ಈ ರಾಶಿಯವರು ಲವರ್ ಜೊತೆ ಡೇಟ್‌ಗೆ ಹೋಗಬಹುದು! ಇವರ ಮೋಡಿಗೆ ಸಂಗಾತಿ ಬಲಿ

Love Horoscope June 16: ಈ ರಾಶಿಯವರಿಗೆ ಇಂದು ಲಕ್ ಮೇಲೆ ಲಕ್. ಇವರ ಸ್ನೇಹ ಇಂದು ಪ್ರೀತಿಯಾಗಿ ಬದಲಾಗುತ್ತದೆ. ಈ ರಾಶಿಯವರ ಹಳೆಯ ಸಂಗಾತಿ ಮತ್ತೆ ಬಾಗಿಲು ತಟ್ಟಬಹುದು. ಸಿಂಗಲ್ ಆಗಿ ಇರುವವರು ವೃಶ್ಚಿಕ ರಾಶಿಯವರಿಗೆ ಲವ್ ಪ್ರಪೋಸ್ ಬರುವ ಸಾಧ್ಯತೆ. ಹೌದು, ಇಂದು (ಜೂನ್ 16) ಕೆಲವ ರಾಶಿಯವರಿಗೆ ಪ್ರಣಯಭರಿತ ದಿನವಾಗಿದೆ. ಇನ್ನುಳಿದಂತೆ ಯಾವ ರಾಶಿಯವರ ಪ್ರೀತಿ ಮೇಲುಗೈ ಸಾಧಿಸುತ್ತದೆ, ಯಾರು ಲವ್ ಮ್ಯಾರೇಜ್ ಆಗುತ್ತಾರೆ ಮತ್ತು ಯಾರ ಹೃದಯ ಮುರಿಯುತ್ತದೆ. ಬನ್ನಿ, ಮೇಷ ರಾಶಿಯಿಂದ ಮೀನ ರಾಶಿಯವರ ಪ್ರೇಮ ಜೀವನ (ಲವ್ ಲೈಫ್) ಹೇಗಿದೆ ತಿಳಿಯೋಣ.

ಪ್ರತಿಯೊಂದು ರಾಶಿಯವರಿಗೂ ಇಂದು ಸ್ಪೆಷಲ್ ದಿನ. ಸಿಂಹ ರಾಶಿಯವರು ಲವರ್ ಜೊತೆ ಡೇಟ್‌ಗೆ ಹೋಗಬಹುದು. ಕೆಲವು ರಾಶಿಯವರಿಗೆ ಸಂಗಾತಿಯಿಂದ ಅಚ್ಚರಿ ಸಂಗತಿ ನಿರೀಕ್ಷಿಸಬಹುದು. ಕೆಲವು ರಾಶಿಯವರ ಪ್ರೇಮ ಸಂಬಂಧಗಳು ಬಲಗೊಳ್ಳುತ್ತವೆ. ಆದರೆ, ಕೆಲವರು ಸಂಬಂಧಗಳಲ್ಲಿ ಎಚ್ಚರಿಕೆ ವಹಿಸಬೇಕಿದೆ. ಸಣ್ಣ ಭರವಸೆಗಳು ಭಗ್ನವಾಗುವ ಸಾಧ್ಯತೆಯಿದೆ. ಯಾರ ಸಂಬಂಧವು ಹೊಸದಾಗಿ ರೂಪುಗೊಳ್ಳುತ್ತದೆ ಎಂಬುವುದನ್ನು ತಿಳಿಯಲು ಮುಂದೆ ಓದಿ.

June 16 Love Horoscope

ಮೇಷ ರಾಶಿ

ಮೇಷ ರಾಶಿಯವರಿಗೆ ಇಂದು ಪ್ರೇಮ ಜೀವನಕ್ಕೆ ಸಕಾರಾತ್ಮಕ ದಿನ. ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ಇಬ್ಬರ ನಡುವಿನ ಭಾವನಾತ್ಮಕ ಬಾಂಧವ್ಯವು ಗಾಢವಾಗುತ್ತದೆ. ಹಳೆಯ ಭಿನ್ನಾಭಿಪ್ರಾಯಗಳು ಕೊನೆಗೊಳ್ಳಬಹುದು. ಸಿಂಗಲ್ ಆಗಿರುವವರಿಗೆ ಹಳೆಯ ಪರಿಚಯಸ್ಥರು ಮತ್ತೆ ಬಾಗಿಲು ತಟ್ಟಬಹುದು.

ವೃಷಭ ರಾಶಿ

ವೃಷಭ ರಾಶಿಯವರಿಗೆ ಇಂದು ಪ್ರಣಯಭರಿತ ದಿನ. ನಿಮ್ಮ ಪ್ರೇಮಿಯ ಮೇಲೆ ಪ್ರೀತಿಯ ಸುರಿಮಳೆಗೈಯಲು ಬಯಸುವಿರಿ. ನೀವು ಹೂವುಗಳನ್ನು ನೀಡಿ ಆಚರಿಸಲು ಪ್ರಯತ್ನಿಸಿ. ಆದರೆ, ನಿಮ್ಮ ಸಂಗಾತಿ ನಿಮ್ಮ ನಡವಳಿಕೆ ಮತ್ತು ವರ್ತನೆ ಇಷ್ಟವಾಗುವುದಿಲ್ಲ. ಇದೆಲ್ಲವೂ ಸಂಬಂಧವನ್ನು ಹಾಳುಮಾಡಬಹುದು. ನಿಮ್ಮ ಸಂಗಾತಿಗೆ ಜಾಗ ನೀಡಿ.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಇಂದು ವಿವಾಹದ ಸಾಧ್ಯತೆಗಳಿವೆ. ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಮಾತುಕತೆ ಮಟ್ಟವು ಸುಧಾರಿಸುತ್ತದೆ. ಒಂಟಿ ಇರುವವರು ವಿಶೇಷ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶ ಪಡೆಯಬಹುದು. ಇದ ಕ್ರಮೇಣ ಪ್ರೀತಿಯಾಗಿ ಬದಲಾಗಬಹುದು. ಬೆಳಗ್ಗೆ ಕಳುಹಿಸುವ ಒಂದು ಸಿಹಿ ಮೆಸೇಜ್‌ ಸಂಬಂಧಕ್ಕೆ ಹೊಳಪು ನೀಡುತ್ತದೆ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರಿಗೆ ಇಂದು ಪ್ರೇಮ ಜೀವನದಲ್ಲಿ ಸಮಸ್ಯೆಗಳು ಉಂಟಾಗಬಹುದು. ನಿಮ್ಮ ಪ್ರೇಮಿ ಸಂತೋಷವಾಗಿರುತ್ತಾರೆ. ನಿಮ್ಮ ಸಂಗಾತಿಯ ನಡವಳಿಕೆಯು ನಿಮ್ಮನ್ನು ಅಚ್ಚರಿಗೊಳಿಸುತ್ತದೆ. ನೀವು ಅದಕ್ಕೆ ಸ್ವಲ್ಪ ಸಮಯ ನೀಡಬೇಕು. ಅವರು ಹೇಳುವುದನ್ನು ಆಲಿಸಿ. ಒಂಟಿ ಇರುವವರು ಹಳೆಯ ಸಂಬಂಧದ ನೆನಪುಗಳಲ್ಲಿ ಮುಳುಗಬಹುದು.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಇಂದು ಪ್ರಣಯದಿಂದ ತುಂಬಿದ ದಿನ. ನಿಮ್ಮ ಸಂಗಾತಿ ಜೊತೆಗೆ ಡೇಟ್‌ಗೆ ಹೋಗಬಹುದು. ಸಂಬಂಧದಲ್ಲಿ ಉತ್ಸಾಹ ಮತ್ತು ಹೊಸತನ ಇರುತ್ತದೆ. ಸಂಗಾತಿ ನಿಮ್ಮ ಗಮನವನ್ನು ಬಯಸುತ್ತಾರೆ. ಅವರ ಸಹಕಾರವು ನಿಮ್ಮನ್ನು ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತದೆ. ಹಿಂದೆ ಉಳಿದಿದ್ದ ಭರವಸೆಯನ್ನು ಇಂದು ಈಡೇರಿಸಿ.

ಕನ್ಯಾ ರಾಶಿ

ಕನ್ಯಾ ರಾಶಿಯವರ ಸಂಬಂಧದಲ್ಲಿ ಸ್ಥಿರತೆ ಮತ್ತು ತಿಳುವಳಿಕೆ ಹೆಚ್ಚಾಗುತ್ತದೆ. ಇಂದು ಆತ್ಮವಿಶ್ವಾಸದಿಂದ ತುಂಬಿರುತ್ತಾರೆ. ಜೀವನದಲ್ಲಿ ಶಾಂತಿ ಇರುತ್ತದೆ. ನಿಮ್ಮ ಪ್ರೇಮಿಯೊಂದಿಗೆ ನೀವು ಪ್ರೀತಿ ಮತ್ತು ಸಂತೋಷದ ಕ್ಷಣಗಳನ್ನು ಕಳೆಯುವಿರಿ. ದಾಂಪತ್ಯದಲ್ಲಿ ಪ್ರಣಯವು ಹಾಗೆಯೇ ಉಳಿಯುತ್ತದೆ.

ತುಲಾ ರಾಶಿ

ತುಲಾ ರಾಶಿಯವರು ಇಂದು ನಿಮ್ಮ ಪ್ರೇಮಿಗೆ ಸಮಯ ನೀಡಲು ನಿಮಗೆ ಸಾಧ್ಯವಾಗುವುದಿಲ್ಲ. ಸಂಜೆ ಪಾರ್ಟಿ ಮಾಡುವ ಮನಸ್ಥಿತಿ ಇರಬಹುದು. ಸಂಬಂಧದಲ್ಲಿ ಸ್ವಲ್ಪ ಅಸಮಾಧಾನ ಉಂಟಾಗಬಹುದು. ಹಳೆಯ ಸಮಸ್ಯೆಗಳು ಮತ್ತೆ ಮತ್ತೆ ಉದ್ಭವಿಸಬಹುದು. ಇಂದು ನಿಮ್ಮ ಸಂಗಾತಿಯ ಕೈ ಹಿಡಿದು ಸ್ಮೈಲ್ ಮಾಡಿ.

ವೃಶ್ಚಿಕ ರಾಶಿ

ಇಂದು ಸಿಂಗಲ್ ಆಗಿರುವ ವೃಶ್ಚಿಕ ರಾಶಿಯವರಿಗೆ ಪ್ರೇಮ ಪ್ರಸ್ತಾಪ ಬರಬಹುದು, ಅದನ್ನು ನಿರ್ಲಕ್ಷಿಸಬಾರದು. ನಿಮ್ಮ ಸಂಗಾತಿಯೊಂದಿಗಿನ ಭಾವನಾತ್ಮಕ ಬಾಂಧವ್ಯ ಹೆಚ್ಚಾಗುತ್ತದೆ. ಕೆಲವು ವಿಶೇಷ ಕ್ಷಣಗಳನ್ನು ಒಟ್ಟಿಗೆ ಕಳೆಯಬಹುದು. ನೀವು ವಿಚ್ಛೇದನದ ಬಗ್ಗೆ ಯೋಚಿಸಬಹುದು. ಹೃದಯದಿಂದ ಅವರನ್ನು ಹೊಗಳಿ.

ಧನು ರಾಶಿ

ಧನು ರಾಶಿಯವರು ಇಂದು ತಮ್ಮ ಜೀವನದ ಬಗ್ಗೆ ಆತಂಕ ಹೊಂದಿರುತ್ತಾರೆ. ಸಂಬಂಧಗಳ ಬಗ್ಗೆ ಸ್ವಲ್ಪ ಗಂಭೀರವಾಗಿರಿ. ಸಂಗಾತಿಯೊಂದಿಗೆ ಜೀವನದ ಬಗ್ಗೆ ಆಳವಾದ ಮಾತುಗಳನ್ನು ನಡೆಸಬಹುದು. ಯಾವುದೇ ತಪ್ಪು ತಿಳುವಳಿಕೆ ಇದ್ದರೆ, ಮುಕ್ತವಾಗಿ ಮಾತನಾಡಿ. ಒಂಟಿ ಇರುವವರಿಗೆ ಹೊಸ ಲವ್ ಪ್ರಪೋಸ್ ಬರಬಹುದು.

ಮಕರ ರಾಶಿ

ಇಂದು ಮಕರ ರಾಶಿಯವರಿಗೆ ಪ್ರೇಮಿಯೊಂದಿಗೆ ಯಾವುದೋ ಕಾರಣಕ್ಕಾಗಿ ಬೇರ್ಪಟ್ಟಿದ್ದರೆ ಅಥವಾ ಗಂಡ ಮತ್ತು ಹೆಂಡತಿಯ ನಡುವೆ ವಿಚ್ಛೇದನದ ಬಗ್ಗೆ ಮಾತು ಬಂದಿದ್ದರೆ, ಇಂದು ಕ್ಷಮೆಯಾಚಿಸಿ. ಎಲ್ಲಾ ಸಮಸ್ಯೆ ಪರಿಹರಿಸಿಕೊಳ್ಳಬಹುದು. ಲಿವ್ ಇನ್‌ನಲ್ಲಿ ಪ್ರೀತಿ ಮತ್ತು ಪ್ರಣಯ ಮರಳುತ್ತದೆ. ಒಟ್ಟಿಗೆ ಅಡುಗೆ ಮಾಡಿ ಅಥವಾ ಫುಡ್ ಮಾಡಿ, ಆ ಕ್ಷಣವನ್ನು ಅನುಭವಿಸಿ.

ಕುಂಭ ರಾಶಿ

ಕುಂಭ ರಾಶಿಯವರು ಇಂದು ಹಠಾತ್ ಪ್ರಗತಿಯನ್ನು ಸಾಧಿಸಬಹುದು. ಸಂಬಂಧವನ್ನು ಬಲವಾಗಿಡಲು ತಾಳ್ಮೆಯಿಂದಿರಿ. ಸಂಗಾತಿಯೊಂದಿಗಿನ ಸಂಬಂಧಗಳು ಉತ್ತಮವಾಗಿರುತ್ತವೆ. ಸಂಜೆ ಪ್ರವಾಸ ಅಥವಾ ವಿಹಾರ (ಪಿಕ್ನಿಕ್) ಇತ್ಯಾದಿ ಕಾರ್ಯಕ್ರಮ ಯೋಜಿಸಬಹುದು. ಕೆಲಸದಿಂದ ಹಿಂತಿರುಗಿದ ಬಳಿಕ ಮೊದಲು ಅವರನ್ನು ಹಗ್ ಮಾಡಿ.

ಮೀನ ರಾಶಿ

ಮೀನ ರಾಶಿಯವರ ಜೀವನ ಇಂದು ರೋಮ್ಯಾಂಟಿಕ್ ಆಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ತುಂಬಾ ಭಾವನಾತ್ಮಕವಾಗಿರುವಿರಿ. ಒಂದು ಸಣ್ಣ ಭೇಟಿ ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ. ಹೃದಯಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಲು ಉತ್ತಮ ಅವಕಾಶ ಸಿಗಬಹುದು. ಸಂಬಂಧದಲ್ಲಿನ ಅತಿಯಾದ ಲೈಂಗಿಕತೆಯು ಪ್ರೇಮ ಸಂಬಂಧವನ್ನು ಹಾಳುಮಾಡಬಹುದು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Love Horoscope June 16: today, Gemini Zodiac friendship turns into love today

Love Horoscope June 16: today, Gemini Zodiac friendship turns into love today
Story first published: Monday, June 16, 2025, 7:30 [IST]
X
Desktop Bottom Promotion