ಇವರ ಸ್ನೇಹವೇ ಪ್ರೀತಿಯಾಗುತ್ತೆ! ಇವರಿಗೆ ಲವರ್ ಜೊತೆ ಡೇಟ್‌; ಯಾರಿಗೆಲ್ಲಾ ಸಮಸ್ಯೆ?

ಈ ರಾಶಿಯವರು ಲವರ್ ಜೊತೆ ಸಣ್ಣ ಪ್ರಯಾಣ ಅಥವಾ ಡೇಟ್‌ ಪ್ಲಾನ್ ಮಾಡಬಹುದು. ಈ ರಾಶಿಯ ಸಿಂಗಲ್ಸ್‌ಗೆ ಸ್ನೇಹವು ಪ್ರೀತಿಯಾಗಿ ಬದಲಾಗುವ ಸೂಚನೆ ಇದೆ. ತುಲಾ ರಾಶಿಯವರು ತನ್ನ ಲವರ್‌ಗೆ ರೊಮ್ಯಾಂಟಿಕ್ ಸರ್ಪ್ರೈಸ್ ನೀಡಲು ಇದು ಉತ್ತಮ ಸಮಯ. ಮೇಷ ರಾಶಿಯಿಂದ ಮೀನ ರಾಶಿಯವರೆಗೆ, ಎಲ್ಲಾ ರಾಶಿಗಳ ಇಂದಿನ (Love Horoscope 17 August, 2025) ಪ್ರೇಮ ಭವಿಷ್ಯ ಇಲ್ಲಿದೆ.

ಮೇಷ ರಾಶಿ

ಇಂದು ನಿಮ್ಮ ಪ್ರೇಮ ಜೀವನದಲ್ಲಿ ಸಕಾರಾತ್ಮಕ ಅಥವಾ ಹಸನ್ಮುಖ ಕ್ಷಣಗಳು ಬರಬಹುದು. ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡುವುದರಿಂದ ಸಂಬಂಧ ಗಾಢವಾಗುತ್ತದೆ. ಸಿಂಗಲ್ಸ್ ಆಗಿದ್ದರೆ,ಹಳೆಯ ಸ್ನೇಹಿತನೊಂದಿಗೆ ಭಾವನಾತ್ಮಕ ಬಾಂಧವ್ಯವೂ ಬೆಳೆದು ಬರಬಹುದು. ಆತ್ಮವಿಶ್ವಾಸ ಹೆಚ್ಚುತ್ತದೆ.

ವೃಷಭ ರಾಶಿ

ನಿಮ್ಮ ಸಂಬಂಧ ಸ್ಥಿರತೆ ಬರಲಿದೆ. ಸಂಗಾತಿಯೊಂದಿಗೆ ಪರಸ್ಪರ ತಿಳುವಳಿಕೆ ಬಲಗೊಳ್ಳಲಿದೆ. ಹಳೆಯ ಮನಸ್ತಾಪಗಳು ಕೊನೆಗೊಳ್ಳುವ ಸಾಧ್ಯತೆ ಇದೆ. ವಿವಾಹಿತರ ಜೀವನದಲ್ಲಿ ಹೊಸ ಶಕ್ತಿ ಬರಬಹುದು. ಸಿಂಗಲ್ಸ್ ಗಂಭೀರ ಸಂಬಂಧದ ಕಡೆಗೆ ಹೆಜ್ಜೆ ಹಾಕಬಹುದು.

17 june horoscope

ಮಿಥುನ ರಾಶಿ

ಇಂದು ಸ್ವಲ್ಪ ಭಾವನಾತ್ಮಕ ಏರಿಳಿತಗಳಿಂದ ಕೂಡಿರಬಹುದು. ನಿಮ್ಮ ಸಂಗಾತಿಯ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಾಧ್ಯವಾಗದಿರಬಹುದು. ಸಂವಹನದ ಕೊರತೆ ಸಂಬಂಧದಲ್ಲಿ ಅಂತರ ತರಬಹುದು. ಆದ್ದರಿಂದ, ಮಾತುಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ. ಸಂಯಮ ಮತ್ತು ಬುದ್ಧಿವಂತಿಕೆಯಿಂದ ವರ್ತಿಸಿ.

ಕಟಕ ರಾಶಿ

ನಿಮ್ಮ ಮನಸ್ಸು ಭಾವನೆಗಳಿಂದ ತುಂಬಿ ಹೋಗುತ್ತದೆ ಮತ್ತು ಆಳವಾದ ಸಂಪರ್ಕವನ್ನು ಬಯಸುತ್ತದೆ. ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಲು ಅವಕಾಶ ಸಿಗುತ್ತದೆ. ಸಿಂಗಲ್‌ಗಳಿಗೆ ಹೊಸ ವ್ಯಕ್ತಿಯೊಂದಿಗೆ ಭಾವನಾತ್ಮಕ ಬಾಂಧವ್ಯ ಬೆಳೆದು ಬರಬಹುದು.

ಸಿಂಹ ರಾಶಿ

ಇಂದು ನಿಮ್ಮ ಆಕರ್ಷಣೆ ಉತ್ತುಂಗದಲ್ಲಿರುತ್ತದೆ. ನೀವು ಇಷ್ಟಪಡುವವರಿದ್ದರೆ, ನಿಮ್ಮ ಮನಸ್ಸಿನ ಮಾತು ಹೇಳಲು ಇದು ಉತ್ತಮ ಸಮಯ. ಸಂಗಾತಿಯೊಂದಿಗೆ ರೊಮ್ಯಾಂಟಿಕ್ ಸಮಯ ಕಳೆಯುವ ಅವಕಾಶ ಸಿಗಲಿದೆ. ಸಂಬಂಧದಲ್ಲಿ ಉತ್ಸಾಹ ಹೆಚ್ಚಲಿದೆ.

ಕನ್ಯಾ ರಾಶಿ

ಇಂದು ನಿಮ್ಮ ಪ್ರೇಮ ಸಂಬಂಧಗಳು ಇನ್ನಷ್ಟು ಬಲವಾಗುತ್ತವೆ. ನೀವು ಮತ್ತು ನಿಮ್ಮ ಸಂಗಾತಿ ಪರಸ್ಪರ ನಂಬಿಕೆ ಹೆಚ್ಚುತ್ತದೆ. ಭವಿಷ್ಯದ ಯೋಜನೆಗಳತ್ತ ಒಟ್ಟಾಗಿ ಹೆಜ್ಜೆ ಇಡುವ ಸಮಯ.

ತುಲಾ ರಾಶಿ

ನಿಮ್ಮ ಸಂಬಂಧದಲ್ಲಿ ಹೊಂದಾಣಿಕೆ, ಸಾಮರಸ್ಯ ಹೆಚ್ಚುತ್ತದೆ. ಇಂದು ನಿಮ್ಮ ಭಾವನೆಗಳನ್ನು ಉತ್ತಮವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ರೊಮ್ಯಾಂಟಿಕ್ ಸರ್ಪ್ರೈಸ್ ನೀಡಲು ಇದು ಉತ್ತಮ ಸಮಯ. ಸಂಬಂಧಗಳನ್ನು ಮುಂದುವರಿಸಲು ಮತ್ತು ಆಳಕ್ಕೆ ತೆಗೆದುಕೊಂಡು ಹೋಗಲು ಇದು ಸೂಕ್ತ ದಿನ.

ವೃಶ್ಚಿಕ ರಾಶಿ

ನಿಮ್ಮ ಭಾವನೆಗಳು ತೀವ್ರವಾಗಿರುತ್ತವೆ. ಸಂಗಾತಿಯೊಂದಿಗೆ ಹೆಚ್ಚು ಒಡನಾಟ ಹೊಂದಿದರೂ, ಸಣ್ಣ ವಿಷಯಗಳಲ್ಲಿ ಜಗಳ ಸಾಧ್ಯತೆ ಇದೆ. ನಿಮ್ಮ ಹೃದಯದ ಮಾತು ಹೇಳಿ. ಆದರೆ ಸಂಯಮದಿಂದ ಇರಬೇಕು. ಸಿಂಗಲ್‌ಗಳಿಗೆ ರಹಸ್ಯಮಯ ಆಕರ್ಷಣೆ ಎದುರಾಗಬಹುದು.

ಧನು ರಾಶಿ

ಇಂದು ಪ್ರಣಯದಿಂದ ಕೂಡಿರುವ ದಿನ. ಸಂಗಾತಿಯೊಂದಿಗೆ ಸಣ್ಣ ಪ್ರಯಾಣ ಅಥವಾ ಡೇಟ್‌ ಪ್ಲಾನ್ ಮಾಡಬಹುದು. ಒಟ್ಟಾಗಿ ಕಳೆದ ಸಮಯ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಸಿಂಗಲ್ಸ್ ಆಗಿದ್ದರೆ, ಹೊಸ ಸಂಪರ್ಕದ ಸೂಚನೆ ಇದೆ.

ಮಕರ ರಾಶಿ

ನಿಮ್ಮ ಸಂಬಂಧದ ಬಗ್ಗೆ ಗಂಭೀರ ದೃಷ್ಟಿಕೋನ ಹೊಂದಿರುತ್ತೀರಿ. ಹಳೆಯ ಅಸಮಾಧಾನಗಳನ್ನು ಮರೆತು, ಸಂಬಂಧವನ್ನು ಪುನಃ ಬಲಪಡಿಸಲು ಇದು ಉತ್ತಮ ಸಮಯ. ನೀವು ಸಿಂಗಲ್ ಆಗಿದ್ದರೆ, ನಿಮ್ಮ ಭವಿಷ್ಯಕ್ಕೆ ಸೂಕ್ತವಾದ ವ್ಯಕ್ತಿ ಸಿಗಬಹುದು.

ಕುಂಭ ರಾಶಿ

ನಿಮ್ಮ ರೊಮ್ಯಾಂಟಿಕ್ ಜೀವನ ಸಮತೋಲಿತವಾಗಿರುತ್ತದೆ. ಹೊಸ ಸಂಬಂಧದ ಆರಂಭ ಅಥವಾ ಹಳೆಯ ಸಂಬಂಧದಲ್ಲಿ ಸುಧಾರಣೆ ಕಾಣುವ ಸಮಯ. ಸಂಗಾತಿಯೊಂದಿಗೆ ಆಲೋಚನೆಗಳಲ್ಲಿ ಸಮಾನತೆ ಸಂಬಂಧವನ್ನು ಬಲಪಡಿಸುತ್ತದೆ. ಸಿಂಗಲ್ಸ್‌ಗೆ ಸ್ನೇಹವು ಪ್ರೀತಿಯಾಗಿ ಬದಲಾಗುವ ಸೂಚನೆ.

ಮೀನ ರಾಶಿ

ಇಂದು ನೀವು ಭಾವನಾತ್ಮಕವಾಗಿ ಅತ್ಯಂತ ಸೂಕ್ಷ್ಮವಾಗಿರುತ್ತೀರಿ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಸಂಪರ್ಕ ಆಳವಾಗಿರುತ್ತದೆ ಮತ್ತು ನೀವು ಅವರ ಪ್ರತಿಯೊಂದು ಮಾತಿನತ್ತ ಗಮನ ಹರಿಸುವಿರಿ. ಸಂಬಂಧದಲ್ಲಿ ಯಾವುದೇ ಗೊಂದಲಗಳಿದ್ದರೆ, ಅವುಗಳನ್ನು ಬಗೆಹರಿಸಲು ಇಂದು ಉತ್ತಮ ದಿನ. ಸಿಂಗಲ್‌ಗಳಿಗೆ ಹೊಸ ಭಾವನಾತ್ಮಕ ಸಂಬಂಧ ಸಿಗಬಹುದು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Love Horoscope 17 August, 2025: Sagittarius zodiac sign can plan a date with their lover

Love Horoscope 17 August, 2025: Sagittarius zodiac sign can plan a date with their lover
Story first published: Sunday, August 17, 2025, 7:00 [IST]
X
Desktop Bottom Promotion