ಕೇತು ಸಂಚಾರದ ಬಳಿಕ 5 ರಾಶಿಗಳ ಸಂಪತ್ತು ವೃದ್ಧಿಸಲಿದೆ, ಕೇತು ಈ ರಾಶಿಗಳಲ್ಲಿ ಯೋಗಕಾರಕ ಸ್ಥಾನದಲ್ಲಿದೆ

ಕೇತು ಹಾಗೂ ರಾಹು ನೆರಳಿನ ಗ್ರಹವಾಗಿದ್ದು ಈ ಗ್ರಹಗಳು ಕೆಟ್ಟ ಪ್ರಭಾವ ಬೀರುವ ಗ್ರಹಗಳು ಎಂದು ಜನರು ಭಾವಿಸುತ್ತಾರೆ, ಆದರೆ ಎಲ್ಲರಿಗೂ ಈ ರಾಹು, ಕೇತುವಿನಿಂದಾಗಿ ತೊಂದರೆ ಉಂಟಾಗುವುದಿಲ್ಲ. ಕೆಲವೊಂದು ಸಮಯದಲ್ಲಿ ಗ್ರಹಗಳು ನಮ್ಮ ಪಾಲಿಗೆ ತುಂಬಾನೇ ಯೋಗಕರಕಗಳಾಗುತ್ತವೆ, ಈ ಗ್ರಹದ ದೆಸೆಯಿಂದಾಗಿ ಅದೃಷ್ಟದ ಬಲದಿಂದ ನಾವು ಅಪಾರ ಯಶಸ್ಸು ಗಳಿಸುವಂತಾಗುವುದು ಎಂದು ಸಾಮುದ್ರಿಕ ಶಾಸ್ತ್ರದಲ್ಲಿ ಹೇಳಲಾಗಿದೆ.

ಈ ವರ್ಷದಲ್ಲಿ ಕೇತು ಗ್ರಹವು ರಾಶಿ ಬದಲಾವಣೆ ಮಾಡಲಿದ್ದು ಕೇತು ಹಿಮ್ಮುಖವಾಗಿ ಚಲಿಸುವ ಗ್ರಹವಾಗಿರುವುದರಿಂದ ಮೇ 18ಕ್ಕೆ ಕನ್ಯಾ ರಾಶಿಯಿಂದ ಸಿಂಹ ರಾಶಿಗೆ ಸಂಚರಿಸಲಿದೆ. ಕೇತು ಸಿಂಹ ರಾಶಿಯಲ್ಲಿ 18 ತಿಂಗಳು ಇರಲಿದೆ. ಕೇತು ಸಿಂಹ ರಾಶಿಯಲ್ಲಿರುವಾಗ ಕೆಲ ರಾಸಿಗಳ ಮೇಲೆ ತುಂಬಾನೇ ಅದ್ಭುತ ಪ್ರಯೋಜನ ಬೀರಲಿದೆ.

Kethu Transit In 2025

ಕೇತು ಸಿಂಹ ರಾಶಿಗೆ ಸಂಚಾರ ಮಾಡಿದಾಗ ಈ ರಾಶಿಯವರಿಗೆ ಕೇತು ಯೋಗಕಾರಕ ಗ್ರಹ ಅಂದರೆ ಸಂಪತ್ತು, ಯಶಸ್ಸು ತರುವ ಗ್ರಹವಾಗಿ ಬದಲಾಗಲಿದ್ದಾನೆ, ಈ ರಾಶಿಯವರು ಕೇತು ದೆಸೆಯಿಂದಾಗಿ ತಮ್ಮ ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸಲು ಸಾಧ್ಯವಾಗುವುದು.


ಕೇತು ಸಂಚಾರ ಈ ರಾಶಿಗಳಿಗೆ ಅದೃಷ್ಟಕರ:

ಮೇಷ ರಾಶಿ

ಮೇಷ ರಾಶಿಯವರು ಕೇತುವಿನ ಪ್ರಭಾವದಿಂದಾಗಿ ಜೀವನದಲ್ಲಿ ಅನೇಕ ಧನಾತ್ಮಕ ಬದಲಾವಣೆ ಕಾಣುತ್ತೀರಿ. ಈ ವರ್ಷ ಮಾರ್ಚ್‌ 29ರಿಂದ ಮೇಷ ರಾಶಿಯವರಿಗೆ ಶನಿ ಸಾಡೇಸಾತಿ ಶುರು, ಆದರೆ ಕೇತುವಿನ ಸ್ಥಾನ ನಿಮಗೆ ಅನುಕೂಲಕರವಾಗಿರುವುದರಿಂದ ನೀವು ತುಂಬಾನೇ ಅದ್ಭುತ ಪ್ರಯೋಜನ ಪಡೆಯುತ್ತೀರಿ.

2025ನೇ ವರ್ಷದ ನೀವು ಆರ್ಥಿಕ ಲಾಭ ಕಾಣುವಿರಿ , ಈ ವರ್ಷ ಆರ್ಥಿಕವಾಗಿ ನೀವು ತುಂಬಾನೇ ಪ್ರಯೋಜನ ಪಡೆಯುತ್ತೀರಿ, ನಿಮ್ಮ ಕೆಲಸ ಕಾರ್ಯದಲ್ಲಿ ಉತ್ತಮ ಮನ್ನಣೆ ದೊರೆಯಲಿದೆ. ಕೆಲ ಸವಾಲುಗಳು ಶನಿ ನೀಡಿದರೂ ಕೇತು ಪ್ರಭಾವದಿಂದಾಗಿ ಆ ಎಲ್ಲಾ ಅಡೆತಡೆ ಎದುರಿಸಲು ಸಾಧ್ಯವಾಗಲಿದೆ. ಈ ಕೇತು ಸಂಚಾರ ನಿಮಗೆ ಅದೃಷ್ಟದ ಬೆಂಬಲ ನೀಡುತ್ತದೆ.

ಮಿಥುನ ರಾಶಿ

ಮಿಥುನ ರಾಶಿಯಲ್ಲಿ ಕೇತು 3ನೇ ಮನೆಯಲ್ಲಿ ಇರಲಿದೆ. ಈ ಮನೆಯಲ್ಲಿದ್ದು ನಿಮಗೆ ತುಂಬಾನೇ ಅನುಕೂಲಕರ ಪ್ರಯೋಜನ ನೀಡಲಿದೆ. ಈ ಅವಧಿಯಲ್ಲಿ ನಿಮ್ಮ ಕೆಲಸ ಕಾರ್ಯದಲ್ಲಿ ನೀವು ಯಶಸ್ಸು ಪಡೆಯಲು ಸಾಧ್ಯವಾಗುವುದು. ವಿದೇಶದಲ್ಲಿ ಕೆಲಸ ಹುಡುಕುತ್ತಿದ್ದರೆ ಈ ಅವಧಿ ನಿಮಗೆ ಪ್ರಯೋಜನಕಾರಿಯಾಗಿದೆ.

ಕೇತು ನಿಮ್ಮ ವೈಯಕ್ತಿಕ ಬದುಕಿನಲ್ಲಿಯೂ ಅತ್ಯುತ್ತಮವಾದ ಪ್ರಯೋಜನ ಪಡೆಯುತ್ತೀರಿ. ಸಂಪತ್ತು ವೃದ್ಧಿಸಲಿದೆ. ಈ ವರ್ಷ ಮನೆ ಖರೀದಿಸಬೇಕು ಅಥವಾ ಗಾಡಿ ಖರೀದಿಸಬೇಕೆಂಬ ನಿಮ್ಮ ಪ್ರಯತ್ನ ಕೈಗೂಡಲಿದೆ, ನಿಮ್ಮ ಸೌಕರ್ಯಗಳು ಹೆಚ್ಚಾಗಲಿದೆ, ನೀವು ಕುಟುಂಬದ ಜೊತೆಗೆ ಸಂತೋಷದಿಂದ ಕಳೆಯಲು ಸಾಧ್ಯವಾಗಲಿದೆ.

ಕರ್ಕ ರಾಶಿ

ಯಾರು ಕಬ್ಬಿಣ, ಎಣ್ಣೆ, ಮದ್ಯ ಈ ಬಗೆಯ ವ್ಯಾಪಾರ ಮಾಡುತ್ತಿದ್ದಾರೋ ಅವರು ಅಪಾರ ಹಣ ಗಳಿಸಲು ಸಾಧ್ಯವಾಗಲಿದೆ, ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ತುಂಬಾ ಬೆಳವಣಿಗೆಯನ್ನು ಕಾಣಬಹುದು. ಇನ್ನು ವ್ಯಾಪಾರಸ್ಥರು ಹೂಡಿಕೆ ಮಾಡು ಬಯಸಿದರೆ ಈ ಅವಧಿ ನಿಮಗೆ ತುಂಬಾನೇ ಪ್ರಯೋಜನಕಾರಿಯಾಗುದೆ.

ಉದ್ಯೋಗದಲ್ಲಿ ಬಡ್ತಿ ಅಥವಾ ಕೆಲಸದ ಬದಲಾವಣೆ ಬಗ್ಗೆ ಆಲೋಚನೆ ಮಾಡುತ್ತಿದ್ದರೆ ಈ ಅವಧಿ ನಿಮಗೆ ಅನುಕೂಲಕರವಾಗಿದೆ, ನಿಮ್ಮ ಸ್ಥಾನಮಾನ ಹೆಚ್ಚಾಗಲಿದೆ. ಕೇತು ನಿಮ್ಮ ಸೌಕರ್ಯ ಹೆಚ್ಚಿಸಲಿದೆ. ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗಲಿದೆ, ನಿಮ್ಮ ಬಹುದೊಡ್ಡ ಕನಸು ಈ ಅವಧಿಯಲ್ಲಿ ನೆರವೇರಲಿದೆ.

ಕನ್ಯಾ ರಾಶಿ

ಕೇತು ಸಂಚಾರ ಕನ್ಯಾರಾಶಿಯವರಿಗೂ ತುಂಬಾನೇ ಪ್ರಯೋಜನಕಾರಿಯಾಗಿದೆ, ಆರ್ಥಿಕವಾಗಿ ತುಂಬಾನೇ ಬೆವಣಿಗೆ ಕಾಣುತ್ತೀರಿ. ಏನಾದರು ಸಾಲವಿದ್ದರೆ ಅದನ್ನು ತೀರಿಸಲು ಸಾಧ್ಯವಾಗಲಿದೆ. ಮನೆ, ವಾಹನ ಈ ಬಗೆಯ ಕನಸು ನನಸಾಗಲಿದೆ.

ವ್ಯಾಪಾರಸ್ಥರು ಎದುರಿಸುತ್ತಿದ್ದ ಅಡೆತಡೆಗಳು ದೂರಾಗಿ ವೃತ್ತಿ ಬದುಕಿನಲ್ಲಿ ತುಂಬಾ ಉತ್ತಮ ಯಶಸ್ಸು ಪಡೆಯಲು ಸಾಧ್ಯವಾಗಲಿದೆ. ನಿಮ್ಮ ಸೌಕರ್ಯಗಳು ಹೆಚ್ಚಾಗಲಿದೆ. ಕೆಲಸ ಹುಡುಕುತ್ತಿದ್ದರೆ ನೀವು ಬಯಸಿದ ಕೆಲಸ ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ.


ತುಲಾ ರಾಶಿ

ಈ ಕೇತು ಸಂಚಾರ ತುಲಾ ರಾಶಿಯವರಿಗೂ ತುಂಬಾನೇ ಪ್ರಯೋಜನಕಾರಿಯಾಗಲಿದೆ. ಕೇತುವಿನ ಈ ಪ್ರಭಾವ 18 ತಿಂಗಳು ಇರಲಿದ್ದು ಈ ಅವಧಿಯಲ್ಲಿ ನೀವು ಉತ್ತಮ ಪ್ರಯೋಜನ ಪಡೆಯುತ್ತೀರಿ. ಇನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರು ಉತ್ತಮ ಪ್ರಯೋಜನ ಪಡೆಯಲು ಸಾಧ್ಯವಾಗಲಿದೆ.

ಕೇತು ನಮ್ಮ ರಾಶಿಯಲ್ಲಿ ಅನುಕೂಲಕರ ಸ್ಥಾನದಲ್ಲಿದ್ದರೆ ಕೇತು ವ್ಯಕ್ತಿಯಲ್ಲಿ ಬದಲಾವಣೆಯನ್ನು ತರುತ್ತದೆ ಎಂದು ಸಾಮುದ್ರಿಕ ಶಾಸ್ತ್ರ ಹೇಳುತ್ತದೆ:

ಧಾರ್ಮಿಕ ಆಸಕ್ತಿ ಹೆಚ್ಚಾಗುವುದು
ವ್ಯಕ್ತಿ ಧಾರ್ಮಿಕ ಕಾರ್ಯಗಳ ಕಡೆಗೆ ಹೆಚ್ಚಿನ ಗಮನ ನೀಡಲು ಪ್ರಯತ್ನಿಸಿ.

ಆರ್ಥಿಕವಾಗಿ ಬೆಳವಣಿಗೆ ಕಾಣುತ್ತೀರಿ
ಕೇತು ನಿಮ್ಮ ರಾಶಿಯಲ್ಲಿ ಅನುಕೂಲಕರ ಸ್ಥಾನದಲ್ಲಿದ್ದಾಗ ನಿಮ್ಮ ಸಂಪತ್ತು ಹೆಚ್ಚಾಗಲಿದೆ. ಆರ್ಥಿಕ ಪ್ರಯತ್ನಗಳಲ್ಲಿ ಯಶಸ್ವಿಯಾಗುತ್ತೀರಿ. ಬರಬೇಕಾಗಿರುವ ಹಣ ಕೈ ಸೇರುತ್ತದೆ. ವ್ಯಾಪಾರಿಗಳು, ಉದ್ಯಮಿಗಳು ಉತ್ತಮ ಆರ್ಥಿಕ ಲಾಭ ಗಳಿಸುತ್ತೀರಿ, ಉದ್ಯೋಗಿಗಳು ಬಡ್ತಿ ಪಡೆಯುತ್ತೀರಿ.

ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದು
ಕೇತು ದುರ್ಬಲ ಸ್ಥಾನದಲ್ಲಿದ್ದಾಗ ಆತ್ಮವಿಶ್ವಾಸ ಕುಗ್ಗಿಸಿದರೆ ಬಲವಾದ ಸ್ಥಾನದಲ್ಲಿದ್ದಾಗ ಆತ್ಮವಿಶ್ವಾಸ ಹೆಚ್ಚು ಮಾಡುತ್ತಾನೆ, ಕೇತು ಬಲದಿಂದ ನಿಮ್ಮ ಸೌಕರ್ಯಗಳು ಹೆಚ್ಚಾಗಲಿದೆ.

ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Kethu Transit In 2025: These Zodiac Signs Will See Finical Growth In Kannada

Kethu Transit In 2025: These transit brings lucky to these zodiac signs,
X
Desktop Bottom Promotion