Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2025 ಮಾರ್ಚ್‌ನಿಂದ ಈ ರಾಶಿಯವರ ಬದುಕಿನಲ್ಲಿ ಶನಿ ಕೃಪೆಯಿಂದ ಬಹುದೊಡ್ಡ ಬದಲಾವಣೆಯಾಗಲಿದೆ
ಹೊಸ ವರ್ಷಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿದೆ, 2025 ಶನಿ ಗ್ರಹದ ದೃಷ್ಟಿಯಿಂದಲೂ ಪ್ರಮುಖವಾದ ವರ್ಷವಾಗಿದೆ, ಏಕೆಂದರೆ ಶನಿಯು ಈ ವರ್ಷ ರಾಶಿ ಬದಲಾವಣೆ ಮಾಡಲಿದೆ. ಶನಿಯೂ ತುಂಬಾ ನಿಧಾನಗತಿಯಲ್ಲಿ ಚಲಿಸುವ ಗ್ರಹವಾಗಿದ್ದು 2025ರಲ್ಲಿ ರಾಶಿ ಬದಲಾವಣೆ ಮಾಡಲಿದೆ, ಇದೀಗ ಕುಂಭ ರಾಶಿಯಲ್ಲಿರುವ ಶನಿಯು 2025ಕ್ಕೆ ಮೀನ ರಾಶಿಗೆ ಸಂಚರಿಸಲಿದೆ. ಈ ಸಂಚಾರ ಪ್ರತಿ ರಾಶಿಯ ಜೀವನದಲ್ಲಿ ಬದಲಾವಣೆ ತರಲಿದೆ.
ಶನಿ ಬರೀ ಕಷ್ಟಗಳನ್ನು ನೀಡುವ ಗ್ರಹವಲ್ಲ, ಕೆಲ ರಾಶಿಗಳು ಶನಿ ಕೃಪೆಯಿಂದ ಬಹು ಎತ್ತರಕ್ಕೇರಲಿದ್ದಾರೆ, ಶನಿಯು ಮೀನ ರಾಶಿಗೆ ಸಂಚರಿಸಿದಾಗ ಈ ರಾಶಿಯವರು ತಮ್ಮ ಬದುಕಿನಲ್ಲಿ ತುಂಬಾನೇ ಧನಾತ್ಮಕ ಪ್ರಯೋಜನ ಪಡೆಯುವಿರಿ:

ವೃಷಭ ರಾಶಿ
ಶನಿಯು ಮೀನ ರಾಶಿಗೆ ಸಂಚರಿಸಿದಾಗ ವೃಷಭ ರಾಶಿಯಲ್ಲಿ ಅನುಕೂಲಕರ ಸ್ಥಾನದಲ್ಲಿರಲಿದೆ. ಈ ಸ್ಥಾನದ ಪ್ರಭಾವದಿಂದಾಗಿ ನೀವು ಅತ್ಯುತ್ತಮವಾದ ಪ್ರಯೋಜನ ಪಡೆಯುವಿರಿ. ವೃತ್ತಿ ಬದುಕಿನಲ್ಲಿ ತುಂಬಾನೇ ಬೆಳವಣಿಗೆ ಕಾಣಬಹುದು. ನೀವು ಪ್ರಯತ್ನಿಸುತ್ತಿದ್ದ ಕೆಲಸ ಸಿಗಲಿದೆ, ಬಡ್ತಿಯ ನಿರೀಕ್ಷೆಯಲ್ಲಿರುವವರಿಗೆ ಬಡ್ತಿ ಸಿಗಲಿದೆ. ವ್ಯಾಪಾರಿಗಳು ತಮ್ಮ ವ್ಯವಹಾರವನ್ನು ವಿಸ್ತರಿಸಲು ಬಯಸುತ್ತಿದ್ದರೆ ಈ ಅವಧಿಯಲ್ಲಿ ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿಯನ್ನು ಕಾಣುವಿರಿ.
ಆರ್ಥಿಕವಾಗಿ ಬೆಳವಣಿಗೆ ಕಾಣುವಿರಿ, ಶನಿಯು ಮೀನ ರಾಶಿಯಲ್ಲಿ ಸಂಚಾರ ಶುರು ಮಾಡಿದಾಗ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ತುಂಬಾನೇ ಸುಧಾರಣೆಯಾಗುವುದು. ಹಣಕಾಸಿನ ಪರಿಸ್ಥಿತಿ ತುಂಬಾ ಚೆನ್ನಾಗಿ ಇರುವುದರಿಂದ ನಿಮ್ಮಾಸೆ ಈಡೇರಲಿದೆ. ಆಸ್ತಿ ಖರೀದಿಸಬೇಕು, ಮನೆ ಮಾಡಬೇಕು, ಗಾಡಿ ಖರೀದಿಸಬೇಕು ಈ ಬಗೆಯ ಕನಸುಗಳು ನನಸಾಗಲಿದೆ.
ಕುಟುಂಬಜೀವನ ಕೂಡ ಚೆನ್ನಾಗಿರಲಿದೆ. ಶನಿಯ ದೃಷ್ಟಿ ನಿಮ್ಮ ಮೇಲೆ ಉತ್ತಮ ಪ್ರಭಾವ ಬೀರುವುದರಿಂದ ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ, ಪತಿ-ಪತ್ನಿ ನಡುವೆ ಯಾವುದೇ ದೊಡ್ಡ ಸಮಸ್ಯೆ ಇರಲ್ಲ, ಒಟ್ಟಿನಲ್ಲಿ ಈ ಅವಧಿ ನಿಮಗೆ ತುಂಬಾನೇ ಪ್ರಯೋಜನಕಾರಿಯಾಗಿರಲಿದೆ. ಶನಿಯು ನಿಮ್ಮ ಆರೋಗ್ಯದ ಮೇಲೆ ಕೂಡ ಉತ್ತಮ ಪ್ರಬಾವ ಬೀರಲಿದೆ.
ಕರ್ಕ ರಾಶಿ
ಕರ್ಕ ರಾಶಿಯವರು ಶನಿ ಧೈಯ್ಯಯಿಂದ ಮುಕ್ತರಾಗುತ್ತೀರಿ. ಇದರಿಂದ ನಿಮ್ಮ ವೃತ್ತಿ ಜೀವನದಲ್ಲಿ ನೀವು ಅತ್ಯುತ್ತಮವಾದ ಪ್ರಯೋಜನ ಪಡೆಯುತ್ತೀರಿ. ವೃತ್ತಿ ಬದುಕಿಲ್ಲಿ ಇದ್ದಂಥ ಎಲ್ಲಾ ಸವಾಲುಗಳು ದೂರಾಗಲಿದೆ. ಶನಿಯು ನಿಮಗೆ ಉತ್ತಮ ಉದ್ಯೋಗವಕಾಶ ನೀಡಲಿದೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲ ತುಂಬಾನೇ ಸುಧಾರಣೆ ಕಾಣುವಿರಿ.
ಅಪೂರ್ಣವಾಗಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ಶನಿ ಧೈಯ್ಯವಿದ್ದಾಗ ಅಪೂರ್ಣವಾಗಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ, ಈ ಅವಧಿಯಲ್ಲಿ ಎಲ್ಲವೂ ನಿಮ್ಮ ಯೋಜನೆಯಂತೆಯೇ ನಡೆಯಲಿದೆ. ಕುಟುಂಬದ ವಾತಾವರಣ ತುಂಬಾ ಚೆನ್ನಾಗಿರಲಿದೆ. ನಿಮ್ಮ ಹಾಗೂ ಸಮಗಾತಿ ನಡುವೆ ಉತ್ತಮ ಬಾಂಧವ್ಯವಿರಲಿದೆ, ನಿಮ್ಮ ಸಂಬಂಧ ಮತ್ತಷ್ಟು ಗಟ್ಟಿಯಾಗುವುದು.
ನಿಮ್ಮ ಆರೋಗ್ಯ ಕೂಡ ಚೆನ್ನಾಗಿರಲಿದೆ, ಹಣವನ್ನು ಉಳಿತಾಯ ಮಾಡಲು ನಿಮ್ಮಿಂದ ಸಾಧ್ಯವಾಗಲಿದೆ.
ಮಕರ ರಾಶಿ
ಶನಿ ಸಾಡೇಸಾತಿಯಿಂದ ಮಕರ ರಾಶಿಯವು ಮುಕ್ತರಾಗುತ್ತಾರೆ, ಏಳೂವರೆ ವರ್ಷ ಕಾಲ ಪಟ್ಟ ಕಷ್ಟಗಳೆಲ್ಲಾ ದೂರಾಗುವ ಸಮಯ. ಶನಿಯು ಮೀನ ರಾಶಿಗೆ ಸಂಚಾರಿಸಿದಾಗ ನಿಮ್ಮ ಬದುಕಿನಲ್ಲಿನೀವು ಅದ್ಭುತ ಪ್ರಯೋಜನ ನೋಡುತ್ತೀರಿ. ಎದುರಿಸಿದ ಅವಮಾನಗಳು, ನೋವು ಎಲ್ಲವೂ ದೂರಾಗುವುದು.
ವೃತ್ತಿ ಬದುಕಿನಲ್ಲಿ ತುಂಬಾ ಯಶಸ್ಸು ಕಾಣುತ್ತೀರಿ, ಇರುವ ಕಷ್ಟ ದೂರಾಗಲಿದೆ, ವ್ಯಾಪಾರಿಗಳು ಹಲವು ಸೋಲು ಕಂಡು ಸುಸ್ತಾಗಿರುತ್ತೀರಿ, ಆದರೆ 2025ರಿಂದ ನೀವು ನಿಮ್ಮ ವ್ಯವಹಾರದಲ್ಲಿ ತುಂಬಾನೇ ಪ್ರಗತಿ ಕಾಣುತ್ತೀರಿ. ಹಣವನ್ನು ಉಳಿತಾಯ ಮಾಡಲು ಕೂಡ ಸಾಧ್ಯವಾಗುವುದು. ಹೂಡಿಕೆ ಮಾಡಿದ್ದರೆ ಅದರಿಂದ ಉತ್ತಮ ಪ್ರಯೋಜನ ಪಡೆಯುತ್ತೀರಿ.
ಕುಟುಂಬದಲ್ಲಿ ಪರಿಸ್ಥಿತಿ ಸುಧಾರಿಸಲಿದೆ, ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ, ಆರೋಗ್ಯ ಕೂಡ ಚೆನ್ನಾಗಿರಲಿದೆ. ಶನಿ ಸಾಡೇಸಾತಿಯ ಪ್ರಭಾವದಿಂದ ಸಂಪೂರ್ಣ ಹೊರ ಬಂದಿರುವುದರಿಂದ ಸಂತೋಷದ ವಾತಾವರಣ ನಡೆಸುತ್ತೀರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications