Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೃಷ್ಣ ಜನ್ಮಾಷ್ಟಮಿಯಂದು ಮೂರು ಶುಭಯೋಗ: ಈ ರಾಶಿಯವರಲ್ಲಿ ನಡೆಯಲಿದೆ ಚಮತ್ಕಾರ!
ಹಿಂದೂ ಪುರಾಣಗಳಲ್ಲಿ ಉಲ್ಲೇಖಿಸಿರುವಂತೆ ಪ್ರತಿಯೊಂದು ಹಬ್ಬವೂ ಕೂಡ ಒಂದು ನಿರ್ಧಿಷ್ಟ ದಿನದಂದು ಯೋಗದಂದು, ಮುಹೂರ್ತದಂದು ಬರುವುದು ನೋಡಬಹುದು. ಹಾಗೆ ಈ ಹಬ್ಬಗಳಲ್ಲಿ ವಿಶೇಷ ರೀತಿಯಲ್ಲಿ ಯೋಗಗಳು ಉಂಟಾಗುವುದು ಸಹ ಸಾಮಾನ್ಯ. ಇನ್ನು ಮುಂಬರುವ ಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲೂ ಕೂಡ ನಾವು ಅಚ್ಚರಿಯ ಗ್ರಹಗಳ ಚಲನೆ ಹಾಗೂ ಯೋಗಗಳ ನೋಡಬಹುದು.
ಆಗಸ್ಟ್ 16 ರಂದು ಜನ್ಮಾಷ್ಟಮಿ ಹಬ್ಬವನ್ನು ಆಚರಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಈ ದಿನವು ಬಹಳ ವಿಶೇಷವಾಗಿರುತ್ತದೆ. ಗ್ರಹಗಳ ಅಪರೂಪದ ಸಂಯೋಜನೆ ರೂಪುಗೊಳ್ಳುತ್ತಿದೆ. ವೃದ್ಧಿ ಯೋಗ, ಧ್ರುವ ಯೋಗ ಮತ್ತು ಬುಧಾದಿತ್ಯ ಯೋಗ ರೂಪುಗೊಳ್ಳುತ್ತದೆ. ಚಂದ್ರನು ವೃಷಭ ರಾಶಿ ಪ್ರವೇಶಿಸಲಿದ್ದಾನೆ ಹಾಗೆ ಇದು ಚಂದ್ರನ ಉತ್ತುಂಗದ ರಾಶಿ ಎನ್ನಲಾಗಿದೆ ಹಾಗೆ ಸೂರ್ಯನು ಸಿಂಹ ರಾಶಿ ಪ್ರವೇಶಿಸುವುದು ಅಚ್ಚರಿಯ ಫಲಿತಾಂಶಗಳ ತರಲಿದೆ.

ಕೃಷ್ಣ ಜನ್ಮಾಷ್ಟಮಿಯಂದು ಶನಿ, ರಾಹು ಮತ್ತು ಕೇತು ಬೇರೆ ಬೇರೆ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿರುವುದು ನೋಡಬಹುದು. ಈ ಹಲವು ರೀತಿಯ ಸಂಯೋಗಗಳು ಹಲವು ರೀತಿಯಲ್ಲಿ ಯೋಗಗಳು, ಶುಭ ಫಲಗಳಿಗೆ ಕಾರಣವಾಗುತ್ತಿದೆ. ಹಾಗಾದ್ರೆ ಈ ಕೃಷ್ಣ ಜನ್ಮಾಷ್ಟಮಿಯ ದಿನದಂದು ಯಾವ ರಾಶಿಯವರಿಗೆ ಲಾಭದಾಯಕ ದಿನವಿರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತುಲಾ ರಾಶಿ
ಈ ಬಾರಿಯ ಜನ್ಮಾಷ್ಟಮಿಯು ತುಲಾ ರಾಶಿಯವರಲ್ಲಿ ಅತ್ಯಂತ ಶುಭಕರ ಎಂದು ಸಾಬೀತಾಗುತ್ತಿದೆ. ನಿಮ್ಮ ಶ್ರಮ ವ್ಯರ್ಥವಾಗದೆ ಅದರಿಂದ ಹಣಕಾಸು ಸಂಬಂಧಿ ವಿಚಾರಗಳಲ್ಲಿನ ಸಮಸ್ಯೆ ಬಗೆಹರಿಯಲಿದೆ. ಬಾಡಿಗೆ ಮನೆ ವಿಚಾರವಾಗಿ ಶುಭಕರ ಫಲವಿದೆ. ನಿಮ್ಮ ಮಾನಸಿಕ ನೆಮ್ಮದಿ ಹಾಳು ಮಾಡಿದ್ದಂತಹ ವಿಚಾರವು ಬದಲಾಗಲಿದೆ. ದೀರ್ಘಕಾಲದ ಅನಾರೋಗ್ಯವೊಂದರಿಂದ ನಿಮಗೆ ಪರಿಹಾರ ಸಿಗಲಿದೆ. ಅವಿವಾಹಿತರಲ್ಲಿ ವಿವಾಹ ಸಂಬಂಧಿ ಶುಭ ಸುದ್ದಿಗಳು ಕೇಳಿಬರಲಿವೆ. ನೀವು ಉದ್ಯೋಗ ಬದಲಾಯಿಸುವುದು ಅಥವಾ ಹೊಸದಾಗಿ ಉದ್ಯೋಗ ಹುಡುಕುವ ಕುರಿತಾಗಿ ಆಲೋಚಿಸಿದ್ದರೆ ಈ ಸಮಯದಲ್ಲಿ ಉತ್ತಮ ಅವಕಾಶಗಳ ಪಡೆಯಲಿದ್ದೀರಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ಸಮಯದಲ್ಲಿ ಲಾಭ ಹೆಚ್ಚಾಗಲಿದೆ. ನೀವು ಭೌತಿಕ ಸೌಕರ್ಯಗಳ ಲಾಭ ಪಡೆಯಲಿದ್ದೀರಿ. ವ್ಯಾಪಾರಿಗಳಿಗೆ ದೊಡ್ಡ ಮಟ್ಟದಲ್ಲಿ ಲಾಭ ನೋಡುವ ದಿನಗಳಿವೆ. ದಾಂಪತ್ಯ, ಪ್ರೇಮ ವಿಚಾರಗಳು ನಿಮ್ಮಿಂದಾಗಿ ಸಂತೋಷಕರ ಆಗಿರಲಿದೆ. ಕೌಟುಂಬಿಕ ವಿಚಾರದಲ್ಲಿ ಸಂತೋಷ, ನೆಮ್ಮದಿ ಇರಲಿದೆ. ಹಣಕಾಸಿನ ವಿಚಾರವಾಗಿಯೂ ನಿಮ್ಮಲ್ಲಿ ಖರ್ಚುಗಳು ಕಡಿಮೆಯಾಗುವುದಲ್ಲದೆ ನಿಮ್ಮಿಂದ ದೊಡ್ಡ ಕೆಲಸಗಳಲ್ಲಿ ಹೂಡಿಕೆ ಮಾಡುವುದು, ಉಳಿತಾಯ ಹೆಚ್ಚಾಗುವುದು ನೋಡಬಹುದು. ಹೊಸ ವಾಹನ, ವಸ್ತು ಖರೀದಿಯಲ್ಲೂ ಆಸಕ್ತಿ ಹೊಂದಿರುತ್ತೀರಿ.
ವೃಷಭ ರಾಶಿ
ಈ ಸಮಯದಲ್ಲಿ ವೃಷಭ ರಾಶಿಯ ಮಂದಿಗೆ ದೊಡ್ಡ ಸವಾಲುಗಳು ಇರುವುದಿಲ್ಲ. ನಿಮ್ಮ ಅನೇಕ ಕೆಲಸಗಳಲ್ಲಿ ಲಾಭ ನೋಡುವಿರಿ. ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ. ಪರಸ್ಪರ ಪಾಲುದಾರಿಕೆ ಮತ್ತು ಪ್ರೀತಿ ಹೆಚ್ಚಾಗುತ್ತದೆ. ಶ್ರೀ ಕೃಷ್ಣನ ವಿಶೇಷ ಆಶೀರ್ವಾದ ನಿಮ್ಮ ಮೇಲೆ ಇರಲಿದೆ. ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ. ಮಾನಸಿಕ ಒತ್ತಡವೂ ಕೊನೆಯಾಗುತ್ತದೆ. ವಾಹನ ಸಂಬಂಧವಾಗಿದ್ದ ಸಮಸ್ಯೆಯೊಂದು ಬಗೆಹರಿಯಲಿದೆ. ನಿಮ್ಮ ದೊಡ್ಡ ನಿರೀಕ್ಷೆಯೊಂದನ್ನು ಈ ಸಮಯದಲ್ಲಿ ಈಡೇರಿಸಿಕೊಳ್ಳುವಿರಿ. ನಿಮ್ಮ ಆರ್ಥಿಕ ಸಮಸ್ಯೆಯೊಂದಕ್ಕೆ ಕುಟುಂಬಸ್ಥರಿಂದ ಬೆಂಬಲ ಹಾಗೂ ಸಹಕಾರ ಸಿಗಲಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications