್ಳುತ್ತಾರೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











