ಶನಿ ದಯೆ.. ಜೀವನದಲ್ಲಿ ಸಂತೋಷವೇ ತುಂಬಿರುತ್ತೆ! ಸಂಗಾತಿಯಿಂದ ಲಾಭ

ಶನಿವಾರದ ಶುಭಫಲ.. ಈ ರಾಶಿಯವರ ಪ್ರೇಮ ಜೀವನದಲ್ಲಿ ಸಂತೋಷವೇ ತುಂಬಿರುತ್ತದೆ. ವೃಷಭ ಮತ್ತು ಮೀನ ರಾಶಿಯವರಿಗೆ ವಿಶೇಷ ವ್ಯಕ್ತಿಯ ಭೇಟಿಯ ಯೋಗ. ತುಲಾ ರಾಶಿಯವರು ಮನಸ್ಸಿನ ಮಾತನ್ನು ಹೇಳಲು ಸೂಕ್ತ ಸಮಯ. ಮೀನ ರಾಶಿಯ ಸಿಂಗಲ್ಸ್‌ಗೆ ಅತ್ಯಂತ ಶುಭ ದಿನವಾಗಿದೆ. ಮೇಷ ರಾಶಿಯಿಂದ ಮೀನ ರಾಶಿಯವರೆಗೆ, ಎಲ್ಲಾ ರಾಶಿಗಳ ಇಂದಿನ (Today Love Horoscope) ದೈನಂದಿನ ಪ್ರೇಮ ಭವಿಷ್ಯ ಇಲ್ಲಿದೆ.

ಮೇಷ ರಾಶಿ

ಇಂದಿನ ದಿನ ಪ್ರೇಮ ಜೀವನದಲ್ಲಿ ಸ್ಮರಣೀಯವಾಗಬಹುದು. ನಿಮ್ಮ ಜೀವನಸಂಗಾತಿ ಅಥವಾ ಪ್ರೀಯಕರರೊಂದಿಗೆ ಪ್ರವಾಸದ ಯೋಜನೆ ರೂಪಿಸಲಾಗುವುದು. ವಿಶೇಷ ವ್ಯಕ್ತಿಯಿಂದ ಉಡುಗೊರೆ ಅಥವಾ ಆಶ್ಚರ್ಯಕರ ಭರ್ಜರಿ ಕಾಣಿಕೆ ದೊರೆಯುವ ಸಾಧ್ಯತೆ ಇದೆ. ನಿಮ್ಮ ಆಪ್ತರೊಂದಿಗೆ ಸುದೀರ್ಘ ಹಾಗೂ ಆಸಕ್ತಿಕರ ಸಂಭಾಷಣೆಯಲ್ಲಿ ತೊಡಗಬಹುದು.

ವೃಷಭ ರಾಶಿ

ಸಿಂಗಲ್ಸ್ ಜೀವನದಲ್ಲಿ ಇಂದು ವಿಶೇಷ ವ್ಯಕ್ತಿಯ ಪ್ರವೇಶ ಆಗಲಿದೆ. ಕುಟುಂಬದಿಂದ ನಿಮ್ಮ ಸಂಬಂಧಕ್ಕೆ ಸಂಪೂರ್ಣ ಬೆಂಬಲ ಸಿಗಲಿದೆ. ವಿವಾಹಿತರು ಮಕ್ಕಳು ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಚಿಂತಿಸಬಹುದು. ಪರಸ್ಪರ ನಂಬಿಕೆ ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುತ್ತದೆ.

Daily Horoscope December 20

ಮಿಥುನ ರಾಶಿ

ಇಂದು ತಮ್ಮ ಸಂಗಾತಿಯೊಂದಿಗೆ ಯಾವುದೇ ಪ್ರಯಾಣ ಅಥವಾ ಹೊಸ ಯೋಜನೆಗೆ ಸಿದ್ಧತೆ ಮಾಡಬಹುದು. ಜೊತೆಯಾಗಿ ಮಾಡುವ ಪ್ರಯತ್ನ ಆರ್ಥಿಕ ಲಾಭ ತರಬಹುದು. ಇಂದು ಸಂಜೆ ರೋಮ್ಯಾಂಟಿಕ್ ಡಿನ್ನರ್ ಡೇಟ್‌ನ ಅವಕಾಶ ಸಿಗಲಿದ್ದು, ಭಾವನಾತ್ಮಕ ಬಾಂಧವ್ಯ ಹೆಚ್ಚಾಗಲಿದೆ.

ಕಟಕ ರಾಶಿ

ಪ್ರೇಮ ಜೀವನ ಇಂದು ಸಕಾರಾತ್ಮಕವಾಗಿರುತ್ತದೆ. ಜೀವನ ಸಂಗಾತಿಯೊಂದಿಗಿನ ಸಂಬಂಧದಲ್ಲಿ ಆಳ ಇನ್ನು ಹೆಚ್ಚಾಗಲಿದೆ. ಸಂಗಾತಿಯೊಂದಿಗೆ ಕಳೆಯುವ ಸಮಯವು ನಿಮಗೆ ಮಾನಸಿಕ ತೃಪ್ತಿ ನೀಡುತ್ತದೆ. ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳುವಾಗ ಆತುರ ಪಡಬೇಡಿ.

ಸಿಂಹ ರಾಶಿ

ನಿಮ್ಮ ಸಂಬಂಧಗಳನ್ನು ನಿಭಾಯಿಸಲು ಇಂದು ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬೇಕಾಗಬಹುದು. ಹಳೆಯ ತಪ್ಪುಗಳನ್ನು ಮರೆತು ಮುನ್ನಡೆಯುವುದು ಉತ್ತಮ. ಕುಟುಂಬ ಸದಸ್ಯರು ಪರಸ್ಪರ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ನೆರವಾಗಬಹುದು. ಸಿಂಗಲ್ಸ್ ಇಂದು ವಿಶೇಷ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆ ಇದೆ.

ಕನ್ಯಾ ರಾಶಿ

ಇಂದು ಪ್ರೇಮ ಮತ್ತು ವೈವಾಹಿಕ ಜೀವನದಲ್ಲಿ ಸ್ಥಿರತೆ ಇರುತ್ತದೆ. ನಿಮ್ಮ ಸಂಬಂಧವನ್ನು ಗಂಭೀರವಾಗಿ ಪರಿಗಣಿಸುವ ಮನಸ್ಥಿತಿಯಲ್ಲಿರುತ್ತೀರಿ. ನಿಮ್ಮ ಆಪ್ತರ ಜೊತೆಗಿನ ಅಂತರ ಕಮ್ಮಿಯಾಗಿ ಹೊಸ ಸಂಬಂಧಕ್ಕೆ ನಾಂದಿ ಹಾಡಬಹುದು.

ತುಲಾ ರಾಶಿ

ನಿಮಗೆ ಇಂದು ಮನಸ್ಸಿನ ಮಾತನ್ನು ಹೇಳಲು ಸೂಕ್ತ ಸಮಯ. ಸಂಬಂಧಗಳಲ್ಲಿ ಪಾರದರ್ಶಕತೆ ಮತ್ತು ನಂಬಿಕೆ ಉಳಿಸಿಕೊಳ್ಳಿ. ಜೀವನ ಸಂಗಾತಿಯ ಸಹಾಯದಿಂದ ಆರ್ಥಿಕ ಅಥವಾ ಕೌಟುಂಬಿಕ ಒತ್ತಡದಿಂದ ಮುಕ್ತಿ ಸಿಗಬಹುದು. ನಿಮ್ಮ ಸಂಬಂಧಗಳಲ್ಲಿ ಧನಾತ್ಮಕ ಬದಲಾವಣೆಗಳು ಕಾಣಲಿವೆ.

ವೃಶ್ಚಿಕ ರಾಶಿ

ನಿಮಗೆ ಹಿಂದೆ ಲವ್‌ನಲ್ಲಿ (ಪ್ರೇಮ) ನಿರಾಶೆಯಾಗಿದ್ದರೆ, ಇಂದು ನಿಮ್ಮ ಜೀವನದಲ್ಲಿ ಹೊಸ ತಿರುವು ಪಡೆಯಬಹುದು. ಕುಟುಂಬದ ಸಮ್ಮತಿಯೊಂದಿಗೆ ಒಂದು ಸಂಬಂಧ ಪ್ರಾರಂಭವಾಗುವ ಸಾಧ್ಯತೆ ಇದೆ. ಇಂದು ರೂಪಿತವಾದ ಸಂಬಂಧವು ದೀರ್ಘಕಾಲದವರೆಗೆ ಉಳಿಯಬಹುದು.

ಧನು ರಾಶಿ

ನಿಮಗೆ ಇಂದು ಸಂಗಾತಿಯೊಂದಿಗೆ ಭಾವನಾತ್ಮಕ ಕ್ಷಣಗಳನ್ನು ಕಳೆಯಲು ಅನೇಕ ವಿಭಿನ್ನ ಅವಕಾಶಗಳು ಸಿಗುತ್ತವೆ. ಪರಸ್ಪರ ಪ್ರೀತಿ ಮತ್ತು ಅನ್ಯೋನ್ಯತೆ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಒಟ್ಟಾರೆ, ನಿಮ್ಮ ಪ್ರೇಮ ಜೀವನ ಸುಖಮಯವಾಗಿರುತ್ತದೆ.

ಮಕರ ರಾಶಿ

ನಿಮ್ಮ ಪ್ರೇಮ ಸಂಬಂಧಗಳಲ್ಲಿ ಇಂದು ಹೊಸ ಉತ್ಸಾಹ ಕಂಡುಬರಲಿದೆ. ಸಂಗಾತಿಯ ಮೇಲೆ ಅಧಿಕಾರ ಚಲಾಯಿಸುವುದನ್ನು ತಪ್ಪಿಸಿ ಮತ್ತು ನಂಬಿಕೆಯನ್ನು ಕಾಪಾಡಿಕೊಳ್ಳಿ. ಸಿಂಗಲ್ಸ್ ತಮ್ಮ ಇಷ್ಟದ ವ್ಯಕ್ತಿಯೊಂದಿಗೆ ಇನ್ನಷ್ಟು ನಿಕಟವಾಗಲು ಸಾಧ್ಯವಿದೆ.

ಕುಂಭ ರಾಶಿ

ನೀವು ಸಂಬಂಧಗಳನ್ನು ಉತ್ತಮಗೊಳಿಸಲು ಇಂದು ಹೆಚ್ಚುವರಿ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಸಂಗಾತಿಯ ವಿಶೇಷ ದಿನವನ್ನು ಆಚರಿಸಲು ಸಹ ಯೋಜಿಸಬಹುದು. ಪ್ರಾಮಾಣಿಕತೆ ಮತ್ತು ತಿಳುವಳಿಕೆಯಿಂದ ಸಂಬಂಧಗಳು ಬಲಗೊಳ್ಳುತ್ತವೆ.

ಮೀನ ರಾಶಿ

ಸಿಂಗಲ್ಸ್ ಜನರಿಗೆ ಇಂದು ಅತ್ಯಂತ ಶುಭ ದಿನವಾಗಿದೆ. ಬಯಸಿದ ಸಂಗಾತಿ ದೊರೆಯುವ ಸ್ಪಷ್ಟ ಸೂಚನೆಗಳಿವೆ. ವಿವಾಹಿತರು ತಮ್ಮ ಸಂಗಾತಿಯ ಭಾವನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ನಿಮ್ಮ ಪ್ರೇಮ ಜೀವನದಲ್ಲಿ ಸಂತೋಷವೇ ತುಂಬಿರುತ್ತದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Love Horoscope December 20: Today’s (Daily) Horoscope for 12 Zodiac Signs

Daily Love Horoscope for December 20 astrology predictions for all 12 zodiac signs including career, health, love and money Boldsky kannada
Story first published: Saturday, December 20, 2025, 6:00 [IST]
X
Desktop Bottom Promotion