Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಫೆಬ್ರವರಿ 29ರಂದು ಇದೆ ಈ ವಿಶೇಷ ಯೋಗ, ಈ ದಿನ ಜನಿಸಿದ ಮಗುವಿನ ಭವಿಷ್ಯದ ಬಗ್ಗೆ ಜ್ಯೋತಿಷ್ಯ ಹೇಳುವುದೇನು?
ಈ ವರ್ಷ ಫೆಬ್ರವರಿ ಮಾಸದಲ್ಲಿ ಒಂದು ದಿನ ಹೆಚ್ಚಿದೆ, ನಾಲ್ಕು ವರ್ಷಗಳಿಗೊಮ್ಮೆ ಫೆಬ್ರವರಿಯಲ್ಲಿ ಒಂದು ದಿನ ಹೆಚ್ಚಾಗುವುದು. ಆದ್ದರಿಂದ ಈ ವರ್ಷವನ್ನು ಲೀಪ್ ಇಯರ್ ಎಂದು ಕರೆಯಲಾಗುವುದು.
ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದಲೂ ಈ ವರ್ಷ ಫೆಬ್ರವರಿ 29 ತುಂಬಾನೇ ವಿಶೇಷವಾಗಿದೆ. ಈ ದಿನ ತುಂಬಾ ವಿಶೇಷ ಯೋಗ ಏರ್ಪಟ್ಟಿದೆ, ಆದ್ದರಿಂದ ಈ ದಿನ ಜನಿಸುವ ಮಕ್ಕಳಿಗೂ ಆ ವಿಶೇಷ ಯೋಗದ ಫಲ ಸಿಗಲಿದೆ, ಈ ದಿನದ ವಿಶೇಷತೆ ಬಗ್ಗೆ ನೋಡುವುದಾದರೆ:

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಫೆಬ್ರವರಿ 29ರ ವಿಶೇಷತೆ
ಫೆಬ್ರವರಿ 29ಕ್ಕೆ ಸೂರ್ಯ, ಶನಿ, ಬುಧ ರಾಶಿಯಲ್ಲಿ ಇರಲಿದೆ. ಮಂಗಳ ಮತ್ತು ಶುಕ್ರ ಮಕರ ರಾಶಿಯಲ್ಲಿ ಇರಲಿದೆ, ಅಲ್ಲದೆ ಈ ತಿಂಗಳ ವಿಶೇಷವೆಂದರೆ ತಿಂಗಳು ಪ್ರಾರಂಭವಾಗಿರುವುದು ಗುರುವಾರ ಕೊನೆಯಾಗುತ್ತಿರುವುದು ಗುರುವಾರ.
ಈ ದಿನ ಶಶ ಯೋಗ ಉಂಟಾಗಲಿದೆ
ಈ ದಿನ ಶಸ ಯೋಗ ಇರುವುದರಿಂದ ವೃಷಭ, ಸಿಂಹ ರಾಶಿ, ವೃಶ್ಚಿಕ ರಾಶಿ ಹಾಗೂ ಕುಂಭ ರಾಶಿಯವರಿಗೆ ಒಳ್ಳೆಯದು, ಅಲ್ಲದೆ ಇದೇ ದಿನ ರುಚಕಾ ಯೋಗ ಇರುವುದರಿಂದ ಮೇಷ, ಕರ್ಕ, ತುಲಾ ಹಾಗೂ ಮಕರ ರಾಶಿಯವರಿಗೆ ತುಂಬಾ ಒಳ್ಳೆಯದು.
ಹುಟ್ಟುವ ಮಕ್ಕಳಿಗೆ ವಿಶೇಷ ವರ
ಈ ದಿನ ಅಂದರೆ ಫೆಬ್ರವರಿ 29ಕ್ಕೆ ಜನಸಿದ ಮಕ್ಕಳಿಗೆ ತಮ್ಮದೇ ಜನ್ಮ ದಿನಾಂಕದಂದು ಹುಟ್ಟು ಹಬ್ಬ ಆಚರಿಸಲು ನಾಲ್ಕು ವರ್ಷ ಕಾಯಬೇಕು, ಆದರೆ ಈ ಫಬ್ರವರಿ 29ಕ್ಕೆ ಜನಿಸಿದ ಮಕ್ಕಳು ಸ್ಪೆಷಲ್ ಯೋಗದಲ್ಲಿ ಜನಿಸಿದ್ದಾರೆ. ಈ ದಿನ ಮಕ್ಕಳು ಜನಿಸಿದರೆ ಆ ಮಕ್ಕಳ ಜೀವನದಲ್ಲಿ ಸಂಪತ್ತು ಹೆಚ್ಚಾಗುವುದು, ಸಂತೋಷದ ಬದುಕು ನಡೆಸುತ್ತಾರೆ.
ಫೆಬ್ರವರಿ 29ಕ್ಕೆ ತುಂಬಾ ಶುಭ ದಿನ
ಈ ದಿನ ತುಂಬಾನೇ ಶುಭವಾಗಿರುವುದರಿಂದ ಈ ದಿನ ಅನೇಕ ಮದುವೆಗಳು ನಡೆಯಲಿದೆ. ಫೆಬ್ರವರಿ 29 ಗುರುವಾರ. ಈ ದಿನಾಂಕದಂದು, ಮಾರ್ಚ್ 01 ರಂದು ಬೆಳಗ್ಗೆ 10.22 ರಿಂದ ಮರುದಿನ ಬೆಳಿಗ್ಗೆ 06.46 ರವರೆಗೆ ಶುಭ ಮುಹೂರ್ತವಿರುತ್ತದೆ. ಈ ದಿನ ಸ್ವಾತಿ ನಕ್ಷತ್ರ ಮತ್ತು ಪಂಚಮಿ ತಿಥಿಗಳು ಇವೆ, ಆದ್ದರಿಂದ ಈ ದಿನಾಂಕ ಮದುವೆಗೆ ತುಂಬಾ ಶುಭವಾಗಿದೆ.
ಫೆಬ್ರವರಿ 29ರಂದು ಈ ಶುಭ ಯೋಗ ಏರ್ಪಟ್ಟಿದೆ
ಈ ದಿನ ವೃದ್ಧಿ ಯೋಗವಿದೆ, ಈ ಯೋಗ ಫೆಬ್ರವರಿ 28ರಂದು ಸಂಜೆ 5:16ಕ್ಕೆ ಪ್ರಾರಂಭವಾಗುವುದು, ಈ ಯೋಗ ಫೆಬ್ರವರಿ 29 ಸಂಜೆ 05:54ರವೆಗೆ ಇರಲಿದೆ. ವೈದಿಕಶಾಸ್ತ್ರವು ಈ ಯೋಗವನ್ನು ತುಂಬ ಶುಭ ಎಂದು ಪರಿಗಣಿಸಲಾಗುವುದು, ಆದ್ದರಿಂದ ಈ ಯೋಗದಲ್ಲಿ ಹೊಸ ಕೆಲಸ ಶುರು ಮಾಡಿದರೆ ಈ ಯೋಗ ತುಂಬಾ ಶುಭ ಎಂದು ಹೇಳಲಾಗುವುದು. ವೃದ್ಧಿ ಯೋಗದ ಅಧಿಪತಿ ಸೂರ್ಯ, ಹಾಗಾಗಿ ಈ ಯೋಗದಲ್ಲಿ ಜನಿಸಿದವರು ತುಂಬಾ ಯಶಸ್ಸು ಕಾಣುತ್ತಾರೆ ಎಂದು ಹೇಳಲಾಗುವುದು.
ಫೆಬ್ರವರಿ 29 ಬರಲು ಕಾರಣವೇನು?
ಸಾಮಾನ್ಯವಾಗಿ ಫೆಬ್ರವರಿ ತಿಂಗಳೆಂದರೆ 28 ದಿನಗಳು, ಫೆಬ್ರವರಿ 29 4 ವರ್ಷಕ್ಕೊಮ್ಮೆ ಬರುತ್ತದೆ. ವರ್ಷದಲ್ಲಿ 365 ದಿನ, ಸೂರ್ಯ ಭೂಮಿಯ ಸುತ್ತ ಬರಲು ಸ್ವಲ್ಪ ಸಮಯ ಅಧಿಕ ತೆಗೆದುಕೊಳ್ಳುವುದು ಹಾಗಾಗಿ ನಾಲ್ಕು ವರ್ಷಕ್ಕೊಮ್ಮೆ ಒಂದು ದಿನ ಅಧಿಕ ಬರುವುದು.
ಭೂಮಿಯು ಸೂರ್ಯ ಸುತ್ತ ಸುತ್ತುತ್ತದೆ, ಹೀಗೆ ಭೂಮಿಯು ಸೂರ್ಯನ ಸುತ್ತ ಒಂದು ಸುತ್ತು ಹಾಕಲು 365.242189 ದಿನಗಳು ಅಥವಾ 365 ದಿನ 5 ಗಂಟೆ, 48 ನಿಮಿಷ ಮತ್ತು 45 ಸೆಕೆಂಡ್ ಸಮಯ ತೆಗೆದುಕೊಳ್ಳುತ್ತದೆ. ಈ ಸಂಖ್ಯೆಯನ್ನು 4 ವರ್ಷಗಳ ಬಳಿಕ ಒಟ್ಟು ಮಾಡಿದಾಗ 24 ಗಂಟೆಯಾಗುತ್ತದೆ. ಹೀಗಾಗಿ 4 ವರ್ಷಕ್ಕೊಮ್ಮೆ ಒಂದು ದಿನ ಹೆಚ್ಚು ಬರುವುದು. ಆ ಹೆಚ್ಚಿನ ದಿನವನ್ನು ಫೆಬ್ರವರಿಗೆ ಸೇರಿಸಲಾಗಿದೆ.
ಮೊದಲು ಜೂಲಿಯನ್ ಕ್ಯಾಲೆಂಡರ್‌ನಲ್ಲಿ ಅಧಿಕ ವರ್ಷಗಳನ್ನು 366 ದಿನಗಳೊಂದಿಗೆ ಸೇರಿಸಲಾಯಿತು. ಆದರೆ ಅಧಿಕ ವರ್ಷದಲ್ಲಿ ಫೆಬ್ರವರಿ 23 ಎರಡು ಬಾರಿ ಬರುತ್ತಿತ್ತು. ಹಾಗಾಗಿ ಈ ರೀತಿ ಒಂದೇ ದಿನ ಎರಡು ಬಾರಿ ಬರುತ್ತಿರುವುದರಿಂದ ಸಮಸ್ಯೆಯಾಗಿತ್ತು. ಹೀಗಾಗಿ ಫೆ.23ನ್ನು ಒಂದೇ ಬಾರಿ ಬರುವಂತೆ ಮಾಡಿ ಅಧಿಕ ವರ್ಷದಂದು ಫೆ.29ನ್ನು ಪರಿಚಯಿಸಲಾಯಿತು. ಇದನ್ನು ಅಧಿಕವರ್ಷವೆಂದು ಕರೆಯಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications