Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2025ರಲ್ಲಿ ಕೇತು ಸಂಕ್ರಮಣ: ಈ ಮೂರು ರಾಶಿಯವರಲ್ಲಿ ಬದಲಾಗುತ್ತೆ ಅದೃಷ್ಟ..!
ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು ಮತ್ತು ಕೇತು ಗ್ರಹಗಳನ್ನು ಕೆಡುಕಿನ ಪ್ರತಿರೂಪದಂತೆ ನೋಡಲಾಗಿದೆ. 2025ರಲ್ಲಿ ರಾಹು ಮೀನ ರಾಶಿಯಿಂದ ಕುಂಭ ರಾಶಿಗೆ ಚಲಿಸಿದರೆ ಇತ್ತ ಕೇತು ಸಿಂಹ ರಾಶಿಗೆ ಚಲಿಸಲಿದೆ. ಇದು ಹಲವರಲ್ಲಿ ಯೋಗಕ್ಕೆ ಕಾರಣವಾದರೆ ಮತ್ತೆ ಹಲವರಲ್ಲಿ ಕೆಡುಕಿಗೆ, ಸಂಕಷ್ಟಕ್ಕೆ ಕಾರಣವಾಗುತ್ತಿದೆ. ಕೇತುವನ್ನು ಕೆಡುಕಿನ ಗ್ರಹ ಎಂದು ಕರೆಯಲಾಗಿದ್ದು, 2025ರಲ್ಲಿ ಕೇತು ಸಿಂಹ ರಾಶಿಗೆ ಚಲಿಸಲಿದೆ.
2025 ಮೇ 18 ರಂದು ಕೇತು ಸಿಂಹ ರಾಶಿಗೆ ಚಲಿಸುತ್ತದೆ. ಇದು ಉಳಿದ 12 ರಾಶಿಗಳ ಮೇಲೆಯೂ ಪ್ರಭಾವ ಬೀರುತ್ತಿದೆ. ಆದ್ರೆ ಈ ಎರಡು ಗ್ರಹಗಳು ಯಾರ ಮೇಲಾದರು ದಯೆ ತೋರಿದರೆ ಅವರಲ್ಲಿ ಅದೃಷವೇ ಬದಲಾಗುತ್ತದೆ. ಅವರ ಹಲವು ಕಷ್ಟಗಳು, ಸಂಕಷ್ಟ, ದೋಷಗಳು ನಿವಾರಣೆಯಾಗುತ್ತವೆ. ಇನ್ನು ಈ ಬಾರಿ 2025ರಲ್ಲಿ ಸಿಂಹ ರಾಶಿಯಲ್ಲಿ ಕೇತು ಸಂಕ್ರಮಣವು ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ನೋಡೋಣ.

ಜ್ಯೋತಿಷ್ಯ ಶಾಸ್ತ್ರದ 9 ಗ್ರಹಗಳಲ್ಲಿ ರಾಹು ಮತ್ತು ಕೇತು 2 ಅದೃಶ್ಯ ಗ್ರಹಗಳು, ಎರಡು ಗ್ರಹಗಳಿಗೆ ಯಾವುದೇ ರಚನೆ ಹಾಗೂ ಚಿಹ್ನೆಗಳಿಲ್ಲ. ಅಲ್ಲದೆ ಈ ಗ್ರಹಗಳು 18 ತಿಂಗಳವರೆಗೆ ಒಂದು ರಾಶಿಯಲ್ಲಿ ಇರುತ್ತವೆ. ಪ್ರಸ್ತುತ ರಾಹು ಮತ್ತು ಕೇತುಗಳು ಮೀನ ಮತ್ತು ಕನ್ಯಾರಾಶಿಯಲ್ಲಿವೆ.
ಮೇ ತಿಂಗಳಲ್ಲಿ ಉಂಟಾಗುತ್ತಿರುವ ಈ ಕೇತು ಸಂಕ್ರಮಣವು ಹಲವು ರಾಶಿಗಳಿಗೆ ಅನುಕೂಲಕರ ಕಾಲವನ್ನು ನೀಡಲಿದೆ. ಸಿಂಹ ರಾಶಿಯಲ್ಲಿ ಕೇತು ಚಲನೆಯು ಈ ಮೂರು ರಾಶಿಗಳಲ್ಲಿ ಅದೃಷ್ಟ ತರಲಿದೆ. ಹಾಗಾದ್ರೆ ಯಾವ ಮೂರು ರಾಶಿಯವರಿಗೆ ಇದರಿಂದ ಲಾಭವಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಿಥುನ ರಾಶಿ
ಕೇತುವು ಮಿಥುನ ರಾಶಿಯ 3ನೇ ಮನೆಗೆ ಚಲಿಸುತ್ತಾನೆ. ಇದು ಮಿಥುನ ರಾಶಿಯವರ ಮೇಲೆ ಉತ್ತಮ ಬದಲಾವಣೆಗೆ ಕಾರಣವಾಗಲಿದೆ. ನಿಮ್ಮ ಆದಾಯದಲ್ಲಿ ಏಕಾಏಕಿ ಹೆಚ್ಚಳ ನೀವು ನೋಡಬಹುದು. ನಿಮ್ಮ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸು ನೋಡಬಹುದು. ಆಧ್ಯಾತ್ಮಿಕವಾಗಿ ನೀವು ಮತ್ತಷ್ಟು ಬಲವಾಗುತ್ತೀರಿ. ನಿಮ್ಮ ಹಲವು ಬಯಕೆಗಳು ಈಡೇರಲಿವೆ. ನಿಮ್ಮ ಉದ್ಯೋಗದಲ್ಲಿ ಬಡ್ತಿಯ ಜೊತೆಗೆ ಬದಲಾವಣೆಯ ಸಾಧ್ಯತೆ ಇದೆ. ಸಂಬಂಧಗಳು ಆಹ್ಲಾದಕರವಾಗಿರಲಿದೆ, ದಾಂಪತ್ಯ ಜೀವನದಲ್ಲಿ ನಿಮಗೆ ಸಂತೋಷದ ಗಳಿಕೆಗಳು ಮುಂದೆ ಬರಲಿವೆ. ಅವಿವಾಹಿತರು ಈ ವರ್ಷದಲ್ಲಿ ಶುಭ ಸುದ್ದಿ ಕೇಳುವ ಸಂಭವವಿದೆ. ಕುಟುಂಬಸ್ಥರು ಸೇರಿ ಪ್ರವಾಸಿ ತಾಣಗಳ ನೋಡುವ ಹಂಬಲ ವ್ಯಕ್ತಪಡಿಸಬಹುದು. ಇದರಿಂದ ನಿಮ್ಮಲ್ಲಿ ಶಾಂತಿ, ನೆಮ್ಮದಿ ನೆಲಸಲಿದೆ.
ತುಲಾ ರಾಶಿ
ಕೇತು ತುಲಾ ರಾಶಿಯ 11ನೇ ಮನೆಗೆ ಚಲಿಸುತ್ತಾನೆ. ಆದ್ದರಿಂದ ಈ ರಾಶಿಚಕ್ರದ ಜನರಿಗೆ ಲಾಭದಾಯಕವಾಗಿರಲಿದೆ. ಆದಾಯದಲ್ಲಿ ಪ್ರಗತಿ ಕಾಣಬಹುದು. ನಿಮ್ಮ ಬಹುದೊಡ್ಡ ಅನಾರೋಗ್ಯಕರ ಸಮಸ್ಯೆಯೊಂದು ದೂರಾಗಲಿದೆ. ನಿಮ್ಮ ಆಸೆಗಳು ಈಡೇರಬಹುದು, ಹಾಗೆ ನಿಮ್ಮ ಜಾತಕಲ್ಲಿದ್ದ ಕೆಲವೊಂದು ದೋಷಗಳು ನಿವರಣೆಯಾಗಲಿದೆ. ವ್ಯಾಪಾರ ಮತ್ತು ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ ಗಳಿಕೆಯ ಸಂದರ್ಭ ಸೃಷ್ಟಿಯಾಗಲಿದೆ. ಕಾರ್ಮಿಕರಿಗೆ ಒಳ್ಳೆಯ ಕಾಲವಾಗಿರಲಿದೆ. ದೂರದ ಪ್ರಯಾಣಗಳು, ದೇವಾಲಯ, ಶುಭ ಕಾರ್ಯಗಳಂಹ ಕೆಲಸದಲ್ಲಿ ಈ ವರ್ಷ ನೀವು ತೊಡಗಿಸಿಕೊಳ್ಳುವಿರಿ. ಕುಟುಂಬಸ್ಥರಿಂದ ನಿಮಗೆ ಅಗತ್ಯ ಹಣಕಾಸು ನೆರವು ಸಿಗಲಿದೆ.
ಮೀನ ರಾಶಿ
ಕೇತುವು ಮೀನ ರಾಶಿಯ 6 ನೇ ಮನೆಯಲ್ಲಿ ಚಲಿಸಲಿದೆ. ಹೀಗಾಗಿ ಮೇ ನಂತರದ 18 ತಿಂಗಳುಗಳ ಕಾಲ ನಿಮಗೆ ಉತ್ತಮ ದಿನಗಳು ಎದುರಾಗುತ್ತವೆ. ನಿಮ್ಮ ಹೂಡಿಕೆಗಳಿಂದ ಲಾಭ ಬರಲಿದೆ. ವ್ಯಾಪಾರದಲ್ಲಿ ಪ್ರಗತಿ ಕಾಣಲಿದ್ದೀರಿ. ಕೆಲಸದಲ್ಲಿ ಕಠಿಣ ಪರಿಶ್ರಮವು ಫಲ ನೀಡುತ್ತದೆ. ವೃತ್ತಿಯಲ್ಲಿ ಉನ್ನತಿಗೆ ಹಲವು ಅವಕಾಶಗಳು ದೊರೆಯಲಿವೆ. ಕೆಲಸದಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ಪ್ರಶಂಸಿಸಲಾಗುತ್ತದೆ. ಕುಟುಂಬದಲ್ಲಿ ನೆಮ್ಮದಿ ಇರಲಿದೆ. ಮಕ್ಕಳ ಕನಸಿಗೆ ಬೇಕಾದ ತಯಾರಿಯಲ್ಲಿ ನೀವು ತೊಡಗಲಿದ್ದೀರಿ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications