Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಾಘ ನಕ್ಷತ್ರಕ್ಕೆ ಕೇತು ಸಂಚಾರ: ಈ ರಾಶಿಯವರ ಜೀವನದಲ್ಲಿ ಬಹುದೊಡ್ಡ ಬದಲಾವಣೆ, ಮುಂದಿದೆ ಅದೃಷ್ಟದ ದಿನಗಳು
ಜ್ಯೋತಿಷ್ಯದಲ್ಲಿ ಕೇತುವನ್ನು ನೆರಳಿನ ಗ್ರಹವೆಂದು ಕರೆಯಲಾಗಿದೆ. ಕೇತು ಎಲ್ಲಾ ರಾಶಿಗಳೊಂದಿಗೆ ಸಂಯೋಗವಾಗುತ್ತದೆ. ಹಾಗೆ 18 ತಿಂಗಳ ಕಾಲ ಒಂದೇ ರಾಶಿಯಲ್ಲಿ ಚಲಿಸುವ ಗ್ರಹ ಇದಾಗಿದೆ. ಹೀಗಾಗಿ ಈ 18 ತಿಂಗಳಲ್ಲಿ ಹಲವು ಗ್ರಹಗಳು ಕೇತುವಿನ ಸಂಪರ್ಕಕ್ಕೆ ಬರಲಿವೆ. ಹಾಗೆ ಹಲವು ಬಾರಿ ತನ್ನ ನಕ್ಷತ್ರವನ್ನು ಕೇತು ಬದಲಾಯಿಸುತ್ತಾನೆ. ಈ ಸಮಯದಲ್ಲಿ ಹಲವು ರಾಶಿಗಳ ಮೇಲೆ ಇದರ ಪ್ರಭಾವ ಉಂಟುಮಾಡಲಿದೆ.
ಕೇತು ನೇರವಾಗಲ್ಲದೆ ವಕ್ರವಾಗಿ ಚಲಿಸಲಿದೆ. ಆದ್ರೆ ಈಗ ಕೇತು ತನ್ನ ನಕ್ಷತ್ರ ಬದಲಿಸುವುದು ನೋಡಬಹುದು. ಈ ಕೇತುವಿಗೆ ಪ್ರತ್ಯೇಕ ರಾಶಿಯಿಲ್ಲ ಆದರೆ ಅದಕ್ಕೆ ಒಂದು ನಕ್ಷತ್ರವಿದೆ. ಸಿಂಹ ರಾಶಿಯ ನಕ್ಷತ್ರವಾದ ಮಾಘ ನಕ್ಷತ್ರಕ್ಕೆ ಕೇತು ಅಧಿಪತಿಯಾಗಿದ್ದಾನೆ. ಇದೇ ವರ್ಷ ಕೇತು ತನ್ನ ಸ್ವಂತ ನಕ್ಷತ್ರವಾಗಿರುವ ಮಾಘ ನಕ್ಷತ್ರಕ್ಕೆ ಚಲಿಸಲಿದ್ದಾನೆ.

ಏಪ್ರಿಲ್ 20ರಂದು ಕೇತು ಮಾಘ ನಕ್ಷತ್ರಕ್ಕೆ ಚಲಿಸುತ್ತಾನೆ. ಈ ಸಮಯದಲ್ಲಿ ಕೇತು ಬಹಳ ಪ್ರಭಾವಶಾಲಿಯಾಗುತ್ತಾನೆ. ಕೇತುವಿನ ಈ ಸಂಚಾರದ ಪ್ರಭಾವವು ಎಲ್ಲಾ ರಾಶಿ ಜನರ ಜೀವನದ ಮೇಲೆಯೂ ಪರಿಣಾಮ ಬೀರಲಿದೆ. ಕೆಲವು ರಾಶಿಗಳಿಗೆ ಇದು ಶುಭದಾಯಕ ಹಾಗೆ ಮತ್ತೆ ಕೆಲವು ರಾಶಿಗಳಿಗೆ ಇದು ಅಶುಭವಾಗಲಿದೆ. ಈಗ ಕೇತುವಿನ ನಕ್ಷತ್ರಗಳ ಸಂಚಾರದಿಂದಾಗಿ ಯಾವ ರಾಶಿ ಜನರು ಅದೃಷ್ಟಶಾಲಿಯಾಗುತ್ತಾರೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ವೃಷಭ ರಾಶಿ
ವೃಷಭ ರಾಶಿಯ ಜನರು ಕೇತುವಿನ ಸಂಚಾರದಿಂದಾಗಿ ವೃತ್ತಿ ಪ್ರಗತಿಗೆ ಹೊಸ ಅವಕಾಶಗಳನ್ನು ಪಡೆಯುತ್ತಾರೆ. ದೀರ್ಘಕಾಲದವರೆಗೆ ಸ್ಥಗಿತಗೊಂಡಿರುವ ಕೆಲಸವು ಯಶಸ್ವಿಯಾಗುತ್ತದೆ. ಉದ್ಯೋಗ ಸಂಬಂಧಿತ ಅಡ್ಡಿಗಳು, ಸಮಸ್ಯೆಗಳು ನಿವಾರಣೆಯಾಗುವ ಸಮಯ ಇದಾಗುತ್ತಿದೆ. ನಿಮ್ಮ ಜಂಟಿ ವ್ಯವಹಾರಗಳು ಅಥವಾ ವ್ಯಾಪಾರಗಳು ಫಲ ನೀಡುವ ಸಮಯ. ನಿಮ್ಮ ಬಹು ಸಮಯದ ಬಾಕಿ ಉಳಿದ ಕೆಲಸವು ಈ ವರ್ಷದಲ್ಲಿ ಪೂರ್ಣವಾಗುವುದು ನೋಡಬಹುದು. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯು ನಿಮಗೆ ಹಲವು ರೀತಿಯ ಅವಕಾಶಗಳನ್ನು ತರಲಿದೆ.
ಕರ್ಕಾಟಕ ರಾಶಿ
ಕೇತುವಿನ ಸಂಚಾರದಿಂದ ಕರ್ಕಾಟಕ ರಾಶಿಯವರಿಗೆ ಅದೃಷ್ಟದ ಬೆಂಬಲ ಸಿಗುತ್ತದೆ. ಪ್ರಗತಿಗೆ ಹೊಸ ಅವಕಾಶಗಳು ಲಭ್ಯವಾಗುತ್ತವೆ. ಉದ್ಯಮಿಗಳಿಗೆ ಉತ್ತಮ ಲಾಭ ತರುವ ಹೊಸ ಒಪ್ಪಂದಗಳು ಸಿಗುವುದು ನೋಡಬಹುದು. ನಿಮ್ಮ ನಿರೀಕ್ಷಿತ ವರ್ಗಾವಣೆ, ಜವಾಬ್ದಾರಿಗಳು, ವೇತನ ಕುರಿತಾದ ವಿಚಾರದಲ್ಲಿ ನೀವು ಬಯಸಿದ ಫಲಿತಾಂಶ ಪಡೆಯಬಹುದು. ಸಾಲದ ಪ್ರಮಾಣದಲ್ಲಿ ಇಳಿಕೆಯಾಗುವುದು ನೋಡಬಹುದು. ಜೀವನವು ಶಾಂತಿ ಮತ್ತು ಸೌಹಾರ್ದತೆಗೆ ಈ ಸಮಯವು ಬಹಳ ಅನುಕೂಲಕರವಾಗಿರಲಿದೆ. ಸಕಾರಾತ್ಮಕ ಬದಲಾವಣೆಗಳು ಸಂಭವಿಸುತ್ತವೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ.
ಸಿಂಹ ರಾಶಿ
ಕೇತುವಿನ ಸಂಚಾರದಿಂದ ಸಿಂಹ ರಾಶಿಯವರಿಗೆ ಉತ್ತಮ ಪ್ರಗತಿ ಸಿಗುತ್ತದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕೆಲಸದ ಸ್ಥಳದಲ್ಲಿ ಹೆಸರು ಮತ್ತು ಖ್ಯಾತಿ ಹೆಚ್ಚಾಗುತ್ತದೆ. ನಿಮ್ಮ ಹಣಕಾಸಿನ ವಿಚಾರಗಳು ನೀವು ಅಂದುಕೊಂಡಂತೆ ನೆರವೇರಲಿದೆ. ನಿಮ್ಮ ಹಳೆಯ ಸಮಸ್ಯೆಗಳು ನಿವಾರಣೆಯಾಗಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲು ನೀವು ತೆಗೆದುಕೊಳ್ಳುವ ಕ್ರಮಗಳು ಉತ್ತಮ ಫಲ ನೀಡಲಿದೆ. ನಿಮ್ಮ ಉದ್ಯೋಗ ಸಂಬಂಧಿತ ವಿಚಾರವಾಗಿ ಇದ್ದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಿರಿ. ದಾಂಪತ್ಯ ವಿಚಾರದಲ್ಲಿ ನಿಮಗಿದ್ದ ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಿರಿ. ಜ್ಞಾನ ಮತ್ತು ಅನುಭವ ಹೆಚ್ಚಾಗುತ್ತದೆ, ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಜೀವನದಲ್ಲಿ ಹೊಸ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಹೊಸ ಆದಾಯ ಮೂಲಗಳು ಸಿಗಬಹುದು. ಹಣವು ನಿಮ್ಮನ್ನು ಹಲವು ವಿಧಗಳಿಂದ ಹುಡುಕಿ ಬರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications



