Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸೂರ್ಯ ಅಧಿಪತ್ಯದ ಸಿಂಹ ರಾಶಿಗೆ ಕೇತು ಸಂಚಾರ: ಮೂರು ರಾಶಿಯವರ ಜೀವನ ಬದಲು..!!
ಜ್ಯೋತಿಷ್ಯ ಶಾಸ್ತ್ರದಲ್ಲಿ 9 ಗ್ರಹಗಳಿಗೂ ವಿಶೇಷ ಮಹತ್ವ ನೀಡಲಾಗುತ್ತದೆ. ಪ್ರತಿಯೊಂದು ರಾಶಿಯಲ್ಲಿನ ಆಗು ಹೋಗುಗಳು, ಶುಭ ಲಾಭಕ್ಕೆ ಕಾರಣವಾಗುವುದು ನಾವು ನೋಡಬಹುದು. ಹಾಗೆ ನವಗ್ರಹಗಳಲ್ಲಿ ಕೇತುವನ್ನು ಕರ್ಮದ ಫಲ ನೀಡುವ ಗ್ರಹವೆಂದು ಪರಿಗಣಿಸಲಾಗಿದೆ. ಕೇತುವನ್ನು ನೆರಳು ಗ್ರಹ ಎಂದು ಕರೆಯಲಾಗುತ್ತದೆ.
ಕೇತುವಿನ ಪ್ರಭಾವ ಜೀವನದ ಹಲವು ಅಂಶಗಳ ಮೇಲೆ ಬೀರುತ್ತದೆ. ಕೇತು ಪ್ರತಿ 18 ತಿಂಗಳಿಗೊಮ್ಮೆ ತನ್ನ ರಾಶಿ ಬದಲಿಸುತ್ತದೆ. ಹೀಗೆ ತಾನು ರಾಶಿ ಬದಲಿಸಿದಾಗ ಎಲ್ಲಾ ರಾಶಿಗಳ ಮೇಲೆಯೂ ಅವರ ಪರಿಣಾಮ ಉಂಟು ಮಾಡುತ್ತದೆ. ಅದರಿಂದ ಶುಭ ಹಾಗೂ ಅಶುಭ ಲಾಭಗಳು ಪಡೆಯಬಹುದಾಗಿದೆ. ಸದ್ಯ ಕೇತು ಕನ್ಯಾ ರಾಶಿಯಿಂದ ಸಿಂಹ ರಾಶಿಗೆ ಚಲಿಸಲಿದ್ದಾನೆ.

ಮೇ 18ರಂದು ಕೇತು ಸಿಂಹ ರಾಶಿಗೆ ಚಲಿಸಲಿದ್ದಾರೆ. ಇದರ ನಡುವೆ ಕನ್ಯಾರಾಶಿಯಲ್ಲಿ ಹಿಮ್ಮುಖ ಚಲನೆಯು ಅನೇಕ ರಾಶಿಗಳಲ್ಲಿ ಬದಲಾವಣೆ ನೋಡುತ್ತಿದ್ದೇವೆ. ಈಗ ಸೂರ್ಯನ ಅಧಿಪತ್ಯ ಇರುವ ಸಿಂಹ ರಾಶಿಗೆ ಕೇತು ಚಲನೆಯು ವಿಭಿನ್ನ ರೀತಿಯ ಲಾಭಗಳಿಗೆ ಕಾರಣವಾಗುವುದನ್ನು ನೋಡಲಿದ್ದೇವೆ. ಹಾಗಾದ್ರೆ ಯಾವೆಲ್ಲಾ ಕಾರಣದಿಂದಾಗಿ ಕೇತು ಯಾರಿಗೆ ಶುಭವಾಗಿ ಮುಂದುವರೆಯುತ್ತಾನೆ ಎನ್ನುವುದನ್ನು ನಾವಿಂದು ತಿಳಿದುಕೊಳ್ಳೋಣ.
ಧನು ರಾಶಿ
ಸಿಂಹ ರಾಶಿಯಲ್ಲಿ ಕೇತು ಸೂರ್ಯನ ಸಂಯೋಗವು ಧನು ರಾಶಿಯವರ ಅದೃಷ್ಟ ಬದಲಿಸಲಿದೆ. ಉದ್ಯೋಗಿಗಳಿಗೆ ಬಡ್ತಿ ಮತ್ತು ವೇತನ ಹೆಚ್ಚಳ ಸಿಗುವ ಅವಕಾಶಗಳಿವೆ. ನಿಮ್ಮ ಜಾತಕದಲ್ಲಿನ ದೋಷವೊಂದು ನಿವಾರಣೆಯಾಗುತ್ತಿದೆ. ಬಹಳ ಕಾಲದಿಂದ ತೊಡಕಾಗಿ ಕಾಡುತ್ತಿದ್ದ ಸಮಸ್ಯೆಗಳಲ್ಲಿ ನಿವಾರಣೆ ನೋಡಬಹುದು. ವ್ಯಾಪಾರಿಗಳಲ್ಲಿ ಅನಿರೀಕ್ಷಿತ ಲಾಭ ನೋಡಬಹುದು. ವ್ಯವಹಾರಕ್ಕೆ ಸಂಬಂಧಿಸಿದಂತೆ ಹೊಸ ರೀತಿಯ ಬದಲಾವಣೆಯು ನಿಮ್ಮ ಕೈ ಹಿಡಿಯಲಿದೆ. ಪ್ರವಾಸಗಳು, ಪ್ರೀತಿ ಪಾತ್ರರ ಭೇಟಿ ಮತ್ತು ಸಹಕಾರ, ಹಣಕಾಸು ವಿಚಾರದಲ್ಲಿ ನೆರವು, ಹೀಗೆ ಹಲವು ರೀತಿಯ ಧನಾತ್ಮಕ ಪರಿಣಾಮ ನಿಮಗಾಗಲಿದೆ. ಅವಿವಾಹಿತರಿಗೆ ಇದು ಶುಭಕಾಲ ಆಗಲಿದೆ.
ತುಲಾ ರಾಶಿ
ಸಿಂಹ ರಾಶಿಗೆ ಕೇತು ಸಂಚಾರವು ತುಲಾ ರಾಶಿಯವರು ತಮ್ಮ ಆದಾಯದಲ್ಲಿ ಉತ್ತಮ ಬೆಳವಣಿಗೆಯನ್ನು ಕಾಣುತ್ತಾರೆ. ಬಹಳ ಕಾಲದಿಂದ ಸಿಲುಕಿದ್ದ ಹಣಕಾಸು ಸಮಸ್ಯೆ ಬಗೆಹರಿಯಲಿದೆ. ಹೂಡಿಕೆ, ಉಳಿತಾಯದಂತಹ ಕೆಲಸಗಳಲ್ಲಿ ಯಶಸ್ಸು ಪಡೆಯುತ್ತೀರಿ. ಗೃಹಿಣಿಯರಿಗೆ ಇದು ಅತ್ಯಂತ ಶುಭ ಕಾಲವಾಗುತ್ತಿದೆ. ನಿಮ್ಮ ಆಸೆಗಳಲ್ಲಿ ಕೆಲವೊಂದು ಯಾವ ಅಡೆತಡೆಯಿಲ್ಲದೆ ನೆರವೇರಲಿದೆ. ಈ ವರ್ಷ ನೀವು ಮಾಡಬೇಕು ಎಂದು ಮೊದಲೇ ಆಲೋಚಿಸಿದ್ದ ಕೆಲಸ ಕಾರ್ಯ ಪೂರ್ಣ ಮಾಡುವಿರಿ. ನಿಮ್ಮಿಂದ ಶುಭ ಕಾರ್ಯಕ್ಕೆ ಸಹಕಾರವಾಗಲಿದೆ. ಹೊಸ ಸ್ನೇಹಿತರು, ಸಂಬಂಧ ರೂಪುಗೊಳ್ಳಲಿದೆ. ಉದ್ಯೋಗ ಬದಲಿಸುವ ನಿಮ್ಮ ಇಚ್ಛೆ ಈಡೇರಲಿದೆ.
ವೃಷಭ ರಾಶಿ
ಸಿಂಹ ರಾಶಿಗೆ ಕೇತು ಸಂಚಾರವು ವೃಷಭ ರಾಶಿಯವರಲ್ಲಿ ಅತ್ಯಂತ ಸುಧೀರ್ಘ ಲಾಭ ತರಲಿದೆ. ಹಿಂದೆಂದೂ ಕಂಡಿರದ ಸಂತೋಷಯುಕ್ತ ಜೀವನ ನಿಮ್ಮದಾಗಲಿದೆ. ಬಹಳ ಕಾಲದ ಅನಾರೋಗ್ಯ ಸಮಸ್ಯೆಯಿಂದ ಮುಕ್ತಿ ಪಡೆಯುತ್ತೀರಿ. ದಾಂಪತ್ಯ ನೀವು ಅಂದುಕೊಂಡ ಖುಷಿ ನೀಡಲಿದೆ. ಹಣಕಾಸು ವಿಚಾರವಾಗಿ ನಿಮ್ಮ ಪರವಾದ ಒಲವು ಇರಲಿದೆ. ಬ್ಯಾಂಕಿಂಗ್, ಆಸ್ತಿ, ನ್ಯಾಯಾಲಯದಂತಹ ವಿಚಾರಗಳಲ್ಲಿ ನಿಮಗೆ ಯಶಸ್ಸು ಸಿಗಲಿದೆ. ವಿದ್ಯಾರ್ಥಿಗಳಿಗೆ ಈ ಸಮಯ ಶುಭ ತರಲಿದೆ. ಹೊಸ ಕಾಯಕ ಆರಂಭಕ್ಕೆ ಒಳ್ಳೆಯ ಕಾಲ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ಪರಿಶೀಲಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications