Latest Updates
-
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ!
ಬುಧ-ಶುಕ್ರನಿಂದ ಲಕ್ಷ್ಮಿ ನಾರಾಯಣ ರಾಜಯೋಗ: ಈ ರಾಶಿಯವರಲ್ಲಿ ಹಣದ ಹರಿವು! ಕಷ್ಟಗಳು ದೂರ!
ಜ್ಯೋತಿಷ್ಯದಲ್ಲಿ ಎಲ್ಲಾ ಗ್ರಹಗಳ ಸಂಚಾರವು ಪ್ರಮುಖ. ಹಾಗೆ ಒಂದೊಂದು ಗ್ರಹಗಳ ಚಲನೆಯು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡುವುದು ನೋಡಬಹುದು. ಹೀಗೆ ಗ್ರಹಗಳ ಸಂಚಾರದಿಂದಾಗಿ ಹಲವು ರೀತಿಯ ಯೋಗಗಳು ಉಂಟಾಗುವುದು ನೋಡಬಹುದು. ಸದ್ಯ ಈಗ ನವೆಂಬರ್‌ನಲ್ಲಿ ಪ್ರಮುಖವಾಗಿ ಶುಕ್ರನ ಸಂಚಾರ ಗಮನಿಸಬಹುದು.
ಶುಕ್ರನು ಬುಧನೊಂದಿಗೆ ಸಂಯೋಗವಾಗುತ್ತಿದ್ದಾನೆ. ಹೌದು ನವೆಂಬರ್‌ನಲ್ಲಿ ಶುಕ್ರ ಹಾಗೂ ಬುಧನ ಸಂಯೋಗವು ಹೊಸ ಯೋಗ ರೂಪಿಸಲಿದೆ. ಲಕ್ಷ್ಮಿ ನಾರಾಯಣ ರಾಜಯೋಗ ಎಂಬ ಅತ್ಯಂತ ಶುಭ ಯೋಗವು ರೂಪುಗೊಳ್ಳುತ್ತದೆ. ಈ ಸಂದರ್ಭದಲ್ಲಿ, ಶುಕ್ರ ಮತ್ತು ಬುಧ ವೃಶ್ಚಿಕ ರಾಶಿಯಲ್ಲಿ ಒಟ್ಟಿಗೆ ಸಂಚರಿಸುತ್ತಾರೆ.

ಈ ಅಪರೂಪದ ರಾಜಯೋಗದಿಂದ ಹಲವು ರಾಶಿಯವರಿಗೆ ಲಾಭದಾಯಕ ಹಾಗೆ ಹಲವು ರಾಶಿಗಳಲ್ಲಿ ಶುಭವನ್ನು ನೋಡಬಹುದು. ಅದ್ರಲ್ಲೂ ಹಲವು ರಾಶಿಗಳಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಲಿದೆ. ಹಣದ ಸಮಸ್ಯೆಗಳು ಕೊನೆಗೊಳ್ಳುತ್ತವೆ ಮತ್ತು ವ್ಯವಹಾರವು ಪ್ರಗತಿ ಕಾಣಲಿದೆ. ಈಗ ಶುಕ್ರ ಮತ್ತು ಬುಧರಿಂದ ರೂಪುಗೊಂಡ ಲಕ್ಷ್ಮಿ ನಾರಾಯಣ ರಾಜಯೋಗದಿಂದಾಗಿ ಯಾವ ರಾಶಿ ಅದೃಷ್ಟಶಾಲಿಯಾಗುತ್ತವೆ ಎಂದು ನೋಡೋಣ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರ ಮೊದಲ ಮನೆಯಲ್ಲಿ ಲಕ್ಷ್ಮಿ ನಾರಾಯಣ ರಾಜಯೋಗ ರೂಪುಗೊಳ್ಳಲಿದೆ. ಇದು ಈ ರಾಶಿಯವರ ವ್ಯಕ್ತಿತ್ವವನ್ನು ಸುಧಾರಿಸುತ್ತದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ವೃತ್ತಿಜೀವನದಲ್ಲಿ ಪ್ರಗತಿಗೆ ಹೊಸ ಅವಕಾಶಗಳು ಲಭ್ಯವಾಗುತ್ತವೆ. ನಿಮ್ಮ ಬಹು ದಿನದಿಂದ ಸಿಲುಕಿರುವ ಹಣ ನಿಮ್ಮ ಕೈ ಸೇರಲಿದೆ. ಆಪ್ತರಿಂದ ಬರಬೇಕಿದ್ದ ಹಣ ಮರಳಿ ಪಡೆಯಬಹುದು. ನಿಮ್ಮ ಮನೆಯ ವಿಚಾರದಲ್ಲಿ ಇದ್ದ ಒತ್ತಡವೊಂದು ನಿವಾರಣೆಯಾಗಲಿದೆ. ಸಂಬಂಧಿಕರ ನಡುವೆ ಇದ್ದ ಮನಸ್ತಾಪಗಳು ನಿವಾರಣೆಯಾಗಲಿದೆ. ವ್ಯಾಪಾರಿಗಳು ಬಹಳ ಸಮಯದಿಂದ ಎದುರಿಸಿದ್ದ ಒತ್ತಡ ಅಥವಾ ಅಡೆತಡೆಗಳು ನಿವಾರಣೆಯಾಗಲಿದೆ.
ಮೇಷ ರಾಶಿ
ಬುಧ ಮತ್ತು ಶುಕ್ರರ ಸಂಯೋಗದಿಂದಾಗಿ ಮೇಷ ರಾಶಿಯ 8ನೇ ಮನೆಯಲ್ಲಿ ಲಕ್ಷ್ಮಿ ನಾರಾಯಣ ರಾಜಯೋಗ ರೂಪುಗೊಳ್ಳಲಿದೆ. ಇದರಿಂದಾಗಿ ನಿಮ್ಮ ಹಲವು ಕಷ್ಟಗಳು ನಿವಾರಣೆಯಾಗಲಿದೆ. ವಿದೇಶ ಪ್ರಯಾಣದಲ್ಲಿದ್ದ ಅಡ್ಡಿ ನಿವಾರಣೆಯಾಗಲಿದೆ. ವೃತ್ತಿಜೀವನದಲ್ಲಿ ಉತ್ತಮ ಪ್ರಗತಿ ಸಾಧಿಸುವ ಅವಕಾಶಗಳು ಲಭ್ಯವಿರುತ್ತವೆ. ಸರ್ಕಾರಿ ಉದ್ಯೋಗಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗುತ್ತದೆ. ನಿಮ್ಮ ಹಣದ ಸಮಸ್ಯೆಗಳು ನಿವಾರಣೆಯಾಗಲಿದೆ. ಮನೆಗಾಗಿ ನೀವು ದುಬಾರಿ ವಸ್ತುವನ್ನು ಖರೀದಿಸಬಹುದು. ಚಿನ್ನ ಬೆಳ್ಳಿ ಖರೀದಿಯಂತಹ ಕೆಲಸಕ್ಕೂ ನೀವು ಮುಂದಾಗಬಹುದು.
ಸಿಂಹ ರಾಶಿ
ಸಿಂಹ ರಾಶಿಯವರ 4ನೇ ಮನೆಯಲ್ಲಿ ಬುಧ ಮತ್ತು ಶುಕ್ರ ಸಂಯೋಗವು ಲಕ್ಷ್ಮಿ ನಾರಾಯಣ ರಾಜಯೋಗವನ್ನು ಸೃಷ್ಟಿಸುತ್ತದೆ. ಇದರಿಂದಾಗಿ ನಿಮ್ಮ ಹೊಸ ಯೋಜನೆಗಳು ಫಲ ನೀಡಲಿವೆ. ಅದ್ರಲ್ಲೂ ಹೊಸ ಮನೆ ಮತ್ತು ವಾಹನ ಖರೀದಿಸಲು ಅವಕಾಶಗಳು ಸಿಗುತ್ತವೆ. ಉದ್ಯಮಿಗಳಿಗೆ ಉತ್ತಮ ಲಾಭ ತರುವ ಹೊಸ ಒಪ್ಪಂದಗಳ ಮಾಡಿಕೊಳ್ಳಬಹುದು. ನಿಮ್ಮ ಬಹುದಿನದ ಬಯಕೆಯನ್ನು ಈಡೇರಿಸಿಕೊಳ್ಳಲು ಇದು ಉತ್ತಮ ಸಮಯ. ಆರ್ಥಿಕ ಲಾಭ ಹೆಚ್ಚಾಗಲಿದೆ. ಸಾಲದ ಪ್ರಮಾಣ ಇಳಿಕೆಯಾಗಲಿದೆ. ಹೂಡಿಕೆಯಿಂದ ನೀವು ಲಾಭ ನೋಡಬಹುದು. ನಿಮ್ಮ ಪ್ರೀತಿಯ ವಿಚಾರ ಹಾಗೆ ದಾಂಪತ್ಯ ವಿಚಾರದಲ್ಲಿ ಶುಭವಾಗುತ್ತದೆ. ಆಪ್ತರಿಂದ ನಿಮಗೆ ಬರಬೇಕಿದ್ದ ಹಣ ಪಡೆಯಬಹುದು. ಆರೋಗ್ಯದಲ್ಲಿದ್ದ ಏರುಪೇರು ನಿಧಾನವಾಗಿ ಬಗೆಹರಿಯಲಿದೆ. ಶುಭ ಕಾರ್ಯಗಳಲ್ಲಿ ನೀವು ಭಾಗಿಯಾಗುತ್ತೀರಿ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications