Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ತುಲಾ ರಾಶಿ ಭವಿಷ್ಯ 2026: ಈ ವರ್ಷ ತುಲಾ ರಾಶಿಯವರಿಗಿದೆ ಅದೃಷ್ಟದ ಕಾಲ
ತುಲಾ ರಾಶಿಯವರಿಗೆ 2025ನೇ ವರ್ಷದಲ್ಲಿ ಹಲವು ರೀತಿಯಾಗಿ ಶುಭ ಮತ್ತು ಅಶುಭ ಯೋಗಗಳ ನೋಡಿದ್ದೇವೆ. ಅದ್ರಲ್ಲೂ ಹಲವರಿಗೆ ಮಿಶ್ರಫಲದಿಂದ ಕೂಡಿದ್ದ ವರ್ಷವಾಗಿತ್ತು. ಅದೇ ರೀತಿ 2026 ಕೂಡ ತುಲಾ ರಾಶಿಯರಿಗೆ ಬಹಳಷ್ಟು ಮಿಶ್ರಫಲಗಳನ್ನು ತರುವ ವರ್ಷ ವಾಗಿರಲಿದೆ. ನಿಮ್ಮ ಗ್ರಹಗತಿಗಳ ಆಧಾರದ ಮೇಲೆ ಈ ವರ್ಷದ ರಾಶಿಫಲದಲ್ಲಿ ಏನೆಲ್ಲಾ ಶುಭ ಹಾಗೂ ಅಶುಭವಿದೆ ಎಂದು ಹೇಳಲಾಗಿದೆ.
ತುಲಾ ರಾಶಿಯವರಿಗೆ 2026 ರ ವರ್ಷವು ಅವರ ವೃತ್ತಿ ಮತ್ತು ವ್ಯವಹಾರಗಳಲ್ಲಿ ಸ್ಥಿರತೆ ಮತ್ತು ಬೆಳವಣಿಗೆಯನ್ನು ತರಲಿದೆ. ಆರೋಗ್ಯ ಗುರಿಗಳು, ಆಪ್ತರ ವಿಚಾರಗಳು, ಅವಿವಾಹಿತರಲ್ಲಿನ ಹಣಕಾಸು ವಿಚಾರಗಳು, ವಿವಾಹ ಸಂಬಂಧಿ ವಿಚಾರ, ಮನೆ ನಿರ್ಮಾಣ, ತಂದೆ ತಾಯಿಯ ಹಾಗೂ ಸಂಬಂಧಿಕರ ವಿಚಾರ ವ್ಯಾಪಾರ ಹಾಗು ವ್ಯವಹಾರ ಸಂಬಂಧಿತ ವಿಚಾರಗಳಲ್ಲಿ ಯಾವ ರೀತಿಯಾಗಿ ಮಿಶ್ರಫಲವಿದೆ ಎಂಬುದನ್ನು ತಿಳಿದುಕೊಳ್ಳೋಣ.

ವರ್ಷದ ಆರಂಭದಲ್ಲಿ ನೀವು ನಿಮ್ಮ ಗುರಿಗಳ ಕಡೆ ಹೆಚ್ಚು ಸಮರ್ಪಿತರಾಗಿರಬೇಕು. ವರ್ಷವಿಡೀ ತುಲಾ ರಾಶಿಯ ಜನರಿಗೆ ಅದೃಷ್ಟಗಳಿವೆ. ಆದ್ರೆ ಅದರ ಫಲಿತಾಂಶಗಳಲ್ಲಿ ಏರಿಳಿತಗಳ ನೋಡಬಹುದು. ನೀವು ಹೊಸ ಕೆಲಸ ಅಥವಾ ವ್ಯವಹಾರ ವಿಸ್ತರಣೆಯನ್ನು ಮಾಡಲು ಈ ವರ್ಷವು ಅನುಕೂಲಕರ ಪರಿಸ್ಥಿತಿಗಳ ತರಲಿದೆ. ಬಾಕಿ ಇರುವ ನಿಮ್ಮ ಹಲವು ಯೋಜನೆಗಳ ಪ್ರಗತಿ ನೋಡಬಹುದು.
ಕುಟುಂಬ ವಿಚಾರದಲ್ಲಿ ತುಲಾ ರಾಶಿಯವರಿಗೆ ಮಿಶ್ರಫಲ
2026ರಲ್ಲಿ ತುಲಾ ರಾಶಿಯ ಜನರು ಕೌಟುಂಬಿಕ ವಿಚಾರಗಳಲ್ಲಿ ಮಿಶ್ರಫಲ ನೋಡುವಿರಿ. ವರ್ಷದ ಆರಂಭದಿಂದ ನಿಮ್ಮ ಹಲವು ಕೌಟುಂಬಿಕ ಯೋಜನೆಗಳಿಗೆ ಆರಂಭ ಸಿಗಲಿದೆ. ಅವಿವಾಹಿತರು ಮದುವೆ ಕುರಿತಾಗಿ ಈ ವರ್ಷ ಬಹಳಷ್ಟು ಕೆಲಸ ಮಾಡುವಿರಿ, ಇಷ್ಟು ವರ್ಷದ ಅಡ್ಡಿಗಳು ವರ್ಷದ ಆರಂಭದಲ್ಲಿ ಮುಂದುವರೆಯುತ್ತವೆ. ಆದ್ರೆ ವರ್ಷದ ಕೊನೆಯಲ್ಲಿ ವಿವಾಹ ಸಂಬಂಧಿತ ವಿಚಾರ ವೇಗ ಪಡೆಯುವುದು. ದಾಂಪತ್ಯ ವಿಚಾರದಲ್ಲಿನ ಮನಸ್ತಾಪಗಳು ಏರಿಳಿತದಿಂದ ಕೂಡಿರಲಿದೆ. ನಿಮ್ಮ ವಿಚ್ಛೇದನ ಸಂಬಂಧಿತ ನ್ಯಾಯಾಲಯ ವಿಚಾರದಲ್ಲಿ ನಿಮಗೆ ನೋವಿನ ದಿನಗಳಿವೆ. ಪ್ರೇಮ ವಿವಾಹಗಳು ಬಹಳ ಸಮಸ್ಯೆಗಳ ಮೂಲಕ ಬಗೆಹರಿಯಬಹುದು. ಈ ವರ್ಷ ನಿಕಟ ಸಂಬಂಧಿಯೊಬ್ಬರು ಮದುವೆಯಾಗಬಹುದು ಅಥವಾ ನಿಮ್ಮ ಕುಟುಂಬದಲ್ಲಿ ಕೆಲವು ಶುಭ ಕೆಲಸಗಳು ನಡೆಯಬಹುದು.
2026 ರ ವರ್ಷವು ತುಲಾ ರಾಶಿಯವರಿಗೆ ಆರ್ಥಿಕ ವಿಷಯಗಳಲ್ಲಿ ಪ್ರಯೋಜನಕಾರಿಯಾಗಿರುತ್ತದೆ. ನೀವು ನಿಮ್ಮ ಹಣಕಾಸಿನ ಯೋಜನೆಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಸಾಧ್ಯವಾಗುತ್ತದೆ. ಜೂನ್ 2026 ರ ನಂತರ ಗುರುವಿನ ಪ್ರಭಾವವು ಆದಾಯ ಮತ್ತು ಐಷಾರಾಮಿಗಳಲ್ಲಿ ಹೆಚ್ಚಳವನ್ನು ತರುತ್ತದೆ. ಆದಾಯದಲ್ಲಿ ಹೆಚ್ಚಳವು ಮನೆಯ ಹಲವು ಸಮಸ್ಯೆಗಳ ನಿವಾರಣೆಗೆ ಸಹಕಾರಿಯಾಗಲಿದೆ, ಇದು ನಿಮಗೆ ತೃಪ್ತಿ ತರಲಿದೆ. ನಿಮ್ಮ ವೆಚ್ಚಗಳು ಮತ್ತು ಉಳಿತಾಯದ ನಡುವೆ ಸರಿಯಾದ ಸಮತೋಲನವನ್ನು ನೀವು ಕಾಯ್ದುಕೊಂಡರೆ ವರ್ಷದ ಅಂತ್ಯದ ವೇಳೆಗೆ ನೀವು ಉತ್ತಮ ಆರ್ಥಿಕ ಶಕ್ತಿಯನ್ನು ಸಾಧಿಸಬಹುದು. ಹಾಗೆ ಖರ್ಚುಗಳಲ್ಲಿ ಶಿಸ್ತು ಕಾಪಾಡಿಕೊಂಡರೆ ವರ್ಷದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಡಿಸೆಂಬರ್ 2026 ರ ಸುಮಾರಿಗೆ ರಾಹು ಮತ್ತು ಕೇತುವಿನ ಸಂಚಾರದಿಂದಾಗಿ ಆದ್ಯತೆಗಳು ಬದಲಾಗುತ್ತವೆ.
ತುಲಾ ಆರೋಗ್ಯ ಭವಿಷ್ಯ
2026ರಲ್ಲಿ ತುಲಾ ರಾಶಿಯವರಿಗೆ ಆರೋಗ್ಯದ ವಿಷಯದಲ್ಲಿ ಅನುಕೂಲಕರವಾಗಿರುತ್ತದೆ. ನಿಮ್ಮ ದೈನಂದಿನ ದಿನಚರಿ ಮತ್ತು ಜೀವನಶೈಲಿಗೆ ನೀವು ವಿಶೇಷ ಗಮನ ಹರಿಸಬೇಕಾಗುತ್ತದೆ. ಮಾನಸಿಕ ಶಾಂತಿ ಮತ್ತು ದೈಹಿಕ ಸದೃಢತೆ ಎರಡೂ ಮುಖ್ಯವಾಗಿರುತ್ತದೆ. ವರ್ಷದ ಆರಂಭಿಕ ಹಂತಗಳಲ್ಲಿ ಹೆಚ್ಚುವರಿಯಾಗಿ ನೀವು ಆರೋಗ್ಯದ ಕಡೆ ಗಮನವಿಡಿ. ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಸಹ ಸುಧಾರಿಸುವ ಸಾಧ್ಯತೆಯಿದೆ.



Click it and Unblock the Notifications
