Latest Updates
-
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ?
ಈ ರಾಶಿಯವರಿಗೆ ಪ್ರೀತಿಯಲ್ಲಿ ಯಶಸ್ಸು.. ಇವರ ಮನಸ್ಸು ರೋಮ್ಯಾಂಟಿಕ್!
ಈ ರಾಶಿಯವರಿಗೆ ಪ್ರೀತಿಯಲ್ಲಿ ಯಶಸ್ಸು ಖಚಿತ. ವೃಶ್ಚಿಕ ರಾಶಿಯವರ ಅಹಂಕಾರವು ಸಂಬಂಧಗಳಲ್ಲಿ ಬಿರುಗಾಳಿಯನ್ನೇ ಎಬ್ಬಿಸಲಿದೆ. ಹೌದು, ಜ್ಯೋತಿಷ್ಯದ (astrology) ಪ್ರಕಾರ, ಇಂದು (6 ಜೂನ್ 2025) ಕೆಲವು ರಾಶಿಯವರಿಗೆ ಪ್ರೇಮ (love) ಸಂಬಂಧಗಳಲ್ಲಿ ಹೊಸ ತಿರುವು ಸಿಗಲಿದೆ. ಗ್ರಹಗಳ ಚಲನೆಯಿಂದ ಕೆಲವು ರಾಶಿಯವರಿಗೆ ಪ್ರೀತಿಯಲ್ಲಿ ಯಶಸ್ಸು ತರುತ್ತದೆ. ಆದರೆ, ಕೆಲವರು ಎಚ್ಚರವಾಗಿರಬೇಕು. ಬನ್ನಿ, ಒಂಟಿಯಾಗಿರುವವರು ಅಥವಾ ಪ್ರೀತಿಯಲ್ಲಿರುವವರಿಗೆ ಇಂದು ಏನೆಲ್ಲಾ ಪ್ರಯೋಜನಗಳಿವೆ ಎನ್ನುವುದನ್ನು ತಿಳಿಯೋಣ.
ಇಂದು ಹೊಸ ಅವಕಾಶಗಳ ಜೊತೆಗೆ ಜೀವನದಲ್ಲಿ ಕೆಲವು ಸವಾಲುಗಳು ಬರಬಹುದು. ಕೆಲವು ರಾಶಿಯವರ ಸಂಬಂಧಗಳಲ್ಲಿ (Love Horoscope) ಭಾವನಾತ್ಮಕ ಪ್ರೀತಿ ಕಂಡುಬರುತ್ತದೆ. ಕೆಲವರು ಸಂಯಮ ಮತ್ತು ತಾಳ್ಮೆ ತೋರಿಸಬೇಕಿದೆ. ಮೇಷ ರಾಶಿಯಿಂದ ಮೀನ ರಾಶಿಯವರೆಗಿನ (horoscope) ಇಂದು ಸಂಬಂಧದಲ್ಲಿ ಏನೆಲ್ಲಾ ಶುಭ ಅಥವಾ ಅಶುಭ ಇದೆ ಎಂಬುದನ್ನು ತಿಳಿಯಲು ಮುಂದೆ ಓದಿ.

ಮೇಷ ರಾಶಿ
ಇಂದು ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಬಾಂಧವ್ಯ ಹೆಚ್ಚಾಗುತ್ತದೆ. ನೀವು ಸಂಬಂಧಗಳಲ್ಲಿ ಆಳವಾದ ಭಾವನೆ ಅನುಭವಿಸುತ್ತೀರಿ. ಆದರೆ, ಹಳೆಯ ಜಗಳ ಮತ್ತೆ ಹುಟ್ಟುಹಾಕಬೇಡಿ. ನೀವು ಒಬ್ಬಂಟಿಯಾಗಿದ್ದರೆ, ಹಳೆಯ ಸಂಬಂಧಿಕರು (ಪರಿಚಯಸ್ಥರು) ನಿಮ್ಮ ಹೃದಯದಲ್ಲಿ ಸ್ಥಾನ ಪಡೆಯಬಹುದು.
ವೃಷಭ ರಾಶಿ
ಈ ರಾಶಿಯವರ ಸಂಬಂಧಗಳಲ್ಲಿ ಸ್ಥಿರತೆ ಇರುತ್ತದೆ. ಆದರೆ, ಕೆಲವು ತಪ್ಪುಗ್ರಹಿಕೆಗಳು ನಿಮ್ಮಗೆ ತೊಂದರೆ ಉಂಟುಮಾಡಬಹುದು. ಶಾಂತ ಮನಸ್ಸು ಮತ್ತು ತಿಳುವಳಿಕೆಯಿಂದ ಪರಿಸ್ಥಿತಿಗಳನ್ನು ನಿಭಾಯಿಸಿ. ಒಂಟಿಯಾಗಿರುವವರಿಗೆ ಅಥವಾ ಅವಿವಾಹಿತರಿಗೆ ಈ ಸಂಬಂಧವು ಮುಂದುವರಿಯಲಿದೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಇಂದು ಪ್ರೀತಿಯನ್ನು ವ್ಯಕ್ತಪಡಿಸಲು ಅನುಕೂಲಕರ ಸಮಯ. ನಿಮ್ಮಲ್ಲಿ ತಾಜಾತನ ಮತ್ತು ಉತ್ಸಾಹ ಇರುತ್ತದೆ. ವಿವಾಹಿತರಿಗೆ ತಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲು ಅವಕಾಶ ಸಿಗುತ್ತದೆ.
ಕರ್ಕಾಟಕ ರಾಶಿ
ನಿಮ್ಮ ಸಂಗಾತಿಯೊಂದಿಗಿನ ನಿಕಟತೆ ಹೆಚ್ಚಾಗುತ್ತದೆ. ಹೊಸ ಸಂಬಂಧವು ನಿಮ್ಮ ಬಾಗಿಲು ತಟ್ಟಬಹುದು. ಆದರೆ, ಆತುರಪಡುವುದು ಒಳ್ಳೆಯದಲ್ಲ. ಸಂಬಂಧಗಳಲ್ಲಿ ಸಮತೋಲನ ಕಾಪಾಡಿಕೊಳ್ಳಿ.
ಸಿಂಹ ರಾಶಿ
ಸಿಂಹ ರಾಶಿಯವರು ಇಂದು ಸಂಬಂಧಗಳಲ್ಲಿ ಗೊಂದಲ ಮತ್ತು ತಪ್ಪು ತಿಳುವಳಿಕೆ ಎದುರಿಸಬಹುದು. ನೀವು ಮುಕ್ತವಾಗಿ ಮಾತನಾಡಬೇಕು. ಆಗ ಮಾತ್ರ ನಿಮಗೆ ಪರಿಹಾರ ಸಿಗುತ್ತದೆ. ಹಿಂದಿನ ಸಂಬಂಧಗಳ ಬಗ್ಗೆ ಮತ್ತೆ ಭಾವನೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವವರು ಪ್ರೀತಿಯಲ್ಲಿ ಸ್ಥಿರತೆ ಮತ್ತು ಪ್ರಬುದ್ಧತೆ ಅನುಭವಿಸಬಹುದು. ನಿಮ್ಮ ಸಂಗಾತಿಯು ನಿಮ್ಮ ಮಾತುಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ನಿಮಗೆ ಮದುವೆಯ ಪ್ರಸ್ತಾಪ ಬರಬಹುದು. ನಿಮ್ಮ ಸಂಬಂಧದಲ್ಲಿ ಶಾಂತಿ ಕಾಣಬಹುದು.
ತುಲಾ ರಾಶಿ
ಇಂದು ಸಂಗಾತಿಯೊಂದಿಗೆ ವಿಹಾರಕ್ಕೆ (ಡೇಟ್) ಹೋಗುವ ಪ್ಲಾನ್ ಮಾಡಬಹುದು. ನಿಮ್ಮ ಪ್ರಣಯ ಜೀವನದಲ್ಲಿ ಸಕಾರಾತ್ಮಕತೆ ಉಳಿಯುತ್ತದೆ. ನಿಮ್ಮ ಸಂಬಂಧದಲ್ಲಿ ಸಾಮರಸ್ಯ ಮತ್ತು ಪರಸ್ಪರ ತಿಳುವಳಿಕೆ ಹೆಚ್ಚಾಗುತ್ತದೆ.
ವೃಶ್ಚಿಕ ರಾಶಿ
ಅಹಂಕಾರವು ಸಂಬಂಧದಲ್ಲಿ ಬಿರುಕು ಉಂಟುಮಾಡಬಹುದು. ನಿಮ್ಮ ಸಂಗಾತಿ ಏನು ಹೇಳುತ್ತಾರೆ ಎಂಬುವುದನ್ನು ಅರ್ಥಮಾಡಿಕೊಳ್ಳಿ. ಅವರೊಂದಿಗೆ ಸಂವಹನ ಉತ್ತಮವಾಗಿರಲಿ. ನಿಮ್ಮ ಭಾವನೆಗಳನ್ನು ನಿಯಂತ್ರಿಸುವುದು ಮುಖ್ಯ.
ಧನು ರಾಶಿ
ಧನು ರಾಶಿಯವರಿಗೆ ಇಂದು ಪ್ರೀತಿಗೆ ಅನುಕೂಲಕರ ದಿನ. ನಿಮ್ಮ ಸಂಬಂಧಗಳಲ್ಲಿ ನಿಕಟತೆ ಮತ್ತು ಉಷ್ಣತೆ ಹೆಚ್ಚಾಗುತ್ತದೆ. ಹೊಸ ಜನರನ್ನು ಭೇಟಿಯಾಗುವ ಸಾಧ್ಯತೆ. ಇದು ನಿಮ್ಮ ಪ್ರೇಮ ಜೀವನಕ್ಕೆ ಹೊಸ ದಿಕ್ಕನ್ನು ನೀಡುತ್ತದೆ.
ಮಕರ ರಾಶಿ
ನಿಮ್ಮ ಹಳೆಯ ಸಂಬಂಧಗಳು ಮತ್ತೆ ಮುಂದುವರಿಯಬಹುದು. ಕೆಲವು ಭಾವನಾತ್ಮಕ ಏರಿಳಿತಗಳು ಇರಬಹುದು. ಸಂಬಂಧಗಳಲ್ಲಿ ಸ್ಥಿರತೆ ತರಲು ಪರಸ್ಪರ ನಂಬಿಕೆ ಅಗತ್ಯ.
ಕುಂಭ ರಾಶಿ
ನಿಮ್ಮ ಸಂಗಾತಿಯಿಂದ ನಿಮಗೆ ಅಚ್ಚರಿ ಅಥವಾ ಪ್ರೀತಿಯ ಮಾತುಗಳು ಕೇಳಿಬರಬಹುದು. ಇಂದು ಪ್ರಣಯಕ್ಕೆ ಅನುಕೂಲಕರವಾದ ದಿನ. ವಿವಾಹಿತರಿಗೆ ಈ ದಿನ ವಿಶೇಷವಾಗಿರುತ್ತದೆ.
ಮೀನ ರಾಶಿ
ಮನಸ್ಸು ರೋಮ್ಯಾಂಟಿಕ್ ಆಗಿರುತ್ತದೆ. ನಿಮ್ಮ ಹೃದಯದ ಭಾವನೆಗಳನ್ನು ಹಂಚಿಕೊಳ್ಳಲು ನಿಮಗೆ ಅವಕಾಶ ಸಿಗುತ್ತದೆ. ಹೊಸ ಸಂಬಂಧವನ್ನು ಪ್ರಾರಂಭಿಸುವ ಮೊದಲು ಎಚ್ಚರಿಕೆಯಿಂದ ಯೋಚಿಸಿ. ಸಂಜೆಯ ಹೊತ್ತಿಗೆ ಸಂಬಂಧವು ಬಲಗೊಳ್ಳುವ ಸಾಧ್ಯತೆಯಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











