ವೃಷಭ ರಾಶಿಯಲ್ಲಿ ಕೇಂದ್ರ ತ್ರಿಕೋನ ರಾಜಯೋಗ: 3 ರಾಶಿಯವರಿಗೆ ತೆರೆಯಲಿದೆ ಅದೃಷ್ಟ ಭಾಗಿಲು!!

ಜ್ಯೋತಿಷ್ಯದಲ್ಲಿ ಗ್ರಹ ಸಂಚಾರ ಬಹಳ ಮುಖ್ಯ ಎಂದು ಪರಿಗಣಿಸಲಾಗಿದೆ. ಹಾಗೆ ಗ್ರಹಗಳ ಸಂಚಾರವು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುವುದರಿಂದ ಮುಖ್ಯ ಪಾತ್ರ ವಹಿಸಲಿದೆ. ಹಾಗೆ ಒಂದೇ ರಾಶಿಯಲ್ಲಿ ಹಲವು ಗ್ರಹಗಳ ಚಲನೆಯು ಹಲವು ರೀತಿಯ ಯೋಗಗಳಿಗೆ ಕಾರಣ‍ವಾಗುವುದು ನಾವು ನೋಡಬಹುದು.

ಈಗ ಜೂನ್‌ನಲ್ಲಿ ವೃಷಭ ರಾಶಿಯಲ್ಲಿ ವಿಶೇಷ ರೀತಿಯ ಯೋಗಗಳು ಉಂಟಾಗುತ್ತಿವೆ. ಈ ಜೂನ್‌ನಲ್ಲಿ ಶುಕ್ರ ವೃಷಭ ರಾಶಿಗೆ ಚಲಿಸಲಿದ್ದಾನೆ. ಕೇಂದ್ರ ತ್ರಿಕೋನ ರಾಜ್ಯಯೋಗವು ಶುಕ್ರ ಗ್ರಹದ ಪ್ರಭಾವದಿಂದ ರೂಪುಗೊಳ್ಳುವ ಒಂದು ಶುಭ ರಾಜ್ಯಯೋಗವಾಗಿದೆ. ಸಂಪತ್ತು, ಐಷಾರಾಮಿ, ವೈವಾಹಿಕ ಜೀವನ ಮತ್ತು ಐಶ್ವರ್ಯವನ್ನು ನೀಡುವ ಗ್ರಹ ಎಂದು ಪರಿಗಣಿಸಲಾಗಿದೆ.

Kendra Trikona Raja Yoga In Taurus Will Leads Luck For These Signs

ಶುಕ್ರನು ವೃಷಭ ರಾಶಿಯ ಅಧಿಪತಿಯಾಗಿದ್ದಾನೆ. ಅದೇ ರಾಶಿಯಲ್ಲಿ ತ್ರಿಕೋನ ರಾಜಯೋಗ ಸೃಷ್ಟಿಯಾಗುವುದು ಹಲವು ರಾಶಿಗಳಿಗೆ ಶುಭಕರವಾಗುತ್ತಿದೆ. ಕೇಂದ್ರ ತ್ರಿಕೋನ ರಾಜ್ಯಯೋಗದಲ್ಲಿ ಪ್ರಬಲ ಯೋಗದ ಸೃಷ್ಟಿಯ ಕಡೆಗೆ ಗಮನ ಹರಿಯುತ್ತದೆ. ಹೀಗಾಗಿ ಮೂರು ರಾಶೀಯವರಲ್ಲಿ ಈ ರಾಜಯೋಗವು ಶುಭವಾಗುತ್ತದೆ. ಹಾಗಾದ್ರೆ ಯಾವೆಲ್ಲಾ ರಾಶಿಯವರಿಗೆ ಇದು ಶುಭಕರ ಎಂಬುದನ್ನು ನೋಡಿ.

ವೃಷಭ ರಾಶಿ

ಶುಕ್ರನು ವೃಷಭ ರಾಶಿಯ ಅಧಿಪತಿ. ಜೂನ್‌ನಲ್ಲಿ ಶುಕ್ರನ ಸ್ಥಾನಪಲ್ಲಟವು ಕೇಂದ್ರ ತ್ರಿಕೋನ ರಾಜಯೋಗಕ್ಕೆ ಕಾರಣವಾಗುತ್ತಿದೆ. ಇದು ವೃದಷಭ ರಾಶಿಯವರಲ್ಲಿ ಎಲ್ಲಿಲ್ಲದ ಲಾಭಕ್ಕೆ ಕಾರಣವಾಗುತ್ತಿದೆ. ನಿಮ್ಮ ಎಲ್ಲಾ ಯೋಜನೆಗಳಲ್ಲಿ ಧನಾತ್ಮಕ ಬದಲಾವಣೆ ನೋಡಬಹುದು. ನಿಮ್ಮ ಅನೇಕ ಕೆಲಸಗಳಲ್ಲಿ ಯಶಸ್ಸು ಬರಬಹುದು. ವೈವಾಹಿಕ ಜೀವನ ತುಂಬಾ ಮಧುರವಾಗಿರಲಿದೆ. ಮನೆಗೆ ಬೇಕಾಗಿದ್ದ ವಸ್ತುವೊಂದನ್ನು ಖರೀದಿಸಲು ನೀವು ಮುಂದಾಗುತ್ತೀರಿ. ಇದು ನಿಮ್ಮ ಪಾಲಿನ ದುಬಾರಿ ವಸ್ತು ಆಗಿರಬಹುದು. ವ್ಯಾಪಾರದಲ್ಲಿ ಏಕಾಏಕಿ ವೃದ್ಧಿ ನೋಡಬಹುದು, ಇದರಿಂದ ನಿಮ್ಮ ಆರ್ಥಿಕ ಪ್ರಗತಿ ಸುಧಾರಿಸಲಿದೆ. ನೀವು ಕೆಲಸದಲ್ಲಿ ಬಡ್ತಿ ಮತ್ತು ವೃತ್ತಿ ಅವಕಾಶಗಳನ್ನು ಪಡೆಯುತ್ತೀರಿ. ಅವರ ಆರೋಗ್ಯವು ಅತ್ಯುತ್ತಮವಾಗಿರುತ್ತದೆ ಮತ್ತು ಅವರು ವಿವಿಧ ಯೋಜನೆಗಳಲ್ಲಿ ಉತ್ಸಾಹದಿಂದ ಭಾಗವಹಿಸಬಹುದು. ಶುಭ ಕಾರ್ಯಗಳಲ್ಲಿ ನೀವು ಭಾಗಿಯಾಗುತ್ತೀರಿ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಈ ತ್ರಿಕೋನ ರಾಜಯೋಗವು ಬಹಳ ಲಾಭದಾಯಕವಾಗುತ್ತಿದೆ. ನೀವು ಅಂದುಕೊಳ್ಳದ ರೀತಿಯಲ್ಲಿ ನಿಮಗೆ ಹಣಕಾಸು ನೆರವು ಸಿಗಲಿದೆ. ನೀವು ಉದ್ಯೋಗ ಹುಡುಕುತ್ತಿದ್ದರೆ ತಾಳ್ಮೆಯಿಂದಿರಿ ಈ ಸಮಯದಲ್ಲಿ ದೊಡ್ಡ ಅವಕಾಶಗಳು ನಿಮ್ಮನ್ನು ಹುಡುಕಿ ಬರಲಿವೆ. ಶುಕ್ರನು ಸಿಂಹ ರಾಶಿಯ ಕರ್ಮ ಸ್ಥಾನದಲ್ಲಿ ಸಾಗುವುದರಿಂದ, ನಿಮ್ಮ ಯಶಸ್ಸಿನ ಸಾಧ್ಯತೆಗಳು ಹೆಚ್ಚಾಗುತ್ತವೆ. ನೀವು ಅಂದುಕೊಂಡ ಕೆಲಸ ಕಾರ್ಯಗಳು ನಡೆಯುತ್ತವೆ. ಆಸ್ತಿ ಸಂಬಂಧಿತ ವಿಚಾರಗಳಲ್ಲಿ ನಿಮ್ಮ ಪರವಾದ ಒಲವು ಇರಲಿದೆ. ವ್ಯಪಾರಿಗಳಲ್ಲಿ ದೊಡ್ಡ ಲಾಭಗಳು ನೋಡಬಹುದು. ಅವಿವಾಹಿತರಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಗಬಹುದು. ಸರ್ಕಾರಿ ನೌಕರಿ ಮಾಡುತ್ತಿದ್ದವರಲ್ಲಿ ಬಡ್ತಿ, ವರ್ಗಾವಣೆಯಂತಹ ಕೆಲಸದಲ್ಲಿ ಲಾಭ ಮಾಡಬಹುದು.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಕೇಂದ್ರ ತ್ರಿಕೋನ ರಾಜಯೋಗವು ಅತ್ಯುತ್ತಮ ಪ್ರಯೋಜನಗಳನ್ನು ನೀಡುತ್ತದೆ. ನೀವು ಬಹಳ ಕಾಲದಿಂದ ಯಾವುದಾದರು ಅನಾರೊಗ್ಯ ಸಮಸ್ಯೆಗೆ ಒಳಗಾಗಿದ್ದರೆ ಈ ಸಮಯದಲ್ಲಿ ಕೊಂಚ ಸುಧಾರಣೆ ನೋಡುತ್ತೀರಿ. ಪ್ರೀತಿಗೆ ಸಂಬಂಧಿಸಿದ ವಿಚಾರದಲ್ಲಿ ನಿಮ್ಮಲ್ಲಿ ಸಂತೋಷದ ದಿನಗಳ ನೋಡಬಹುದು. ಕುಟುಂಬ ಜೀವನವು ಶಾಂತಿ ಮತ್ತು ಸಂತೋಷದಿಂದ ತುಂಬಿರುತ್ತದೆ. ಆರ್ಥಿಕ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸುತ್ತದೆ ಮತ್ತು ಅವರು ತಮ್ಮ ವ್ಯವಹಾರದಲ್ಲಿ ಪ್ರಗತಿ ಸಾಧಿಸಬಹುದು. ಸಮಾಜದಲ್ಲಿ ನಿಮ್ಮ ಘನತೆ ಗೌರವ ಹೆಚ್ಚಾಗಬಹುದು.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Kendra Trikona Raja Yoga In Taurus Will Leads Luck For These Signs

Venus is the lord of Taurus. The formation of a trigonal Raja Yoga in the same zodiac sign is auspicious for many zodiac signs. Attention is drawn towards the creation of a powerful yoga in the central trigonal Raja Yoga.
Story first published: Saturday, May 3, 2025, 19:30 [IST]
X
Desktop Bottom Promotion