Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜನವರಿ 25ರಂದು ಶುಕ್ರನ ನಕ್ಷತ್ರಕ್ಕೆ ಕೇತು ಸಂಚಾರ: ಈ ರಾಶಿಯವರ ಜೀವನದಲ್ಲಿ ದೊಡ್ಡ ತಿರುವು!
ಜನವರಿಯಲ್ಲಿ ಹಲವು ಗ್ರಹಗಳು ತಮ್ಮ ಸ್ಥಾನ ಬದಲಾಯಿಸುತ್ತಿವೆ. ಕೆಲವು ಗ್ರಹಗಳು ತಮ್ಮ ರಾಶಿ ಬದಲಾಯಿಸಿದರೆ ಮತ್ತೆ ಕೆಲ ಗ್ರಹಗಳು ನಕ್ಷತ್ರ ಬದಲಾಯಿಸುತ್ತಿವೆ. ಗ್ರಹಗಳು ನಿರ್ದಿಷ್ಟ ಸಮಯದಲ್ಲಿ ರಾಶಿ ಬದಲಿಸಿದಂತೆ ನಕ್ಷತ್ರ ಕೂಡ ಬದಲಾಯಿಸಲಿದೆ. ಇದು ಹಲವು ರಾಶಿಗಳ ಮೇಲೆ ಪರಿಣಾಮ ಉಂಟು ಮಾಡಲಿವೆ. ನಿಮ್ಮ ಹಲವು ಕೆಲಸಗಳು ಅದೃಷ್ಟಗಳನ್ನು ತರುವ ಸಮಯ ಇದಾಗುತ್ತದೆ.
ಈಗ ಕೇತು ಗ್ರಹವು ತನ್ನ ನಕ್ಷತ್ರ ಬದಲಾಯಿಸುತ್ತಿದೆ. ಅದ್ರಲ್ಲೂ ಕೇತು ಈಗ ಶುಕ್ರನ ಆಡಳಿತವಿರುವ ನಕ್ಷತ್ರಕ್ಕೆ ಚಲಿಸುತ್ತಿದ್ದಾನೆ. ಇದೇ ಜನವರಿ 25ರಂದು ಕೇತು ಪೂರ್ವ ಪಾಲ್ಗುಣಿ ನಕ್ಷತ್ರಕ್ಕೆ ಚಲಿಸಲಿದ್ದಾನೆ. ಇದು ಹಲವು ರಾಶಿಗಳ ಮೇಲೆ ಪರಿಣಾಮ ಉಂಟು ಮಾಡಲಿದೆ. ಅದ್ರಲ್ಲೂ ಕೇತು ವ್ಯಕ್ತಿಯೊಬ್ಬರ ಜೀವನದಲ್ಲಿ ಬಹುದೊಡ್ಡ ಬದಲಾವಣೆಗಳ ತರುವಂತಹ ಗ್ರಹ ಎಂದು ಕರೆಯಲಾಗುತ್ತದೆ.

ಕೇತು ಸಂಚಾರದಿಂದ ವ್ಯಕ್ತಿಯ ಅದೃಷ್ಟ, ಜೀವನ ಬದಲಾಗಬಹುದು. ಜೀವನದಲ್ಲಿ ಒಂದು ಮಹತ್ವದ ತಿರುವು ಕೂಡ ಅವರಲ್ಲಿ ನೋಡಬಹುದು. ವೃತ್ತಿ ಬೆಳವಣಿಗೆ, ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಸ್ಥಾನಮಾನದ ಹೆಚ್ಚಳದಂತಹ ಬದಲಾವಣೆಗಳು ಅವರ ಜೀವನದಲ್ಲಿ ಸಂಭವಿಸಬಹುದು. ಕೇತುವನ್ನು ರಾಹುವಿನಂತೆ ನೆರಳಿನ ಗ್ರಹವೆಂದು ಕರೆಯಲಾಗಿದೆ. ನೆರಳಿನ ಗ್ರಹವು ಪ್ರತಿಯೊಂದು ಗ್ರಹಗಳೊಂದಿಗೆ ಸಂಯೋಗವಾಗುವ ಜೊತೆಗೆ ಎಲ್ಲಾ ನಕ್ಷತ್ರಗಳಲ್ಲಿಯೂ ಚಲಿಸಲಿದೆ.
ಹಾಗಾದ್ರೆ ಕೇತು ನಕ್ಷತ್ರ ಬದಲಾವಣೆಯಿಂದ ಯಾವ ರಾಶಿ ಜನರಿಗೆ ಅನುಕೂಲ, ಯಾರಿಗೆಲ್ಲಾ ಶುಭದಾಯಕವಾಗಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮೇಷ ರಾಶಿ
ಮೇಷ ರಾಶಿಯವರಿಗೆ ಕೇತುವಿನಿಂದ ಹಲವು ರೀತಿಯ ಶುಭಕರ ಯೋಗ ನೋಡಬಹುದು. ಮೇಷ ರಾಶಿಯ ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಸುಧಾರಣೆಯನ್ನು ತರುತ್ತದೆ. ಅವರು ವಿವಿಧ ಒಪ್ಪಂದಗಳಿಂದ ಹೊಸ ಆದಾಯವನ್ನು ನಿರೀಕ್ಷಿಸಬಹುದು. ಕೆಲಸದಲ್ಲಿ ಹೊಸ ಜವಾಬ್ದಾರಿಗಳನ್ನು ವಹಿಸಬಹುದು ಮತ್ತು ಅವರಿಗೆ ಸಂಬಳ ಹೆಚ್ಚಳ, ಬಡ್ತಿ, ಪ್ರಯಾಣದಲ್ಲಿ ಸುಖ ನೋಡಬಹುದು. ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ತಿಳುವಳಿಕೆ ಹೆಚ್ಚಾಗುತ್ತದೆ ಮತ್ತು ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ. ಹೊಸ ಹೂಡಿಕೆಗಳನ್ನು ಮಾಡಲು ಇದು ಉತ್ತಮ ಸಮಯವಾಗಿರುತ್ತದೆ. ಮಕ್ಕಳ ಮೂಲಕ ಕೆಲವು ಒಳ್ಳೆಯ ಸುದ್ದಿಗಳನ್ನು ನಿರೀಕ್ಷಿಸಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಕೇತುವಿನ ಸಂಚಾರವು ಅವರಿಗೆ ನಿರೀಕ್ಷಿಸಿದ ಆರ್ಥಿಕ ಪ್ರಗತಿಯನ್ನು ತರಲಿದೆ. ಈ ಅವಧಿಯಲ್ಲಿ ಅನಿರೀಕ್ಷಿತ ಹಣಕಾಸಿನ ಲಾಭಗಳು ಸಂಭವಿಸುವ ಸಾಧ್ಯತೆಯಿದೆ ಮತ್ತು ಹೊಸ ವೃತ್ತಿ ಅಥವಾ ವ್ಯವಹಾರ ಅವಕಾಶಗಳು ಉದ್ಭವಿಸಬಹುದು. ಹಿಂದಿನ ಹೂಡಿಕೆಗಳು ಲಾಭವನ್ನು ನೀಡಲು ಪ್ರಾರಂಭಿಸಬಹುದು, ಹೀಗಾಗಿ ಸಾಲದ ಸಮಸ್ಯೆಯನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು. ಉದ್ಯೋಗದಲ್ಲಿನ ವ್ಯಕ್ತಿಗಳಿಗೆ ಅನೇಕ ರೀತಿ ಲಾಭವಿದೆ. ಹೊಸದಾಗಿ ಉದ್ಯೋಗ ಮಾಡಲು ಆರಂಭಿಸಿದ್ದರೆ ಈ ಸಮಯದಲ್ಲಿ ಶುಭವಿದೆ. ನಿಮ್ಮ ಖರ್ಚುಗಳು ಕಡಿಮೆಯಾಗಲಿದೆ. ಸ್ವಂತ ಉದ್ಯಮದಲ್ಲಿ ಲಾಭ ನೋಡಬಹುದು.
ಧನು ರಾಶಿ
ಕೇತುವಿನ ಸಂಚಾರವು ಧನು ರಾಶಿಯವರಿಗೆ ಅಪಾರ ಬೆಳವಣಿಗೆಯನ್ನು ನೀಡಲಿದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ನಿರೀಕ್ಷೆಗಿಂತ ಉತ್ತಮವಾಗಿರುತ್ತದೆ. ಇದು ದೀರ್ಘಾವಧಿಯ ಹೂಡಿಕೆಗಳಿಗೆ ಉತ್ತಮ ಸಮಯವಾಗಿರುತ್ತದೆ. ನಿಮ್ಮ ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಸಂತೋಷ ಹೆಚ್ಚಾಗುತ್ತದೆ. ನಿಮ್ಮ ದೀರ್ಘಕಾಲದ ಅನಾರೋಗ್ಯ ಅಥವಾ ದೈನಂದಿನ ಕೆಲಸಕ್ಕೆ ಅಡ್ಡಿಯಾಗಿದ್ದ ವಿಚಾರವೊಂದರಿಂದ ನೀವು ಮುಕ್ತಿ ಪಡೆಯುತ್ತೀರಿ. ಹೊಸ ಉದ್ಯೋಗವಕಾಶಗಳು, ಆಪ್ತರಿಂದ ನಿಮಗೆ ಹಣಕಾಸಿನ ಲಾಭವಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications