ಜಗಳ, ಬ್ರೇಕಪ್, ಗಿಫ್ಟ್.. ನಿಮ್ಮ ಜೀವನದಲ್ಲಿ ಇಂದು ಏನಾಗುತ್ತೆ?

Love Horoscope 04 August, 2025: ಈ ರಾಶಿಯವರಿಗೆ ಸಂಗಾತಿಯಿಂದ ಅಚ್ಚರಿಯ ಉಡುಗೊರೆ ಸಿಗಬಹುದು. ಈ ರಾಶಿಯವರ ಸಂಗಾತಿಯು ಇಂದು ಸ್ವಲ್ಪ ವಿಚಿತ್ರವಾಗಿ ವರ್ತಿಸಬಹುದು. ಮಿಥುನ ರಾಶಿಯವರಿಗೆ ಲವರ್ ಜೊತೆ ಸಣ್ಣಪುಟ್ಟ ಜಗಳಗಳು ನಡೆಯಬಹುದು. ವೃಶ್ಚಿಕ ರಾಶಿಯವರ ಲವ್‌ ಲೈಫ್‌ನಲ್ಲಿ ದೊಡ್ಡ ಬದಲಾವಣೆ ಸಾಧ್ಯತೆ. ಬನ್ನಿ, ಇಂದು (ಆಗಸ್ಟ್ 04) ಮೇಷ ರಾಶಿಯಿಂದ ಮೀನ ರಾಶಿಯವರೆಗೆ, ಎಲ್ಲಾ ರಾಶಿಗಳ ಪ್ರೇಮ ಜೀವನ ಹೇಗಿರಲಿದೆ ಎಂದು ತಿಳಿಯೋಣ.

ಮೇಷ ರಾಶಿ

ಇಂದು ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಆರಂಭದಲ್ಲಿ ಸ್ವಲ್ಪ ಅಸಹಜ ಎನಿಸಿದರೂ, ನಿಮ್ಮ ಪ್ರಾಮಾಣಿಕ ಪ್ರಯತ್ನದಿಂದ ಸಂಬಂಧದಲ್ಲಿ ಕಳೆದುಹೋಗಿದ್ದ ಆಪ್ತತೆ ಮರಳಿ ಬರಲಿದೆ. ಹಳೆಯ ನೆನಪುಗಳು ಮರುಕಳಿಸಿದ್ದು, ಅಂತರಗಳು ಕಡಿಮೆಯಾಗಲಿವೆ. ಸಂಗಾತಿಯಿಂದ ಸಿಹಿ ಅಚ್ಚರಿ ಸಿಗುವ ಸಾಧ್ಯತೆಯಿದ್ದು, ದಿನವನ್ನು ವಿಶೇಷವಾಗಿಸಲಿದೆ.

ವೃಷಭ ರಾಶಿ

ಇಂದು ನಿಮ್ಮ ವೈಯಕ್ತಿಕ ಜೀವನ ಮತ್ತು ಕೆಲಸದ ನಡುವೆ ಸಮತೋಲನ ಕಾಯ್ದುಕೊಳ್ಳಲು ನೀವು ಪಡುವ ಶ್ರಮ ಸವಾಲಾಗಿ ಪರಿಣಮಿಸಬಹುದು. ಒಂದು ಸಣ್ಣ ವಿಷಯ ದೊಡ್ಡ ವಾಗ್ವಾದಕ್ಕೆ ಕಾರಣವಾಗಿ, ಸಂಬಂಧದಲ್ಲಿ ಅಸ್ಥಿರತೆ ಮೂಡಿಸಬಹುದು. ಆದರೆ ನೀವು ಚಿಂತಿಸಬೇಕಾಗಿಲ್ಲ. ಪರಿಸ್ಥಿತಿಯನ್ನು ಶಾಂತವಾಗಿ ನಿಭಾಯಿಸಿ, ನೀವೇ ಮೊದಲು ಹೆಜ್ಜೆ ಹಾಕಿದರೆ, ಎಲ್ಲವೂ ಸುಧಾರಿಸಲಿದೆ. ಪ್ರೀತಿಯಲ್ಲಿ ತಾಳ್ಮೆ ಮತ್ತು ತಿಳುವಳಿಕೆ ಅತ್ಯಂತ ಮುಖ್ಯ.

Today Love Horoscope 04 August

ಮಿಥುನ ರಾಶಿ

ಇಂದು ನಿಮ್ಮ ಸಂಬಂಧದ ಬಗ್ಗೆ ನೀವು ಹೆಚ್ಚು ಸಕಾರಾತ್ಮಕ ಭಾವನೆ ಹೊಂದಿದ್ದೀರಿ. ನಿಮ್ಮಿಬ್ಬರ ನಡುವೆ ಸಣ್ಣಪುಟ್ಟ ಜಗಳಗಳು ನಡೆಯಬಹುದು. ಆದರೆ ಇದು ನಿಮ್ಮ ಪ್ರೀತಿಯ ಮೇಲೆ ಪರಿಣಾಮ ಬೀರುವುದಿಲ್ಲ. ಬದಲಾಗಿ, ಈ ಸಣ್ಣ ಜಟಾಪಟಿ ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ನಿಮ್ಮ ಸಂಗಾತಿಯನ್ನು ಕೇವಲ ಪ್ರೇಮಿಯಾಗಿ ಅಲ್ಲದೆ, ಒಬ್ಬ ನಿಜವಾದ ಸ್ನೇಹಿತನಾಗಿಯೂ ನೋಡುವಿರಿ. ಈ ಭಾವನಾತ್ಮಕ ಬಂಧ ಮನಸ್ಸು ಸಂತುಲಿತವಾಗಿಟ್ಟು ಖುಷಿ ನೀಡಲಿದೆ.

ಕರ್ಕಾಟಕ ರಾಶಿ

ಇಂದು ನಿಮ್ಮ ಜೀವನದಲ್ಲಿ ಅನಿರೀಕ್ಷಿತ ಘಟನೆಗಳು ನಡೆಯಬಹುದು. ನೀವು ಊಹಿಸದ ಸಂಗತಿಯೊಂದು ಸಂಭವಿಸುವ ಸಾಧ್ಯತೆಯಿದೆ. ಈ ಬದಲಾವಣೆಯು ನಿಮ್ಮ ಜೀವನ ಮತ್ತು ಆಲೋಚನೆಗಳ ಮೇಲೆ ಆಳವಾದ ಪರಿಣಾಮ ಬೀರಬಹುದು. ನಿಮ್ಮ ಈ ವೈಯಕ್ತಿಕ ಬದಲಾವಣೆಯಲ್ಲಿ ನಿಮ್ಮ ಸಂಗಾತಿಯ ಪಾತ್ರ ಪ್ರಮುಖವಾಗಿರುತ್ತದೆ. ಇದು ಆತ್ಮಾವಲೋಕನ ಮತ್ತು ಸಂಬಂಧದ ಗಂಭೀರತೆಯನ್ನು ಅರ್ಥಮಾಡಿಕೊಳ್ಳುವ ಸಮಯ. ಈ ಅನುಭವದಿಂದ ನಿಮ್ಮ ಸಂಬಂಧ ಮತ್ತಷ್ಟು ಆಳವಾಗಲಿದೆ.

ಸಿಂಹ ರಾಶಿ

ಇಂದು ನಿಮ್ಮ ಸಂಗಾತಿಗೆ ಅವರ ಅಚ್ಚುಮೆಚ್ಚಿನ ಅನುಭವವನ್ನು ನೀಡಲು ಪ್ರಯತ್ನಿಸಿ. ಅದು ವಿಶೇಷ ಸ್ಥಳಕ್ಕೆ ಭೇಟಿ ನೀಡುವುದಾಗಿರಲಿ ಅಥವಾ ಅವರ ಹವ್ಯಾಸದಲ್ಲಿ ಜೊತೆ ನೀಡುವುದಾಗಿರಲಿ, ಈ ಪ್ರಯತ್ನದಿಂದ ನಿಮ್ಮ ಸಂಬಂಧದಲ್ಲಿ ಹೊಸತನ ಮೂಡಲಿದೆ. ನೀವಿಬ್ಬರೂ ಸೇರಿ ನಗು, ವಿನೋದ ಮತ್ತು ಪ್ರಣಯದಿಂದ ಕೂಡಿದ ಸಮಯವನ್ನು ಕಳೆಯುವಿರಿ. ನಿಮ್ಮ ಆಕರ್ಷಣೆ ಮತ್ತು ಸೃಜನಶೀಲತೆಯಿಂದ ಸಂಗಾತಿ ಹೆಚ್ಚು ಪ್ರಭಾವಿತರಾಗಿ, ನಿಮ್ಮನ್ನು ಇನ್ನಷ್ಟು ಹತ್ತಿರದಿಂದ ಅನುಭವಿಸುವರು.

ಕನ್ಯಾ ರಾಶಿ

ಇಂದು ನಿಮ್ಮ ಸಂಗಾತಿಯನ್ನು ಸಂತೋಷಪಡಿಸಲು ಬಯಸುವುದಾದರೆ, ಹೊಸ ಮತ್ತು ಸೃಜನಾತ್ಮಕವಾದುದನ್ನು ಮಾಡಬೇಕಿದೆ. ದಿನನಿತ್ಯದ ಹೂಗಳು ಮತ್ತು ಚಾಕೊಲೇಟ್‌ಗಳಿಗಿಂತ ಭಿನ್ನವಾಗಿ, ಒಂದು ವಿಶೇಷ ಪತ್ರ, ನೆನಪಿನ ಉಡುಗೊರೆ ಅಥವಾ ಸಣ್ಣ ಅಚ್ಚರಿಯ ಯೋಜನೆ ಹೀಗೆ ಮನಸ್ಸಿಗೆ ಹತ್ತಿರವಾಗುವಂಥದ್ದನ್ನು ಯೋಚಿಸಿ. ನಿಮ್ಮ ಪ್ರಾಮಾಣಿಕತೆ ಮತ್ತು ಭಾವನಾತ್ಮಕ ಆಳವು ಅವರನ್ನು ಸ್ಪರ್ಶಿಸುತ್ತದೆ. ಪ್ರತಿಯಾಗಿ ಅವರಿಂದಲೂ ಅಚ್ಚರಿಯ ಉಡುಗೊರೆ ಸಿಗಬಹುದು.

ತುಲಾ ರಾಶಿ

ಇಂದು ನಿಮ್ಮ ಸಂಬಂಧದ ದಿಕ್ಕು ಬದಲಾಗಬಹುದು. ನೀವು ಈಗಾಗಲೇ ಸಂಬಂಧದಲ್ಲಿದ್ದು, ವಿಷಯಗಳು ಸರಿಯಾಗಿಲ್ಲದಿದ್ದರೆ, ಕೊಂಚ ದೂರವಿರುವ ಅಗತ್ಯ ಎನಿಸಬಹುದು. ಅಕಸ್ಮಾತ್ ನೀವು ಏಕಾಂಗಿಯಾಗಿದ್ದರೆ, ನಿಮ್ಮ ಮನಸ್ಸಿಗೆ ಹತ್ತಿರವಾಗುವ ಹೊಸ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶವಿದೆ. ಇದು ನಿಮ್ಮನ್ನು ಅರ್ಥಮಾಡಿಕೊಳ್ಳುವ ಮತ್ತು ಸಂಬಂಧಗಳ ಮಹತ್ವವನ್ನು ಅರಿತುಕೊಳ್ಳುವ ಸಮಯವಾಗಿದೆ.

ವೃಶ್ಚಿಕ ರಾಶಿ

ಇಂದು ನಿಮ್ಮ ಪ್ರೇಮ ಜೀವನದಲ್ಲಿ ದೊಡ್ಡ ಬದಲಾವಣೆ ಬರಲಿದೆ. ನಿಧಾನವಾಗಿ ಕೊನೆಗೊಳ್ಳುತ್ತಿದ್ದ ಸಂಬಂಧವು ಹಠಾತ್ತನೆ ಬಲಗೊಳ್ಳಬಹುದು. ಅಥವಾ ನೀವು ಗಂಭೀರವಾಗಿ ಪರಿಗಣಿಸಿದ್ದ ಪ್ರೀತಿಯೇ ದೂರವಾಗಬಹುದು. ಇದು ನಿಮ್ಮ ಸಂಬಂಧವನ್ನು ನೀವು ಈವರೆಗೆ ಹೇಗೆ ನಿಭಾಯಿಸಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನೀವು ಭಾವನಾತ್ಮಕವಾಗಿ ಸದೃಢರಾಗಿರಬೇಕು, ಏಕೆಂದರೆ ಇಂದು ಯಾವುದೇ ರೀತಿಯ ತಿರುವು ಎದುರಾಗಬಹುದು.

ಧನು ರಾಶಿ

ನಿಮ್ಮ ಪ್ರೇಮ ಜೀವನದಲ್ಲಿ ಉತ್ಸಾಹ ಮತ್ತು ಬದಲಾವಣೆಯ ಸಂಕೇತಗಳಿವೆ. ಇಂದು ಹೊಸ ವಿಷಯವೊಂದು ಬಹಿರಂಗವಾಗಬಹುದು. ನಿಮ್ಮ ಸಂಗಾತಿ ಏನಾದರೂ ವಿಶೇಷ ಯೋಜನೆ ಹಾಕಿಕೊಂಡಿರಬಹುದು ಅಥವಾ ಅನಿರೀಕ್ಷಿತ ಸಂಗತಿಯನ್ನು ಹೇಳಬಹುದು. ನೀವು ಮುಕ್ತ ಮನಸ್ಸಿನವರಾಗಿರಬೇಕು. ಈ ದಿನ ನಿಮ್ಮ ಸಂಬಂಧಕ್ಕೆ ಹೊಸತನ ಮತ್ತು ಹುಮ್ಮಸ್ಸನ್ನು ತುಂಬಲಿದೆ.

ಮಕರ ರಾಶಿ

ನೀವು ಇತ್ತೀಚೆಗೆ ಭೇಟಿಯಾದ ವ್ಯಕ್ತಿ ನಿಮ್ಮ ಪಾಲಿಗೆ ವಿಶೇಷವಾಗುತ್ತಿದ್ದಾರೆ. ಇಂದು ನಿಮಗೆ ಪರಸ್ಪರ ಉತ್ತಮವಾಗಿ ತಿಳಿದುಕೊಳ್ಳಲು ಅವಕಾಶ ಸಿಗಲಿದೆ. ಅವರ ನಗುಮುಖ ಮತ್ತು ಜೀವನೋತ್ಸಾಹದ ಸ್ವಭಾವದಿಂದ ನೀವು ವಿಸ್ಮಿತರಾಗಬಹುದು. ಈ ಪರಿಚಯ ನಿಧಾನವಾಗಿ ಆಳವಾದ ಸಂಬಂಧವಾಗಿ ಪರಿವರ್ತಿತವಾಗಬಹುದು.

ಕುಂಭ ರಾಶಿ

ಇಂದು ರೋಮಾಂಚಕಾರಿ ದಿನ. ದಿನದ ಆರಂಭ ಸಾಮಾನ್ಯವಾಗಿದ್ದರೂ, ಸಂಜೆಯಾಗುತ್ತಿದ್ದಂತೆ ನೀವಿಬ್ಬರೂ ಮೋಜಿನ ಕ್ಷಣಗಳನ್ನು ಕಳೆಯಬಹುದು. ಹಳೆಯ ವಿಷಯಗಳನ್ನು ಕೆದಕುವುದನ್ನು ತಪ್ಪಿಸಿ. ಏಕೆಂದರೆ, ಅದು ಪರಿಸ್ಥಿತಿಯನ್ನು ಸ್ವಲ್ಪ ಗೊಂದಲಗೊಳಿಸಬಹುದು.

ಮೀನ ರಾಶಿ

ನಿಮ್ಮ ಸಂಗಾತಿಯು ಇಂದು ಸ್ವಲ್ಪ ವಿಚಿತ್ರವಾಗಿ ವರ್ತಿಸಬಹುದು. ಇದರಿಂದ ನೀವು ಅಸಮಾಧಾನಗೊಳ್ಳಬಹುದು. ಆದರೆ, ಚಿಂತಿಸಬೇಡಿ. ಇದು ಕೇವಲ ತಾತ್ಕಾಲಿಕ ಮನಸ್ಥಿತಿಯ ಬದಲಾವಣೆ. ಈ ಸಮಯದಲ್ಲಿ ನೀವು ತಾಳ್ಮೆ ಕಳೆದುಕೊಳ್ಳಬಾರದು. ಪ್ರೀತಿಯಲ್ಲಿ ಸೌಮ್ಯತೆ ಮತ್ತು ಸಹಾನುಭೂತಿ ತೋರಿಸುವುದೇ ಸರಿಯಾದ ಮಾರ್ಗ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Love Horoscope 04 August, 2025: For Virgos, love surprise gift from partner

Love Horoscope 04 August, 2025: For Virgos, love surprise gift from partner
Story first published: Monday, August 4, 2025, 7:00 [IST]
X
Desktop Bottom Promotion