Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ಈ ರಾಶಿಯವರಿಗೆ ಲವರ್ ಜೊತೆ ಜಗಳ! ಇವರ ಹೊಸ ಲವ್ ಸ್ಟೋರಿ ಶುರು
Love Horoscope July 05: ಈ ರಾಶಿಯವರ ಪ್ರೇಮ ಜೀವನದಲ್ಲಿ ಸಂಕಷ್ಟ! ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಸಾಧ್ಯತೆ. ನಿಮ್ಮ ಸಂಗಾತಿಯೊಂದಿಗೆ ಕೆಲವೊಂದು ತಪ್ಪು ತಿಳುವಳಿಕೆಗಳು ಉಂಟಾಗಬಹುದು. ಈ ರಾಶಿಯವರ ಮನಸ್ಸು ಮತ್ತು ಹೃದಯ ಬೇರೆ ಬೇರೆ ದಾರಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ತುಲಾ ರಾಶಿಯವರ ಮನಸ್ಸು ಪ್ರೀತಿಯಿಂದ ತುಂಬಿರುತ್ತದೆ. ಕುಂಭ ರಾಶಿಯವರ ಸ್ನೇಹವು ಪ್ರೀತಿಯಾಗಿ ಬದಲಾಗುವ ದಿನ. ಇಂದು (ಜುಲೈ 05) ಮೇಷ ರಾಶಿಯಿಂದ ಮೀನ ರಾಶಿಯವರೆಗೆ, ಎಲ್ಲಾ ರಾಶಿಗಳ ಪ್ರೇಮ ಜೀವನ ಹೇಗಿರಲಿದೆ ಎಂಬ ಬಗ್ಗೆ ತಿಳಿಯೋಣ ಬನ್ನಿ.
ಜ್ಯೋತಿಷ್ಯದ ಪ್ರಕಾರ, ಶುಕ್ರ ಗ್ರಹವು ನಿಮ್ಮ ಜಾತಕದಲ್ಲಿ ಸಕಾರಾತ್ಮಕವಾಗಿದ್ದರೆ, ನಿಮ್ಮ ಪ್ರೇಮ ಜೀವನವು ಉತ್ತಮವಾಗಿರುತ್ತದೆ. ಚಂದ್ರನ ಚಿಹ್ನೆಯ ಆಧಾರದ ಮೇಲೆ, ಪ್ರೇಮಿಗಳ ನಡುವಿನ ದೈನಂದಿನ ಸಂಭಾಷಣೆಗಳು ಮತ್ತು ವೈವಾಹಿಕ ಜೀವನದ ಬಗ್ಗೆ ಈ ಭವಿಷ್ಯ ಹೇಳಲಾಗುವುದು. ನಿಮ್ಮ ಪ್ರೀತಿಯ ಜೀವನಕ್ಕೆ ಈ ದಿನ ಹೇಗೆ ಇರುತ್ತದೆ, ಪ್ರೇಮಿಗಳ ನಡುವಿನ ಸಂಬಂಧವು ಬಲಗೊಳ್ಳುತ್ತದೆಯೇ ಅಥವಾ ಯಾವುದೇ ಅಡಚಣೆಗಳು ಎದುರಾಗುತ್ತವೆಯೇ ಎಂಬುದನ್ನು ತಿಳಿದುಕೊಳ್ಳಿ.

ಮೇಷ ರಾಶಿ
ಮೇಷ ರಾಶಿಯವರಿಗೆ ಇಂದು ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಲು ನಿಮಗೆ ಅವಕಾಶ ಸಿಗುತ್ತದೆ. ಬಹಳ ಸಮಯದಿಂದ ನಿಮ್ಮಲ್ಲಿಯೇ ಉಳಿದುಕೊಂಡಿದ್ದ ವಿಷಯವನ್ನು ಹೊರಹಾಕಲು ಇದು ಸರಿಯಾದ ಸಮಯ. ಸಿಂಗಲ್ ಇರುವವರು ಹಳೆಯ ಸ್ನೇಹಿತರೊಂದಿಗೆ ಭಾವನಾತ್ಮಕವಾಗಿ ಬೆರೆಯಬಹುದು.
ವೃಷಭ ರಾಶಿ
ಇಂದು ವೃಷಭ ರಾಶಿಯವರ ಸಂಬಂಧದಲ್ಲಿ ಮಾಧುರ್ಯ ಇರುತ್ತದೆ. ಆದರೆ, ನೀವು ತಾಳ್ಮೆಯಿಂದಿರಬೇಕು. ನಿಮ್ಮ ಸಂಗಾತಿ ಏನು ಹೇಳುತ್ತಾರೆ ಎಂದು ಮೊದಲು ಅರ್ಥಮಾಡಿಕೊಳ್ಳಿ. ಒಂಟಿ ಇರುವವರು ಸ್ಪೆಷಲ್ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆ.
ಮಿಥುನ ರಾಶಿ
ಇಂದು ಮಿಥುನ ರಾಶಿಯವರಿಗೆ ಗೊಂದಲದ ವಾತಾವರಣ ಮುಂದುವರಿಯಬಹುದು. ಸಂಬಂಧಗಳಲ್ಲಿ ಸ್ಪಷ್ಟತೆ ಇರಬೇಕು. ನಿಮ್ಮ ಮನಸ್ಸು ಮತ್ತು ಹೃದಯ ಬೇರೆ ಬೇರೆ ದಾರಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ನೀವು ಸತ್ಯವನ್ನು ಹೇಳಲು ಬಯಸಿದರೆ, ಸ್ವಲ್ಪ ಸಮಯ ತೆಗೆದುಕೊಂಡು ಶಾಂತವಾಗಿ ಮಾತನಾಡಿ.
ಕರ್ಕಾಟಕ ರಾಶಿ
ಕಟಕ ರಾಶಿಯವರ ಸಂಗಾತಿ ಇಂದು ನಿಮಗೆ ಬೆಂಬಲವಾಗಿರುತ್ತಾರೆ. ಪ್ರೀತಿ ಮತ್ತು ಭಾವನಾತ್ಮಕ ಬಾಂಧವ್ಯ ಹೆಚ್ಚಾಗುತ್ತದೆ. ಒಂಟಿ ಇರುವವರಿಗೆ ಸ್ವಲ್ಪ ಭರವಸೆ ಮೂಡಬಹುದು. ಆದರೆ, ಅದಕ್ಕಾಗಿ ನೀವು ಪ್ರಯತ್ನಿಸಬೇಕು.
ಸಿಂಹ ರಾಶಿ
ಸಿಂಹ ರಾಶಿಯವರ ಪ್ರೀತಿಯಲ್ಲಿ ಆತ್ಮವಿಶ್ವಾಸ ಎದ್ದು ಕಾಣುತ್ತದೆ. ನೀವು ಯಾರನ್ನು ಭೇಟಿಯಾದರೂ, ನಿಮ್ಮ ವ್ಯಕ್ತಿತ್ವದಿಂದ ಅವರನ್ನು ಪ್ರಭಾವಿತರನ್ನಾಗಿ ಮಾಡುವಿರಿ. ಈಗಾಗಲೇ ಸಂಬಂಧದಲ್ಲಿರುವವರಿಗೆ, ಇದು ನಿಮ್ಮ ಸಂಗಾತಿಗೆ ವಿಶೇಷ ಅನುಭವ ನೀಡುವ ದಿನ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ತಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಸಾಧ್ಯತೆ. ನಿಮ್ಮ ಸಂಗಾತಿಯೊಂದಿಗೆ ಕೆಲವೊಂದು ತಪ್ಪು ತಿಳುವಳಿಕೆಗಳು ಉಂಟಾಗಬಹುದು. ನೀವು ಇಂದು ತಾಳ್ಮೆಯಿಂದ ಇರಬೇಕು. ನೀವು ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು. ಹೊಂದಾಣಿಕೆ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಒಂಟಿ ಇರುವವರಿಗೆ ಹಳೆಯ ನೆನಪುಗಳು ಕಾಡಬಹುದು.
ತುಲಾ ರಾಶಿ
ತುಲಾ ರಾಶಿಯವರ ಮನಸ್ಸು ಪ್ರೀತಿಯಿಂದ ತುಂಬಿರುತ್ತದೆ. ಆದರೆ, ಇತರರ ಭಾವನೆಗಳನ್ನು ಸಹ ನೀವು ಗೌರವಿಸಬೇಕು. ಸಂಬಂಧಗಳಲ್ಲಿ ಸಮತೋಲನ ಬಹಳ ಮುಖ್ಯ. ನೀವು ಯಾರೊಂದಿಗಾದರೂ ಹತ್ತಿರವಾಗಲು ಬಯಸಿದರೆ, ನಿಮ್ಮ ನಿಜವಾದ ಉದ್ದೇಶಗಳನ್ನು ಮೊದಲು ಅವರಿಗೆ ತಿಳಿಸಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ತಮ್ಮ ಆಳವಾದ ಭಾವನೆಗಳನ್ನು ವ್ಯಕ್ತಪಡಿಸಲು ಇದು ಸಕಾಲ. ನಿಮ್ಮ ಸಂಗಾತಿಯ ಬಗ್ಗೆ ನೀವು ಹೆಚ್ಚು ಕಾಳಜಿ ವಹಿಸುವುದು ಕೆಲವೊಮ್ಮೆ ಉದ್ವಿಗ್ನತೆಗೆ ಕಾರಣವಾಗಬಹುದು. ಸಂಗಾತಿಗೆ ಸ್ವಲ್ಪ ಸ್ಥಳ ನೀಡಿ ಮತ್ತು ನಂಬಿಕೆಯನ್ನು ಉಳಿಸಿಕೊಳ್ಳಿ.
ಧನು ರಾಶಿ
ಧನು ರಾಶಿಯವರಿಗೆ ತಮ್ಮ ಪ್ರೇಮ ಜೀವನದಲ್ಲಿ ಸಾಹಸಮಯ ಮನಸ್ಥಿತಿ ಇರುತ್ತದೆ. ಹೊಸ ಅನುಭವ ಅಥವಾ ಪ್ರಯಾಣದ ಬಗ್ಗೆ ನೀವು ಉತ್ಸುಕರಾಗಿರಬಹುದು. ನಿಮ್ಮ ಸಂಗಾತಿಯೊಂದಿಗೆ ನೀವು ಟ್ರಿಪ್ ಯೋಜಿಸಬಹುದು.
ಮಕರ ರಾಶಿ
ಮಕರ ರಾಶಿಯವರಿಗೆ ಇಂದು ನೀವು ಸಂಬಂಧಗಳ ಬಗ್ಗೆ ಗಂಭೀರವಾಗಿ ಯೋಚಿಸುವ ಸಾಧ್ಯತೆ. ನಿಮ್ಮ ಭಾವನೆಗಳ ಬಗ್ಗೆ ನಿಮಗೆ ಸ್ಪಷ್ಟತೆ ಇರಬೇಕು. ಅದರ ಆಧಾರದ ಮೇಲೆ ನೀವು ನಿರ್ಧಾರ ತೆಗೆದುಕೊಳ್ಳಬಹುದು. ಒಂಟಿ ಜನರಿಗೆ ಅನಿರೀಕ್ಷಿತ ಭೇಟಿಯಾಗುವ ಸಾಧ್ಯತೆ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಅದೃಷ್ಟ. ಇಂದು ನಿಮ್ಮ ಸ್ನೇಹವು ಪ್ರೀತಿಯಾಗಿ ಬದಲಾಗುವ ದಿನ. ನಿಮ್ಮ ಹತ್ತಿರವಿರುವ ವ್ಯಕ್ತಿಯನ್ನು ನೀವು ಬೇರೆ ದೃಷ್ಟಿಕೋನದಿಂದ ನೋಡಲು ಪ್ರಾರಂಭಿಸಬಹುದು. ಈಗಾಗಲೇ ಸಂಬಂಧದಲ್ಲಿರುವವರು ತಮ್ಮ ಸಂಗಾತಿಯೊಂದಿಗೆ ಹೊಸ ಯೋಜನೆ ಮಾಡಬೇಕು.
ಮೀನ ರಾಶಿ
ಮೀನ ರಾಶಿಯವರಿಗೆ ಇಮದು ಪ್ರೀತಿ ಮತ್ತು ಭಾವನೆಗಳಿಂದ ತುಂಬಿರುವ ದಿನ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಇದು ಸೂಕ್ತ ಸಮಯ. ನಿಮ್ಮ ಸೂಕ್ಷ್ಮ ಸ್ವಭಾವವು ಇಂದು ನಿಮ್ಮ ಸಂಗಾತಿಯನ್ನು ಭಾವನಾತ್ಮಕವಾಗಿ ಬೆಂಬಲಿಸುತ್ತದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications












