Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ವರ್ಷದ ಬಳಿಕ ಕೇಂದ್ರ ತ್ರಿಕೋನ ರಾಜಯೋಗ: ಶುಕ್ರನಿಂದ ಕಾದಿಗೆ ಶುಭಯೋಗ..!
ಗ್ರಹಗಳ ಸಂಚಾರದಿಂದ ಯಾವೆಲ್ಲಾ ರೀತಿಯಲ್ಲಿ ಶುಭವಾಗಲಿದೆ ಅನ್ನೋದು ಕೂಡ ನೀವು ತಿಳಿದಿದ್ದೀರಿ. ಹಾಗೆ ಗ್ರಹಗಳ ಚಲನೆಯು ಎಲ್ಲ ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡುವುದು ನೋಡಬಹುದು. 9 ಗ್ರಹಗಳ ಪೈಕಿ ನಾವಿಂದು ಶುಕ್ರನ ಸಂಚಾರದ ಕುರಿತು ತಿಳಿದುಕೊಳ್ಳೋಣ. ಶಕ್ತಿಶಾಲಿ ಗ್ರಹಗಳಲ್ಲಿ ಶುಕ್ರನು ಕೂಡ ಒಂದಾಗಿದ್ದಾನೆ. ಸೌಂದರ್ಯ, ಐಷಾರಾಮಿ, ಪ್ರೀತಿ, ಸಂಪತ್ತು, ಸಮೃದ್ಧಿಯಂತಹ ಪ್ರಗತಿಗೆ ಶುಕ್ರನು ಕಾರಣವಾಗುತ್ತಾನೆ.
ವೃಷಭ ಮತ್ತು ತುಲಾ ರಾಶಿಯ ಅಧಿಪತಿಯಾದ ಶುಕ್ರನು ಒಂದೇ ರಾಶಿಯಲ್ಲಿ 26 ದಿನಗಳ ಕಾಲ ಚಲಿಸಲಿದ್ದಾನೆ. ಹೀಗಾಗಿ ಒಂದು ವರ್ಷದಲ್ಲಿ ಶುಕ್ರನು ಎಲ್ಲಾ ರಾಶಿಗಳ ಪ್ರವೇಶಿಸುತ್ತಾನೆ. ಹಾಗೆ ಶುಕ್ರನ ಚಲನೆಯ ನಡುವೆ ಹಲವು ಗ್ರಹಗಳೊಂದಿಗೆ ಸಂಯೋಗವಾಗುತ್ತಾ. ಇದು ಕೂಡ ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡುವುದು ನೋಡಬಹುದು.

ಶುಕ್ರನ ಸ್ಥಾನದಲ್ಲಿ ಬದಲಾವಣೆಯಾದಾಗಲೆಲ್ಲಾ ಅದರ ಪ್ರಭಾವವು ಎಲ್ಲಾ ರಾಶಿ ಜನರ ಮೇಲೆಯೂ ಉಂಟಾಗುವುದು ನೋಡಬಹುದು. ಆದ್ರೆ ಈಗ ಶುಕ್ರನು ವಿಶೇಷ ಯೋಗವೊಂದಕ್ಕೆ ಕಾರಣವಾಗುತ್ತಿದ್ದಾನೆ. ಮುಂಬರುವ ನವೆಂಬರ್‌ನಲ್ಲಿ ಶುಕ್ರನು ತುಲಾ ರಾಶಿಗೆ ಚಲಿಸಲಿದ್ದಾನೆ. ತುಲಾ ರಾಶಿಯೂ ಶುಕ್ರನಿಂದಲೇ ಆಳಲ್ಪಡುತ್ತಾನೆ. ಹೀಗಾಗಿ ಶುಕ್ರನ ಸಂಚಾರದಿಂದ ಅಪರೂಪದ ರಾಜಯೋಗಗಳು ಉಂಟಾಗುವುದು ನೋಡಬಹುದು. ಈ ಸಮಯದಲ್ಲಿ ಮಾಲವ್ಯ ರಾಜಯೋಗ, ಪರಾಕ್ರಮ ಯೋಗ ಮತ್ತು ಕೇಂದ್ರ ತ್ರಿಕೋನ ರಾಜಯೋಗಗಳು ರೂಪುಗೊಳ್ಳುತ್ತಿದೆ.
ಶುಕ್ರನು ನವೆಂಬರ್ 2 ರಂದು ತುಲಾ ರಾಶಿಗೆ ಪ್ರವೇಶಿಸುತ್ತಾನೆ ಮತ್ತು ನವೆಂಬರ್ 26 ರವರೆಗೆ ಆ ರಾಶಿಯಲ್ಲಿ ಇರುತ್ತಾನೆ. ಜ್ಯೋತಿಷ್ಯದ ಪ್ರಕಾರ ವ್ಯಕ್ತಿಯ ಜಾತಕದಲ್ಲಿ, ಕೇಂದ್ರ ಮನೆ 1, 4, 7, 10 ರ ಅಧಿಪತಿ ಮತ್ತು ತ್ರಿಕೋನ ಮನೆ 1, 5, 9 ರ ಅಧಿಪತಿ ಸೇರಿ ಕೇಂದ್ರ ತ್ರಿಕೋನ ರಾಜಯೋಗವು ರೂಪುಗೊಳ್ಳುತ್ತದೆ.
ಈ ಯೋಗಗಳ ಕಾರಣದಿಂದಾಗಿ ಹಲವು ರಾಶಿಗಳಿಗೆ ಶುಭಕರ ದಿನಗಳ ನೋಡಬಹುದು. ಹಲವರಲ್ಲಿ ಸಂಪತ್ತು ಮತ್ತು ಹಠಾತ್ ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತವೆ. ಸರ್ಕಾರಿ ಉದ್ಯೋಗದಲ್ಲಿರುವವರು ಉನ್ನತ ಸ್ಥಾನಮಾನವನ್ನು ಸಾಧಿಸುತ್ತಾರೆ ಮತ್ತು ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಅದರಲ್ಲೂ ಯಾರಿಗೆ ಶುಕ್ರದೆಸೆ ಆರಂಭವಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೇಷ ರಾಶಿ
ಮೇಷ ರಾಶಿಯವರಿಗೆ ಕೇಂದ್ರ ತ್ರಿಕೋನ ರಾಜಯೋಗದಿಂದಾಗಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಸಂಪತ್ತು ಹೆಚ್ಚಾಗುವ ಸಾಧ್ಯತೆಗಳಿವೆ. ಮಕ್ಕಳೊಂದಿಗೆ ಸಂತೋಷದ ದಿನಗಳ ಕಳೆಯುವಿರಿ. ವಾಹನ ಖರೀದಿಯ ಲಾಭ ನಿಮಗಿದೆ. ಹಾಗೆ ನಿಮ್ಮ ಉಳಿತಾಯ ಹೆಚ್ಚಾಗಲಿದೆ. ಅನೇಕ ರೀತಿಯಲ್ಲಿ ಹಣ ಹರಿದು ಬರಲಿದೆ. ಇದರಿಂದ ನಿಮ್ಮ ಮಾನಸಿಕ ನೆಮ್ಮದಿ ಹೆಚ್ಚಾಗಲಿದೆ. ಆಪ್ತರೊಬ್ಬರ ಸಹಕಾರದಿಂದಾಗಿ ನಿಮ್ಮಲ್ಲಿ ಉದ್ಯೋಗ ಸಂಬಂಧಿ ಸಮಸ್ಯೆ ಬಗೆಹರಿಯಲಿದೆ. ದೀರ್ಘಕಾಲದ ಅನಾರೋಗ್ಯದಿಂದ ಮುಕ್ತಿ ಪಡೆಯಬಹುದು.
ತುಲಾ ರಾಶಿ
ಕೇಂದ್ರ ತ್ರಿಕೋನ ರಾಜಯೋಗವು ತುಲಾ ರಾಶಿಯ ಮೊದಲ ಮನೆಯಲ್ಲಿ ರೂಪುಗೊಂಡಿರುವುದರಿಂದ, ಈ ರಾಶಿ ಜನರ ಪ್ರತಿಯೊಂದು ಕ್ಷೇತ್ರವು ಉತ್ತಮ ದಿಕ್ಕು ಪಡೆಯಲಿವೆ. ನಿಮ್ಮ ಮನೆಯಲ್ಲಿನ ಹಲವು ಸಮಸ್ಯೆಗಳು ನಿವಾರಣೆಯಾಗಿ ಸಂತಸದ ದಿನಗಳ ನೋಡುವಿರಿ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುವ ಸಾಧ್ಯತೆಯಿದೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ, ಬಹಳ ಸಮಯದಿಂದ ನಿಮ್ಮ ಕೈ ಸೇರಬೇಕಿದ್ದ ಸಾಲ, ಉಳಿತಾಯ, ಹೂಡಿಕೆಗಳು ನಿಮ್ಮ ಕೈ ಸೇರಬಹುದು. ವಿವಾಹಿತರು ಸಂತೋಷದ ಜೀವನವನ್ನು ಹೊಂದಿರುತ್ತಾರೆ. ಸಂಬಂಧಿಕರ ನಡುವಿನ ಸಂಬಂಧಗಳು ಬಲವಾಗಿರುತ್ತವೆ. ಮಕ್ಕಳ ವ್ಯವಹಾರ ಸಂಬಂಧ ನಿಮ್ಮ ಬೆಂಬಲ ಮುಖ್ಯವಾಗುತ್ತದೆ.
ಮಕರ ರಾಶಿ
ಮಕರ ರಾಶಿಯ 10 ನೇ ಮನೆಯಲ್ಲಿ ಕೇಂದ್ರ ತ್ರಿಕೋಣ ರಾಜಯೋಗವು ರೂಪುಗೊಳ್ಳುತ್ತಿದೆ. ಇದರಿಂದಾಗಿ ಈ ರಾಶಿ ಜನರಲ್ಲಿ ಕೌಟುಂಬಿಕ ಸಮಸ್ಯೆಗಳು ನಿವಾರಣೆಯಾಗಲಿದೆ. ಪೋಷಕರಿಂದ ನಿಮಗೆ ಉತ್ತಮ ಲಾಭಕರ ದಿನಗಳಿವೆ. ನಿಮ್ಮ ಬ್ಯಾಂಕಿಂಗ್ ವಿಚಾರಗಳು ಹಣಕಾಸು ವಿಚಾರಗಳಲ್ಲಿ ಎಂದಿಗಿಂತ ದೊಡ್ಡ ಲಾಭ ನೋಡಬಹುದು. ಸಮಾಜದಲ್ಲಿ ನಿಮ್ಮ ಗೌರವ ಘನತೆ ಹೆಚ್ಚಾಗಲಿದೆ. ವ್ಯಾಪಾರಿ ಮಂದಿಗೆ ಇದು ಬಹಳ ಉತ್ತಮ ಸಮಯ. ನಿಮ್ಮ ಸಾಲ ಮರುಪಾವತಿಯಾಗಿ ನಿಮಗೆ ನೆಮ್ಮದಿ ಸಿಗಲಿದೆ. ಆಸ್ತಿ ಖರೀದಿಯ ಲಾಭವಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications