Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
2025ರ ಆರಂಭದಲ್ಲಿಯೇ ಲಕ್ಷ್ಮಿ ನಾರಾಯಣ ಯೋಗ: ಈ 3 ರಾಶಿಗಳು ಹಣದ ಬಗ್ಗೆ ಚಿಂತೆಯೇ ಮಾಡಬೇಕಾಗಿಲ್ಲ
ಜ್ಯೋತಿಷ್ಯವು ಯಾವ ರಾಶಯಲ್ಲಿ ಲಕ್ಷ್ಮಿ ನಾರಾಯಣ ಯೋಗವಿದೆ ಅವರು ಹಣದ ಬಗ್ಗೆ ಚಿಂತೆ ಮಾಡಲೇಬೇಕಾಗಿಲ್ಲ, ಆ ಅವಧಿಯಲ್ಲಿ ಅವರ ಮೇಲೆ ಲಕ್ಷ್ಮಿ ಕೃಪೆ ಹೆಚ್ಚಿರಲಿದೆ, ಹೀಗಾಗಿ ಬರಬೇಕಾಗಿರುವ ಹಣ ಕೈ ಸೇರುವುದು, ವ್ಯಾಪಾರಿಗಳಾಗಿದ್ದರೆ ತುಂಬಾನೇ ಒಳ್ಳೆಯ ಲಾಭ ಪಡೆಯಲು ಸಾಧ್ಯವಾಗುವುದು, ಹಣ ಪಡೆಯಲು ಮಾಡುವ ಪ್ರಯತ್ನದಲ್ಲಿ ಯಶಸ್ಸು ಸಿಗಲಿದೆ, ಹೀಗಾಗಿ ಲಕ್ಷ್ಮಿ ನಾರಾಯಣ ಯೋಗವಿದ್ದರೆ ರಾಜಯೋಗ ಸಂಪತ್ತಿಗೆ ಯಾವ ತೊಂದರೆಯೂ ಆಗಲ್ಲ ಎಂದು ಹೇಳಲಾಗುವುದು.
2025ರ ಆರಂಭದಲ್ಲಿಯೇ ಲಕ್ಷ್ಮಿ ನಾರಾಯಣ ಯೋಗದಿಂದಾಗಿ ಕೆಲ ರಾಶಿಯವರು ಅತ್ಯಾಧ್ಬುತ ಯೋಗ ಪಡೆಯಲಿದ್ದಾರೆ, ಆ ರಾಶಿಗಳಾವುವು ಎಂದು ನೋಡೋಣ ಬನ್ನಿ:

ಲಕ್ಷ್ಮಿ ನಾರಾಯಣ ಯೋಗ ಎಂದರೇನು?
ಬುಧ ಮತ್ತು ಶುಕ್ರ ಗ್ರಹದ ಸಂಯೋಗವಾದಾಗ ಲಕ್ಷ್ಮಿ ನಾರಾಯಣ ಯೋಗ ಉಂಟಾಗುವುದು, ಈ ಲಕ್ಷ್ಮಿ ನಾರಾಯಣ ಉಂಟಾದಾಗ ಇದರ ಪ್ರಭಾವದಿಂದಾಗಿ ಕೆಲ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ ಎಂದು ಹೇಳುವಂತೆ ಆರ್ಥಿಕವಾಗಿ ತುಂಬಾ ಒಳ್ಳೆಯ ಪ್ರಯೋಜನ ಪಡೆಯುತ್ತಾರೆ.
2025ರಲ್ಲಿ ಪ್ರಾರಂಭದಲ್ಲಿಯೇ ಇದೆ ಲಕ್ಷ್ಮಿ ನಾರಾಯಣ ಯೋಗ
ಶುಕ್ರನು 2025ರ ಜವವರಿ 28ಕ್ಕೆ ಮೀನ ರಾಶಿಗೆ ಸಂಚರಿಸಲಿದೆ. ಬುಧವು ಫೆಬ್ರವರಿ 27ಕ್ಕೆ ಮೀನ ರಾಶಿಗೆ ಸಂಚರಿಸಲಿದೆ. ಈ ಎರಡೂ ರಾಶಿಗಳ ಮೀನ ರಾಶಿಯಲ್ಲಿ ಸಂಯೋಗವಾದಾಗ ಲಕ್ಷ್ಮಿ ನಾರಾಯಣ ಯೋಗ ಉಂಟಾಗಲಿದೆ. ಈ ಲಕ್ಷ್ಮಿ ನಾರಾಯಣ ಯೋಗ 69 ದಿನಗಳ ಕಾಲ ಇರಲಿದೆ, ಈ ಅವಧಿ ಈ ರಾಶಿಗಳ ಸಂಪತ್ತು ಹೆಚ್ಚಿಸಲಿದೆ.
ಹೊಸ ವರ್ಷದಲ್ಲಿ ಮನೆ ಖರೀದಿ ಮಾಡಬೇಕು ಅಥವಾ ಗಾಡಿ ಖರೀದಿ ಮಾಡಬೇಕು ಅಥವಾ ಉದ್ಯೋಗದಲ್ಲಿ ಹೊಸ ಎತ್ತರಕ್ಕೆ ತಲುಪಬೇಕೆಂದು ಬಯಸುವವರಿಗೆ ಈ ಅವಧಿಯಲ್ಲಿ ನಿಮ್ಮಾಸೆ ಈಡೇರಲಿದೆ.
ಮೇಷ ರಾಶಿ
ಮೇಷ ರಾಶಿಯಲ್ಲಿ 12ನೇ ಮನೆಯಲ್ಲಿ ಲಕ್ಷ್ಮಿ ನಾರಾಯಣ ಯೋಗ ರೂಪುಗೊಳ್ಳಲಿದೆ. ಈ ಅವಧಿಯಲ್ಲಿ ಹಣದ ಕೊರತೆ ಇರಲ್ಲ, ಭೂಮಿ ಮತ್ತಿತರ ವ್ಯವಹಾರದಿಂದ ನೀವು ಉತ್ತಮ ಲಾಭ ಗಳಿಸುತ್ತೀರಿ. ಈ ಲಕ್ಷ್ಮಿ ನಾರಾಯಣ ಯೋಗ ಸಮಾಜದಲ್ಲಿ ನಿಮ್ಮ ಸ್ಥಾನ ಮಾನ ಹೆಚ್ಚಿಸಲಿದೆ. ಈ ಅವಧಿಯಲ್ಲಿ ಕೆಲಸ ಬದಲಾವಣೆ ಅಥವಾ ಹೊಸ ವ್ಯಾಪಾರ ಶುರು ಮಾಡುವುದು ಮಾಡಿದರೆ ಅದರಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುವುದು.
ಈ ಅವಧಿಯಲ್ಲಿ ಕುಟುಂಬ ಬದುಕು ತುಂಬಾ ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವೆ ಸಾಮರಸ್ಯ ಹೆಚ್ಚಾಗಲಿದೆ.
ಮಿಥುನ ರಾಶಿ
ಮೀನ ರಾಶಿಯಲ್ಲಿ ಶುಕ್ರ ಮತ್ತು ಬುಧ ಯುತಿ ಉಂಟಾದಾಗ ಮಿಥುನ ರಾಶಿಯ 10ನೇ ಮನೆಯಲಲ್ಲಿ ಲಕ್ಷ್ಮಿ ನಾರಾಯಣ ಯೋಗ ಉಂಟಾಗಲಿದೆ. ಈ ಯೋಗದ ಬಲದಿಂದ ಇಟ್ಟ ಹೆಜ್ಜೆಯಲ್ಲಿ ಯಶಸ್ಸು ಪಡೆಯುತ್ತೀರಿ. ನೀವು ಪ್ರಯತ್ನ ಪಡುತ್ತಿರುವ ಉದ್ಯೋಗ ಪಡೆಯಲು ಸಾಧ್ಯವಾಗುವುದು. ವಿದೇಶದಲ್ಲಿ ಕೆಲಸಕ್ಕಾಗಿ ಪ್ರಯತ್ನ ಮಾಡುತ್ತಿದ್ದರೆ ನೀವು ಬಯಸಿದಂತೆಯೇ ವಿದೇಶಕ್ಕೆ ಹೋಗಲು ಸಾಧ್ಯವಾಗಲಿದೆ ಎಂದು ಈ ಯೋಗ ಹೇಳುತ್ತದೆ.
ವೃತ್ತಿ ಬದುಕಿನಲ್ಲಿ ಬಡ್ತಿ ಪಡೆಯುತ್ತೀರಿ, ನಿಮ್ಮ ಕೆಲಸಕ್ಕೆ ಮೇಲಾಧಿಕಾರಿಗಳ ಬೆಂಬಲ ಸಿಗಲಿದೆ, ಆರ್ಥಿಕವಾಗಿ ತುಂಬಾ ಚೆನ್ನಾಗಿರುವುದರಿಂದ ನಿಮ್ಮ ಸೌಕರ್ಯ ಹೆಚ್ಚಾಗಲಿದೆ.
ಮೀನ ರಾಶಿ
ಮೀನ ರಾಶಿಯ ಲಗ್ನ ಮನೆಯಲ್ಲಿ ಲಕ್ಷ್ಮಿ ನಾರಾಯಣ ಯೋಗ ಉಂಟಾಗಲಿದೆ. ಆರ್ಥಿಕವಾಗಿ ಈ ಅವಧಿ ತುಂಬಾ ಪ್ರಯೋಜನಕಾರಿಯಾಗಿದೆ. ನೀವು ಹೊಸ ಮನೆಗೆ ಹೋಗಬೇಕು ಅಥವಾ ಹೊಸ ಗಾಡಿ ಖರೀದಿಸಬೇಕು ಎಂದು ಬಯಸುವುದಾದರೆ ಈ ಅವಧಿಯಲ್ಲಿ ನಿಮಗೆ ಸಾಧ್ಯವಾಗುವುದು, ವ್ಯಾಪಾರಸ್ಥರು ಲಾಭ ಪಡೆಯುತ್ತೀರಿ.
ವೈಯಕ್ತಿಕ ಬದುಕಿನ ದೃಷ್ಟಿಯಿಂದ ಈ ಅವಧಿ ಅನುಕೂಲರವಾಗಿದೆ. ನಿಮ್ಮ ಹಾಗೂ ಸಂಗಾತಿಯ ನಡುವಿನ ಬಾಂಧವ್ಯ ತುಂಬಾ ಚೆನ್ನಾಗಿರಲಿದೆ, ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿದೆ.
ಸೂಚನೆ: ಇಲ್ಲಿ ನಾವು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಹೇಳಿದ್ದೇವೆ, ನೀವು ತೆಗೆದುಕೊಳ್ಳುವ ನಿರ್ಧಾರಗಳಿಂದ ಲಾಭ -ನಷ್ಟ ಉಂಟಾದರೆ https://kannada.boldsky.com/ ಹೊಣೆಯಲ್ಲ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











