Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬ್ರೇಕಪ್, ಶಾಪಿಂಗ್, ಡೇಟಿಂಗ್! ಈ 3 ರಾಶಿಗಳ ಲವ್ ಅಲ್ಲೋಲ ಕಲ್ಲೋಲ
Love Horoscope 05 August, 2025: ವೃಶ್ಚಿಕ ರಾಶಿ ನಿಮ್ಮ ಕ್ರಷ್ ಜೊತೆ ಡಿನ್ನರ್ ಡೇಟ್ ಸಾಧ್ಯತೆ ಇದೆ. ಮಕರ ರಾಶಿಯವರಿಗೆ ಜೀವನ ಸಂಗಾತಿಯಿಂದ ಅಶುಭ ಸುದ್ದಿ ಸಿಗಬಹುದು. ಸಂಗಾತಿ ಜೊತೆ ಕುಂಭ ರಾಶಿಯವರು ಹೊರಗೆ ಹೋಗುವ ಸಾಧ್ಯತೆ. ಮೇಷ ರಾಶಿಯಿಂದ ಮೀನ ರಾಶಿಯವರೆಗೆ, ಎಲ್ಲಾ ರಾಶಿಗಳ ಇಂದಿನ (ಆಗಸ್ಟ್ 05) ಪ್ರೇಮ ಭವಿಷ್ಯ ಇಲ್ಲಿದೆ.
ಮೇಷ ರಾಶಿ
ಮೇಷ ರಾಶಿಯವರಿಗೆ ಇಂದು ನಿಮ್ಮ ಪ್ರೀತಿಯ ಸಂಬಂಧದಲ್ಲಿ ಒಳ್ಳೆಯ ಬದಲಾವಣೆ ಕಾಣಬಹುದು. ಕುಟುಂಬದ ಬೆಂಬಲದಿಂದ ನೀವು ನಿಮ್ಮ ಸಂಗಾತಿಯೊಂದಿಗೆ ವಿವಾಹದ ದಿಕ್ಕಿನಲ್ಲಿ ಹೆಜ್ಜೆ ಇಡಲಿದ್ದೀರಿ. ಸಿಂಗಲ್ಸ್ ಸಹ ಹೊಸ ಪ್ರೇಮದ ಆರಂಭದ ಸೂಚನೆ ಇದೆ. ನಿಮ್ಮ ಕ್ರಶ್ ಜೊತೆ ಮಾತುಕತೆಗಳು ಮುಂದುವರಿಯುವುದರಿಂದ ಮನಸ್ಸಿಗೆ ಸಂತೋಷ ಸಿಗಲಿದೆ.
ವೃಷಭ ರಾಶಿ
ವೃಷಭ ರಾಶಿಯವರು ತಮ್ಮ ಸಂಗಾತಿಯ ಕೆಲವು ವಿಚಾರಗಳು ನಿಮಗೆ ತೊಂದರೆಕೊಡುತ್ತಿದ್ದರೆ, ಇಂದು ಶಾಂತವಾಗಿ ಚರ್ಚಿಸಿ ಸುಧಾರಣೆ ತರಬಹುದಾದ ದಿನ. ಪರಸ್ಪರ ತಿಳುವಳಿಕೆ ಮತ್ತು ಸಾಮರಸ್ಯದಿಂದ ವಿಷಯಗಳನ್ನು ಬಗೆಹರಿಸಿಕೊಳ್ಳುವುದು ನಿಮ್ಮ ಸಂಬಂಧ ಮತ್ತು ಒಡನಾಟ ಮತ್ತಷ್ಟು ಬಲಗೊಳ್ಳಲಿದೆ.

ಮಿಥುನ ರಾಶಿ
ನಿಮ್ಮ ಆತ್ಮೀಯ ಸಂಗಾತಿ ಅಥವಾ ನಿಮ್ಮ ಸೊಲ್‌ಮೇಟ್ ಜೊತೆಗೆ ಶಾಪಿಂಗ್‌ಗೆ ಹೋಗಿ. ಅಲ್ಲಿ ಇಬ್ಬರೂ ಉತ್ತಮ ಸಮಯ ಕಳೆಯುವಿರಿ. ಈ ಸಮಯದಲ್ಲಿ ಮನಸ್ಸಿನ ಮಾತು ಹಂಚಿಕೊಳ್ಳುವ ಅವಕಾಶ ಸಿಗಲಿದೆ. ಯಾವುದೇ ಹಿಂಜರಿಕೆ ಇಲ್ಲದೆ, ಪ್ರೇಮವನ್ನು ತಾಜಾ ಮಾಡುವ ಸಂಧರ್ಭ ಇದು.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಇಂದು ಇಂದು ನಿಮಗೆ ಹೊಸ ಸಂಗಾತಿಯ ಭೇಟಿಯಾಗಬಹುದು. ನಿಮ್ಮ ಗ್ರಹಗಳು ಸೂಚಿಸುವಂತೆ, ಈ ಸಂಬಂಧ ನಿಮ್ಮ ಜೀವನಕ್ಕೆ ಹೊಸ ದಿಕ್ಕು ನೀಡಬಹುದು. ನಿಮ್ಮ ಆಕರ್ಷಣೆಯು ಹೆಚ್ಚಲಿದೆ. ಸಂಬಂಧಕ್ಕೆ ಹೊಸ ದಿಕ್ಕು ನೀಡಲು ಇದು ಶುಭ ದಿನವಾಗಿದೆ.
ಸಿಂಹ ರಾಶಿ
ಈ ಹಿಂದಿನ ಪ್ರೇಮದಲ್ಲಿ ನೊಂದುಕೊಂಡವರು ಹೊಸ ಸಂಬಂಧಕ್ಕೆ ಪ್ರವೇಶಿಸದೇ ಇರುವದು ಉತ್ತಮ. ವೈವಾಹಿಕ (ಮದುವೆಯಾದವರು) ಜೀವನ ನಡೆಸುತ್ತಿರುವವರು ಪ್ರವಾಸಕ್ಕೆ ತೆರಳುವರು. ಅಲ್ಲಿ ಇಬ್ಬರೂ ಉತ್ತಮ ಸಮಯ ಕಳೆಯುವಿರಿ. ಈ ಸಮಯದಲ್ಲಿ ನೀವು ಸ್ವಲ್ಪ ವಿನಮ್ರ (ಸೌಮ್ಯತೆ) ಮತ್ತು ಆಕರ್ಷಕ ನಡೆ ಬಹುಮುಖ್ಯ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಈ ದಿನವು ಸಾಮಾನ್ಯ. ಕೆಲವು ಹಿಂದಿನ ವಿಷಯಗಳ ಬಗ್ಗೆ ನಿಮಗೆ ಯೋಚನೆ ಜಾಸ್ತಿಯಾಗಬಹುದು. ಸಂಗಾತಿಯೊಂದಿಗೆ ಸಣ್ಣಪುಟ್ಟ ತಪ್ಪು ತಿಳುವಳಿಕೆಗಳು ಉಂಟಾಗಬಹುದು. ನೀವು ಸಿಂಗಲ್ ಆಗಿದ್ದರೆ, ಹೊಸ ವ್ಯಕ್ತಿಯನ್ನು ಭೇಟಿಯಾಗುವುದು ರೋಮ್ಯಾಂಟಿಕ್ ಎಕ್ಸ್‌ಪೀರಿಯನ್ಸ್ ಅಥವಾ ಅನುಭವ ನೀಡಬಹುದು.
ತುಲಾ ರಾಶಿ
ಇಂದು ಸಂಬಂಧಗಳ ಮೇಲೆ ಕುಟುಂಬದ ಪ್ರಭಾವ ಆಗಬಹುದು. ಕುಟುಂಬದ ಬೆಂಬಲ ಕಡಿಮೆಯಾಗುವುದರಿಂದ ಪ್ರೇಮ ಜೀವನದ ಮೇಲೆ ಅದರ ಪರಿಣಾಮ ಬೀರಲಿದೆ. ನೀವು ಸಂಬಂಧವನ್ನು ಉಳಿಸಿಕೊಳ್ಳಲು ಬಯಸಿದರೆ, ತಾಳ್ಮೆಯಿಂದ ವರ್ತಿಸಿ. ಸಹನೆ ಮತ್ತು ಸಮರಸತೆ ಮುಖ್ಯ.
ವೃಶ್ಚಿಕ ರಾಶಿ
ನಿಮ್ಮ ಕ್ರಶ್ ಜೊತೆ ಡಿನ್ನರ್ ಡೇಟ್‌ಗೆ ಹೋಗುವ ಬಗ್ಗೆ ಮಾತುಕತೆ ನಡೆಯಬಹುದು. ಆದರೂ, ನೀವು ಇಬ್ಬರೂ ಸದ್ಯಕ್ಕೆ ಉತ್ತಮ ಸ್ನೇಹಿತರಾಗಿ ಮುಂದುವರಿಯುವಿರಿ. ಭವಿಷ್ಯದಲ್ಲಿ ಹೆಚ್ಚಿನ ಅರ್ಥಪೂರ್ಣತೆಯ ಸಂಬಂಧವಾಗಿ ಬೆಳೆದುಬರುವ ಸಾಧ್ಯತೆ. ವಿವಾಹಿತರಿಗೆ ಇಂದು ಉತ್ತಮ ದಿನವಾಗಿದೆ.
ಧನುಸ್ಸು ರಾಶಿ
ಧನುಸ್ಸು ರಾಶಿಯವರಿಗೆ ಇಂದು ಸುಖ ಮತ್ತು ಸೌಭಾಗ್ಯ (ಅದೃಷ್ಟ) ಹೆಚ್ಚಾಗುವ ದಿನ. ಆತ್ಮವಿಶ್ವಾಸ ಹೆಚ್ಚಲಿದೆ ಮತ್ತು ಪರಸ್ಪರರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ನಿಮಗೆ ಉತ್ತಮ ಅವಕಾಶ ಸಿಗಲಿದೆ. ಜೀವನದಲ್ಲಿ ಸಂತೋಷ ನೆಲೆಸಲಿದೆ.
ಮಕರ ರಾಶಿ
ಮಕರ ರಾಶಿಯವರಿಗೆ ಜೀವನ ಸಂಗಾತಿಯಿಂದ ಅಶುಭ ಸುದ್ದಿ ಸಿಗಬಹುದು. ಪರಿಸ್ಥಿತಿಯಲ್ಲಿ ತಾಳ್ಮೆ ಕಾಯ್ದುಕೊಳ್ಳಿ, ಆತ್ಮಸ್ಥೈರ್ಯದಿಂದ ಎದುರಿಸಿ. ಸ್ನೇಹಿತರ ಸಂಪೂರ್ಣ ಬೆಂಬಲ ಮತ್ತು ಸಹಕಾರ ಸಿಗಲಿದೆ.
ಕುಂಭ ರಾಶಿ
ಪ್ರೇಮ ಜೀವನ ನಡೆಸುತ್ತಿರುವವರಿಗೆ ಇಂದು ವಿಶೇಷ ದಿನ. ಸಂಬಂಧವು ಹಿಂದಿಗಿಂತಲೂ ಬಲವಾಗಿ ಬೆಳೆದುಬರುತ್ತದೆ. ಕುಟುಂಬದವರು ನಿಮ್ಮ ಸಂಬಂಧವನ್ನು ಮೆಚ್ಚುಗೆ ಸೂಚಿಸುವರು. ನೀವು ನಿಮ್ಮ ಸಂಗಾತಿಗೆ ಉಡುಗೊರೆಯನ್ನು ಸಹ ನೀಡಬಹುದು.
ಮೀನ ರಾಶಿ
ವೈವಾಹಿಕ ಜೀವನ ನಡೆಸುತ್ತಿರುವವರಿಗೆ ಈ ದಿನವು ಸಾಮಾನ್ಯವಾಗಿರುತ್ತದೆ. ಆದರೆ, ಸಿಂಗಲ್ಸ್‌ಗಳಿಗೆ ಇದು ಅತ್ಯಂತ ಶುಭ ಸಮಯ. ವಿಶೇಷ ವ್ಯಕ್ತಿಯೊಬ್ಬರು ಇಂದು ನಿಮ್ಮ ಜೀವನಕ್ಕೆ ಪ್ರವೇಶಿಸಬಹುದು. ಮನಸ್ಸು ಸಂತೋಷದಿಂದಿರುತ್ತದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
