Latest Updates
-
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು!
Love Horoscope: ಈ ರಾಶಿಯ ಸಿಂಗಲ್ಸ್‌ಗೆ ಮದುವೆ ಫಿಕ್ಸ್! ಇವರಿಗೆ ಕ್ರಶ್ ಜೊತೆ ಡಿನ್ನರ್ ಡೇಟ್
ಈ ರಾಶಿಯವರ ಪ್ರೇಮ ಜೀವನದಲ್ಲಿ ಮಹತ್ವದ ಬದಲಾವಣೆ ಖಚಿತ. ಇವರು ನೀವು ತಮ್ಮ ಸಂಗಾತಿಗೆ ವಿಶೇಷ ಪಾರ್ಟಿ ಆಯೋಜಿಸುವ ಸಾಧ್ಯತೆ. ವೃಷಭ ರಾಶಿಯ ಸಿಂಗಲ್ಸ್‌ಗೆ ಮ್ಯಾರೇಜ್ ಪ್ರಪೋಸಲ್ ಬರಬಹುದು. ಮಿಥುನ ರಾಶಿ ಸಿಂಗಲ್ಸ್‌ಗೆ ಡೇಟಿಂಗ್ ಚಾನ್ಸ್ ಸಿಗಲಿದೆ. ಕರ್ಕಾಟಕ ರಾಶಿಯವರು ಕ್ರಶ್ ಜೊತೆ ಡಿನ್ನರ್ ಡೇಟ್‌ಗೆ ಹೋಗುವ ಸಾಧ್ಯತೆಯಿದೆ. ಮೇಷ ರಾಶಿಯಿಂದ ಮೀನ ರಾಶಿಯವರೆಗೆ, ಎಲ್ಲಾ ರಾಶಿಗಳ ಇಂದಿನ (18 September Love Horoscope) ಪ್ರೇಮ ಭವಿಷ್ಯ ಇಲ್ಲಿದೆ.
ಮೇಷ ರಾಶಿ
ನಿಮ್ಮ ಪ್ರೇಮ ಸಂಬಂಧಗಳಿಗೆ ಸಂಬಂಧಿಸಿದಂತೆ ಈ ದಿನವು ವಿಶೇಷವಾಗಿರುತ್ತದೆ. ನಿಮ್ಮ ಸಂಬಂಧದಲ್ಲಿ ಪ್ರೀತಿ ಹೆಚ್ಚಲಿದೆ. ನೀವು ನಿಮ್ಮ ಸಂಗಾತಿಗೆ ವಿಶೇಷ ಪಾರ್ಟಿ ಆಯೋಜಿಸುವ ಸಾಧ್ಯತೆ ಇದೆ. ಲವ್‌ನಲ್ಲಿ ಇರುವವರಿಗೆ ಹೊರಗೆ ಹೋಗುವ ಚಾನ್ಸ್ ಸಿಗಲಿದೆ.
ವೃಷಭ ರಾಶಿ
ಉದ್ಯೋಗದ ಒತ್ತಡದಿಂದಾಗಿ ನಿಮ್ಮ ಸಂಗಾತಿಗೆ ಕಡಿಮೆ ಸಮಯ ನೀಡಬೇಕಾಗುತ್ತೆ. ಆದರೂ, ಪರಸ್ಪರ ಅರ್ಥಮಾಡಿಕೊಂಡು ಮಾತುಕತೆ ನಡೆಸಲು ನೀವು ಟೈಮ್ ಕೊಡಬೇಕು. ಇದರಿಂದ ನಿಮ್ಮ ಸಂಬಂಧಗಳು ಮಧುರವಾಗಿ ಉಳಿಯುತ್ತವೆ. ಸಿಂಗಲ್ ಇರುವವರಿಗೆ ಮ್ಯಾರೇಜ್ ಪ್ರಪೋಸಲ್ ಬರಬಹುದು.

ಮಿಥುನ ರಾಶಿ
ನಿಮ್ಮ ಲವರ್ ಜೊತೆ ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳಲು ಇದು ಒಳ್ಳೆಯ ಟೈಮ್. ಆದರೂ, ಅವರನ್ನು ಅರ್ಥಮಾಡಿಕೊಳ್ಳಲು ನೀವು ಇನ್ನಷ್ಟು ಪ್ರಯತ್ನಿಸಲೇಬೇಕು. ಕಾರಣ, ನಿಮ್ಮ ಕಠಿಣ ಮಾತುಗಳು ಸಂಬಂಧವನ್ನು ಹಾಳುಮಾಡಬಹುದು. ಸಿಂಗಲ್ ಇರುವವರಿಗೆ ಡೇಟಿಂಗ್ ಅವಕಾಶಗಳು ಸಿಗಲಿವೆ.
ಕರ್ಕಾಟಕ ರಾಶಿ
ಹಿಂದಿನ ಕೆಲವು ವಿಚಾರಗಳು ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ, ನೀವು ಹೊಸ ಆರಂಭಕ್ಕೆ ಮುಂದಾಗುವುದು ಉತ್ತಮ. ನಿಮ್ಮ ಕ್ರಶ್ ಜೊತೆಗಿನ ಮಾತುಕತೆ ಹೊಸ ಸಂಬಂಧಕ್ಕೆ ನಾಂದಿ ಹಾಡಲಿದೆ. ನೀವು ಡಿನ್ನರ್ ಡೇಟ್‌ಗೆ ಹೋಗುವ ಸಾಧ್ಯತೆ ಇದೆ.
ಸಿಂಹ ರಾಶಿ
ಈ ದಿನವು ನಿಮ್ಮ ಸಂಬಂಧಗಳಲ್ಲಿ ಹೊಸ ಉತ್ಸಾಹವನ್ನು ತರುತ್ತದೆ. ನಿಮ್ಮ ಸಂಗಾತಿಗೆ ಪ್ರೀತಿಯನ್ನು ವ್ಯಕ್ತಪಡಿಸಲು ಅವಕಾಶಗಳು ಸಿಗಲಿದೆ. ಇವುಗಳನ್ನು ಎಚ್ಚರಿಕೆಯಿಂದ ಬಳಸಿಕೊಳ್ಳಿ. ಸಂಗಾತಿಯೊಂದಿಗೆ ಕೆಲವು ಸಂಬಂಧಗಳನ್ನು ಬಲಪಡಿಸಲು ಇದು ಒಳ್ಳೆಯ ಟೈಮ್. ಸ್ನೇಹಿತರೊಂದಿಗೆ ಸಹ ಸಮಯ ಕಳೆಯುವಿರಿ.
ಕನ್ಯಾ ರಾಶಿ
ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯದಿಂದ ನಿಮ್ಮ ಮನಸ್ಸಿಗೆ ಬೇಸರವಾಗಲಿದೆ. ನಿಮ್ಮ ಗುರಿಗಳ ಮೇಲೆ ಗಮನ ಹರಿಸುವುದು ಮುಖ್ಯ. ಆದರೆ, ಕೆಲವು ಹೊಸ ವ್ಯಕ್ತಿಗಳ ಎಂಟ್ರಿಯು ನಿಮ್ಮ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ, ಸಮತೋಲನ ಕಾಯ್ದುಕೊಳ್ಳಿ.
ತುಲಾ ರಾಶಿ
ಈ ದಿನವು ನಿಮಗೆ ವಿಶೇಷವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಮದುವೆಯ ಯೋಜನೆಗಳನ್ನು ರೂಪಿಸುವಿರಿ. ಹೊಸ ಸಂಬಂಧವು ನಿಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತರಲಿದೆ. ನಿಮ್ಮ ಸಂಗಾತಿಯೊಂದಿಗೆ ಹೊಸ ವ್ಯಾಪಾರ ಯೋಜನೆಗಳನ್ನು ಸಹ ಮಾಡಬಹುದು.
ವೃಶ್ಚಿಕ ರಾಶಿ
ಈ ದಿನದ ಸಮಯ ನಿಮಗೆ ಲಾಭದಾಯಕವಾಗಿದೆ. ನಿಮ್ಮ ಭಾವನೆಗಳನ್ನು ನಿಯಂತ್ರಿತ ರೀತಿಯಲ್ಲಿ ವ್ಯಕ್ತಪಡಿಸಲು ಗಮನ ಕೊಡಿ. ಅವಿವಾಹಿತರಿಗೆ ಬದಲಾವಣೆಗಳಿಂದ ತುಂಬಿದ ಸಮಯವಿದೆ. ನೀವು ವಿಶೇಷ ವ್ಯಕ್ತಿಯೊಂದಿಗೆ ನಿಮ್ಮ ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳುವಿರಿ.
ಧನು ರಾಶಿ
ಈ ದಿನವು ಪ್ರಣಯದಿಂದ ಕೂಡಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಡಿನ್ನರ್‌ಗೆ ಹೋಗುವಿರಿ. ಈ ಸಮಯದಲ್ಲಿ ನೀವು ಉತ್ತಮ ಸಂಜೆಯನ್ನು ಕಳೆಯುವಿರಿ. ಇದು ಸಂಬಂಧಗಳಿಗೆ ಹೊಸತನವನ್ನು ತರುತ್ತದೆ.
ಮಕರ ರಾಶಿ
ವಿವಾಹಿತರು ತಮ್ಮ ಸಂಗಾತಿಯ ಬಗ್ಗೆ ಪ್ರೀತಿಯನ್ನು ವ್ಯಕ್ತಪಡಿಸಬೇಕು. ಸಂಬಂಧಗಳಲ್ಲಿ ಪ್ರಾಮಾಣಿಕತೆಯನ್ನು ಕಾಯ್ದುಕೊಳ್ಳಬೇಕು. ನಿಮ್ಮ ಮಾತುಗಳನ್ನು ರಾಜತಾಂತ್ರಿಕವಾಗಿ ವ್ಯಕ್ತಪಡಿಸಿ.
ಕುಂಭ ರಾಶಿ
ಅವಿವಾಹಿತರು ಮದುವೆ ಸಂಬಂಧಕ್ಕೆ ಪ್ರವೇಶಿಸಬಹುದು. ಆದರೆ, ಹೊಸ ಕೆಲಸವನ್ನು ಪ್ರಾರಂಭಿಸಲು ನೀವು ಹೆಚ್ಚಿನ ಸಮಯವನ್ನು ಅಲ್ಲಿ ಕಳೆಯುವಿರಿ. ಇಂದಿನ ನಿಮ್ಮ ಪ್ರೇಮ ಜೀವನ ಸ್ಥಿರವಾಗಿರಲಿದೆ.
ಮೀನ ರಾಶಿ
ನಿಮ್ಮ ಭಾವನೆಗಳನ್ನು ಸಂಗಾತಿಗೆ ತಿಳಿಸುವುದರಿಂದ ನಿಮಗೆ ಉತ್ತಮ ಅನಿಸುತ್ತದೆ. ಕುಟುಂಬ ಮತ್ತು ಪ್ರೇಮ ಜೀವನದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಿ. ಇಂದಿನ ದಿನವು ನಿಮಗೆ ವಿಶೇಷವಾಗಿರುತ್ತದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
