Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗುರುವಿನಿಂದಾಗಿ ಕೇಂದ್ರ ತ್ರಿಕೋನ ರಾಜ ಯೋಗ: 2024ರಲ್ಲಿ ಈ 3 ರಾಶಿಯವರಿಗಿದೆ ರಾಜಯೋಗ
ಈ ವರ್ಷದ ಕೊನೆಯದ ದಿನದಲ್ಲಿ ಗುರು ಗ್ರಹವು ನೇರ ಸಂಚಾರ ಮಾಡಲಿದೆ. ಗುರು ಮಾರ್ಗಿಯಾದಾಗ ಕೇಂದ್ರ ತ್ರಿಕೋನ ರಾಜ ಯೋಗ ಉಂಟಾಗಲಿದೆ. ಗುರುವಿನ ಈ ನೇರ ಸಂಚಾರ 2024ರಲ್ಲಿ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದ್ದು , ಈ 3 ರಾಶಿಯವರಿಗೆ ಗುರುವಿನ ದೆಸೆಯಿಂದಾಗಿ ತುಂಬಾನೇ ಅನುಕೂಲಕರವಾಗಲಿದೆ.
ಕೇಂದ್ರ ತ್ರಿಕೋನ ರಾಜ ಯೋಗದಿಂದಾಗಿ ಬದುಕಿನಲ್ಲಿ ತುಂಬಾನೇ ಅಭಿವೃದ್ದಿ ಕಾಣುತ್ತೀರಿ, ಆರ್ಥಿಕವಾಗಿ ಪ್ರಗತಿ ಕಾಣಬಹುದು, ನೀವು ಪ್ರಾರಂಭಿಸಿದ ಉದ್ಯಮದಲ್ಲಿ ಯಶಸ್ಸು ಕಾಣುವಿರಿ. ಈ ಅವಧಿಯಲ್ಲಿ ಅದೃಷ್ಟ ಲಕ್ಷ್ಮಿ ನಿಮ್ಮ ಜೊತೆಯೇ ಇರುವುದರಿಂದ ಯಾವುದಕ್ಕೂ ಚಿಂತಿಸಬೇಕಾಗಿಲ್ಲ.
ಗುರುವಿನಿಂದ ಉಂಟಾದ ಕೇಂದ್ರ ತ್ರಿಕೋನ ರಾಜ ಯೋಗ ಈ ರಾಶಿಯವರಿಗೆ ಒಳ್ಳೆಯದು

ಕರ್ಕ ರಾಶಿಯವರು ರಾಶಿಯಲ್ಲಿ ಜನಿಸಿದವರು 2024ರಲ್ಲಿ ಕೇಂದ್ರ ತ್ರಕೋನಾ ರಾಜಯೋಗದ ಫಲ ಪಡೆಯುವಿರಿ. ಈ ಅವಧಿಯಲ್ಲಿ ನಿಮ್ಮ ವೃತ್ತಿ ಜೀವನದಲ್ಲಿ ನೀವು ತುಂಬಾನೇ ಬೆಳವಣಿಗೆ ಕಾಣುತ್ತೀರಿ, ನಿಮ್ಮ ಉತ್ತಮ ಅವಕಾಶಗಳು ಸಿಗುವುದು, ಇದರಿಂದ ನೀವು ಬೆಳೆಯಲು ಆರಂಭಿಸುತ್ತೀರಿ. ಕುಟುಂಬ ಜೀವನದಲ್ಲಿ ಸಂತೋಷ ಇರಲಿದೆ. ಕುಟುಂಬದಲ್ಲಿ ಸೌಕರ್ಯಗಳು ಹೆಚ್ಚಾಗಲಿದೆ. ಈ ಅವಧಿಯಲ್ಲಿ ಯಶಸ್ಸು ನಿಮಗೆ ಒಲಿಯುವುದರಿಂದ ಸೋಲಿನ ಭಯ ಬೇಡ.
ಸಿಂಹ ರಾಶಿ
2024ರಲ್ಲಿ ಸಿಂಹ ರಾಶಿಯವರಿಗೂ ಕೇಂದ್ರ ತ್ರಿಕೋನ ರಾಜಯೋಗವಿದೆ. ಈ ಅವಧಿಯಲ್ಲಿ ಅಪೂರ್ಣವಾಗಿದ್ದ ನಿಮ್ಮ ಎಲ್ಲಾ ಕಾರ್ಯಗಳು ಪೂರ್ಣವಾಗಲಿದೆ. ಆರ್ಥಿಕವಾಗಿ ತುಂಬಾನೇ ಒಳ್ಳೆಯದು, ವ್ಯವಹಾರಸ್ಥರು ಉತ್ತಮ ಆರ್ಥಿಕ ಲಾಭ ಕಾಣಬಹುದು. ಸ್ಮರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುವುದು. ಸಿಂಹ ರಾಶಿಯವರು 2024ರಲ್ಲಿ ತುಂಬಾ ಒಳ್ಳೆಯ ಪ್ರಯೋಜನಗಳನ್ನು ಪಡೆಯಲಿದ್ದೀರಿ.
ಧನು ರಾಶಿ
ಶನಿಯು ಕುಂಭ ರಾಶಿಗೆ ಪ್ರವೇಶ ಮಾಡಿದಾಗಿನಿಂದ ಧನು ರಾಶಿಯವರು ಉತ್ತಮ ಪ್ರಯೋಜನವನ್ನು ಕಾಣುತ್ತಿದ್ದಾರೆ. ಗುರುವಿನ ದೆಸೆಯಿಂದ ಕೇಂದ್ರ ತ್ರಿಕೋನ ಯೋಗದಿಂದಾಗಿ ಧನು ರಾಶಿಯವರಿಗೆ ಇನ್ನೂ ಅನುಕೂಲಕರವಾಗಿದೆ. 2024ರಲ್ಲಿ ನೀವು ಉತ್ತಮ ಪ್ರಯೋಜನವನ್ನು ಪಡೆಯಬಹುದು. ಧನು ರಾಶಿಯವರ 5ನೇ ಮನೆಯಲ್ಲಿ ಕೇಂದ್ರ ತ್ರಿಕೋನ ಯೋಗ ಉಂಟಾಗಿದೆ. ಈ ಅವಧಿಯಲ್ಲಿ ಮುಟ್ಟಿದ್ದೆಲ್ಲಾ ನಿಮಗೆ ಚಿನ್ನವಾಗಿದೆ. ವಿದ್ಯಾರ್ಥಿಗಳು ಒಳ್ಳೆಯ ಫಲಿತಾಂಶ ಪಡೆಯುವಿರಿ. ವೈವಾಹಿಕ, ಪ್ರೀತಿ ಜೀವನ ಚೆನ್ನಾಗಿರಲಿದೆ.
ತ್ರಿಕೋನ ರಾಜಯೋಗದ ಪ್ರಯೋಜನಗಳು
* ತ್ರಿಕೋನ ರಾಜಯೋಗದಿಂದಾಗ ನಮ್ಮ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುವುದು. ನಮ್ಮ ಮೇಲಿನ ಗೌರವ ಹೆಚ್ಚಾಗಲಿದೆ. ವೃತ್ತಿ ಜೀವನದಲ್ಲಿ ತುಂಬಾನೇ ಪ್ರಗತಿ ಉಂಟಾಗಲಿದೆ
* ತ್ರಿಕೋನ ರಾಜಯೋಗದಿಂದಾಗಿ ನಿಮ್ಮ ಸೌಕರ್ಯಗಳು ಹೆಚ್ಚಾಗಲಿದೆ. ಏನಾದರೂ ಆಸ್ತಿ ಸಂಬಂಧಿಸಿದ ಸಮಸ್ಯೆಯಿದ್ದರೆ ಅದು ಬಗೆಹರಿಯಲಿದೆ.
* ಈ ಅವಧಿಯಲ್ಲಿ ಆಸ್ತಿ, ಮನೆ ಖರೀದಿಸಲು ಸಾಧ್ಯವಾಗುವುದು
* ವೈವಾಹಿಕ ಜೀವನ ತುಂಬಾ ಚೆನ್ನಾಗಿರಲಿದೆ.
* ನಿಮ್ಮ ಕೆಲಸದಿಂದ ಪ್ರಖ್ಯಾತಿ ಗಳಿಸುತ್ತೀರಿ.
* ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿದ್ದರೆ ಈ ಅವಧಿಯಲ್ಲಿನನಿಮ್ಮ ಆಸೆ ನೆರವೇರಲಿದೆ.
* ರಾಜಕೀಯ ವ್ಯಕ್ತಿಯಾಗಿದ್ದರೆ ಕೀರ್ತಿ ಹೆಚ್ಚಾಗಲಿದೆ.
* ನಿಮ್ಮ ಕೌಶಲ್ಯ ಹೆಚ್ಚಾಗಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications