Latest Updates
-
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ!
ಈ ರಾಶಿಯವರು ಲವರ್ ಜೊತೆ ಸಿನಿಮಾಗೆ ಹೋಗಬಹುದು! ಇವರು ಪ್ರೇಮಿಗೆ ಪಾರ್ಟಿ ಕೊಡಬಹುದು
ಅಬ್ಬಬ್ಬಾ.. ಲಾಟರಿ ಗುರು! ಇಂದು ಈ ರಾಶಿಯವರು ತಮ್ಮ ಸಂಗಾತಿ ಜೊತೆಗೆ ಸಿನಿಮಾಗೆ ಹೋಗಬಹುದು. ನಿಮ್ಮ ಸಂಗಾತಿಯೊಂದಿಗೆ ಡಿನ್ನರ್ ಮಾಡುವ ಅದೃಷ್ಟ. ಹೌದು, ಜ್ಯೋತಿಷ್ಯದ ಪ್ರಕಾರ, ಇಂದು (10 ಜೂನ್ 2025) ನಿಮ್ಮ ಪ್ರೀತಿಯ ಜೀವನದ ಹೇಗೆ ಕಳೆಯುತ್ತದೆ? ಎಂಬುದನ್ನು ತಿಳಿಯಬಹುದು. ಶುಕ್ರನ ಸಕಾರಾತ್ಮಕತೆಯು ನಿಮ್ಮ ಪ್ರೇಮ ಜೀವನದ ಭವಿಷ್ಯವನ್ನು ನಿರ್ಧರಿಸುತ್ತದೆ. ಶುಕ್ರನು ಸಕಾರಾತ್ಮಕ ಸ್ಥಿತಿಯಲ್ಲಿದ್ದರೆ, ನಿಮ್ಮ ಸಂಬಂಧಗಳಲ್ಲಿ ಕಡಿಮೆ ಸಂಘರ್ಷ ಮತ್ತು ಪ್ರೀತಿಯಲ್ಲಿ ಹೆಚ್ಚಿನ ಅವಕಾಶ ಇರುತ್ತದೆ. ಇನ್ನು ಚಂದ್ರನ ಆಧಾರದ ಮೇಲೆ ನಿಮ್ಮ ಪ್ರೇಮ (love) ಜೀವನದ ಬಗ್ಗೆ ಭವಿಷ್ಯ (horoscope) ತಿಳಿಸಲಾಗಿದೆ.
ಚಂದ್ರನ ಲೆಕ್ಕಾಚಾರದಂತೆ, ಮಕರ ರಾಶಿಯವರಿಗೆ ಇಂದು ಮದುವೆ ಪ್ರಸ್ತಾಪ ಬರಬಹುದು. ಮೀನ ರಾಶಿಯವರು ಇಂದು ನಿಮ್ಮ ಸಂಗಾತಿಯೊಂದಿಗೆ ಸುತ್ತಾಡಲು ಹೋಗಬಹುದು. ಇನ್ನು ಕೆಲವು ರಾಶಿಯವರಿಗೆ ಪ್ರೀತಿ ಮತ್ತು ಸಂಬಂಧಗಳಲ್ಲಿ ಇಂದು ಬಹಳ ವಿಶೇಷ ದಿನವಾಗಿದೆ. ಇನ್ನು ಕೆಲವು ರಾಶಿಯವರು ತಮ್ಮ ಸಂಗಾತಿಯೊಂದಿಗೆ ಜಗಳ ಅಥವಾ ವಾದ ಮಾಡುವ ಸಾಧ್ಯತೆಯಿದೆ. ಬನ್ನಿ, ಮೇಷ ರಾಶಿಯಿಂದ ಮೀನ ರಾಶಿಯವರೆಗಿನ ಪ್ರೇಮ ಜೀವನದಲ್ಲಿ ಏನು ವಿಶೇಷ ಮತ್ತು ಏನೆಲ್ಲಾ ನಿರೀಕ್ಷೆ ಮಾಡಬಹುದು ಅನ್ನೊದನ್ನು ತಿಳಿಯೋಣ.

ಮೇಷ ರಾಶಿ
ಮೇಷ ರಾಶಿಯವರಿಗೆ ಇಂದು ಶುಭ ದಿನ. ನಿಮ್ಮ ಸಂಬಂಧ ಮೊದಲಿಗಿಂತ ಬಲವಾಗಿರುತ್ತದೆ. ಇಬ್ಬರೂ ಪರಸ್ಪರ ಅರ್ಥಮಾಡಿಕೊಳ್ಳುವಲ್ಲಿ ಯಶಸ್ವಿ ಆಗ್ತೀರಿ. ವಿವಾಹಿತರ ಜೀವನದಲ್ಲಿ ಹೊಸ ಶಕ್ತಿ ಬರುತ್ತದೆ. ನಿಮ್ಮ ಸಂಗಾತಿಯೊಂದಿಗೆ ವಿಹಾರಕ್ಕೆ ಹೋಗಬಹುದು.
ವೃಷಭ ರಾಶಿ
ವೃಷಭ ರಾಶಿಯವರ ಕುಟುಂಬದಲ್ಲಿ ಸಂತೋಷ ಇರುತ್ತದೆ. ಇಬ್ಬರೂ ಭವಿಷ್ಯಕ್ಕಾಗಿ ಏನನ್ನಾದರೂ ಯೋಜಿಸುತ್ತೀರಿ. ಪ್ರೇಮ ಜೀವನ ನಡೆಸುವ ಜನರಿಗೆ ತಮ್ಮ ಆಯ್ಕೆಯ ಉದ್ಯೋಗದ ಅವಕಾಶ ಸಿಗಬಹುದು. ನೀವು ನಿಮ್ಮ ಸಂಗಾತಿಯೊಂದಿಗೆ ಡಿನ್ನರ್ (ಭೋಜನ) ಯೋಜಿಸಬಹುದು. ಸಿಂಗಲ್ ಇರುವವರಿಗೆ ಈ ದಿನ ಸಾಮಾನ್ಯ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ (ಒಂಟಿ ಇರುವವರಿಗೆ) ಇಂದು ಯಾರಾದರೂ ಜೀವನದ ಬಾಗಿಲು ತಟ್ಟುತ್ತಾರೆ. ನಿಮ್ಮ ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಬಹುದು. ಇದರಿಂದ ಸಾಮರಸ್ಯ ಹೆಚ್ಚುತ್ತದೆ. ಸಂಬಂಧಗಳಲ್ಲಿ ಪ್ರೀತಿ ಉಳಿಯುತ್ತದೆ.
ಕರ್ಕಾಟಕ ರಾಶಿ
ಇಂದು ವಿವಾಹಿತರ ಪ್ರೇಮ ಜೀವನದಲ್ಲಿ ಹೊಸ ತಿರುವು ಕಾಣುವ ಸಾಧ್ಯತೆಯಿದೆ. ಸಂಗಾತಿಗಳಿಬ್ಬರೂ ಯಾವುದೇ ಹಳೆಯ ವಿಷಯದ ಬಗ್ಗೆ ವಾದ ಮಾಡಬಾರದು.
ಸಿಂಹ ರಾಶಿ
ಇಂದು ವಿವಾಹಿತರು ತಮ್ಮ ಸಂಗಾತಿ ಜೊತೆಗೆ ಸಿನಿಮಾ ನೋಡಲು ಹೋಗಬಹುದು. ಇಲ್ಲವೇ ನೆಚ್ಚಿನ ಸ್ಥಳದಲ್ಲಿ ಭೋಜನ ಮಾಡಬಹುದು. ಒಂಟಿ ಇರುವವರು ಸ್ಪೆಷಲ್ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸಿಕೊಳ್ಳಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಇಂದು ಶಕ್ತಿಯಿಂದ ತುಂಬಿದ ದಿನ. ನಿಮ್ಮ ಸಂಬಂಧಗಳಲ್ಲಿ ಮಾಧುರ್ಯ ಇರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಸುಂದರವಾದ ಕ್ಷಣಗಳನ್ನು ಕಳೆಯಲು ಅವಕಾಶ ಸಿಗುತ್ತದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಇಂದು ಪ್ರಣಯ ಜೀವನದಲ್ಲಿ ಹೊಸ ತಿರುವು ಸಿಗುತ್ತದೆ. ನಿಮ್ಮ ಸಂಗಾತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು. ಒಳ್ಳೆಯದು ಎಂದರೆ ನಿಮ್ಮ ನಡುವಿನ ಸಂಭಾಷಣೆ ಹೆಚ್ಚಾಗುತ್ತದೆ. ಹಳೆಯ ಭಿನ್ನಾಭಿಪ್ರಾಯಗಳು ಓಡಿ ಹೋಗುತ್ತವೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರ ಸಂಬಂಧಗಳಲ್ಲಿ ಮಾಧುರ್ಯ ಉಳಿಯುತ್ತದೆ. ಒಂಟಿ ಜನರು ವಿಶೇಷ ವ್ಯಕ್ತಿಯ ಕಡೆಗೆ ಆಕರ್ಷಿತರಾಗುತ್ತಾರೆ. ನಿಮ್ಮ ಹೃದಯದ ಮಾತುಗಳನ್ನು ವ್ಯಕ್ತಪಡಿಸಲು ಶೀಘ್ರದಲ್ಲೇ ಅವಕಾಶ ಸಿಗುತ್ತದೆ.
ಧನು ರಾಶಿ
ವೈವಾಹಿಕ ಜೀವನವನ್ನು ನಡೆಸುವ ಜನರು ತಮ್ಮ ಪ್ರೇಮಿಗಾಗಿ ಪಾರ್ಟಿ ಆಯೋಜಿಸಬಹುದು. ಹಳೆಯ ದ್ರೋಹದಿಂದಾಗಿ ಮತ್ತೆ ನಂಬುವುದು ಕಷ್ಟ. ಆದರೆ, ಸ್ನೇಹಿತರ ಸಹಾಯದಿಂದ ನೀವು ಧೈರ್ಯಶಾಲಿಯಾಗುವಿರಿ.
ಮಕರ ರಾಶಿ
ಮಕರ ರಾಶಿಯವರಿಗೆ ಇಂದು ಮದುವೆ ಪ್ರಸ್ತಾಪ ಬರಬಹುದು. ಭಾವನಾತ್ಮಕ ಸಂಬಂಧದಲ್ಲಿ ಹೊಸ ಶಕ್ತಿ ಬರುವ ಸಾಧ್ಯತೆ. ನೀವು ಆತುರಪಡುವುದನ್ನು ತಪ್ಪಿಸಬೇಕು. ವಿವಾಹಿತರು ತಮ್ಮ ಸಂಗಾತಿಯೊಂದಿಗೆ ಕೆಲವು ಜಗಳ ಅಥವಾ ವಾದ ಮಾಡುವ ಸಾಧ್ಯತೆಯಿದೆ.
ಕುಂಭ ರಾಶಿ
ವಿವಾಹಿತರಿಗೂ ಈ ದಿನ ಒಳ್ಳೆಯದಾಗಿರುತ್ತದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ನಿಮ್ಮ ಪ್ರೇಮಿಯೊಂದಿಗೆ ಮಾತನಾಡುತ್ತೀರಿ. ಅದು ನಿಮ್ಮನ್ನು ಇಡೀ ದಿನ ಸಂತೋಷವಾಗಿಡುತ್ತದೆ. ನಿಮ್ಮ ಆತ್ಮ ಸಂಗಾತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.
ಮೀನ ರಾಶಿ
ಮೀನ ರಾಶಿಯವರು ಇಂದು ನಿಮ್ಮ ಸಂಗಾತಿಯೊಂದಿಗೆ ಸುತ್ತಾಡಲು ಹೋಗಬಹುದು. ಈ ಸಮಯದಲ್ಲಿ ನೀವು ಅವರೊಂದಿಗೆ ಮುಕ್ತವಾಗಿ ಮಾತನಾಡಬೇಕು. ಈ ಮಾತುಕತೆ ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ. ಇಬ್ಬರಲ್ಲೂ ಪರಸ್ಪರ ನಂಬಿಕೆ ಇರಬೇಕು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications








