Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೇತು ಸಂಕ್ರಮಣ: ಯಾವ ರಾಶಿಯ ಮೇಲೆ ಕೇತು ದೃಷ್ಟಿ.. ಯಾವ ರಾಶಿಯವರಿಗೆ ದೆಸೆ ನೋಡಿ..!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ವರ್ಷದಂತೆ 2024ರಲ್ಲೂ ಹಲವು ಮಹಾಗ್ರಹಗಳ ಸಂಕ್ರಮಣ ಆಗಲಿದ್ದು, ಹಲವು ಮಹತ್ವದ ಯೋಗಗಳು ರೂಪುಗೊಳ್ಳಲಿವೆ. ಹೀಗಾಗಿ, ಗುರು ಶುಕ್ರದಂತಹ ಪ್ರಮುಖ ಗ್ರಹಗಳು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಮನೆ ಬದಲಿಸುತ್ತವೆ.
ರಾಹು-ಕೇತುಗಳು ಸುಮಾರು 18 ತಿಂಗಳುಗಳ ಕಾಲ ಒಂದೇ ರಾಶಿಯಲ್ಲಿ ಇರುತ್ತಾರೆ. ಆದ್ದರಿಂದ ಈ ವರ್ಷ ಕೇತುವಿನ ಸಂಕ್ರಮಣ ಇರುವುದಿಲ್ಲ, ಆದರೆ ಅಕ್ಟೋಬರ್ 30, 2023ರಂದು ಮಧ್ಯಾಹ್ನ 02:13ಕ್ಕೆ, ಕೇತು ಕನ್ಯಾರಾಶಿಗೆ ಪ್ರವೇಶಿಸಲಿದ್ದಾನೆ. ಕೇತುವಿನ ಈ ಸಂಕ್ರಮವು ವರ್ಷವಿಡೀ ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾದರೆ ಕೇತುವಿನ ಸ್ಥಾನ ಪಲ್ಲಟದಿಂದ ಯಾವ ರಾಶಿಯ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ವೃಷಭ ರಾಶಿ
ವೃಷಭ ರಾಶಿಯವರಿಗೆ ಕೇತುವಿನ ಸಂಚಾರವು ಅಷ್ಟೊಂದು ಪರಿಣಾಮ ಬೀರುವುದಿಲ್ಲ. ನೀವು ನಿಮ್ಮ ವೃತ್ತಿಯಲ್ಲಿ ಯಶಸ್ಸುಗಳಿಸುವ ಸಾಧ್ಯತೆ ಇದೆ. ಅಂದರೆ ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಯಶಸ್ಸು ಪಡೆಯಬಹುದು. ಆದರೆ ನಿಮ್ಮಿಂದ ಕೆಲವು ತಪ್ಪು ನಿರ್ಧಾರಗಳು ಕೂಡ ತೆಗೆದುಕೊಳ್ಳುವ ಸಾಧ್ಯತೆ ಇದೆ. ಅಂದರೆ ನಿಮ್ಮಿಂದ ಅಲ್ಲದಿದ್ದರೂ ಇತರರು ನಿಮ್ಮ ದಾರಿ ತಪ್ಪಿಸಬಹುದು. ಇಲ್ಲವೆ ತಪ್ಪು ನಿರ್ಧಾರ ತೆಗೆದುಕೊಳ್ಳಲು ಪ್ರೇರೇಪಿಸಬಹುದು. ಹೀಗಾಗಿ ನಿಮಗೆ ಸಮಸ್ಯೆಗಳು ಎದುರಾಗಬಹುದು, ನೀವು ಮದುವೆಯಾಗಿದ್ದರೆ ಮಕ್ಕಳ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ಜೊತೆಗೆ ನಿಮ್ಮಲ್ಲಿ ಅನಾರೋಗ್ಯಗಳು ಕಾಡಬಹುದು ಎಚ್ಚರವಹಿಸುವುದು ಮುಖ್ಯ.
ಮಿಥುನ ರಾಶಿ
2024ರಲ್ಲಿ ಕೇತು ಮಿಥುನ ರಾಶಿಯ ಜನರಿಗೆ ಉತ್ತಮವೆಂದು ಪರಿಗಣಿಸಲಾಗುವುದಿಲ್ಲ ಏಕೆಂದರೆ ಈ ಅವಧಿಯಲ್ಲಿ ನೀವು ಕೆಲವು ನಷ್ಟಗಳ ಅನುಭವಿಸಬಹುದು. ಇದು ಸಂತೋಷ, ಹಣದ ನಷ್ಟವೂ ಆಗಿರಬಹುದು. ಭಿನ್ನಾಭಿಪ್ರಾಯಗಳು, ಗೊಂದಲಗಳು ಕಂಡುಬರಬಹುದು. ಆದರೆ ಇದೇ ಪರಿಸ್ಥಿತಿ ಮುಂದುವರೆಯುವುದಿಲ್ಲ. ನೀವು ಹಣವನ್ನು ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಅದನ್ನು ಮುಂದೂಡುವುದು ಶುಭ ಎಂದು ಪರಿಗಣಿಸಲಾಗಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ವರ್ಷ ಕೇತು ಸಂಕ್ರಮಣ ಶುಭವಾಗದಿರುವ ಸಾಧ್ಯತೆ ಇದೆ. ಬಹಳಷ್ಟು ಜವಾಬ್ದಾರಿಗಳನ್ನು ಹೊಂದಿರುವುದರಿಂದ, ಅವುಗಳನ್ನು ಎದುರಿಸುವುದು ನಿಮಗೆ ಕಷ್ಟವಾಗಬಹುದು. ಇವುಗಳನ್ನು ಪೂರೈಸಲು ನೀವು ಸಾಲ ಪಡೆಯುವ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಆರ್ಥಿಕ ಹೊರೆ ಹೆಚ್ಚಾಗುವ ಸಾಧ್ಯತೆಯಿದೆ. ಅಲ್ಲದೆ ನಿಮ್ಮ ವೈಯಕ್ತಿಕ ಜೀವನದಲ್ಲಿ ನೀವು ಕುಟುಂಬದ ಸದಸ್ಯರು, ಪಾಲುದಾರ ಮತ್ತು ಸ್ನೇಹಿತರೊಂದಿಗೆ ಭಾವನಾತ್ಮಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದರಿಂದಾಗಿ ನೀವು ಒತ್ತಡಕ್ಕೆ ಒಳಗಾಗಬಹುದು. ಒಂದು ಪದದಲ್ಲಿ ಹೇಳುವುದಾದರೆ ಸಿಂಹ ರಾಶಿಯವರಿಗೆ ಕೇತುವಿನ ಪರಿಣಾಮದಿಂದಾಗಿ ಖರ್ಚು ಹೆಚ್ಚಾಗಬಹುದು.
ತುಲಾ ರಾಶಿ
ತುಲಾ ರಾಶಿಯವರಿಗೆ ಕೇತುವಿನ ಸಂಕ್ರಮಣ ಶುಭ ಫಲಿತಾಂಶಗಳನ್ನು ನೀಡಲು ಅಡ್ಡಿಯಾಗಬಹುದು ಏಕೆಂದರೆ ಈ ಅವಧಿಯು ನಿಮ್ಮ ಜೀವನದಲ್ಲಿ ಸಮಸ್ಯೆಗಳನ್ನು ತರಬಹುದು. ನಿಮ್ಮ ಖರ್ಚುಗಳು ಹೆಚ್ಚಾಗುವ ಸಾಧ್ಯತೆಯಿದೆ. ಕೇತುವಿನ ಪರಿಣಾಮದಿಂದಾಗಿ ನಿಮ್ಮ ಆರೋಗ್ಯದಲ್ಲಿ ಏರಿಳಿತ ಕಾಣಬಹುದು. ಶುಭ ಕಾರ್ಯಗಳಲ್ಲಿ ನಿಮಗೆ ಅಡೆತಡೆ ಎದುರಾಗಬಹುದು.
ಮಕರ ರಾಶಿ
2024ರಲ್ಲಿ ಕೇತು ಸಂಕ್ರಮಣವು ಮಕರ ರಾಶಿಯವರಿಗೆ ಪ್ರತಿಕೂಲವಾಗಿರುತ್ತದೆ. ಕೇತು ಈ ರಾಸಿ ಜನರಲ್ಲಿ ಆರೋಗ್ಯಕರ ಸಮಸ್ಯೆ ತರಬಹುದು. ಹಿರಿಯ ಸದಸ್ಯರಲ್ಲಿ ಅನಾರೋಗ್ಯಕರ ಸೂಚನೆಗಳು ಕಂಡುಬರಬಹುದು. ಹೀಗಾಗಿ ಆರೋಗ್ಯ ಪರಿಹಾರಕ್ಕಾಗಿ ನೀವು ಹಣಕಾಸಿನ ಖರ್ಚು ಮಾಡಬೇಕಾಗಬಹುದು. ಇದರ ಜೊತೆ ಕೇತುವಿನ ಪರಿಣಾಮದಿಂದಾಗಿ ನಿಮ್ಮ ಕೌಂಟುಬಿಕ ಸಮಸ್ಯೆಗಳು, ವಿವಾದಗಳು ಹೆಚ್ಚಾಗಬಹುದು. ಹೀಗಾಗಿ ನೀವು ಎಲ್ಲಾ ಸಂದರ್ಭಗಳಲ್ಲಿ ಜಾಗರೂಕತೆಯಿಂದ ಇರಬೇಕಾಗುತ್ತದೆ.
ಕುಂಭ ರಾಶಿ
ಶನಿ ದೇವನು ಆಳುವ ಕುಂಭ ರಾಶಿಯಲ್ಲಿ ಕೇತುವಿನ ಪರಿಣಾಮ ಬೀರಲಿದೆ. ನೀವು ಯಾವುದೇ ಕೆಲಸ ಮಾಡಲು ಪ್ರಯತ್ನಿಸಿದರೂ ಅಡೆತಡೆ ಎದುರಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ನಿರಾಶೆಗೊಂಡಂತೆ ಕಾಣಿಸಬಹುದು. ಹಣ, ಆರೋಗ್ಯ ಸೇರಿ ವೃತ್ತಿಯಲ್ಲಿನ ಸಮಸ್ಯೆಗಳು ಉಲ್ಬಣಿಸಿದ ಅನುಭವವಾಗಬಹುದು. ಹೀಗಾಗಿ ಈ ರಾಶಿಯ ಜನರು ನಿಮ್ಮ ಸುತ್ತ ಮುತ್ತ ನಡೆಯುವ ಎಲ್ಲಾ ವಿಚಾರಗಳ ಕುರಿತಂತೆ ಬಹಳ ಎಚ್ಚರಿಕೆ ಅಗತ್ಯ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications