Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಈ ರಾಶಿಯವರ ಸ್ನೇಹ ಪ್ರೀತಿಯಾಗಿ ಬದಲಾಗುತ್ತೆ! ಇವರಿಗೆ ಹಳೆಯ ಲವರ್ ಸಿಗ್ತಾರೆ
Love Horoscope July 1: ಮೇಷ ರಾಶಿಯವರ ಲವ್‌ಗೆ ವಿಶೇಷ ದಿನ. ಈ ರಾಶಿಯವರ ಜೀವನಕ್ಕೆ ಸ್ಪೆಷಲ್ ವ್ಯಕ್ತಿಯ ಆಗಮನ. ಸಿಂಹ ರಾಶಿಯವರಿಗೆ ಪ್ರೇಮ ಜೀವನದಲ್ಲಿ ಪ್ರಣಯ ಇರುತ್ತದೆ. ಕನ್ಯಾ ರಾಶಿಯವರು ಸಂಗಾತಿಯೊಂದಿಗೆ ಪ್ರವಾಸಕ್ಕೆ ಹೋಗುವ ಸಾಧ್ಯತೆಯಿದೆ. ಸಿಂಗಲ್ ಇರುವವರಿಗೆ ಹಳೆಯ ಸಂಗಾತಿಯೊಂದಿಗೆ ಲವ್ ಆಗುವ ಸಾಧ್ಯತೆ ಇದೆ. ಇಂದು (ಜುಲೈ 1) ಪ್ರತಿಯೊಂದು ರಾಶಿಯ ಪ್ರೇಮ ಜೀವನದಲ್ಲಿ ವಿಭಿನ್ನ ಅನುಭವಗಳು ಎದುರಾಗಲಿವೆ. ಪ್ರೀತಿಯನ್ನು ಗೌರವಿಸಿ ಮತ್ತು ಪ್ರೀತಿಪಾತ್ರರೊಂದಿಗೆ ಸಂತೋಷವಾಗಿರಿ.
ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ರಾಶಿಗೂ ತನ್ನದೇ ಆದ ಮಹತ್ವವಿದೆ. ಪ್ರತಿಯೊಂದು ರಾಶಿಯ ಗುಣ ಸ್ವಭಾವವು ಬೇರೆ ಬೇರೆಯಾಗಿರುತ್ತದೆ. ಪ್ರತಿಯೊಂದು ರಾಶಿಯ ಪ್ರೇಮ ಜೀವನವು ವಿಭಿನ್ನವಾಗಿರುತ್ತದೆ. ಪ್ರತಿಯೊಬ್ಬರಿಗೂ ಪ್ರೀತಿಯು ವಿಭಿನ್ನ ಅರ್ಥವನ್ನು ನೀಡುತ್ತದೆ. ಕೆಲವರಿಗೆ ಅದು ಸಂತೋಷವನ್ನು ನೀಡಿದರೆ, ಇನ್ನು ಕೆಲವರಿಗೆ ಸವಾಲುಗಳನ್ನು ತರುತ್ತದೆ. ಇಂದು, ಮೇಷ ರಾಶಿಯಿಂದ ಮೀನ ರಾಶಿಯವರೆಗೆ, ಎಲ್ಲಾ ರಾಶಿಗಳ ಪ್ರೇಮ ಜೀವನ ಹೇಗಿರಲಿದೆ ಎಂದು ನೋಡೋಣ ಬನ್ನಿ.

ಮೇಷ ರಾಶಿ
ಮೇಷ ರಾಶಿಯವರಿಗೆ ಇಂದು ಪ್ರೇಮ ಜೀವನವು ಬಹಳ ವಿಶೇಷವಾಗಿರುತ್ತದೆ. ಈ ದಿನವು ಸ್ಮರಣೀಯವಾಗಿ ಉಳಿಯುತ್ತದೆ. ನೀವು ಇಂದು ತಮ್ಮ ಸಂಗಾತಿಯೊಂದಿಗೆ ಡಿನ್ನರ್‌ಗೆ ಹೋಗಲು ಪ್ಲಾನ್ ಮಾಡಬಹುದು. ಒಂಟಿ ಇರುವ ಹುಡುಗಿಯರಿಗೆ ಸ್ನೇಹಿತರಿಂದ ಮದುವೆಯ ಪ್ರಸ್ತಾಪ ಬರುವ ಸಾಧ್ಯತೆಯಿದೆ.
ವೃಷಭ ರಾಶಿ
ಇಂದು ವೃಷಭ ರಾಶಿಯವರು ತಮ್ಮ ಸಂಗಾತಿಯ ಒತ್ತಡದ ಬಗ್ಗೆ ಚಿಂತಿ ಮಾಡುವ ಸಾಧ್ಯತೆ. ಒಂಟಿಯಾಗಿರುವವರ ಜೀವನದಲ್ಲಿ ವಿಶೇಷ ವ್ಯಕ್ತಿಯೊಬ್ಬರು ಆಗಮಿಸಲಿದ್ದಾರೆ. ನಿಮಗೆ ಸಂಜೆ ಸಂಗಾತಿಯೊಂದಿಗೆ ಶಾಪಿಂಗ್ ಮಾಡುವ ಯೋಗವಿದೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಇಂದು ಹಳೆಯ ವಿಷಯಗಳ ಬಗ್ಗೆ ಒತ್ತಡ ಉಂಟಾಗಬಹುದು. ನಿಮ್ಮ ಮಾತಿನಲ್ಲಿ ಮೃದುತ್ವವಿರಲಿ. ಸಂಗಾತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳಿ. ಸಿಂಗಲ್ ಇರುವವರು ತಾಳ್ಮೆಯಿಂದ ಕಾಯಬೇಕು. ಸಂಬಂಧದಲ್ಲಿರುವವರು ತಮ್ಮ ಸಂಗಾತಿಯೊಂದಿಗೆ ಮಾತನಾಡಿ, ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಪ್ರಯತ್ನಿಸಿ.
ಕರ್ಕಾಟಕ ರಾಶಿ
ಕಟಕ ರಾಶಿಯ ಅವಿವಾಹಿತ ಜನರು ತಮ್ಮ ಭಾವನೆಗಳನ್ನು ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಲು ಹಿಂಜರಿಯಬಾರದು. ಪ್ರೀತಿಯಲ್ಲಿ ಹೊಸ ಆರಂಭವು ಸ್ಮರಣೀಯವಾಗಿರುತ್ತದೆ. ನಿಮ್ಮ ವಿರೋಧಿಗಳ ಬಗ್ಗೆ ಎಚ್ಚರವಿರಲಿ.
ಸಿಂಹ ರಾಶಿ
ಇಂದು ಸಿಂಹ ರಾಶಿಯ ವಿವಾಹಿತರ ಪ್ರೇಮ ಜೀವನದಲ್ಲಿ ಪ್ರಣಯ ಇರುತ್ತದೆ. ನೀವಿಬ್ಬರೂ ಪರಸ್ಪರರಿಗೆ ಸಮರ್ಪಿತರಾಗಿರುತ್ತೀರಿ. ಸಿಂಗಲ್ ಇರುವವರು ಯಾರೊಂದಿಗಾದರೂ ಹತ್ತಿರವಾಗುವ ಸಾಧ್ಯತೆಯಿದೆ. ಹೊಸ ಸಂಬಂಧವನ್ನು ಪ್ರಾರಂಭಿಸುವ ಮೊದಲು, ನಿಮ್ಮ ಆಲೋಚನೆಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಇಂದು ಪ್ರಣಯಭರಿತ ಸಂಭಾಷಣೆಗಳ ದಿನ. ಸಂಗಾತಿಯೊಂದಿಗೆ ಪ್ರವಾಸಕ್ಕೆ ಹೋಗುವ ಸಾಧ್ಯತೆ. ಈ ಪ್ರವಾಸವು ಹೊಸ ಅನುಭವಗಳನ್ನು ನೀಡುತ್ತದೆ. ಇಬ್ಬರ ನಡುವಿನ ಭಾವನಾತ್ಮಕ ಬಾಂಧವ್ಯವನ್ನು ಹೆಚ್ಚಿಸುತ್ತದೆ. ಸಿಂಗಲ್ ಇರುವವರು ಸಕಾರಾತ್ಮಕ ಬದಲಾವಣೆಗಳನ್ನು ತರುವ ವ್ಯಕ್ತಿಯನ್ನು ಮೀಟ್ ಆಗಬಹುದು.
ತುಲಾ ರಾಶಿ
ತುಲಾ ರಾಶಿಯವರ ಪ್ರೇಮ ಜೀವನದಲ್ಲಿ ಇಂದು ಶಾಂತಿ ಮತ್ತು ಪ್ರೀತಿ ನೆಲೆಸುತ್ತದೆ. ಈಗಾಗಲೇ ಲವ್‌ನಲ್ಲಿರುವವರು ಮಾತುಕತೆ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಿ. ಪ್ರಿಯತಮೆಯೊಂದಿಗೆ ಮಾತನಾಡುವುದರಿಂದ ಮನಸ್ಸು ಹಗುರಾಗುತ್ತದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಇಂದು ಸಂಬಂಧದಲ್ಲಿ ಹೊಸ ಆರಂಭ ಸಾಧ್ಯತೆ. ನೀವು ಇತ್ತೀಚೆಗೆ ಯಾರನ್ನಾದರೂ ಆಕರ್ಷಿಸಿದ್ದರೆ, ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸ್ವಲ್ಪ ಸಮಯ ಕಾಯಿರಿ. ಮದುವೆಯಾಗಲು ಬಯಸುವವರಿಗೆ ಪ್ರೇಮ ಪ್ರಸ್ತಾಪ ಬರುವ ಸಾಧ್ಯತೆಯಿದೆ.
ಧನು ರಾಶಿ
ಧನು ರಾಶಿಯವರು ಈ ಹಿಂದೆ ಮೋಸ ಹೋಗಿದ್ದರೆ, ಯಾವುದೇ ಹೊಸ ಸಂಬಂಧವನ್ನು ಪ್ರಾರಂಭಿಸುವ ಮೊದಲು ಎಚ್ಚರಿಕೆ ವಹಿಸಿ. ಇಂದು ನಿಮ್ಮ ಸಂಗಾತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ವೈವಾಹಿಕ ಜೀವನದಲ್ಲಿ ಪ್ರಣಯಕ್ಕೆ ಅನೇಕ ಅವಕಾಶಗಳು ಸಿಗಲಿವೆ.
ಮಕರ ರಾಶಿ
ಮಕರ ರಾಶಿಯ ಸಿಂಗಲ್ ಇರುವವರಿಗೆ ಹಳೆಯ ಪರಿಚಯಸ್ಥರೊಂದಿಗೆ ಲವ್ ಆಗುವ ಸಾಧ್ಯತೆ ಇದೆ. ವಿವಾಹಿತರು ತಮ್ಮ ಸಂಗಾತಿಯೊಂದಿಗೆ ಶಾಪಿಂಗ್‌ಗೆ ಹೋಗುತ್ತಾರೆ. ಒಟ್ಟಿಗೆ ಉತ್ತಮ ಸಮಯವನ್ನು ಕಳೆಯುತ್ತಾರೆ.
ಕುಂಭ ರಾಶಿ
ಇಂದು ಕುಂಭ ರಾಶಿಯವರಿಗೆ ವಿಶೇಷ ದಿನ. ನಿಮ್ಮ ಪ್ರಣಯ ಜೀವನವು ನೀವು ಬಯಸಿದಂತೆಯೇ ಇರುತ್ತದೆ. ನಿಮ್ಮ ಆತ್ಮ ಸಂಗಾತಿಯನ್ನು ಅರ್ಥಮಾಡಿಕೊಳ್ಳುವಲ್ಲಿ ಮತ್ತು ಪ್ರೀತಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಈ ಸಂಬಂಧವು ನಿಮಗೆ ಉತ್ತಮ ಅನುಭವ ನೀಡುತ್ತದೆ.
ಮೀನ ರಾಶಿ
ಮೀನ ರಾಶಿಯವರಿಗೆ ಇಂದು ತಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಲು ಹೆಚ್ಚಿನ ಅವಕಾಶ ಸಿಗುತ್ತದೆ. ನಿಮ್ಮ ಮಾತುಗಳು ನಿಮ್ಮ ಸಂಗಾತಿಯ ಹೃದಯ ಮುಟ್ಟುತ್ತವೆ. ನಿಮ್ಮ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸುವ ಸಾಧ್ಯತೆಯಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











