ಈ ರಾಶಿಯವರಿಗೆ ಪ್ರಣಯಭರಿತ ದಿನ! ನಿಮ್ಮ ಸಂಗಾಂತಿಗೆ ಪ್ರಪೋಸ್ ಮಾಡಬಹುದು

ಅಬ್ಬಬ್ಬಾ.. ಇಂದು ಇವ್ರೇ ಕಿಂಗ್! ಈ ರಾಶಿಯವರಿಗೆ ಪ್ರಣಯಭರಿತ ದಿನ. ನೀವು ಇಷ್ಟಪಡುವ ವ್ಯಕ್ತಿಗೆ ಪ್ರಪೋಸ್ ಮಾಡುವ ಬಗ್ಗೆ ಯೋಚಿಸಬಹುದು. ನಿಮ್ಮ ಮಾತುಗಳ ಮೂಲಕ ಪ್ರೀತಿಪಾತ್ರರ ಹೃದಯ ಸ್ಪರ್ಶಿಸಬಹುದು. ಹೌದು, ಜ್ಯೋತಿಷ್ಯದ ಪ್ರಕಾರ, ಇಂದು (8 ಜೂನ್ 2025) ಕೆಲವು ರಾಶಿಯವರ ಪ್ರೇಮ (love) ಸಂಬಂಧಗಳಲ್ಲಿ ಹೊಸ ಸಂಚಲನ ಮೂಡಲಿದೆ. ಗ್ರಹಗಳ ಚಲನೆಯಿಂದ ಕೆಲವು ರಾಶಿಯವರು ತಮ್ಮ ಪ್ರೀತಿಯಲ್ಲಿ ಸಕ್ಸಸ್ ಕಾಣಬಹುದು. ಆದರೆ, ಮಕರ ರಾಶಿಯವರಿಗೆ ಇಂದು ಸಂಬಂಧಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆಯಿದೆ. ಬನ್ನಿ, ಒಂಟಿಯಾಗಿರುವವರು, ಪ್ರೀತಿಯಲ್ಲಿರುವವರು ಮತ್ತು ವಿವಾಹಿತರು ಇಂದು ಏನೆಲ್ಲಾ ನಿರೀಕ್ಷೆ ಮಾಡಬಹುದು ಎನ್ನುವುದನ್ನು ತಿಳಿಯೋಣ.

ಕನ್ಯಾ ರಾಶಿಯವರಿಗರ ಇಂದು ಪ್ರೀತಿಗೆ ಅನುಕೂಲಕರವಾದ ದಿನ. ಸಿಂಹ ರಾಶಿಯವರು ಅಹಂಕಾರ ಮತ್ತು ಹಠಮಾರಿತನ ಬಿಡಬೇಕು. ಇಲ್ಲದಿದ್ದರೆ, ನಿಮ್ಮ ಸಂಬಂಧಗಳಲ್ಲಿ ಹೊಸ ಬದಲಾವಣೆ ಉಂಟಾಗಲಿದೆ. ಕೆಲವು ರಾಶಿಯವರ ಪ್ರೇಮ ಜೀವನದಲ್ಲಿ (Love Horoscope) ಹೊಸ ಉತ್ಸಾಹ ಕಾಣಬಹುದು. ಆದರೆ, ದೀರ್ಘಕಾಲದಿಂದ ಒಂಟಿಯಾಗಿರುವ ಜನರಿಗೆ ಇಂದು ಹೊಸ ಸಂಬಂಧ ಪ್ರಾರಂಭಿಸಲು ಅವಕಾಶ ಸಿಗುತ್ತದೆ. ಭವಿಷ್ಯದ ಯೋಜನೆಗಳನ್ನು ಸಂಗಾತಿಯೊಂದಿಗೆ ಚರ್ಚಿಸಬಹುದು. ಮೇಷ ರಾಶಿಯಿಂದ ಮೀನ ರಾಶಿಯವರೆಗಿನ (horoscope) ಜಾತಕ ತಿಳಿಯಲು ಮುಂದೆ ಓದಿ.

Love Horoscope June 07

ಮೇಷ ರಾಶಿ

ಮೇಷ ರಾಶಿಯವರು ಇಂದು ತಮ್ಮ ಸಂಗಾತಿಯೊಂದಿಗೆ ಸಣ್ಣ ಪ್ರವಾಸ ಅಥವಾ ವಿಹಾರಕ್ಕೆ ತೆರಳುವ ಸಾಧ್ಯತೆಯಿದೆ. ಒಂಟಿ ಜನರು ಹೊಸ ವ್ಯಕ್ತಿಯನ್ನು ಭೇಟಿಯಾಗಬಹುದು. ನಿಮ್ಮ ಜೀವನದಲ್ಲಿ ಉತ್ಸಾಹ ಮತ್ತು ಹೊಸ ಶಕ್ತಿ ಇರುತ್ತದೆ.

ವೃಷಭ ರಾಶಿ

ಒಂಟಿ ಇರುವವರಿಗೆ ಪ್ರೇಮ ಜೀವನವನ್ನು ಪ್ರಾರಂಭಿಸಲು ಅವಕಾಶ ಸಿಗಬಹುದು. ಆದರೆ, ಸಂಬಂಧದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವುದು ಮುಖ್ಯ. ಹಳೆಯ ಭಿನ್ನಾಭಿಪ್ರಾಯಗಳು ಮುನ್ನೆಲೆಗೆ ಬರುವ ಸಾಧ್ಯತೆಯಿದೆ. ಆದರೆ ಪರಿಸ್ಥಿತಿಯನ್ನು ಶಾಂತಿಯುತ ಮಾತುಗಳಿಂದ ನಿರ್ವಹಿಸಿ.

ಮಿಥುನ ರಾಶಿ

ಇಂದು ನಿಮ್ಮ ಮಾತುಗಳು ನಿಮ್ಮ ಪ್ರೀತಿಪಾತ್ರರ ಹೃದಯವನ್ನು ಸ್ಪರ್ಶಿಸುತ್ತವೆ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಇದು ಸರಿಯಾದ ಸಮಯ. ಈಗಾಗಲೇ ಸಂಬಂಧದಲ್ಲಿದ್ದರೆ, ನಿಮ್ಮ ಭಾವನಾತ್ಮಕ ಸಂಪರ್ಕವು ಇನ್ನೂ ಹೆಚ್ಚಾಗುತ್ತದೆ.

ಕರ್ಕಾಟಕ ರಾಶಿ

ಇಂದು ಒಂಟಿ ಇರುವವರು ತಮ್ಮ ಸ್ನೇಹಿತರಲ್ಲಿ ಒಬ್ಬರ ಕಡೆಗೆ ಆಕರ್ಷಿತರಾಗುತ್ತಾರೆ. ನಿಮ್ಮ ಸಂಗಾತಿಯೊಂದಿಗಿನ ಸಮನ್ವಯವು ಉತ್ತಮವಾಗಿರುತ್ತದೆ. ಹಳೆಯ ಸಂಬಂಧದ ನೆನಪುಗಳು ನಿಮ್ಮ ಮನಸ್ಸನ್ನು ಚಂಚಲ ಅಥವಾ ತೊಂದರೆಗೊಳಿಸಬಹುದು.

Take a Poll

ಸಿಂಹ ರಾಶಿ

ಸಿಂಹ ರಾಶಿಯವರ ದಾಂಪತ್ಯ ಜೀವನದಲ್ಲಿ ಸಮತೋಲನ ಮತ್ತು ಮಾಧುರ್ಯ ಉಳಿಯುತ್ತದೆ. ಆದರೆ, ಸಂಬಂಧದಲ್ಲಿ ಅಹಂಕಾರ ಮತ್ತು ಹಠಮಾರಿತನದಿಂದ ದೂರವಿರಿ. ಯಾವುದೇ ತಪ್ಪು ತಿಳುವಳಿಕೆ ಇದ್ದರೆ, ಮುಕ್ತವಾಗಿ ಮಾತನಾಡುವುದು ಒಳ್ಳೆಯದು.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಪ್ರೀತಿಗೆ ಅನುಕೂಲಕರವಾದ ದಿನ. ನಿಮ್ಮ ಸಂಗಾತಿಯೊಂದಿಗೆ ಸ್ಮರಣೀಯ ಕ್ಷಣಗಳನ್ನು ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ಒಂಟಿಯಾಗಿರುವವರು ವಿಶೇಷ ವ್ಯಕ್ತಿಯೊಂದಿಗೆ ಮಾತುಗಳನ್ನು ಪ್ರಾರಂಭಿಸಬಹುದು.

ತುಲಾ ರಾಶಿ

ತುಲಾ ರಾಶಿಯವರು ಇಂದು ತಾವು ಇಷ್ಟಪಡುವ ವ್ಯಕ್ತಿಗೆ ಪ್ರಪೋಸ್ ಮಾಡುವ ಬಗ್ಗೆ ಯೋಚಿಸಬಹುದು. ವಿವಾಹಿತರು ತಮ್ಮ ಸಂಗಾತಿಯಿಂದ ಅಚ್ಚರಿಯನ್ನು ಪಡೆಯಬಹುದು. ಸಂಬಂಧದಲ್ಲಿ ಪ್ರಣಯ ಮತ್ತು ಆತ್ಮೀಯತೆ ಹೆಚ್ಚಾಗುತ್ತದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ತಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಬೇಕು. ಹಳೆಯ ಕಹಿ ಭಾವನೆಗಳನ್ನು ಕೊನೆಗೊಳಿಸಲು ನಿಮಗೆ ಅವಕಾಶ ಸಿಗುತ್ತದೆ. ಇಂದು ಭಾವನಾತ್ಮಕವಾಗಿ ಆಳವಾದ ದಿನ.

ಧನು ರಾಶಿ

ಧನು ರಾಶಿಯವರಿಗೆ ಗೆಳೆಯ ಅಥವಾ ಗೆಳತಿಯಿಂದ ಸಂಪೂರ್ಣ ಭಾವನಾತ್ಮಕ ಬೆಂಬಲ ಸಿಗುತ್ತದೆ. ದೀರ್ಘಕಾಲದಿಂದ ಒಂಟಿಯಾಗಿರುವ ಜನರಿಗೆ ಇಂದು ಹೊಸ ಸಂಬಂಧವನ್ನು ಪ್ರಾರಂಭಿಸಲು ಅವಕಾಶ ಸಿಗಬಹುದು.

ಮಕರ ರಾಶಿ

ಮಕರ ರಾಶಿಯವರಿಗೆ ಸಂಬಂಧಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ಆದರೆ, ಮಾತುಕತೆ (ಸಂವಹನ) ಮೂಲಕ ವಿಷಯವನ್ನು ಬಗೆಹರಿಸಬಹುದು. ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯುವುದು ಮುಖ್ಯ. ಸ್ವಲ್ಪ ಸೂಕ್ಷ್ಮತೆಯನ್ನು ತೋರಿಸುವ ಅವಶ್ಯಕತೆಯಿದೆ.

ಕುಂಭ ರಾಶಿ

ಇಂದು ಭವಿಷ್ಯದ ಯೋಜನೆಗಳನ್ನು ಸಂಗಾತಿಯೊಂದಿಗೆ ಚರ್ಚಿಸಬಹುದು. ಸಿಂಗಲ್ ಆಗಿರುವವರಿಗೆ ಇಂದು ಪ್ರೇಮ ಪ್ರಸ್ತಾಪ ಬರಬಹುದು. ನಿಮ್ಮ ಸಂಬಂಧದಲ್ಲಿ ಸ್ಥಿರತೆ ಮತ್ತು ವಿಶ್ವಾಸ ಹೆಚ್ಚಾಗುತ್ತದೆ.

ಮೀನ ರಾಶಿ

ಮೀನ ರಾಶಿಯವರಿಗೆ ಇಂದು ಪ್ರಣಯಭರಿತ ದಿನ. ನಿಮ್ಮ ಸಂಗಾತಿಯೊಂದಿಗೆ ವಿಶೇಷ ಸಮಯ ಕಳೆಯಲು ಅವಕಾಶ ಸಿಗುತ್ತದೆ. ಸಂಬಂಧದಲ್ಲಿ ಮಾಧುರ್ಯ ಮತ್ತು ತಿಳುವಳಿಕೆ ಹೆಚ್ಚಾಗುತ್ತದೆ.

English summary

Love Horoscope June 08: People with the Libra zodiac sign can propose to the person they like

Love Horoscope June 07: People with the Libra zodiac sign can propose to the person they like
X
Desktop Bottom Promotion