Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
46 ತಿಂಗಳ ಬಳಿಕ ಲಕ್ಷ್ಮೀ ನಾರಾಯಣ ಯೋಗ: ಮೂರು ರಾಶಿಯವರಿಗೆ ಬಯಸಿದ ಜೀವನ
ಜ್ಯೋತಿಷ್ಯದ ಪ್ರಕಾರ ಹಲವು ರಾಶಿಗಳ ಚಲನೆಯು ವ್ಯಕ್ತಿಯ ಜೀವನದಲ್ಲಿ ಮಹತ್ತರ ಬದಲಾವಣೆಗಳ ತರಲು ಕಾರಣವಾಗುವ ಅಂಶ ಎಂದು ಪರಿಗಣಿಸಲಾಗಿದೆ. ಅದ್ರಲ್ಲೂ ಜನವರಿ ತಿಂಗಳಲ್ಲಿ ಎಲ್ಲಾ ಗ್ರಹಗಳು ತಮ್ಮ ಸ್ಥಾನ ಬದಲಾಯಿಸುವುದು ನೋಡಬಹುದು. ಇದರಿಂದಾಗಿ ಎಲ್ಲಾ ರಾಶಿಗಳಲ್ಲಿನ ಬದಲಾವಣೆಯು ಹಲವರಿಗೆ ಶುಭ ಹಾಗೂ ಅಶುಭ ಕಾರಕಗಳು ನಡೆಯುವುದು ನೋಡಬಹುದು.
ಹಾಗೆ ಈ ಜನವರಿಯಲ್ಲಿ ಶುಕ್ರ ಹಾಗೂ ಬುಧನ ಚಲನೆಯಿಂದಾಗಿ ಹಲವು ರೀತಿ ಯೋಗ ನೋಡಬಹುದು. ಶುಕ್ರ ಮತ್ತು ಬುಧರ ನಡುವಿನ ಸಂಯೋಗವು 46 ತಿಂಗಳ ನಂತರ ಮಕರ ರಾಶಿಯಲ್ಲಿ ರೂಪುಗೊಳ್ಳಲಿದೆ. ಸಂಪತ್ತನ್ನು ನೀಡುವ ಶುಕ್ರನು ಜನವರಿ 13 ರಂದು ಕರ್ಮವನ್ನು ನೀಡುವ ಶನಿಯ ರಾಶಿಯಾದ ಮಕರ ರಾಶಿಗೆ ಪ್ರವೇಶಿಸುತ್ತಾನೆ.

ಈ ಸಂಯೋಗವು ಜನವರಿ 17 ರಂದು ಗ್ರಹಗಳ ರಾಜಕುಮಾರ ಬುಧನು ಮಕರ ರಾಶಿಗೆ ಪ್ರವೇಶಿಸಿದಾಗ ವಿಶೇಷ ಯೋಗವು ರೂಪುಗೊಳ್ಳಲಿದೆ. ಈ ವಿಶೇಷ ಸಮಯದಲ್ಲಿ ಲಕ್ಷ್ಮಿ ನಾರಾಯಣ ರಾಜಯೋಗವನ್ನು ಸೃಷ್ಟಿಸುತ್ತದೆ. ಈ ರಾಜಯೋಗವು ಕೆಲವು ರಾಶಿ ಜನರಿಗೆ ಅದೃಷ್ಟವನ್ನು ತರಲಿದೆ. 46 ತಿಂಗಳ ನಂತರ ಶುಕ್ರ ಹಾಗೂ ಬುಧ ಮಕರ ರಾಶಿಯಲ್ಲಿ ಸಂಯೋಗವಾಗುತ್ತಿದ್ದಾರೆ. ಹಾಗಾದ್ರೆ ಈ ಯೋಗದಿಂದ ಯಾರಿಗೆಲ್ಲಾ ಶುಭದಾಯಕ ಯಾರಿಗೆ ಲಾಭಕರ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ತುಲಾ ರಾಶಿ
ಲಕ್ಷ್ಮಿ ನಾರಾಯಣ ರಾಜಯೋಗವು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಈ ಯೋಗವು ನಿಮ್ಮ ರಾಶಿಯ 4ನೇ ಮನೆಯಲ್ಲಿ ರೂಪುಗೊಳ್ಳಲಿದೆ. ಆದ್ದರಿಂದ, ಈ ಸಮಯದಲ್ಲಿ ನೀವು ಭೌತಿಕ ಸೌಕರ್ಯಗಳನ್ನು ಪಡೆಯಬಹುದು. ಚಿನ್ನ, ಬೆಳ್ಳಿ ಅಥವಾ ಆಸ್ತಿಯಲ್ಲಿ ಹೂಡಿಕೆ ಮಾಡುವ ಸಾಧ್ಯತೆಗಳೂ ಇವೆ. ಈ ಸಮಯದಲ್ಲಿ ಭವಿಷ್ಯದ ಯೋಜನೆಗಳು ಹೆಚ್ಚು ಸಂಘಟಿತ ಮತ್ತು ದೃಢವಾಗಿರುತ್ತವೆ. ನಿಮ್ಮ ಅದೃಷ್ಟದ ಕಾರಣಕ್ಕೆ ಬಹಳ ಸಮಯದಿಂದ ಸಾಧಿಸಲು ಆಗದೆ ಇದ್ದ ಕೆಲಸವನ್ನು ಮಾಡಿ ಮುಗಿಸುವಿರಿ. ವಾಹನ ಖರೀದಿ, ಅಥವಾ ಹೊಸ ಉದ್ಯೋಗದಲ್ಲಿ ನಿಮಗೆ ಲಾಭವಿದೆ. ನ್ಯಾಯಾಲಯ ಸಂಬಂಧಿತ ವಿಚಾರದಲ್ಲಿ ಶುಭವಾಗುತ್ತಿದೆ.
ವೃಷಭ ರಾಶಿ
ಲಕ್ಷ್ಮಿ ನಾರಾಯಣ ರಾಜಯೋಗವು ವೃಷಭ ರಾಶಿಯವರಿಗೆ ಅನುಕೂಲಕರವೆಂದು ಸಾಬೀತುಪಡಿಸಬಹುದು. ಈ ರಾಜಯೋಗವು ನಿಮ್ಮ ರಾಶಿಯ ಆದಾಯ ಮತ್ತು ಲಾಭದ ಮನೆಯಲ್ಲಿ ರೂಪುಗೊಳ್ಳುತ್ತದೆ. ಆದ್ದರಿಂದ ಈ ಸಮಯದಲ್ಲಿ ನೀವು ಆದಾಯದಲ್ಲಿ ಗಮನಾರ್ಹ ಲಾಭಗಳ ಅನುಭವಿಸಬಹುದು. ಈ ಸಮಯದಲ್ಲಿ ಹೊಸ ಆದಾಯದ ಮಾರ್ಗಗಳು ಸಹ ತೆರೆದುಕೊಳ್ಳಬಹುದು. ನಿಮ್ಮ ಹಣಕಾಸಿನ ವಿಚಾರದಲ್ಲಿ ಉತ್ತಮ ಲಾಭದಾಯಕ ದಿನಗಳು ಬರಲಿವೆ. ಹಣಕಾಸಿನ ವಿಚಾರವು ನೀವು ಅಂದುಕೊಂಡಂತೆ ಇರಲಿದೆ. ಉಳಿತಾಯದಲ್ಲಿನ ಹೆಚ್ಚಳವು ನಿಮ್ಮಲ್ಲಿ ನೆಮ್ಮದಿಗೆ ಕಾರಣವಾಗಲಿದೆ.
ಮಕರ ರಾಶಿ
ಲಕ್ಷ್ಮಿ ನಾರಾಯಣ ಯೋಗವು ನಿಮಗೆ ಸಕಾರಾತ್ಮಕವೆಂದು ಸಾಬೀತುಪಡಿಸಬಹುದು. ಈ ಯೋಗವು ನಿಮ್ಮ ರಾಶಿಯ ಲಗ್ನ ಮನೆಯಲ್ಲಿ ರೂಪುಗೊಳ್ಳುತ್ತದೆ. ನಿಮ್ಮ ವ್ಯಕ್ತಿತ್ವವು ಸುಧಾರಿಸುತ್ತದೆ ಮತ್ತು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಅವಿವಾಹಿತರಿಗೆ ಈ ಸಮಯದಲ್ಲಿ ಶುಭ ಸುದ್ದಿ ಇದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಲಾಭವಿದೆ. ಹಾಗೆ ನೀವು ವ್ಯಾಪಾರಿಗಳಾಗಿದ್ದರೆ ಈ ಸಮಯವು ನಿಮ್ಮ ಆದಾಯದಲ್ಲಿ ಹೆಚ್ಚಳವಾಗಲು ಕಾರಣವಾಗುತ್ತಿದೆ. ಮಕ್ಕಳ ಉದ್ಯೋಗ ಸಂಬಂಧಿತ ವಿಚಾರದಲ್ಲಿ ಇದ್ದ ಅಡ್ಡಿಗಳು ನಿವಾರಣೆಯಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications
