Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ತಿಂಗಳ ಅಂತ್ಯದಲ್ಲಿ ಕೇತು ನಕ್ಷತ್ರ ಬದಲಾವಣೆ: ನಷ್ಟ, ನೋವು, ಅಪಾಯದಲ್ಲಿ ಈ ರಾಶಿಗಳು
ಜ್ಯೋತಿಷ್ಯದಲ್ಲಿ ಎಲ್ಲಾ ಗ್ರಹಗಳನ್ನು ಸಮಾನ ಎಂದು ಪರಿಗಣಿಸಲಾಗಿದೆ. ಹಾಗೆ ರಾಹು ಮತ್ತು ಕೇತು ಗ್ರಹವನ್ನು ನೆರಳಿನ ಗ್ರಹಗಳೆಂದು ಪರಿಗಣಿಸಲಾಗುತ್ತದೆ. ರಾಹು ಮತ್ತು ಕೇತುವಿನ ಸಂಚಾರವು ಎಲ್ಲಾ ಗ್ರಹಗಳ ಮೇಲೆ ಹಾಗೆ ರಾಶಿಗಳ ಮೇಲೆ ಪರಿಣಾಮ ಉಂಟು ಮಾಡುವುದು ನೋಡಬಹುದು. ಸದ್ಯ ಕೇತು ಈ ಜನವರಿಯಲ್ಲಿ ಸ್ಥಾನ ಬದಲಾಯಿಸುತ್ತಿದ್ದಾನೆ.
ಜನವರಿ 25ರಂದು ಕೇತು ಪೂರ್ವಪಲ್ಗುಣಿ ನಕ್ಷತ್ರದ 2ನೇ ಹಂತಕ್ಕೆ ಪ್ರಯಾಣಿಸಲಿದ್ದಾನೆ. ಮಾರ್ಚ್ 29ರ ವರೆಗೂ ಇದೇ ಸ್ಥಿತಿಯಲ್ಲಿ ಕೇತು ಸಂಚರಿಸಲಿದ್ದಾನೆ. ಇದರಿಂದ ಹಲವು ರಾಶಿಗಳಲ್ಲಿ ಬದಲಾವಣೆಗಳ ನೋಡಬಹುದು. ಅದ್ರಲ್ಲೂ ಕೇತುವಿನಿಂದ ನೇರ ಪ್ರಭಾವಕ್ಕೆ ಒಳಗಾಗುವ ರಾಶಿಗಳಿಂದ ಹಿಡಿದು ಉಳಿದಂತೆ ಎಲ್ಲಾ ರಾಶಿಗಳಲ್ಲಿ ಶುಭ ಹಾಗೂ ಅಶುಭ ಯೋಗಗಳಿಗೆ ಇದು ಕಾರಣವಾಗಲಿದೆ.

ಜ್ಯೋತಿಷಿಗಳ ಪ್ರಕಾರ ಪೂರ್ವಫಲ್ಗುಣಿ ನಕ್ಷತ್ರದ ಆಡಳಿತ ಗ್ರಹ ಶುಕ್ರ ಆಗಿದ್ದಾನೆ. ಶುಕ್ರನು ಆಧ್ಯಾತ್ಮಿಕ ವಿಚಾರವಾಗಿ ಬಹುಮುಖ್ಯ ಗ್ರಹ. ಹೀಗಾಗಿ ಈ ನಕ್ಷತ್ರಕ್ಕೆ ಕೇತುವಿನ ಚಲನೆಯಿಂದಾಗಿ ಹಲವು ರಾಶಿಗಳಲ್ಲಿ ಧನಾತ್ಮಕ ಬದಲಾವಣೆಗಳನ್ನು ನೋಡಬಹುದು. ಆದ್ರೆ ಶುಕ್ರನ ರಾಶಿ ಹೊರತುಪಡಿಸಿ ಉಳಿದ ಕೆಲವು ರಾಶಿಗಳಿಗೆ ಕೇತುವಿನ ಈ ಚಲನೆಯಿಂದ ನಕಾರಾತ್ಮಕ ಬೆಳವಣಿಗೆಯ ನೋಡಬಹುದು.
ಕೇತುವಿನ ಈ ಚಲನೆಯಿಂದ ಯಾವ ರಾಶಿಯವರಿಗೆ ಅಶುಭವಿದೆ. ಯಾರು ಎಚ್ಚರಿಕೆಯಿಂದ ಇರಬೇಕು? ವ್ಯವಹಾರದಲ್ಲಿ ನಿಧಾನಗತಿ, ಸಂಬಂಧಗಳಲ್ಲಿ ಅಪಶ್ರುತಿ ಮತ್ತು ಪ್ರಯಾಣದ ಸಮಯದಲ್ಲಿ ವಿವಿಧ ತೊಂದರೆಗಳನ್ನು ಎದುರಿಸಬಹುದು. ಕೇತು ನಕ್ಷತ್ರ ಸಂಚಾರದ ಸಮಯದಲ್ಲಿ ಯಾರು ಜಾಗರೂಕರಾಗಿರಬೇಕು ಎಂಬುದನ್ನು ತಿಳಿದುಕೊಳ್ಳಿ.
ಮಿಥುನ ರಾಶಿ
ಕೇತುವಿನ ನಕ್ಷತ್ರ ಬದಲಾವಣೆಯು ಮಿಥುನ ರಾಶಿಯವರಿಗೆ ಸವಾಲುಗಳ ತರಲಿದೆ. ನಿಮ್ಮ ವೃತ್ತಿ ಮತ್ತು ವ್ಯವಹಾರ ಸಂಬಂಧವಾಗಿ ಇದ್ದಂತಹ ಸುಖಜೀವನದಲ್ಲಿ ಕಷ್ಟಗಳು ಎದುರಾಗಲಿದೆ. ವೃತ್ತಿ ಸಂಬಂಧಿತ ಒತ್ತಡಗಳು ಹೆಚ್ಚಾಗಲಿದೆ. ಹೊಸ ಅವಕಾಶಗಳ ಹುಡುಕಲು ನೀವು ಮತ್ತಷ್ಟು ಶ್ರಮ ಹಾಕಬೇಕಾಗುತ್ತದೆ. ವೈವಾಹಿಕ ಜೀವನದಲ್ಲಿ ಭಾವನಾತ್ಮಕ ತಿಳುವಳಿಕೆ ಅಗತ್ಯ. ನಿಮ್ಮ ಕೌಟುಂಬಿಕ ವಿಚಾರದಲ್ಲಿ ಹಣಕಾಸಿನ ಸಮಸ್ಯೆಗಳು ಎದುರಾಗಲಿದೆ. ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ದೊಡ್ಡ ಸವಾಲುಗಳು ಎದುರಾಗಲಿದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಈ ಸಮಯದಲ್ಲಿ ಬಹಳಷ್ಟು ಸಮಸ್ಯೆಗಳು ಎದುರಾಗಬಹುದು. ನೀವು ಕೆಲಸ ಮತ್ತು ಮನೆಯಲ್ಲಿನ ಸಮತೋಲ ಕಾಪಾಡಿಕೊಳ್ಳುವಲ್ಲಿ ಸಮಸ್ಯೆಗಳ ಎದುರಿಸಬಹುದು. ವಾಹನ ಸಂಬಂಧಿತ ವಿಚಾರಗಳಲ್ಲಿ ನಿಮಗೆ ಅನುಕೂಲಕರ ವಾತಾವರಣ ಇರುವುದಿಲ್ಲ. ಅತೀಯಾದ ಖರ್ಚುಗಳು ನಿಮಗೆ ಆರ್ಥಿಕ ಸಮಸ್ಯೆಗಳ ತರಬಹುದು. ಅದ್ರಲ್ಲೂ ನೀವು ನೀಡುವ ಸಾಲ ಅಥವಾ ಮಾಡಿರುವ ಹೂಡಿಕೆಯೂ ನೀವು ಅಂದುಕೊಂಡ ರೀತಿಯ ಫಲಿತಾಂಶಗಳ ತರದೆ ಇರಬಹುದು. ದಾಂಪತ್ಯದಲ್ಲಿ ಹಣಕಾಸು ಕುರಿತಾದ ವಿಚಾರದಿಂದ ಮುನಿಸುಗಳಿರಬಹುದು. ಪ್ರಯಾಣಗಳಲ್ಲಿ ಅಶುಭವೇ ಹೆಚ್ಚಾಗಬಹುದು.
ಮೀನ ರಾಶಿ
ಹೊಸ ಉದ್ಯೋಗವನ್ನು ಹುಡುಕಲು ನೀವು ಹೆಚ್ಚು ಸಮಯ ಕಾಯಬೇಕಾಗಬಹುದು. ಕೇತುವಿನ ಚಲನೆಯು ನಿಮಗೆ ಸವಾಲಿನ ಸಮಯವನ್ನು ತರಲಿದೆ. ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ನೀವು ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಯತ್ನವನ್ನು ಮಾಡಬೇಕಾಗುತ್ತದೆ. ನಿಮ್ಮ ಆರೋಗ್ಯದಲ್ಲಿ ಏರಿಗಳಿಗಳ ನೋಡಬಹುದು. ಹಣಕಾಸಿನ ವಹಿವಾಟುಗಳಲ್ಲಿ ಬಹಳ ಜಾಗರೂಕರಾಗಿರಿ, ಇಲ್ಲದಿದ್ದರೆ ನೀವು ಅನಗತ್ಯ ಸಮಸ್ಯೆಗಳನ್ನು ಎದುರಿಸಬಹುದು. ಐಷಾರಾಮಿ ವಸ್ತುಗಳ ಮೇಲೆಯೂ ಖರ್ಚುಗಳನ್ನು ಮಾಡಬಹುದು. ಹಾಗೆ ವಾಹನ ಸಂಬಂಧಿತ ವಿಚಾರಗಳಲ್ಲಿ ನಿಮಗೆ ಅಂದುಕೊಂಡ ಫಲಿತಾಂಶ ಇರುವುದಿಲ್ಲ. ಉದ್ಯೋಗ ಬದಲಿಸುವ ನಿಮ್ಮ ಬಯಕೆಗಳು ಈಡೇರದೆ ಇರಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











