Latest Updates
-
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
ಸಿಂಹ ರಾಶಿಗೆ ಕೇತು ಸಂಚಾರ: ಈ ಮೂರು ರಾಶಿಯವರಿಗಿದೆ ಅದೃಷ್ಟವೋ ಅದೃಷ್ಟ..!
ಮಾರ್ಚ್ ತಿಂಗಳ ಅಂತ್ಯ ಹಾಗೂ ಏಪ್ರಿಲ್ ಸಮಯದಲ್ಲಿ ಹಲವು ಗ್ರಹಗತಿಗಳಲ್ಲಿ ಬದಲಾವಣೆಯಾಗುತ್ತಿರುವುದು ಹಲವು ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಎಲ್ಲಾ ಗ್ರಹಗಳ ಸಂಚಾರವು ಪ್ರತಿಯೊಂದು ರಾಶಿಯ ಮೇಲೆಯೂ ಪ್ರಭಾವ ಭೀರಲಿದೆ. ಇದು ಹಲವು ರೀತಿಯ ಶುಭ ಹಾಗೂ ಅಶುಭ ಸಂಕೇತಗಳಿಗೆ ಕಾರಣವಾಗಲಿದೆ.
ಈಗ ವಿಶೇಷಗಾಗಿ ಕೇತುವಿನ ಸಂಚಾರವು ಹಲವು ರಾಶಿಗಳ ಮೇಲೆ ಪ್ರಭಾವ ಬೀರುವುದು ನೋಡಬಹುದು, ಜ್ಯೋತಿಷ್ಯಶಾಸ್ತ್ರದಲ್ಲಿ ಕೇತುವನ್ನು ಛಾಯಾ ಗ್ರಹವೆಂದು ಕರೆಯಲಾಗುತ್ತದೆ. ರಾಹು ಹಾಗೂ ಕೇತುವಿನ ಪರಿಣಾಮ ಎಲ್ಲಾ ರಾಶಿಗಳ ಮೇಲೆಯೂ ಉಂಟಾಗುವುದು ನೋಡಬಹುದು. ಹಾಗೆ ಈ ಕೇತು ಗ್ರಹವು ಯಾವ ರಾಶಿಗೆ ಚಲಿಸಲಿದೆಯೋ ಅವರಲ್ಲಿ ಶುಭ ಹಾಗೂ ಅಶುಭ ಲಾಭವನ್ನು ನಾವು ನೋಡಬಹುದು.

ಕೇತು ವ್ಯಕ್ತಿಯೋರ್ವನ ಜೀವನವನ್ನು ಬದಲಾಯಿಸುವ ಶಕ್ತಿ ಹೊಂದಿದ್ದಾನೆ. ಶ್ರೀಮಂತನ ಬಡವನಾಗಿಸುವ ಹಾಗೆ ಬಡವನ ಶ್ರೀಮಂತನಾಗಿಸುವ ಶಕ್ತಿ ಈ ಕೇತು ಗ್ರಹಕ್ಕಿದೆ ಎಂದು ಹೇಳಲಾಗಿದೆ. ಹೀಗಾಗಿ ಕೇತು ಸಂಚಾರಕ್ಕೆ ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ. ಹಾಗೆ ಎಲ್ಲಾ ರಾಶಿಗಳ ಮೇಲೆಯೂ ಇದು ಪ್ರಭಾವ ಬೀರುವುದು ನೋಡಬಹುದು.
ಈಗ ಕೇತು ಮೇ ತಿಂಗಳಲ್ಲಿ ಸೂರ್ಯನ ಅಧಿಪತ್ಯ ಇರುವಂತಹ ಸಿಂಹ ರಾಶಿಗೆ ಸಂಚರಿಸುತ್ತಿದ್ದಾನೆ ಇದರಿಂದ ಎಲ್ಲಾ ರಾಶಿಯವರ ಮೇಲೆಯೂ ಪರಿಣಾಮ ಬೀರಲಿದೆ. ಹಾಗಾದ್ರೆ ಯಾವೆಲ್ಲಾ ರಾಶಿಯವರಿಗೆ ಕೇತು ಸಂಚಾರವು ಶುಭ ಕಾಲವಾಗಿ ಪರಿಣಮಿಸಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೇಷ ರಾಶಿ
ಕೇತು ಸಂಚಾರದಿಂದ ಅತೀ ಹೆಚ್ಚು ಲಾಭ ಗಳಿಸುತ್ತಿರುವುದು ಮೇಷ ರಾಶಿಯ ಮಂದಿಯಾಗಿದ್ದಾರೆ. ವ್ಯವಹಾರ, ವೃತ್ತಿ ಜೀವನದಲ್ಲೂ ನಿಮಗೆ ಲಾಭದಾಯಕ ದಿನಗಳು ಇರಲಿವೆ. ಆರ್ಥಿಕವಾಗಿ ನಿಮ್ಮ ದಿನಗಳು ಮತ್ತಷ್ಟು ಬಲವಾಗುತ್ತವೆ, ಕೇತು ಅನುಗ್ರಹದ ಕಾರಣದಿಂದಾಗಿ ನಿಮ್ಮ ಮುಂದಿನ ದಿನಗಳು ಬಹಳಷ್ಟು ಸುಖಮಯವಾಗಿರಲಿದೆ. ಕುಟುಂಬದಲ್ಲಿ ಶುಭ ಸುದ್ದಿಗಳ ಕೇಳುವಿರಿ. ಹಾಗೆ ಮನೆಗೆ ಹೊಸ ವಸ್ತುಗಳು ಖರೀದಿಸಬಹುದು. ನಿಮ್ಮ ಕುಟುಂಬದ ಸದಸ್ಯರಿಂದ ನಿಮಗೆ ಆರ್ಥಿಕ ನೆರವು ನಿರೀಕ್ಷಿಸಬಹುದು. ಅವಿವಾಹಿತರಿಗೆ ಬಹಳ ಉತ್ತಮ ಕಾಲ ಇದಾಗಿರಲಿದೆ.
ಮಿಥುನ ರಾಶಿ
ಮಿಥುನ ರಾಶಿಯವರಲ್ಲಿ ಕೇತು ಮೂರನೆ ಮನೆಗೆ ಪ್ರವೇಶಿಸುತ್ತಾನೆ. ಹೀಗಾಗಿ ಈ ರಾಶಿಯರಲ್ಲಿ ದೃಢನಿರ್ಧಾರಗಳು, ಯಾರು ಊಹಿಸದಂತಹ ನಿರ್ಧಾರಗಳ ತೆಗೆದುಕೊಳ್ಳುವುದು ನೋಡಬಹುದು. ಅದರಲ್ಲೂ ಹಲವರು ಈ ಸಮಯದಲ್ಲಿ ಭವಿಷ್ಯಕ್ಕಾಗಿ ಅತ್ಯುತ್ತಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹಾಗೆ ಉದ್ಯೋಗ ಬದಲಿಸುವ ನಿಮ್ಮ ನಿರ್ಧಾರವು ಈ ಸಮಯದಲ್ಲಿ ಫಲ ನೀಡಲಿದೆ. ಹಾಗೆ ನಿಮ್ಮ ಆರ್ಥಿಕ ಪರಿಸ್ಥಿತಿ ದಿಢೀರ್ ಸುಧಾರಿಸಲಿದೆ. ನಿಮ್ಮ ಆರೋಗ್ಯದಲ್ಲಿಯೂ ಸುಧಾರಣೆ ನೋಡಬಹುದು.
ಕರ್ಕ ರಾಶಿ
ಕೇತುವಿನ ಸಿಂಹ ರಾಶಿ ಸಂಚಾರವು ಕರ್ಕ ರಾಶಿಯವರಲ್ಲಿ ಮಿಶ್ರ ಫಲಕ್ಕೆ ಕಾರಣವಾಗುತ್ತಿದೆ. ನೀವು ಹೊಸ ವ್ಯಾಪಾರಗಳು, ವ್ಯವಹಾರಗಳು, ಹಣಕಾಸಿನ ವ್ಯವಹಾರ ಮಾಡುತ್ತೀರಿ. ನಿಮ್ಮ ಲಾಭವು ಹೆಚ್ಚಾಗಬಹುದು, ಹಾಗೆ ಖರ್ಚು ಕೂಡ ಹೆಚ್ಚಾಗಬಹುದು. ನಿಮ್ಮ ವ್ಯಕ್ತಿತ್ವದ ಮೂಲಕ ಗೌರವ ಸಂಪಾದನೆ ಮಾಡುತ್ತೀರಿ. ಕುಟುಂಬದಲ್ಲಿ ಶಾಂತಿ ನೆಲೆಸಲಿದೆ.
ಕನ್ಯಾ ರಾಶಿ
ಕೇತು ಸಂಚಾರವು ಕನ್ಯಾ ರಾಶಿಯಲ್ಲಿ ಶುಭಕರವಾಗಲಿದೆ, ಅವಿವಾಹಿತರಿಗೆ ಅತ್ಯಂತ ಶುಭ ಕಾಲ. ಬಹಳ ಕಾಲದ ಸಮಸ್ಯೆಗಳಿಗೆ ನೀವು ಪರಿಹಾರ ಸಿಗಲಿದೆ. ಹಳೆಯ ಸಾಲಗಳಿಂದ ನೀವು ಮುಕ್ತರಾಗಬಹುದು. ಪಿತ್ರಾರ್ಜಿತ ಆಸ್ತಿ, ಕಾನೂನು ಹೋರಾಟದಂತಹ ಸಮಸ್ಯೆಗಳಿಂದಲೂ ಮುಕ್ತಿ ಪಡೆಯುತ್ತೀರಿ. ಆರ್ಥಿಕ ಸಮಸ್ಯೆ ದೂರಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











