ಸುಗ್ಗಿ ಹಬ್ಬದ ಸಿಹಿ.. ಎರಡನೇ ಮದುವೆಗೆ ಶುಭ ಸೂಚನೆ! ಜೀವನದಲ್ಲಿ ಹೊಸತು

ಸುಗ್ಗಿ ಹಬ್ಬದ ಸಿಹಿ.. ಈ ರಾಶಿಯವರಿಗೆ ಹೊಸ ಸಂಬಂಧದ ಶುಭಸೂಚನೆ! ಮಿಥುನ ರಾಶಿಯವರ ವೈವಾಹಿಕ ಜೀವನದಲ್ಲಿ ಹೊಸತು ಮತ್ತು ರೋಮಾಂಚನಕಾರಿ ಅನುಭವ. ಮೇಷ ರಾಶಿಯಿಂದ ಮೀನ ರಾಶಿಯವರೆಗೆ, ಎಲ್ಲಾ ರಾಶಿಗಳ ಇಂದಿನ (Today Love Horoscope) ದೈನಂದಿನ ಪ್ರೇಮ ಭವಿಷ್ಯ ಇಲ್ಲಿದೆ.

ಮೇಷ

ಇಂದು ನೀವು ಹೊಸ ವ್ಯಕ್ತಿಯತ್ತ ಆಕರ್ಷಿತರಾಗಬಹುದು. ಈಗಾಗಲೇ ಸಂಬಂಧದಲ್ಲಿರುವವರಿಗೆ, I ದಿನವು ಸಂತೋಷ, ಹಾಸ್ಯದಿಂದ ಕೂಡಿ, ಪರಸ್ಪರ ಸಮಾಧಾನ ತರುತ್ತದೆ. ಸಂಗಾತಿಯೊಂದಿಗೆ ಕಳೆದ ಸಮಯ ನಿಮ್ಮ ಬಾಂಧವ್ಯವನ್ನು ಬಲಪಡಿಸುತ್ತದೆ. ಮನಸ್ಸಿನ ಗೊಂದಲಗಳು ತಾವಾಗಿಯೇ ಬಗೆಹರಿಯಲಿವೆ.

ವೃಷಭ

ಕುಟುಂಬದವರು ಇಂದು ನಿಮ್ಮ ಸಂಬಂಧದ ಬಗ್ಗೆ ಪ್ರಶ್ನೆಗಳನ್ನು ಎತ್ತಬಹುದು. ಇದು ನಿಮ್ಮ ಮನಸ್ಸನ್ನು ವಿಚಲಿತಗೊಳಿಸಬಹುದು. ಕೆಲಸದ ಒತ್ತಡದಿಂದ ಸಂಗಾತಿಗೆ ಸಾಕಷ್ಟು ಸಮಯ ನೀಡಲು ಸಾಧ್ಯವಾಗದಿರಬಹುದು. ಇದರಿಂದ ಸಣ್ಣ ಮುನಿಸು ಮೂಡಬಹುದು. ವಿವಾಹಿತರಿಗೆ ದಿನ ಸಮತೋಲಿತ ಮತ್ತು ಸಹಕಾರದಿಂದ ಕೂಡಿರುತ್ತದೆ. ತಿಳುವಳಿಕೆಯೇ ಸಂಬಂಧದ ದೊಡ್ಡ ಶಕ್ತಿ.

Daily Horoscope January 15

ಮಿಥುನ

ವೈವಾಹಿಕ ಜೀವನದಲ್ಲಿಂದು ಹೊಸತು ಮತ್ತು ರೋಮಾಂಚನಕಾರಿ ಅನುಭವ ನಿಮಗಿದೆ. ಸಂಗಾತಿಯಿಂದ ಭಾವನಾತ್ಮಕ ಹಾಗೂ ಪ್ರಾಯೋಗಿಕ ಸಹಕಾರ ದೊರೆತು ಬಾಂಧವ್ಯ ಗಟ್ಟಿಯಾಗುತ್ತದೆ. ಹೃದಯದಲ್ಲಿ ಪ್ರೀತಿಯ ಉಷ್ಣತೆ ಹೆಚ್ಚಿ, ನೀವು ಹೆಚ್ಚು ರೋಮ್ಯಾಂಟಿಕ್ ಎನಿಸುವಿರಿ. ಆದರೂ, ಪ್ರೇಮ ಸಂಗಾತಿಯ ಆರೋಗ್ಯ ಕೊಂಚ ಏರುಪೇರಾಗಬಹುದು.

ಕರ್ಕಾಟಕ

ಇಂದು ನಿಮ್ಮ ಮನಸ್ಸು ಭಾರವಾಗಿ, ಅಶಾಂತಿ ಕಾಡಬಹುದು. ಭಾವನಾತ್ಮಕವಾಗಿ ದುರ್ಬಲರಾಗಬಹುದು. ಇದು ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಪ್ರೇಮ ಜೀವನದಲ್ಲಿ ನಂಬಿಕೆಯನ್ನು ಅಲುಗಾಡಿಸುವ ವಿಷಯಗಳು ತಿಳಿಯಬಹುದು.

ಸಿಂಹ

ಸಂಗಾತಿಯೊಂದಿಗಿನ ನಿಮ್ಮ ನಿಕಟತೆ ಇಂದು ಹೆಚ್ಚಾಗಲಿದೆ. ಪ್ರಣಯದ ಅವಕಾಶಗಳು ತಾವಾಗಿಯೇ ಮೂಡಲಿದೆ. ಅತ್ತೆ-ಮಾವರ ಕಡೆಯಿಂದ ಉತ್ತಮ ಸಹಕಾರ ದೊರೆಯಬಹುದು. ಆದರೆ, ಹೊಸ ಜನರನ್ನು ಕುರುಡಾಗಿ ನಂಬುವುದು ಸೂಕ್ತವಲ್ಲ. ಯಾವುದೇ ದೊಡ್ಡ ನಿರ್ಧಾರ ಮಾಡು ಮೊದಲು ಎರಡೆರಡು ಬಾರಿ ಯೋಚಿಸಿ.

ಕನ್ಯಾ

ಇಂದು ನಿಮ್ಮ ಮನಸ್ಸು ಪದೇ ಪದೇ ಪ್ರಿಯಕರನತ್ತ ಸೆಳೆಯಲ್ಪಡುತ್ತದೆ. ಹೃದಯ ರೋಮ್ಯಾಂಟಿಕ್ ಭಾವನೆಗಳಿಂದ ತುಂಬಿರುತ್ತದೆ. ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ನೀವು ಮನಸ್ಸು ಮಾಡಬಹುದು. ಪ್ರೇಮ ವಿವಾಹದ ಯೋಗಗಳು ಸಹ ಗೋಚರಿಸುದೆ. ವಿವಾಹಿತರ ನಡುವೆ ಸಣ್ಣಪುಟ್ಟ ಜಗಳಗಳ ಸಾಧ್ಯತೆ.

ತುಲಾ

ಸಂಗಾತಿಯ ಸಹಕಾರ ಮತ್ತು ಬೆಂಬಲವು ನಿಮ್ಮನ್ನು ಭಾವನಾತ್ಮಕವಾಗಿ ಬಲಪಡಿಸುತ್ತದೆ. ಯಾರೋ ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ ಎಂದು ನೀವು ಭಾವಿಸುವಿರಿ. ಕುಟುಂಬದವರಿಗೆ ನಿಮ್ಮ ಸಂಬಂಧದ ಸುಳಿವು ಸಿಗಬಹುದು. ಇಂದು ನಿಮ್ಮ ಮನಸ್ಸಿನ ಮಾತನ್ನು ಹೇಳುವುದು ಸುಲಭವಾಗಲಿದೆ.

ವೃಶ್ಚಿಕ

ನೀವು ಎರಡನೇ ಮದುವೆ ಅಥವಾ ಹೊಸ ಸಂಬಂಧದ ಬಗ್ಗೆ ಯೋಚಿಸುತ್ತಿದ್ದರೆ, ಇಂದು ಸಕಾರಾತ್ಮಕ ಸಂಕೇತಗಳನ್ನು ಪಡೆಯಬಹುದು. ಹೊಸತಾಗಿ ಸಂಬಂಧ ಆರಂಭಿಸಿದವರಲ್ಲಿ ಸಣ್ಣ ವಿವಾದಗಳು ಸಾಧ್ಯ. ಒಂದು ಸಣ್ಣ ಉಡುಗೊರೆ ಅಥವಾ ವಿಶೇಷ ಭೇಟಿ ಸಂಬಂಧದಲ್ಲಿ ಮತ್ತೆ ಸಿಹಿ ತರಬಹುದು.

ಧನು

ಕುಟುಂಬ ಮತ್ತು ಮಕ್ಕಳಿಗಾಗಿ ಸಮಯ ಮೀಸಲಿಡುವುದು ಇಂದು ಕಷ್ಟವಾಗಬಹುದು. ನಿಮ್ಮ ಸಂಬಂಧವು ಯಾವುದಾದರೂ ಒತ್ತಡದಲ್ಲಿದೆ ಎಂದು ಭಾವಿಸಿದರೆ, ಇಂದು ಸ್ವಲ್ಪ ಹಿಂದೆ ಸರಿದು ಯೋಚಿಸುವುದು ಉತ್ತಮ. ಕೆಲವೊಮ್ಮೆ ದೂರವಿರುವುದೇ ಸಂಬಂಧಗಳಿಗೆ ಉಸಿರಾಡಲು ಜಾಗ ನೀಡುತ್ತದೆ.

ಮಕರ

ನಿಮ್ಮ ಆಪ್ತ ಮತ್ತು ತಿಳುವಳಿಕೆಯುಳ್ಳ ಸ್ವಭಾವವು ಇಂದು ಸಂಬಂಧಗಳಲ್ಲಿ ನೆರವಾಗಲಿದೆ. ಆದರೆ, ಸಂಗಾತಿಯೊಂದಿಗೆ ವಾದ ಉಂಟಾಗಬಹುದು. ನಿಮಗೆ ಬೇಕಾದಷ್ಟು ಪ್ರಾಮುಖ್ಯತೆ ಸಿಗುತ್ತಿಲ್ಲ ಎಂಬ ಭಾವನೆ ಮೂಡಬಹುದು. ಸಂವಹನವೇ ಇಂದಿನ ದಿನದ ದೊಡ್ಡ ಕೀಲಿ ಕೈ.

ಕುಂಭ

ದೀರ್ಘಕಾಲದಿಂದ ಸಂಬಂಧದಲ್ಲಿ ಉದ್ವಿಗ್ನತೆ ಇದ್ದರೆ, ಅದು ಇಂದು ಮತ್ತಷ್ಟು ಹೆಚ್ಚಾಗಬಹುದು. ಸರಿ-ತಪ್ಪಿನ ನಡುವಿನ ವ್ಯತ್ಯಾಸ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಇಲ್ಲವಾದರೆ ಪರಿಸ್ಥಿತಿ ಹದಗೆಡಬಹುದು. ಸಂಗಾತಿಯನ್ನು ಸಂತೋಷಪಡಿಸಲು ದುಬಾರಿ ಉಡುಗೊರೆಯನ್ನು ಸಹ ನೀಡಬಹುದು.

ಮೀನ

ಇಂದು ನಿಮ್ಮ ಸಂಬಂಧದ ಮೇಲೆ ನೀವು ಉತ್ತಮ ನಿಯಂತ್ರಣ ಮತ್ತು ತಿಳುವಳಿಕೆಯನ್ನು ಅನುಭವಿಸುವಿರಿ. ಆದರೆ, ಸಂಗಾತಿಯ ಕಠಿಣ ವರ್ತನೆಯು ನಿಮ್ಮನ್ನು ಒಳಗಿನಿಂದ ನೋಯಿಸಬಹುದು. ಅವಿವಾಹಿತರಿಗೆ ಮದುವೆಯ ಮಾತುಕತೆಗಳು ಮುಂದಡಿ ಇಡಬಹುದು. ಪ್ರೀತಿಯಲ್ಲಿ ಮೃದುತ್ವ ಮತ್ತು ತಿಳುವಳಿಕೆಯೇ ದೊಡ್ಡ ಶಸ್ತ್ರ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Love Horoscope January 15: Today’s (Daily) Horoscope for 12 Zodiac Signs

Daily Love Horoscope for January 15 astrology predictions for all 12 zodiac signs including career, health, love and money Boldsky kannada
Story first published: Thursday, January 15, 2026, 6:00 [IST]
X
Desktop Bottom Promotion