Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಾಳೆ ಗುರು ನಕ್ಷತ್ರ ಬದಲಾವಣೆ: 4 ರಾಶಿಯವರಲ್ಲಿನ ದೀರ್ಘಕಾಲಿನ ಸಮಸ್ಯೆಗೆ ಮುಕ್ತಿ!
ಜ್ಯೋತಿಷ್ಯದಲ್ಲಿ ಗುರುವನ್ನು ಬಹಳ ಪ್ರಮುಖ ಗ್ರಹವೆಂದು ಆತನ ಚಲನೆಯನ್ನು ಹಲವು ರೀತಿಯ ಬದಲಾವಣೆ ತರುವ ವಿದ್ಯಮಾನ ಎಂದು ಪರಿಗಣಿಸಲಾಗುತ್ತದೆ. ಗುರು ನಿಧಾನವಾಗಿ ಚಲಿಸುವ ಹಾಗೆ ಹಲವು ಗ್ರಹಗಳೊಂದಿಗೆ ಸಂಯೋಗವಾಗುವ ಗ್ರಹ. ಗುರುವಿನ ಪ್ರತಿಯೊಂದು ಸಂಚಾರವು ಎಲ್ಲಾ ರಾಶಿ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ.
ಗುರು ಪ್ರಸ್ತುತ ಮಿಥುನ ರಾಶಿಯಲ್ಲಿ ಪುನರ್ವಸು ನಕ್ಷತ್ರದಲ್ಲಿದ್ದಾನೆ. ಗುರುವು ಜನವರಿ 30 ರಂದು ಪುನರ್ವಸು ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ. ಹಾಗೆ ಏಪ್ರಿಲ್ 20ರ ವರೆಗೂ ಅದೇ ನಕ್ಷತ್ರದಲ್ಲಿ ಇರಲಿದ್ದಾನೆ. ಗುರುವಿನ ಈ ಸಂಚಾರವು ಎಲ್ಲಾ ರಾಶಿ ಜನರ ಜೀವನದ ಮೇಲೆಯೂ ಪರಿಣಾಮಕಾರಿಯಾಗಲಿದೆ. ಗುರಿವಿನ ಈ ಚಲನೆಯು ಹಲವರಿಗೆ ಅಚ್ಚರಿಯ ಫಲಿತಾಂಶಗಳ ತರುವುದು ನೋಡಬಹುದು.

ಈ ಅವಧಿಯು ಹಲವರಲ್ಲಿ ಎಂದಿಗೂ ನೋಡಿರದ ವಿಚಾರಗಳನ್ನು ತರಬಹುದು. ಅದ್ರಲ್ಲೂ ಸಂತೋಷ, ಸಮೃದ್ದಿಗೆ ಹೆಸರಾದ ಗುರುವಿನ ಆಶೀರ್ವಾದ ಪಡೆಯುವುದು ಅದೃಷ್ಟ ಎನ್ನಬಹುದು. ಗುರುವಿನ ನಕ್ಷತ್ರ ಬದಲಾವಣೆಯಿಂದ ಯಾರಿಗೆಲ್ಲಾ ಲಾಭದಾಯಕ ಯಾರಿಗೆ ಶುಭಕರ ಸಮಯ ಎಂಬುದನ್ನು ನಾವಿಲ್ಲಿ ತಿಳಿದಿಕೊಳ್ಳೋಣ.
ಮೇಷ ರಾಶಿ
ಗುರು ಪುನರ್ವಸು ನಕ್ಷತ್ರಕ್ಕೆ ಚಲಿಸುವುದು ಮೇಷ ರಾಶಿ ಜನರಲ್ಲಿ ಉತ್ತಮ ಪ್ರಯೋಜನಗಳನ್ನು ತರಲಿದೆ. ಈ ನಕ್ಷತ್ರ ಬದಲಾವಣೆಯು ಅವರ ಜೀವನದಲ್ಲಿ ಅನೇಕ ಬದಲಾವಣೆಗಳ ತರಲಿದೆ. ವೃತ್ತಿ ಜೀವನದಲ್ಲಿ ಎದುರಿಸಿದ್ದ ಹಲವು ಅಡ್ಡಿಗಳು, ಸಮಸ್ಯೆಗಳು ನಿವಾರಣೆಯಾಗಲಿದೆ. ಅನಿರೀಕ್ಷಿತ ಧನಲಾಭಗಳು, ಹಾಗೆ ಅನಿರೀಕ್ಷಿತ ಲಾಭಕರ ಕೆಲಸಗಳಲ್ಲಿ ನಿಮಗೆ ಶುಭವಿದೆ. ಸರ್ಕಾರಿ ನೌಕರರ ಬಡ್ತಿ, ವರ್ಗಾವಣೆ ಸಂಬಂಧಿತ ವಿಚಾರಗಳಲ್ಲಿ ಉತ್ತಮ ಫಲಿತಾಂಶಗಳಿವೆ. ನಿಮ್ಮ ಆದಾಯ ಹೆಚ್ಚಳದಿಂದ ನೆಮ್ಮದಿ ನೋಡಬಹುದು. ನಿಮ್ಮ ಉಳಿತಾಯದ ಹಣವನ್ನು ಉತ್ತಮ ಕೆಲಸಕ್ಕೆ ಬಳಸುವಿರಿ.
ಮಿಥುನ ರಾಶಿ
ಗುರುವಿನ ನಕ್ಷತ್ರ ಬದಲಾವಣೆಯು ಮಿಥುನ ರಾಶಿಯವರಿಗೆ ಅಪಾರ ಪ್ರಯೋಜನಗಳನ್ನು ನೀಡಲಿದೆ. ಈ ಗ್ರಹ ಬದಲಾವಣೆಯಿಂದಾಗಿ ಮಿಥುನ ರಾಶಿಯವರು ದೊಡ್ಡ ಪ್ರಯೋಜನಗಳನ್ನು ಪಡೆಯಬಹುದು. ನಿಮ್ಮ ಬಹುಸಮಯದ ಕೆಲಸಗಳು ಈಡೇರಲಿದೆ. ಭವಿಷ್ಯದ ದೃಷ್ಟಿಯಿಂದ ನೀವು ಉತ್ತಮ ಹೂಡಿಕೆ ಹಾಗೆ ಉಳಿತಾಯಕ್ಕೆ ಮುಂದಾಗುತ್ತೀರಿ. ವ್ಯವಹಾರದ ವಿಷಯದಲ್ಲಿ ವಿವಿಧ ಒಪ್ಪಂದಗಳ ಮೂಲಕ ಲಾಭಗಳಿಸಲು ಇದು ಉತ್ತಮ ಅವಧಿಯಾಗಿದೆ. ಕುಟುಂಬ ವಿಚಾರದಲ್ಲಿ ಶುಭವಿದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಗುರು ಗ್ರಹದ ಸಂಚಾರದಿಂದ ಧನಾತ್ಮಕ ಬದಲಾವಣೆಗಳು ಎದುರಾಗುವುದು ನೋಡಬಹುದು. ನಿಮ್ಮ ಆಪ್ತರಿಂದ ಶುಭವಿದೆ. ಬಾಕಿ ಉಳಿದಿರುವ ಹಲವು ಬಯಕೆಗಳು ಅಥವಾ ಆಸೆಗಳನ್ನು ಈ ಸಮಯದಲ್ಲಿ ನೀವು ಈಡೇರಿಸಿಕೊಳ್ಳುವಿರಿ. ಅಪೂರ್ಣವಾಗಿರುವ ಕೆಲಸಗಳು ಸಹ ಈ ಸಮಯದಲ್ಲಿ ಪೂರ್ಣವಾಗಲಿದೆ. ವೈಯಕ್ತಿಕ ಜೀವನದ ವಿಷಯದಲ್ಲಿ, ನೀವು ನಿಮ್ಮ ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಆನಂದಿಸುವಿರಿ. ವ್ಯಾಪಾರ ವಲಯದಲ್ಲಿ ಬಹುದೊಡ್ಡ ಒಪ್ಪಂದಗಳು ನೀವು ಬಯಸಿದ ಲಾಭ ತರಲಿವೆ.
ಧನು ರಾಶಿ
ಗುರುವಿನ ಸಂಚಾರವು ಧನು ರಾಶಿಯ ಜನರಿಗೆ ಅನೇಕ ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ. ಬಹುಸಮಯದ ನ್ಯಾಯಾಲಯ ವಿಚಾರಗಳು, ಆಸ್ತಿ ಕುರಿತಾದ ವಿಚಾರ, ಕೌಟುಂಬಿಕ ಕಲಹಗಳು ಈ ಸಮಯದಲ್ಲಿ ನಿವಾರಣೆಯಾಗುವುದು ನೋಡಬಹುದು. ದೀರ್ಘಕಾಲದ ಅನಾರೋಗ್ಯ ಸಮಸ್ಯೆಗಳು ಕೂಡ ನಿವಾರಣೆಯಾಗಲಿದೆ. ಅವಿವಾಹಿತರು ವಿವಾಹ ಸಂಬಂಧಿತ ಯೋಗ ಪಡೆಯುವರಿ. ನಿರುದ್ಯೋಗಿ ಯುವತಿಯರಿಗೆ ಈ ಸಮಯದಲ್ಲಿ ಶುಭ ಅವಕಾಶಗಳು ದೊರೆಯಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications