Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶನಿಯ ನಕ್ಷತ್ರ ಬದಲಾವಣೆ: ಡಿಸೆಂಬರ್ 27ರವರೆಗೆ ಈ 3 ರಾಶಿಯವರು ಇದರ ಅಪಾರ ಲಾಭ ಪಡೆಯುವಿರಿ
ಶನಿಯು ಇದೀಗ ಕುಂಭ ರಾಶಿಯಲ್ಲಿದೆ, ಆದರೆ ಕಾಲ-ಕಾಲಕಲಕ್ಕೆ ನಕ್ಷತ್ರ ಬದಲಾವಣೆ ಮಾಡುತ್ತಿರುತ್ತದೆ, ಎಲ್ಲಾ ಗ್ರಹಗಳು ನಕ್ಷತ್ರ ಬದಲಾವಣೆ ಮಾಡುತ್ತಿರುತ್ತದೆ, ಅದರಂತೆ ಇದೇ ಅಕ್ಟೋಬರ್ 3ಕ್ಕೆ ಶನಿಯು ಶತಾಭಿಷ ನಕ್ಷತ್ರಕ್ಕೆ ಪ್ರವೇಶಮಾಡುತ್ತದೆ, ಶನಿಯು ಡಿಸೆಂಬರ್ 27ರವರೆಗೆ ಇದೇ ನಕ್ಷತ್ರದಲ್ಲಿ ಇರಲಿದೆ.

ಶನಿಯು ಎಲ್ಲರಿಗೂ ಕಷ್ಟಗಳನ್ನು ನೀಡುವುದಿಲ್ಲ, ಅದರ ಸ್ಥಾನಕ್ಕೆ ತಕ್ಕಂತೆ ಫಲ ನೀಡುತ್ತದೆ, ಶನಿಯು ಅನುಕೂಲಕರ ಸ್ಥಾನದಲ್ಲಿದ್ದರೆ ಅದು ನೀಡುವ ಪ್ರಯೋಜನವಂತೂ ತುಂಬಾನೇ ಅದ್ಭುತವಾಗಿರಲಿದೆ. ಶನಿಯು ಪ್ರತಿಯೊಂದು ವಿಷಯದಲ್ಲಿಯೂ ಅದೃಷ್ಟವನ್ನು ತರಲಿದೆ. ಹಾಗಾಗಿ ಈ ಸಮಯದಲ್ಲಿ ಆ ರಾಶಿಯವರು ಯಾವುದೇ ಚಿಂತೆ ಮಾಡಬೇಕಾಗಿಲ್ಲ.
ಮೇಷ ರಾಶಿ
ಶನಿಯು ಶತಾಭಿಷ ನಕ್ಷತ್ರವನ್ನು ಪ್ರವೇಶ ಮಾಡಿದಾಗ ಮೇಷ ರಾಶಿಯವರಿಗೆ ತುಂಬಾನೇ ಪ್ರಯೋಜನಕಾರಿಯಾಗಿದೆ. ಈ ಅವಧಿಯಲ್ಲಿ ನೀವು ಮಾಡುವ ಕೆಲಸದಲ್ಲಿ ಪ್ರಗತಿ, ಯಶಸ್ಸು ದೊರೆಯಲಿದೆ. ತುಂಬಾ ಸಮಯದಿಂದ ಬಾಕಿಯುಳಿದಿರುವ ಕೆಲಸವು ಪೂರ್ಣಗೊಳ್ಳಲಿದೆ. ಅಲ್ಲದೆ ಶನಿಯು ಕುಂಭ ರಾಶಿಯಲ್ಲಿ ಇರುವುದರಿಂದ ಮೇಷ ರಾಶಿಯ 11ನೇ ಮನೆಯಲ್ಲಿದೆ. ಈ ಸ್ಥಾನ ಕೂಡ ಮೇಷ ರಾಶಿಯವರಿಗೆ ಅನುಕೂಲಕರವಾಗಿಯೇ ಇದೆ.
ವೃತ್ತಿ ಬದುಕಿನಲ್ಲಿನ ಸವಾಲುಗಳು ದೂರಾಗುವುದು, ವ್ಯಾಪಾರಿಗಳು ಧನ ಲಾಭವಾಗಲಿದೆ, ನಿಮ್ಮೆಲ್ಲಾ ಕೆಲಸ ಕಾರ್ಯಗಳು ಉತ್ತಮವಾಗಿರಲಿದೆ. ಅಲ್ಲದೆ ಆರ್ಥಿಕ ಜಿವನ ಉತತ್ತಮವಾಗಲಿದೆ. ಇನ್ನು ನೀವು ಕೆಲಸ ಬದಲಾವಣೆಯ ಬಗ್ಗೆ ಆಲೋಚಿಸುತ್ತಿದ್ದರೆ ಕೆಲಸ ಕೂಡ ಸಿಗಲಿದೆ.
ಆರ್ಥಿಕವಾಗಿ ತುಂಬಾ ಪ್ರಯೋಜನ ಪಡೆಯುತ್ತೀರಿ, ಇಷ್ಟು ದಿನವಿದ್ದ ಆರ್ಥಿಕ ತೊಂದರೆಗಳು ದೂರಾಗುವುದು, ಈ ಸಮಯದಲ್ಲಿ ಸಂಪತ್ತು ಹೆಚ್ಚಿರಲಿದೆ. ಉದ್ಯೋಗಿಗಳು ಕೂಡ ಯಶಸ್ಸು ಪಡೆಯುವಿರಿ. ಇನ್ನು ಹೊಸ ಯೋಜನೆಯಲ್ಲಿ ಹಣಹೂಡಿಕೆ ಮಾಡಿದ್ದರೆ ಉತ್ತಮ ಲಾಭ ಪಡೆಯುವಿರಿ.
ಇನ್ನು ಕುಟುಂಬ ಜೀವನದ ದೃಷ್ಟಿಯಿಂದ ಈ ಸಮಯ ತುಂಬಾ ಚೆನ್ನಾಗಿರಲಿದೆ, ಕುಟುಂಬದಲ್ಲಿ ಏನಾದರು ಸಮಸ್ಯೆವಿದ್ದರೆ ಈ ಅವಧಿಯಲ್ಲಿ ಎಲ್ಲವೂ ಸರಿಯಾಗಲಿದೆ, ಇನ್ನು ಆರೋಗ್ಯದ ದೃಷ್ಟಿಯಿಂದ ಕೂಡ ಈ ಸಮಯ ಉತ್ತಮವಾಗಿರಲಿದೆ.
ಧನು ರಾಶಿ
ಧನು ರಾಶಿಯವರಿಗೆ ಶನಿಯು ತುಂಬಾನೇ ಆರ್ಥಿಕ ಪ್ರಯೋಜನ ನೀಡಲಿದ್ದಾನೆ. ಕೆಲವೊಂದು ಹಣ ನಿಮ್ಮ ಕೈ ಸೇರಲು ವಿಳಂಬವಾಗುತ್ತಿದ್ದರೆ ಈ ಸಮಯದಲ್ಲಿ ನಿಮಗೆ ಹಣ ಸಿಗಲಿದೆ. ವ್ಯಾಪಾರಿಗಳು ತಮ್ಮ ಹೂಡಿಕೆಯಿಂದ ತುಂಬಾ ಉತ್ತಮ ಪ್ರಯೋಜನ ಪಡೆಯಬಹುದು.
ಉದ್ಯೋಗಿಗಳಿಗೆ ಈ ಸಮಯ ಉತ್ತಮವಾಗಿರಲಿದೆ, ಇನ್ನು ನೀವು ಈ ಅವಧಿಯಲ್ಲಿ ಬಯಸಿದ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗುತ್ತಿರಿ. ಹೊಸ ಕೆಲಸ ಹುಡುಕುತ್ತಿದ್ದರೆ ನಿರಾಸೆ ಬೇಡ, ಈ ಅವಧಿಯಲ್ಲಿ ಕೆಲಸ ಸಿಗಲಿದೆ, ಕೆಲಸದಲ್ಲಿನ ಅಭದ್ರತೆ ದೂರಾಗುವುದು.
ವೈಯಕ್ತಿಕ ಬದುಕಿನಲ್ಲಿ ಕೂಡ ನೀವು ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು. ನಿಮ್ಮ ಕುಟುಂಬದಲ್ಲಿ ಸಂತೋಷದ ವಾತಾವರಣ ಬರಲಿದೆ. ಅಪೂರ್ಣವಾಗಿರುವ ಕೆಲಸಗಳು ಪೂರ್ಣಗೊಳ್ಳುವುದರಿಂದ ಖುಷಿಯಾಗಿರುತ್ತೀರಿ. ಆರೋಗ್ಯದ ದೃಷ್ಟಿಯಿಂದಲೂ ಈ ಸಮಯ ಉತ್ತಮವಾಗಿದೆ.
ಸಿಂಹ ರಾಶಿ
ಶನಿಯ ನಕ್ಷತ್ರ ಬದಲಾವಣೆ ನಿಮ್ಮ ರಾಶಿಯಲ್ಲಿ ಸಂತೋಷ ತರಲಿದೆ, ನೀವು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿದೆ.
ವ್ಯಾಪಾರಿಗಳು ಉತ್ತಮ ಲಾಭ ಗಳಿಸುವಿರಿ, ಹಣಕಾಸಿನ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿದೆ, ಉಳಿತಾಯ ಮಾಡಲು ಸಾಧ್ಯವಾಗುವುದು. ಅಲ್ಲದೆ ಹೊಸ ಹೂಡಿಕೆ ಬಗ್ಗೆ ಆಲೋಚಿಸುತ್ತಿದ್ದರೆ ಈ ಸಮಯ ತುಂಬಾ ಚೆನ್ನಾಗಿರಲಿದೆ.
ಆರೋಗ್ಯದ ದೃಷ್ಟಿಯಿಂದ ಈ ಅವಧಿ ನಿಮಗೆ ಅನುಕೂಲಕರವಾಗಿದೆ.
ನೀವು ಶನಿವಾರ ಶನಿ ದೇವಾಲಯಕ್ಕೆ ಭೇಟಿ ನೀಡಿದರೆ ಇನ್ನೂ ಒಳ್ಳೆಯದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications