Latest Updates
-
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ!
ಬಂಪರ್.. ಈ ರಾಶಿಯವರಿಗೆ ಮ್ಯಾರೇಜ್ ಯೋಗ! ಇವರ ಸ್ನೇಹ Love ಆಗುತ್ತೆ
Love Horoscope July 24, 2025: ಈ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ತುಲಾ ರಾಶಿಗೆ ಮದುವೆ ಯೋಗ, ಕುಂಭ ರಾಶಿಗೆ ಪ್ರೀತಿಯ ಬಾಗಿಲು ಓಪನ್. ಹೌದು, ತುಲಾ ರಾಶಿಯವರಿಗೆ ನಿಶ್ಚಿತಾರ್ಥ ಅಥವಾ ಮದುವೆಯ ಭಾಗ್ಯ ಕೂಡಿ ಬರಬಹುದು. ಸಿಂಗಲ್ ಇರುವ ಕುಂಭ ರಾಶಿಯವರ ಸ್ನೇಹವು ಪ್ರೀತಿಯಾಗಿ ಬದಲಾಗಬಹುದು. ಈ ದೈನಂದಿನ ಪ್ರೇಮ ಜಾತಕವು ಚಂದ್ರನ ಲೆಕ್ಕಾಚಾರವನ್ನು ಆಧರಿಸಿದೆ.
ಇಂದು (ಜುಲೈ 23) ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಹೊಸ ಪ್ರೇಮ ಪ್ರಸ್ತಾಪಗಳು ಬರುವ ಸಾಧ್ಯತೆಯಿದೆ. ಮತ್ತೆ ಕೆಲವರಿಗೆ ಹಳೆಯ ಸಂಬಂಧಗಳು ಪುನಃ ಪ್ರಾರಂಭವಾಗಬಹುದು. ಬನ್ನಿ, ಈ ದಿನ ಮೇಷ ರಾಶಿಯಿಂದ ಮೀನ ರಾಶಿಯವರೆಗೆ, ಎಲ್ಲಾ ರಾಶಿಗಳ ಪ್ರೇಮ ಜೀವನ ಹೇಗಿರಲಿದೆ ಎಂದು ತಿಳಿಯೋಣ.

ಮೇಷ ರಾಶಿ
ಮೇಷ ರಾಶಿಯವರಿಗೆ ತಮ್ಮ ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಆದರೂ, ಸಮಾಧಾನದಿಂದ ವರ್ತಿಸಿದರೆ ಸಂಬಂಧವು ಇನ್ನಷ್ಟು ಗಟ್ಟಿಯಾಗುವ ಸಾಧ್ಯತೆಗಳಿವೆ. ಸಿಂಗಲ್ ಇರುವ ವ್ಯಕ್ತಿಗಳಿಗೆ ಹೊಸ ಪ್ರೇಮ ಸಂಬಂಧಗಳು ಪ್ರಾರಂಭವಾಗುವ ಸಾಧ್ಯತೆಗಳು ಕಂಡುಬರುತ್ತವೆ.
ವೃಷಭ ರಾಶಿ
ವೃಷಭ ರಾಶಿಯ ಪ್ರೇಮಿಗಳಿಗೆ ಹಳೆಯ ಸಂಬಂಧಗಳು ಮರುಕಳಿಸುವ ಸಾಧ್ಯತೆಯಿದೆ. ಹಳೆಯ ನೆನಪುಗಳು ಮರುಕಳಿಸುವ ಸಾಧ್ಯತೆಗಳಿರುವುದರಿಂದ ಆಲೋಚಿಸಿ ಎಚ್ಚರಿಕೆಯಿಂದ ಹೆಜ್ಜೆ ಹಾಕುವುದು ಉತ್ತಮ. ಪ್ರಣಯ ಭರಿತ ದಿನಗಳನ್ನು ಕಳೆಯಲು ಇದು ಸೂಕ್ತ ಸಮಯ.
ಮಿಥುನ ರಾಶಿ
ಮಿಥುನ ರಾಶಿಯವರು ಇಂದು ಗೊಂದಲಮಯ ಸ್ಥಿತಿಯಲ್ಲಿರುವ ಸಾಧ್ಯತೆ ಇದೆ. ನಿಮ್ಮ ಸಂಬಂಧಗಳಲ್ಲಿ ಸ್ಪಷ್ಟತೆ ಇರಬೇಕು. ಸಿಂಗಲ್ ಅಥವಾ ಏಕಾಂಗಿಯಾಗಿರುವವರು ಆನ್‌ಲೈನ್‌ನಲ್ಲಿ ವಿಶೇಷ ವ್ಯಕ್ತಿಯ ಪರಿಚಯ ಮಾಡಿಕೊಳ್ಳುವ ಸಾಧ್ಯತೆಗಳಿವೆ.
ಕಟಕ ರಾಶಿ
ಕರ್ಕಾಟಕ ರಾಶಿಯವರಿಗೆ, ತಮ್ಮ ಸಂಗಾತಿಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವುವಿರಿ. ಇದರಿಂದ ನಿಮ್ಮ ಬಾಂಧವ್ಯ ವೃದ್ಧಿಸುತ್ತದೆ. ವೈವಾಹಿಕ ಜೀವನದಲ್ಲಿ ಪ್ರೀತಿಯನ್ನು ಹೆಚ್ಚಿಸಲು ಇದು ಉತ್ತಮ ಸಮಯ. ಹಳೆಯ ಗೆಳೆಯರೊಬ್ಬರಿಂದ ನಿಮಗೆ ಸಂದೇಶ ಬರುವ ಸಾಧ್ಯತೆ ಇದೆ.
ಸಿಂಹ ರಾಶಿ
ಸಿಂಹ ರಾಶಿಯ ಜನರು ಭಾವನೆಗಳಲ್ಲಿ ಮುಳುಗಿರುವ ಸಾಧ್ಯತೆ ಇದೆ. ನಿಮ್ಮ ಸಂಗಾತಿ ನಿಮ್ಮನ್ನು ಪ್ರೀತಿಸುವರು ಹಾಗೂ ಕಾಳಜಿವಹಿಸುವರು. ನಿಮ್ಮ ಅಹಂಕಾರವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಇದರಿಂದ ನಿಮ್ಮ ಸಂಬಂಧದಲ್ಲಿ ಮಧುರತೆ ಉಳಿಯುತ್ತದೆ. ಒಂಟಿ ಜನರು ಪ್ರೀತಿಗಾಗಿ ಸ್ವಲ್ಪ ಸಮಯ ಕಾಯಬೇಕಾಗಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯವರ ಸಂಬಂಧಗಳಲ್ಲಿ ತಪ್ಪು ತಿಳುವಳಿಕೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ, ನಿಮ್ಮ ಮಾತಿನಲ್ಲಿ ಸ್ಪಷ್ಟತೆ ಇರಲಿ. ಲವ್ ನಲ್ಲಿರುವವರು ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಬಗ್ಗೆ ಆಲೋಚಿಸುವ ಸಾಧ್ಯತೆ ಇದೆ.
ತುಲಾ ರಾಶಿ
ತುಲಾ ರಾಶಿಯವರ ಪ್ರೇಮ ಜೀವನದಲ್ಲಿ ಹೊಸ ತಿರುವುಗಳು ಬರುವ ಸಾಧ್ಯತೆ ಇದೆ. ಕೆಲವರಿಗೆ ನಿಶ್ಚಿತಾರ್ಥ ಅಥವಾ ಮದುವೆಯ ಯೋಗ ಕೂಡಿ ಬರಬಹುದು. ನಿಮ್ಮ ಪ್ರೇಮಿಯೊಂದಿಗೆ ದೀರ್ಘಕಾಲದ ಸಂಭಾಷಣೆಯನ್ನು ನಡೆಸುವುದರಿಂದ ಅನುಕೂಲವಾಗುವುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರ ಹಳೆಯ ವಿಷಯಗಳು ಮತ್ತೆ ತಲೆ ಎತ್ತಬಹುದು. ನಿಮ್ಮಲ್ಲಿರುವ ಅನುಮಾನ ಹಾಗೂ ಅಸೂಯೆಗಳನ್ನು ದೂರವಿಡಿ. ಇಲ್ಲದಿದ್ದರೆ ಸಂಬಂಧದಲ್ಲಿ ಬಿರುಕು ಉಂಟಾಗಬಹುದು. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಇದು ಸಕಾಲ.
ಧನು ರಾಶಿ
ಧನು ರಾಶಿಯವರು ತಮ್ಮ ಸಂಗಾತಿಯೊಂದಿಗೆ ಒಂದು ಸಾಹಸಮಯ ಪ್ರವಾಸ ಯೋಜಿಸಬಹುದು. ಸಿಂಗಲ್ ಇರುವವರು ಮೊದಲ ನೋಟದಲ್ಲೇ ಯಾರನ್ನಾದರೂ ಇಷ್ಟಪಡಬಹುದು. ಸಂಬಂಧಗಳಲ್ಲಿ ಸ್ವಲ್ಪ ಸ್ಥಳಾವಕಾಶ ನೀಡುವುದು ಬಹಳ ಮುಖ್ಯ.
ಮಕರ ರಾಶಿ
ಮಕರ ರಾಶಿಯವರ ಪ್ರೇಮ ಜೀವನದಲ್ಲಿ ಸ್ಥಿರತೆ ಇರುತ್ತದೆ. ಆದರೆ, ನಿಮ್ಮ ಸಂಗಾತಿಯ ಭಾವನೆಗಳನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಏಕಾಂಗಿ ಅಥವಾ ಒಂಟಿಯಾಗಿರುವವರಿಗೆ ಸಂಬಂಧದ ಪ್ರಾರಂಭವು ನಿಧಾನವಾಗಿ ಹಾಗೂ ಗಟ್ಟಿಯಾಗಿರುತ್ತದೆ.
ಕುಂಭ ರಾಶಿ
ಕುಂಭ ರಾಶಿಯವರು ಅನಗತ್ಯ ವಾದಗಳನ್ನು ಮಾಡುವುದನ್ನು ತಪ್ಪಿಸಿ. ಇಲ್ಲದಿದ್ದರೆ ಸಂಬಂಧದಲ್ಲಿ ಒತ್ತಡ ಹೆಚ್ಚಾಗಬಹುದು. ನಿಮ್ಮ ಪ್ರೇಮ ಜೀವನದಲ್ಲಿ ಉತ್ಸಾಹವನ್ನು ತರಲು ಹೊಸ ಪ್ರಯತ್ನಗಳನ್ನು ಮಾಡಿ. ಸಿಂಗಲ್ ಇರುವ ಜನರ ಸ್ನೇಹವು ಪ್ರೀತಿಯಾಗಿ ಬದಲಾಗಬಹುದು.
ಮೀನ ರಾಶಿ
ಮೀನ ರಾಶಿಯವರು ಇಂದು ಭಾವುಕರಾಗುವ ಸಾಧ್ಯತೆ ಇದೆ. ನಿಮ್ಮ ಸಂಬಂಧಗಳಲ್ಲಿ ಏರಿಳಿತಗಳು ಉಂಟಾಗುವ ಸೂಚನೆಯಿದೆ. ನಿಮ್ಮ ಸಂಗಾತಿಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಿರಿ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರ ಪಡಬೇಡ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications












