Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ರಾಯರ ಕೃಪೆ.. ಯಾವುದೇ ಆತುರದ ನಿರ್ಧಾರಗಳು ಬೇಡ! ಪ್ರೀತಿ-ಪ್ರಣಯದ ಸುದಿನ
ವರ್ಷದ ಮೊದಲ ರಾಯರ ವಾರ.. ಈ ರಾಶಿಯವರಿಗೆ ಪ್ರೀತಿ ಮತ್ತು ಪ್ರಣಯದಿಂದ ತುಂಬಿದ ಸುದಿನ! ಪ್ರೀತಿ ಜೀವನದಲ್ಲಿ ಕೊಂಚ ಒತ್ತಡ ಎದುರಾಗಬಹುದು. ವೃಶ್ಚಿಕ ರಾಶಿಯವರಿಗೆ ಪ್ರೀತಿಯಲ್ಲಿ ಸಣ್ಣಪುಟ್ಟ ಜಗಳಗಳು ಸಂಭವಿಸಬಹುದು. ಮೇಷ ರಾಶಿಯಿಂದ ಮೀನ ರಾಶಿಯವರೆಗೆ, ಎಲ್ಲಾ ರಾಶಿಗಳ ಇಂದಿನ (Today Love Horoscope) ದೈನಂದಿನ ಪ್ರೇಮ ಭವಿಷ್ಯ ಇಲ್ಲಿದೆ.
ಮೇಷ
ಪ್ರೀತಿ ಜೀವನದಲ್ಲಿ ಕೊಂಚ ಒತ್ತಡ ಎದುರಾಗಬಹುದು. ನಿಮ್ಮ ಸಂಗಾತಿಯೊಂದಿಗೆ ಅಭಿಪ್ರಾಯ ಭೇದ ಅಥವಾ ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳುವ ಸಾಧ್ಯತೆ. ತಾಳ್ಮೆಯಿಂದ ಮಾತನಾಡಿದರೆ, ಈ ತಪ್ಪುಗ್ರಹಿಕೆಗಳನ್ನು ನಿವಾರಿಸಬಹುದು. ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಹೃದಯ ಮತ್ತು ಮನಸ್ಸು ಎರಡರಿಂದಲೂ ನಿರ್ಧಾರ ಕೈಗೊಳ್ಳಿ.
ವೃಷಭ
ಇಂದು ಪ್ರೀತಿ ಮತ್ತು ಪ್ರಣಯದಿಂದ ತುಂಬಿದ ದಿನ. ನಿಮ್ಮ ಸಂಗಾತಿಯೊಂದಿಗೆ ಕಳೆಯುವ ಸಮಯವು ನಿಮ್ಮ ಸಂಬಂಧಕ್ಕೆ ಹೊಸ ಚೈತನ್ಯ ಮತ್ತು ಉಲ್ಲಾಸವನ್ನು ತರುತ್ತದೆ. ನೀವು ಪರಸ್ಪರ ಹೆಚ್ಚು ಹತ್ತಿರವಾಗುತ್ತೀರಿ. ಒಂಟಿ ವ್ಯಕ್ತಿಗಳಿಗೆ, ಹಳೆಯ ಸ್ನೇಹಿತರ ಭೇಟಿಯಾಗುವ ಸಂಭವ. ಅದು ಭವಿಷ್ಯದಲ್ಲಿ ಭಾವನಾತ್ಮಕ ಸಂಬಂಧವಾಗಿ ಬೆಳೆಯಬಹುದು.

ಮಿಥುನ
ಇಂದು ಮಿಶ್ರ ಫಲಿತಾಂಶಗಳನ್ನು ನೀಡಲಿದೆ. ಭಾವಾನತ್ಮಕವಾಗಿ ನೀವು ಸ್ವಲ್ಪ ಸೂಕ್ಷ್ಮವಾಗಿರಬಹುದು. ಇದರಿಂದ ಸಣ್ಣಪುಟ್ಟ ತಪ್ಪುಗ್ರಹಿಕೆಗಳು ಉಂಟಾಗುವ ಸಾಧ್ಯತೆ. ಇಂತಹ ಸಂದರ್ಭದಲ್ಲಿ, ಮುಕ್ತವಾಗಿ ಮತ್ತು ಪ್ರಾಮಾಣಿಕವಾಗಿ ಸಂಭಾಷಿಸುವುದು ಅತ್ಯಗತ್ಯ. ಸಿಂಗಲ್ಸ್‌ಗೆ ಹಿಂದಿನ ಅನುಭವಗಳಿಂದ ಪಾಠ ಕಲಿತು ಮುನ್ನಡೆಯಲು ಇದು ಸೂಕ್ತ ಸಮಯ.
ಕರ್ಕ
ಪ್ರೇಮ ಸಂಬಂಧಗಳಲ್ಲಿ ಆಳ ಮತ್ತು ಭಾವನಾತ್ಮಕ ಬಾಂಧವ್ಯ ಹೆಚ್ಚಾಗುತ್ತದೆ. ನಿಮ್ಮ ಸಂಗಾತಿಯೊಂದಿಗೆ ಹೃದಯದ ಮಾತುಗಳನ್ನು ಹಂಚಿಕೊಳ್ಳಲು ನಿಮಗೆ ಸಾಧ್ಯವಾಗಲಿದೆ. ಇದು ನಿಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ. ಸಿಂಗಲ್ಸ್ ಹಳೆಯ ಸಂಬಂಧಗಳ ಬಗ್ಗೆ ಯೋಚಿಸಬಹುದು. ಮನಸ್ಸು ಸ್ವಲ್ಪ ಭಾವುಕವಾಗಬಹುದು.
ಸಿಂಹ
ನೀವು ಮತ್ತು ನಿಮ್ಮ ಸಂಗಾತಿಯ ನಡುವೆ ಉತ್ತಮ ಸಂವಹನ ಇರುತ್ತದೆ. ಮುಕ್ತವಾಗಿ ಮಾತನಾಡುವುದರಿಂದ ನಿಮ್ಮ ಸಂಬಂಧದಲ್ಲಿ ವಿಶ್ವಾಸ, ಗೌರವ ಮತ್ತು ತಿಳುವಳಿಕೆ ಹೆಚ್ಚಾಗುತ್ತದೆ. ನೀವು ಪರಸ್ಪರರ ಭಾವನೆಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಕನ್ಯಾ
ಈ ದಿನ ಸ್ವಲ್ಪ ಒತ್ತಡದಿಂದ ಕೂಡಿರಬಹುದು. ವಿಶೇಷವಾಗಿ, ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ಉದ್ಭವಿಸಿದಾಗ. ಸಣ್ಣ ವಿಷಯಗಳನ್ನು ದೊಡ್ಡದು ಮಾಡುವುದನ್ನು ತಪ್ಪಿಸಿ. ಶಾಂತವಾಗಿ ಕುಳಿತು ಚರ್ಚಿಸಿದರೆ ಸಮಸ್ಯೆ ಬಗೆಹರಿಯಬಹುದು. ಸಿಂಗಲ್ಸ್‌ಗೆ ಹೃದಯದ ಮಾತು ಕೇಳಿ ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಇದು ಸೂಕ್ತ ದಿನ.
ತುಲಾ
ಜೀವನದಲ್ಲಿ ಸಂತೋಷ ಮತ್ತು ಸ್ಥಿರತೆ. ಸಂಬಂಧದಲ್ಲಿ ಸಮರ್ಪಣೆ ಮತ್ತು ವಿಶ್ವಾಸದ ಭಾವನೆ ಬಲಗೊಳ್ಳುತ್ತದೆ. ನಿಮ್ಮ ಸಂಗಾತಿಯೊಂದಿಗೆ ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚಿಸಬಹುದು. ಸಿಂಗಲ್ಸ್‌ಗೆ ಹೊಸ ವ್ಯಕ್ತಿಯ ಮೇಲೆ ಆಕರ್ಷಣೆ ಉಂಟಾಗಬಹುದು.
ವೃಶ್ಚಿಕ
ಪ್ರೀತಿಯಲ್ಲಿ ಸಣ್ಣಪುಟ್ಟ ಜಗಳಗಳು ಸಂಭವಿಸಬಹುದು. ಆದರೆ, ನಿಮ್ಮ ತಿಳುವಳಿಕೆಯಿಂದ ಪರಿಸ್ಥಿತಿಯನ್ನು ನಿಭಾಯಿಸುವಿರಿ. ನಿಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವುದು ಮುಖ್ಯ. ಇದು ಸಂಬಂಧದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಮತ್ತು ತಪ್ಪುಗ್ರಹಿಕೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಧನು
ಸಂಬಂಧದಲ್ಲಿ ಇಂದು ಹೊಸ ಚೈತನ್ಯ ಮತ್ತು ಉತ್ಸಾಹ ಕಾಣಬಹುದು. ನೀವು ಮತ್ತು ನಿಮ್ಮ ಸಂಗಾತಿ ಪರಸ್ಪರರನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳುವಿರಿ. ಸಿಂಗಲ್ಸ್‌ಗಳ ಜೀವನದಲ್ಲಿ ವಿಶೇಷ ವ್ಯಕ್ತಿಯ ಆಗಮನವಾಗಬಹುದು. ಇದರಿಂದ ಮನಸ್ಸಿನಲ್ಲಿ ಹೊಸ ಭಾವನೆಗಳು ಅರಳುತ್ತವೆ.
ಮಕರ
ಇಂದು ನಿಮ್ಮ ಸಂಗಾತಿಯೊಂದಿಗೆ ಕೆಲವು ಒತ್ತಡದ ಸಂದರ್ಭಗಳು ಉಂಟಾಗಬಹುದು. ಆದರೆ, ನೀವು ಪರಸ್ಪರರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಗೌರವಿಸಲು ಪ್ರಯತ್ನಿಸಿದರೆ, ಸಂಬಂಧದಲ್ಲಿ ಮತ್ತೆ ಸಮತೋಲನ ಮರಳುತ್ತದೆ. ಸಿಂಗಲ್ಸ್‌ಗೆ ಹೊಸ ಸಂಬಂಧವನ್ನು ಪ್ರಾರಂಭಿಸುವ ಮೊದಲು ಆತ್ಮಾವಲೋಕನ ಮಾಡುವುದು ಅವಶ್ಯಕ.
ಕುಂಭ
ಇಂದು ರೋಮಾಂಚನ ಮತ್ತು ಸಂತೋಷದಿಂದ ತುಂಬಿದ ದಿನ. ನಿಮ್ಮ ಸಂಗಾತಿ ನಿಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳುವರು, ಇದರಿಂದ ನೀವು ಭಾವನಾತ್ಮಕವಾಗಿ ಸುರಕ್ಷಿತರಾಗಿ ಬಾವಿಸುವಿರಿ. ಸಿಂಗಲ್ ಇರುವವರಿಗೆ ಹಳೆಯ ಸ್ನೇಹಿತರೊಂದಿಗೆ ಸನಿಹ ಹೆಚ್ಚಾಗಬಹುದು. ಇದು ಭವಿಷ್ಯದಲ್ಲಿ ಸಂಬಂಧವಾಗಿ ರೂಪುಗೊಳ್ಳಬಹುದು.
ಮೀನ
ಪ್ರೀತಿ ಜೀವನದಲ್ಲಿ ಇಂದು ಕೆಲವು ಗೊಂದಲ ಇರಬಹುದು. ನೀವು ಸಂಬಂಧದಲ್ಲಿದ್ದರೆ, ಕೆಲವು ವಿಷಯಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗಬಹುದು. ಸಿಂಗಲ್ಸ್ ಸರಿಯಾದ ಸಮಯವನ್ನು ನಿರೀಕ್ಷಿಸಿ ತಮ್ಮ ಹೃದಯದ ಮಾತುಗಳನ್ನು ವಿಶೇಷ ವ್ಯಕ್ತಿಯೊಂದಿಗೆ ಹಂಚಿಕೊಳ್ಳಬಹುದು. ಇದರಿಂದ ಸಕಾರಾತ್ಮಕ ಫಲಿತಾಂಶಗಳು ಸಿಗುವ ಸಾಧ್ಯತೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications