ಶುಭ ಶುಕ್ರವಾರ.. ಇವರಿಗೆ ಲವರ್‌ನಿಂದ ಗಿಫ್ಟ್ ಬ್ಲಾಸ್ಟ್! ಈ ರಾಶಿಗೆ ಕ್ರಶ್ ಜೊತೆ ಸ್ಪೆಷಲ್ ಮೀಟ್

Love Horoscope 15 August, 2025: ಈ ರಾಶಿಯವರು ಸಂಗಾತಿಯಿಂದ ಉಡುಗೊರೆ ಅಥವಾ ಸರ್ಪ್ರೈಸ್ ಪಡೆಯಬಹುದು. ಸಿಂಗಲ್ ಆಗಿರುವ ಈ ರಾಶಿಯವರಿಗೆ ಜೀವನ ಸಂಗಾತಿ ಸಿಗಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ತುಲಾ ರಾಶಿಯವರು ತಮ್ಮ ಸಂಗಾತಿಯೊಂದಿಗೆ ರೋಮ್ಯಾಂಟಿಕ್ ವಿಷಯಗಳಲ್ಲಿ ಜಾಗರೂಕರಾಗಿರಬೇಕು. ಮೇಷ ರಾಶಿಯಿಂದ ಮೀನ ರಾಶಿಯವರೆಗೆ, ಎಲ್ಲಾ ರಾಶಿಗಳ ಇಂದಿನ (ಆಗಸ್ಟ್ 15) ಪ್ರೇಮ ಭವಿಷ್ಯ ಇಲ್ಲಿದೆ.

ಮೇಷ ರಾಶಿ

ಮೇಷ ರಾಶಿಯವರಿಗೆ ತಮ್ಮ ಪ್ರೇಮ ಜೀವನದಲ್ಲಿನ ಸಮಸ್ಯೆಗಳು ಬಗೆಹರಿಯಲಿವೆ. ನೀವು ಮತ್ತು ನಿಮ್ಮ ಸಂಗಾತಿ ಹಳೆಯ ವಿಷಯಗಳನ್ನು ಮರೆತು ಮುನ್ನಡೆಯಲು ಪ್ರಯತ್ನಿಸುವಿರಿ. ಈ ಸಮಯದಲ್ಲಿ ನಿಮ್ಮ ಕುಟುಂಬದಿಂದಲೂ ಬೆಂಬಲ ಸಿಗಬಹುದು.

ವೃಷಭ ರಾಶಿ

ವೃಷಭ ರಾಶಿಯವರು ತಮ್ಮ ಸಂಗಾತಿಯ ಜೊತೆಗೆ ವಿವಾಹವಾಗಲು ಯೋಜಿಸಬಹುದು. ನಿಮಗೆ ಸ್ನೇಹಿತರು ಮತ್ತು ಕುಟುಂಬದ ಸಂಪೂರ್ಣ ಬೆಂಬಲ ದೊರೆಯಲಿದೆ. ನೀವು ಸಿಂಗಲ್ ಆಗಿದ್ದರೆ, ಹೊಸ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶ ಸಿಗಬಹುದು.

today love horoscope 30 july

ಮಿಥುನ ರಾಶಿ

ಈ ದಿನ ಮಿಥುನ ರಾಶಿಯ ಸಿಂಗಲ್ ಆಗಿರುವವರಿಗೆ ವಿಶೇಷವಾಗಿರಲಿದೆ. ನಿಮ್ಮ ಜೀವನದಲ್ಲಿ ವಿಶೇಷ ವ್ಯಕ್ತಿಯ ಆಗಮನವಾಗಲಿದೆ. ಇದರಿಂದ ನೀವು ಭಾವನಾತ್ಮಕವಾಗಿ ಬಲಶಾಲಿಯಾಗುತ್ತೀರಿ. ನಿಮ್ಮ ಕ್ರಶ್ ಅನ್ನು ಭೇಟಿಯಾಗುವ ಅವಕಾಶವಿದೆ. ಜೊತೆಗೆ ಪಾರ್ಟಿಗೆ ಹೋಗಬಹುದು.

ಕರ್ಕಾಟಕ ರಾಶಿ

ಕಟಕ ರಾಶಿಯವ ಒಂಟಿ ಜನರು ಹಳೆಯ ಸ್ನೇಹಿತರನ್ನು ಭೇಟಿಯಾಗಬಹುದು. ಸಂಬಂಧವನ್ನು ನಿಧಾನವಾಗಿ ಮುಂದುವರಿಸುವುದು ಉತ್ತಮ. ವಿವಾಹಿತರಿಗೆ, ದಾಂಪತ್ಯ ಜೀವನದಲ್ಲಿನ ಕಲಹಗಳು ಅಥವಾ ಮನಸ್ತಾಪಗಳು ಬಗೆಹರಿಯಲಿವೆ. ಸಂಬಂಧದಲ್ಲಿ ಸತ್ಯ ಮತ್ತು ಪ್ರಾಮಾಣಿಕತೆ ಬಹಳ ಮುಖ್ಯ ಎಂದು ನೆನಪಿಡಿ.

ಸಿಂಹ ರಾಶಿ

ಸಿಂಹ ರಾಶಿಯವ ವಿವಾಹಿತರ ದಾಂಪತ್ಯ ಜೀವನದಲ್ಲಿ ಸಂಬಂಧಗಳು ಗಟ್ಟಿಯಾಗಲಿದೆ. ನೀವು ನಿಮ್ಮ ಸಂಗಾತಿಯೊಂದಿಗೆ ಪ್ರಯಾಣಕ್ಕೆ ಹೋಗುತ್ತೀರಿ. ಅಲ್ಲಿ ನೀವು ಉತ್ತಮ ಸಮಯವನ್ನು ಒಟ್ಟಾಗಿ ಕಳೆಯುತ್ತೀರಿ. ಕುಟುಂಬದಲ್ಲಿ ಹೊಸ ವ್ಯಕ್ತಿಯ ಅಥವಾ ಸದಸ್ಯರ ಆಗಮನದಿಂದ ಮನೆಯಲ್ಲಿ ಸಂತೋಷ ನೆಲೆಸುತ್ತದೆ.

ಕನ್ಯಾ ರಾಶಿ

ಕನ್ಯಾ ರಾಶಿಯವರು ಇಂದು ಹಿಂದಿನ ವಿಷಯಗಳ ಬಗ್ಗೆ ಚಿಂತಿತರಾಗಿರುತ್ತೀರಿ. ಮನಸ್ಸು ಕಲಕುವ ದಿನ. ನಿಮ್ಮ ಮತ್ತು ಸಂಗಾತಿಯ ನಡುವೆ ಸಣ್ಣ ವಿಷಯಗಳು ವೈಷಮ್ಯಕ್ಕೆ ಕಾರಣವಾಗಬಹುದು. ಪ್ರೀತಿಯ ಸಂಬಂಧದಲ್ಲಿ ಸಾಮರಸ್ಯ ಕಾಪಾಡಿಕೊಳ್ಳಿ.

ತುಲಾ ರಾಶಿ

ತುಲಾ ರಾಶಿಯವರು ತಮ್ಮ ಸಂಗಾತಿಯೊಂದಿಗೆ ಭವಿಷ್ಯದ ಯೋಜನೆಗಳನ್ನು ಒಟ್ಟಾಗಿ ರೂಪಿಸುವುದು ಲಾಭದಾಯಕವಾಗಿದೆ. ಆದರೆ, ರೋಮ್ಯಾಂಟಿಕ್ ವಿಷಯಗಳಲ್ಲಿ ಜಾಗರೂಕರಾಗಿರಬೇಕು. ನೀವು ಇಬ್ಬರೂ ಒಟ್ಟಾಗಿ ವ್ಯಾಪಾರವನ್ನು ಪ್ರಾರಂಭಿಸಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ತಮ್ಮ ಮನಸ್ಸಿನಲ್ಲಿರುವ ವಿಷಯ ಅಥವಾ ಭಾವನೆಗಳನ್ನು ಹೇಳಲು ಇದು ಸರಿಯಾದ ಸಮಯ. ಫಲಿತಾಂಶಗಳು ನಿಮ್ಮ ಪರವಾಗಿರುತ್ತವೆ. ನೀವು ನಿಮ್ಮ ಸಂಗಾತಿಯೊಂದಿಗೆ ಪ್ರೀತಿಯ ಮಾತುಕತೆ ನಡೆಸುತ್ತೀರಿ. ತಪ್ಪು ತಿಳುವಳಿಕೆಗಳನ್ನು ದೂರ ಮಾಡಲು ಹಲವು ಅವಕಾಶಗಳು ಸಿಗಲಿವೆ ಮತ್ತು ಸಂಬಂಧವು ಮತ್ತಷ್ಟು ಆಳವಾಗಲಿದೆ.

ಧನು ರಾಶಿ

ಧನು ರಾಶಿಯವರು ಹೊಸ ಸಂಬಂಧಗಳನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ನೀವು ಇಬ್ಬರೂ ಪರಸ್ಪರರ ಶಕ್ತಿಯಾಗುತ್ತೀರಿ. ಭಿನ್ನಾಭಿಪ್ರಾಯಗಳನ್ನು ಪ್ರೀತಿಯಿಂದ ಬಗೆಹರಿಸಿಕೊಳ್ಳಿ ಮತ್ತು ಪರಸ್ಪರ ಅಭಿಪ್ರಾಯಗಳನ್ನು ಕೇಳಿ. ಸಿಂಗಲ್ ಆಗಿರುವವರು ಜೀವನ ಸಂಗಾತಿ ಸಿಗಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.

ಮಕರ ರಾಶಿ

ಮಕರ ರಾಶಿಯವರು ಸಂಗಾತಿಯೊಂದಿಗೆ ಹೊರಗೆ ಹೋಗಿ ಸಮಯ ಕಳೆಯುವರು. ಒಟ್ಟಾಗಿ ಸಮಯ ಕಳೆಯುವುದರಿಂದ ಸಂಬಂಧದಲ್ಲಿ ಸಿಹಿ ಅಥವಾ ಮಾಧುರ್ಯ ಹೆಚ್ಚುತ್ತದೆ. ನಿಮ್ಮ ಸಂಗಾತಿಯೊಂದಿಗೆ ತಾಳ್ಮೆ ಮತ್ತು ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳಿ. ನೀವು ಸಂಗಾತಿಯಿಂದ ಉಡುಗೊರೆ ಅಥವಾ ಸರ್ಪ್ರೈಸ್ ಪಡೆಯಬಹುದು.

ಕುಂಭ ರಾಶಿ

ಕುಂಭ ರಾಶಿಯ ವಿವಾಹಿತರು ತಮ್ಮ ಸಂಗಾತಿಯ ಜೊತೆಗೆ ಆಳವಾದ ಭಾವನಾತ್ಮಕ ಸಂಪರ್ಕವನ್ನು ಅನುಭವಿಸುತ್ತಾರೆ. ನಿಮ್ಮ ಸಂಬಂಧದಲ್ಲಿ ನಂಬಿಕೆ ಮತ್ತು ಸ್ಪಷ್ಟತೆಯನ್ನು ಕಾಪಾಡಿಕೊಳ್ಳಿ. ಈ ಸಮಯದಲ್ಲಿ ನೀವು ಇಬ್ಬರೂ ಡಿನ್ನರ್ ಪಾರ್ಟಿಗೆ ಹೊರಗೆ ಹೋಗುತ್ತೀರಿ.

ಮೀನ ರಾಶಿ

ಮೀನ ರಾಶಿಯವರಿಗೆ ಇದು ತಮ್ಮ ಹೃದಯದ ಮಾತುಗಳನ್ನು ಹೇಳಲು ಇದು ಉತ್ತಮ ದಿನ. ನಿಮ್ಮ ಸಂಬಂಧದಲ್ಲಿ ಬಲ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನವವಿವಾಹಿತರು ಪ್ರವಾಸಕ್ಕೆ ಹೋಗುತ್ತಾರೆ. ಮತ್ತು ಕೆಲವು ಉತ್ತಮ ನೆನಪುಗಳನ್ನು ಮಾಡಿಕೊಳ್ಳಬಹುದು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Love Horoscope 15 August, 2025: Taurus zodiac sign People can plan to get married with their partner

Love Horoscope 15 August, 2025: Taurus zodiac sign People can plan to get married with their partner
Story first published: Friday, August 15, 2025, 7:00 [IST]
X
Desktop Bottom Promotion