ಕಾರ್ತಿಕ ಅಮಾವಾಸ್ಯೆ: ಈ 5 ರಾಶಿಗಳಿಗೆ ಹೆಚ್ಚು ಸವಾಲು, ಕಂಟಕ! ಪಾರಾಗಲು ಏನು ಮಾಡಬೇಕು?

ಕಾರ್ತಿಕ ಅಮಾವಾಸ್ಯೆಯಂದು ಈ 5 ರಾಶಿಗಳಿಗೆ ಸವಾಲಿನ ದಿನ! ಸಮಸ್ಯೆಗಳಿಂದ ಪಾರಾಗಲು ಏನು ಮಾಡಬೇಕು? ನೀವೆ ನೋಡಿ. ಹೌದು, ಹಿಂದೂ ಧರ್ಮದಲ್ಲಿ ಅಮಾವಾಸ್ಯೆಗೆ (Amavasya 2025) ವಿಶೇಷ ಮಹತ್ವ ಇದೆ. ಅಮಾವಾಸ್ಯೆ ಅಂದರೆ ಕತ್ತಲು ಕವಿದ ರಾತ್ರಿ. ಅದರಂತೆ, ನವೆಂಬರ್ 20 ರಂದು ಕಾರ್ತಿಕ ಮಾಸದ ಅಮಾವಾಸ್ಯೆ (Kartik Amavasya 2025 on November 20) ಬರಲಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಅಮಾವಾಸ್ಯೆ ರಾತ್ರಿ ಕೆಲವು ರಾಶಿಚಕ್ರದವರಿಗೆ ಸವಾಲುಗಳು ಮತ್ತು ಸಮಸ್ಯೆಗಳನ್ನು ತರಬಹುದು.

ಅಮಾವಾಸ್ಯೆಯ ಪರಿಣಾಮಗಳು ಎಲ್ಲ ರಾಶಿಗಳ ಮೇಲೆ ಒಂದೇ ರೀತಿಯಲ್ಲಿ ಇರುವುದಿಲ್ಲ. ಜ್ಯೋತಿಷಿಗಳ ಪ್ರಕಾರ, ಈ ಕಾರ್ತಿಕ ಅಮಾವಾಸ್ಯೆಯು ಐದು ರಾಶಿಗಳಿಗೆ ಅತ್ಯಂತ ಸೂಕ್ಷ್ಮ ದಿನವಾಗಿದೆ. ಅವರು ಹೆಚ್ಚು ಜಾಗರೂಕರಾಗಿರಬೇಕು ಎಂದು ಜ್ಯೋತಿಷಿಗಳು ಎಚ್ಚರಿಸಿದ್ದಾರೆ. ಈ ಕಾರ್ತಿಕ ಅಮಾವಾಸ್ಯೆಯಂದು (Kartik Amavasya 2025) ಜಾಗರೂಕರಾಗಿರಬೇಕಾದ ಐದು ರಾಶಿಗಳು ಮತ್ತು ಅವುಗಳಿಗೆ ಸಂಬಂಧಿಸಿದ ಮುನ್ನೆಚ್ಚರಿಕೆಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

5 Zodiac Signs to Be Careful on Kartik Amavasya

ಕಾರ್ತಿಕ ಅಮಾವಾಸ್ಯೆಯ ತಿಥಿ

• ಕಾರ್ತಿಕ ಅಮಾವಾಸ್ಯೆ ತಿಥಿ: ನವೆಂಬರ್ 19 ರಂದು ಬೆಳಗ್ಗೆ 9:43ಕ್ಕೆ ಆರಂಭವಾಗಲಿದೆ.
• ನವೆಂಬರ್ 20 ರಂದು ಮಧ್ಯಾಹ್ನ 12:16ಕ್ಕೆ ಮುಕ್ತಾಯ.
• ಮಾರ್ಗಶಿರ ಅಮಾವಾಸ್ಯೆ: ನವೆಂಬರ್ 20 ರಂದು ಆಚರಣೆ.

1. ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಕಾರ್ತಿಕ ಅಮಾವಾಸ್ಯೆ ಸವಾಲುಗಳನ್ನು ತರಬಹುದು. ಈ ದಿನ ಯಾವುದೇ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ದೂರವಿರಿ. ನಿಮ್ಮ ಮಾತು ಮತ್ತು ವರ್ತನೆಯಲ್ಲಿ ಸಂಯಮ ಇರಲಿ. ಯಾರನ್ನೂ ಅವಮಾನಿಸಬೇಡಿ. ಇಂತಹ ವರ್ತನೆ ಕೆಲಸದಲ್ಲಿ ಅಡೆತಡೆಗಳನ್ನು ಉಂಟುಮಾಡಬಹುದು. ವ್ಯಾಪಾರದಲ್ಲಿ ನಷ್ಟವಾಗುವ ಸಾಧ್ಯತೆಗಳಿದ್ದು, ಕುಟುಂಬದಲ್ಲಿ ಮಾನಸಿಕ ನೆಮ್ಮದಿಗೆ ಭಂಗ ಬರುವಂತಹ ವಾತಾವರಣ ಸೃಷ್ಟಿಯಾಗಬಹುದು.

2. ಕರ್ಕ ರಾಶಿ

ಕರ್ಕ ರಾಶಿಯ ಜನರು ಅಮಾವಾಸ್ಯೆ ದಿನದಂದು ಹೆಚ್ಚು ಜಾಗರೂಕರಾಗಿರಬೇಕು. ನಿಮ್ಮ ಮಾತು ಮತ್ತು ನಡವಳಿಕೆಯಲ್ಲಿ ಎಚ್ಚರಿಕೆ ವಹಿಸಿ. ನಿಮ್ಮ ವೈಯಕ್ತಿಕ ವಸ್ತುಗಳು ಮತ್ತು ಆಸ್ತಿಯ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ. ಸಣ್ಣ ನಿರ್ಲಕ್ಷ್ಯವೂ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ಯಾರನ್ನೂ ಕಣ್ಣುಮುಚ್ಚಿ ನಂಬಬೇಡಿ. ಅತಿಯಾದ ವಿಶ್ವಾಸವು ನಿಮಗೆ ನಷ್ಟವನ್ನು ಉಂಟುಮಾಡಬಹುದು.

3. ಮಕರ ರಾಶಿ

ಮಕರ ರಾಶಿಯವರಿಗೆ ಕಾರ್ತಿಕ ಅಮಾವಾಸ್ಯೆಯು ಮಾನಸಿಕ ಏರಿಳಿತಗಳನ್ನು ತರಬಹುದು. ನಿಮ್ಮ ಅತಿಯಾದ ನಿರೀಕ್ಷೆಗಳು ಕೆಲಸದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಇತರರ ಟೀಕೆಗಳು ಅಥವಾ ಮಾತುಗಳು ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯಬಹುದು. ಹಾಗಾಗಿ, ನಿಮ್ಮ ಗುರಿಗಳ ಮೇಲೆ ಕೇಂದ್ರೀಕರಿಸಿ. ಈ ದಿನ ಅತಿಯಾಗಿ ಯೋಚಿಸುವುದನ್ನು ತಪ್ಪಿಸಿ. ಏಕೆಂದರೆ ಇದು ಮಾನಸಿಕ ಒತ್ತಡವನ್ನು ಹೆಚ್ಚಿಸಬಹುದು.

4. ಕನ್ಯಾ ರಾಶಿ

ಕನ್ಯಾ ರಾಶಿಯವರು ತಮ್ಮ ಕೆಲಸದಲ್ಲಿ ಅತ್ಯಂತ ಎಚ್ಚರಿಕೆ ವಹಿಸಬೇಕು. ಸಣ್ಣ ತಪ್ಪು ಕೂಡ ದೊಡ್ಡ ನಷ್ಟಕ್ಕೆ ಕಾರಣವಾಗಬಹುದು. ಈ ದಿನ ಕೆಲಸವನ್ನು ಹಗುರವಾಗಿ ತೆಗೆದುಕೊಳ್ಳಬೇಡಿ ಮತ್ತು ಯಾವುದೇ ವಿಷಯದಲ್ಲಿ ಆತುರಪಡಬೇಡಿ. ಆತುರವು ನಷ್ಟಕ್ಕೆ ದಾರಿ ಮಾಡಿಕೊಡುತ್ತದೆ. ಕೆಲಸದ ಸ್ಥಳದಲ್ಲಿ ನಿರೀಕ್ಷಿತ ಗೌರವ ಅಥವಾ ಮನ್ನಣೆ ಸಿಗದೆ ಇರುವುದು ನಿಮಗೆ ಬೇಸರವನ್ನುಂಟುಮಾಡಬಹುದು.

5. ಮಿಥುನ ರಾಶಿ

ಮಿಥುನ ರಾಶಿಯ ಜನರ ಜೀವನದಲ್ಲಿ ಈ ಅಮಾವಾಸ್ಯೆ ದಿನದಂದು ಸಂಘರ್ಷ ಮತ್ತು ಉದ್ವಿಗ್ನತೆ ಹೆಚ್ಚಾಗಬಹುದು. ಆಸ್ತಿ ಅಥವಾ ವೈಯಕ್ತಿಕ ವಿಷಯಗಳ ಬಗ್ಗೆ ತಪ್ಪು ತಿಳುವಳಿಕೆಗಳು ಉಂಟಾಗುವ ಸಾಧ್ಯತೆಗಳಿವೆ. ಯಾರನ್ನೂ ಸುಲಭವಾಗಿ ನಂಬಬೇಡಿ. ಯಾವುದೇ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಲ್ಲಾ ವಿಷಯಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಇದರಿಂದ ಅನಗತ್ಯ ತೊಂದರೆಗಳನ್ನು ತಪ್ಪಿಸಬಹುದು.

ಸಮಸ್ಯೆಗಳಿಂದ ಪಾರಾಗಲು ಏನು ಮಾಡಬೇಕು?

ಈ ಅಮಾವಾಸ್ಯೆಯ ದಿನದಂದು ಮೇಲೆ ತಿಳಿಸಿದ ಐದು ರಾಶಿಗಳವರು ಮಾತ್ರವಲ್ಲದೆ ಎಲ್ಲರೂ ಧ್ಯಾನ, ಯೋಗ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಉತ್ತಮ. ನಕಾರಾತ್ಮಕ ಶಕ್ತಿಯನ್ನು ದೂರವಿಡಲು ಹಿರಿಯರಿಗೆ ಗೌರವ ನೀಡಿ, ಅಸಹಾಯಕರಿಗೆ ದಾನ ಮಾಡಿ ಮತ್ತು ನಿಮ್ಮ ನಡವಳಿಕೆಯಲ್ಲಿ ಶಾಂತಿ ಹಾಗೂ ಸಂಯಮವನ್ನು ಕಾಯ್ದುಕೊಳ್ಳುವುದು ಶುಭಕರ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Kartik Amavasya 2025 on November 20: These 5 Zodiac Signs Facing Challenges on Kartik Amavasya

Kartik Amavasya 2025 on November 20: These 5 Zodiac Signs Facing Challenges on Kartik Amavasya
Story first published: Thursday, November 20, 2025, 7:30 [IST]
X
Desktop Bottom Promotion