Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ರಾಶಿಯವರ ಡೇಟಿಂಗ್ ಪ್ಲಾನ್ ಕ್ಯಾನ್ಸಲ್! ಇವರಿಗೆ ಲವರ್‌ನಿಂದ ಗುಡ್ ನ್ಯೂಸ್ ಖಚಿತ
Love Horoscope June 19: ಇಂದು ಕನ್ಯಾ ರಾಶಿಯವರ ಪ್ರೇಮ ಸಂಬಂಧಗಳಲ್ಲಿ ಉದ್ವಿಗ್ನತೆ ಉಂಟಾಗಬಹುದು. ಮೇಷ ರಾಶಿಯವರಿಗೆ ಇಂದು ಪ್ರಣಯ ವಿಷಯಗಳಲ್ಲಿ ಸವಾಲಿನ ದಿನವಾಗಬಹುದು. ವೃಶ್ಚಿಕ ರಾಶಿಯರಿಗೆ ಪ್ರಣಯ ವಿಷಯಗಳಲ್ಲಿ ರೋಮಾಂಚಕಾರಿ ದಿನ. ಇಂದು (ಜೂನ್ 19) ಯಾವ ರಾಶಿಯವರ ಲವ್ ಮೇಲುಗೈ ಸಾಧಿಸುತ್ತದೆ, ಯಾರು ಹೊಸ ಸಂಗಾತಿಯನ್ನು ಹುಡುಕುತ್ತಾರೆ, ಯಾರ ಹೃದಯ ಮುರಿಯುತ್ತದೆ? ತಿಳಿಯಲು ಮುಂದೆ ಓದಿ.
ಇಂದು ಪ್ರತಿಯೊಂದು ರಾಶಿಯವರಿಗೂ ವಿಶೇಷ ದಿನ. ಆದರೆ, ಕೆಲವು ರಾಶಿಯವರಿಗೆ ಸಂಗಾತಿಯಿಂದ ಮೋಸದ ಸಾಧ್ಯತೆಯಿದೆ. ಕೆಲವರು ತಮ್ಮ ಸಂಗಾತಿಯ ವಿಚಾರದಲ್ಲಿ ಅಥವಾ ಸಂಬಂಧಗಳಲ್ಲಿ ಎಚ್ಚರಿಕೆ ವಹಿಸಬೇಕು. ಇನ್ನು ಕೆಲವ ಪ್ರೇಮ ಸಂಬಂಧಗಳು ಬಲಗೊಳ್ಳುತ್ತವೆ. ಇಂದು ಮೇಷ ರಾಶಿಯಿಂದ ಮೀನ ರಾಶಿಯವರ ಲವ್ ಲೈಫ್ ಹೇಗಿದೆ ಎಂಬುವುದನ್ನು ನೋಡೋಣ ಬನ್ನಿ.

ಮೇಷ ರಾಶಿ
ಮೇಷ ರಾಶಿಯವರಿಗೆ ಇಂದು ಪ್ರಣಯ ವಿಷಯಗಳಲ್ಲಿ ಸವಾಲಿನ ದಿನ. ನಿಮ್ಮ ಕೆಲವು ಮಾತುಗಳು ಅಥವಾ ಕಾರ್ಯಗಳು ನಿಮ್ಮ ಸಂಗಾತಿಗೆ ನೋವುಂಟು ಮಾಡಬಹುದು. ಹೀಗಾಗಿ, ನಿಮ್ಮ ಮಾತನ್ನು ನಿಯಂತ್ರಿಸಿ. ನಿಮ್ಮ ಸಂಗಾತಿಯ ಭಾವನೆಗಳನ್ನು ಗೌರವಿಸಬೇಕು. ಸಿಂಗಲ್ ಇರುವವರಿಗೆ, ನಿಮ್ಮ ಸಂಗಾತಿಯೊಂದಿಗಿನ ಡೇಟಿಂಗ್ ಪ್ಲಾನ್ ಕ್ಯಾನ್ಸಲ್ ಆಗಬಹುದು.
ವೃಷಭ ರಾಶಿ
ಇಂದು ವೃಷಭ ರಾಶಿಯರ ಲವ್ ಲೈಫ್‌ನಲ್ಲಿ ಸ್ಥಿರತೆ ಇರುತ್ತದೆ. ನಿಮ್ಮ ಸಂಗಾತಿಯೊಂದಿಗಿನ ಉತ್ತಮ ಸಂವಹನವು ಸಂಬಂಧದಲ್ಲಿ ಮಾಧುರ್ಯ ತರುತ್ತದೆ. ಒಂಟಿ ಜನರು ಹೊಸ ವ್ಯಕ್ತಿಯನ್ನು ಭೇಟಿಯಾಗಬಹುದು. ಅವರು ಭಾವನಾತ್ಮಕವಾಗಿ ನಿಮಗೆ ಹತ್ತಿರವಾಗಬಹುದು.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಇಂದು ಸಂಗಾತಿಯೊಂದಿಗಿನ ಪ್ರಣಯ ವಿಷಯಗಳಲ್ಲಿ ಏರಿಳಿತ ಸಾಧ್ಯತೆ. ನಿಮ್ಮ ಸಂಗಾತಿಯೊಂದಿಗೆ ಕೆಲವು ಭಿನ್ನಾಭಿಪ್ರಾಯ ಉಂಟಾಗಬಹುದು. ಆದರೆ, ಪ್ರಾಮಾಣಿಕ ಮಾತುಗಳಿಂದ ಸಮಸ್ಯೆ ಪರಿಹರಿಸಬಹುದು. ಅವಿವಾಹಿತರು ಅಥವಾ ಸಿಂಗಲ್ ಇರುವವರು ಹೊಸ ಸಂಗಾತಿಯನ್ನು ಭೇಟಿಯಾಗಬಹುದು. ಆದರೆ, ಇಂದು ಜಾಗರೂಕರಾಗಿರಿ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಇಂದು ತಮ್ಮ ಸಂಗಾತಿಯೊಂದಿಗೆ ಆಳವಾದ ತಿಳುವಳಿಕೆ ಮತ್ತು ಭಾವನಾತ್ಮಕ ಬಾಂಧವ್ಯ ವೃದ್ಧಿಯಾಗಬಹುದು. ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯುವುದರಿಂದ ನಿಮ್ಮ ಸಂಬಂಧ ಬಲಗೊಳ್ಳುತ್ತದೆ. ಒಂಟಿ ಇರುವವರು ಹಳೆಯ ಸ್ನೇಹಿತನನ್ನು ಭೇಟಿಯಾಗಬಹುದು. ಇದು ಹೊಸ ಆರಂಭಕ್ಕೆ ಕಾರಣವಾಗಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರು ಇಂದು ಸಂಗಾತಿಯೊಂದಿಗಿನ ಪ್ರಣಯ ವಿಷಯಗಳಲ್ಲಿ ಕೆಲವು ಸವಾಲು ಎದುರಿಸಬಹುದು. ನಿಮ್ಮ ಸಂಗಾತಿಯೊಂದಿಗೆ ನೀವು ಸಮಯ ಕಳೆಯದಿದ್ದರೆ, ಅವರು ನಿಮ್ಮ ಮೇಲೆ ಸಿಟ್ಟು ಮಾಡಿಕೊಳ್ಳಬಹುದು. ನಿಮ್ಮ ಮಾತನ್ನು ನಿಯಂತ್ರಿಸಿ, ನಿಮ್ಮ ಸಂಗಾತಿಯ ಭಾವನೆಗಳನ್ನು ಗೌರವಿಸುವುದು ಉತ್ತಮ.
ಕನ್ಯಾ ರಾಶಿ
ಇಂದು ಕನ್ಯಾ ರಾಶಿಯವರಿಗೆ ಒತ್ತಡದ ದಿನ. ನಿಮ್ಮ ಸಂಗಾತಿಯ ನಡವಳಿಕೆಯು ನಿಮಗೆ ನೋವುಂಟು ಮಾಡಬಹುದು. ಸಂಬಂಧವನ್ನು ಉಳಿಸಲು, ಕೆಲವು ವಿಷಯಗಳನ್ನು ನಿರ್ಲಕ್ಷಿಸಿ. ನೀವು ತಪ್ಪದೆ ಬುದ್ಧಿವಂತಿಕೆಯಿಂದ ವರ್ತಿಸಿ.
ತುಲಾ ರಾಶಿ
ತುಲಾ ರಾಶಿಯವರಿಗೆ ಇಂದು ಪ್ರೇಮ ಸಂಬಂಧಗಳಲ್ಲಿ ಸಕಾರಾತ್ಮಕ ಬದಲಾವಣೆ ಸಾಧ್ಯತೆ. ನಿಮ್ಮ ಸಂಗಾತಿ ತಮ್ಮ ಭಾವನೆಗಳನ್ನು ನಿಮಗೆ ವ್ಯಕ್ತಪಡಿಸಬಹುದು. ಇದು ಸಂಬಂಧದಲ್ಲಿ ಸ್ಪಷ್ಟತೆ ತರುತ್ತದೆ. ಇಬ್ಬರೂ ಒಟ್ಟಿಗೆ ಸಮಯ ಕಳೆಯುವುದರಿಂದ ಸಂಬಂಧದಲ್ಲಿ ಮಾಧುರ್ಯ ಹೆಚ್ಚಾಗುತ್ತದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಇಂದು ಪ್ರಣಯ ವಿಷಯಗಳಲ್ಲಿ ರೋಮಾಂಚಕಾರಿ ದಿನ. ನೀವು ನಿಮ್ಮ ಸಂಗಾತಿಯೊಂದಿಗೆ ಹೊರಗೆ ಹೋಗಲು ಯೋಜಿಸಬಹುದು. ಸಂಗಾತಿಯು ನಿಮಗೆ ಕೆಲವು ಗುಡ್ ನ್ಯೂಸ್ ನೀಡಬಹುದು. ಇಬ್ಬರ ಸಂಬಂಧದಲ್ಲಿ ಉತ್ಸಾಹ ಮತ್ತು ಹೊಸತನ ಇರುತ್ತದೆ.
ಧನು ರಾಶಿ
ಧನು ರಾಶಿಯವರಿಗೆ ಇಂದು ಪ್ರೇಮ ಸಂಬಂಧಗಳಲ್ಲಿ ಒತ್ತಡದ ದಿನ. ನಿಮ್ಮ ಸಂಗಾತಿ ಆರೋಗ್ಯದ ಕಾರಣಗಳಿಂದ ಚಿಂತಿತರಾಗಬಹುದು. ನಿಮಗೆ ತೊಂದರೆ ಕೊಡಲು ಬಯಸದೆ ತನ್ನ ಭಾವನೆಗಳನ್ನು ಮರೆಮಾಡಬಹುದು. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಬುದ್ಧಿವಂತಿಕೆಯಿಂದ ವರ್ತಿಸುವುದು ಒಳ್ಳೆಯದು.
ಮಕರ ರಾಶಿ
ಇಂದು ಮಕರ ರಾಶಿಯವರ ಸಂಬಂಧಗಳಲ್ಲಿ ಸ್ಥಿರತೆ ಮತ್ತು ಸಕಾರಾತ್ಮಕತೆ ಇರುತ್ತದೆ. ಸಂಗಾತಿಯೊಂದಿಗೆ ಭವಿಷ್ಯದ ಯೋಜನೆಗಳನ್ನು ಚರ್ಚಿಸಬಹುದು. ಇದು ಸಂಬಂಧವನ್ನು ಬಲಪಡಿಸುತ್ತದೆ. ಇದು ನಿಮ್ಮಿಬ್ಬರ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಸಮಯ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಇಂದು ಪ್ರೇಮ ಸಂಬಂಧಗಳಲ್ಲಿ ಅನಿರೀಕ್ಷಿತ ಅಥವಾ ರೋಮಾಂಚಕಾರಿ ದಿನ. ನಿಮ್ಮ ಸಂಗಾತಿ ತಮ್ಮ ಭಾವನೆಗಳನ್ನು ನಿಮಗೆ ವ್ಯಕ್ತಪಡಿಸಬಹುದು. ಅವರು ಜೀವನ ಸಂಗಾತಿಯಾಗಲು ಸಿದ್ಧರಾಗಿರಬಹುದು. ಇದು ನಿಮ್ಮಿಬ್ಬರ ಸಂಬಂಧವನ್ನು ಗಂಭೀರವಾಗಿ ಪರಿಗಣಿಸುವ ಸಮಯ.
ಮೀನ ರಾಶಿ
ಇಂದು ಮೀನ ರಾಶಿಯವರ ಸಂಬಂಧಗಳಲ್ಲಿ ಸ್ವಲ್ಪ ಒತ್ತಡ ಇರುತ್ತದೆ. ನಿಮ್ಮ ಸಂಗಾತಿ ಮತ್ತು ಕುಟುಂಬದ ನಡುವೆ ಭಿನ್ನಾಭಿಪ್ರಾಯ ಬರಬಹುದು. ಇದು ನಿಮ್ಮನ್ನು ಸಂದಿಗ್ಧ ಸ್ಥಿತಿಗೆ ಸಿಲುಕಿಸಬಹುದು. ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಚ್ಚರಿಕೆಯಿಂದ ಯೋಚಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
