Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2026ರಲ್ಲಿ 2 ಬಾರಿ ಗುರು ಸಂಚಾರ: ಈ ರಾಶಿಯವರಲ್ಲಿ ಡಬಲ್ ಜಾಕ್‌ಪಾಟ್, ಅದೃಷ್ಟದ ಹೊಳೆ
ಜ್ಯೋತಿಷ್ಯದಲ್ಲಿ ಎಲ್ಲಾ 9 ಗ್ರಹಗಳ ಸಂಚಾರವನ್ನು ಬಹಳ ಮುಖ್ಯ ಎಂದು ಪರಿಗಣಿಸಲಾಗುತ್ತದೆ. ಎಲ್ಲಾ ಗ್ರಹಗಳು ಒಂದೊಂದು ರಾಶಿಯಲ್ಲಿ ಚಲಿಸುವಾಗ ಹಲವು ರೀತಿ ಯೋಗಗಳು ರೂಪುಗೊಳ್ಳುವುದು ನೋಡಬಹುದು. ಅದ್ರಲ್ಲೂ ಗ್ರಹಗಳ ಸಂಚಾರವು ವೈದಿಕ ಶಾಸ್ತ್ರದಲ್ಲಿ ಪ್ರಮುಖ ವಿದ್ಯಮಾನವಾಗಿದೆ, ಹಾಗೆ ಎಲ್ಲಾ ರಾಶಿಗಳು ಗ್ರಹಗಳ ಚಲನೆಯಿಂದಾಗಿ ಆಯಾ ಸಮಯದಲ್ಲಿ ಹಲವು ರೀತಿಯ ಶುಭ ಹಾಗೂ ಅಶುಭವಾಗುವುದು ನೋಡಬಹುದು.
ಇನ್ನು 9 ಗ್ರಹಗಳ ಪೈಕಿ ಗುರುವನ್ನು ಶುಭ ಗ್ರಹವೆಂದು ಕರೆಯಲಾಗಿದೆ. ಧನು ಮತ್ತು ಮೀನ ರಾಶಿಯ ಅಧಿಪತಿ ಗುರು 1 ವರ್ಷ ಒಂದೇ ರಾಶಿಯಲ್ಲಿ ಸಂಚರಿಸುತ್ತಾನೆ. ಈ ಸಂದರ್ಭದಲ್ಲಿ, ಗುರು 2026 ರಲ್ಲಿ ಎರಡು ಬಾರಿ ರಾಶಿ ಬದಲಾಯಿಸುತ್ತಾನೆ. ಇದರ ಜೊತೆಗೆ, ಈ ವರ್ಷ ಗುರು 3 ರಾಶಿಗಳಲ್ಲಿ ಸಂಚರಿಸುತ್ತಾನೆ.

2026 ರ ಆರಂಭದಲ್ಲಿ ಗುರು ಮಿಥುನ ರಾಶಿಯಲ್ಲಿ ಇರುತ್ತಾನೆ. ನಂತರ ಜೂನ್ 02 2026 ರಂದು ಅದು ಮಿಥುನದಿಂದ ಕರ್ಕ ರಾಶಿಗೆ ಪ್ರವೇಶಿಸುತ್ತದೆ. ನಂತರ ಅಕ್ಟೋಬರ್ 31 2026 ರಂದು ಅದು ಕರ್ಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶಿಸುತ್ತದೆ. ಗುರು ಈ ರೀತಿ ಎರಡು ಬಾರಿ ರಾಶಿ ಬದಲಾಯಿಸುವುದರಿಂದ, ಅದರ ಪ್ರಭಾವವು 12 ರಾಶಿ ಜನರ ಜೀವನದ ಮೇಲೆ ಒಂದು ರೀತಿಯ ಪರಿಣಾಮ ಬೀರುತ್ತದೆ.
ಗುರುವಿನ ಈ ಸಂಚಾರವು ಹಲವು ರಾಶಿಗಳಿಗೆ ಅದೃಷ್ಟ ತರಲಿದೆ. ಆದಾಯ ಮತ್ತು ಬಡ್ತಿಯಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಈಗ 2026 ರಲ್ಲಿ ಗುರುವಿನ ಎರಡು ಬಾರಿ ರಾಶಿ ಬದಲಾಯಿಸಲಿದ್ದಾನೆ. ಇದರಿಂದ ಯಾರಿಗೆಲ್ಲಾ ಶುಭವೆಂದು ತಿಳಿದುಕೊಳ್ಳೋಣ.
ಕರ್ಕಾಟಕ ರಾಶಿ
2026 ರಲ್ಲಿ ಗುರುವಿನ ಎರಡು ಬಾರಿಯ ರಾಶಿ ಬದಲಾವಣೆಯು ಕರ್ಕಾಟಕ ರಾಶಿಯವರು ಅನಿರೀಕ್ಷಿತ ಆರ್ಥಿಕ ಲಾಭ ಪಡೆಯಲು ಕಾರಣವಾಗಲಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ಸಾಮರಸ್ಯ ಹೆಚ್ಚಾಗುತ್ತದೆ. ನೀವು ಸಮಾಜದಲ್ಲಿ ಉತ್ತಮ ಖ್ಯಾತಿಯನ್ನು ಪಡೆಯುತ್ತೀರಿ. ಜನರು ನಿಮ್ಮ ಸಲಹೆಯನ್ನು ಗೌರವಿಸುತ್ತಾರೆ. ಅದೃಷ್ಟದ ಬೆಂಬಲದಿಂದ ಪ್ರತಿಯೊಂದು ಪ್ರಯತ್ನದಲ್ಲೂ ಯಶಸ್ಸು ಸಾಧಿಸಲಾಗುತ್ತದೆ. ಯಾರ ಬಳಿಯಾದರು ನಿಮ್ಮ ಹಣ ಸಿಲುಕಿದ್ದರೆ ಮರಳಿ ಪಡೆಯುವ ಸಾಧ್ಯತೆ ಹೆಚ್ಛಾಗಿದೆ. ಕೌಟುಂಬಿಕ ವಿಚಾರವಾಗಿ ನಿಮ್ಮಲ್ಲಿದ್ದ ದೊಡ್ಡ ಸಮಸ್ಯೆಗಳು ನಿವಾರಣೆಯಾಗುವ ಸಮಯವಿದು.
ಕನ್ಯಾ ರಾಶಿ
2026ರಲ್ಲಿ ಗುರುವಿನ ಎರಡು ರೀತಿಯ ಸಂಚಾರಗಳು ನಿಮ್ಮ ಆದಾಯವನ್ನು ಹೆಚ್ಚಿಸುತ್ತವೆ. ನಿಮ್ಮ ಬಹುಕಾಲದ ವ್ಯವಹಾರಗಳು ಲಾಭದಾಯಕವಾಗಿ ಪರಿಣಮಿಸಲಿವೆ. ಹಲವು ಮೂಲಗಳಿಂದ ನೀವು ಹಣ ಪಡೆಯಬಹುದು. ಆಪ್ತರಿಂದ ಬರಬೇಕಿದ್ದ ಹಣ ನಿಮ್ಮ ಕೈ ಸೇರಲಿದೆ. ಸಂಬಂಧಗಳಲ್ಲಿ ಗಟ್ಟಿತನ ಉಳಿಯಲಿದೆ. ನಿಮ್ಮ ಖರ್ಚಿನ ಮೂಲವೊಂದು ನಿವಾರಣೆಯಾಗಲಿದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ.
ತುಲಾ ರಾಶಿ
2026 ರಲ್ಲಿ ಗುರುವಿನ ಚಲನೆಯಿಂದಾಗಿ ತುಲಾ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ಆದಾಯದಲ್ಲಿ ಗಮನಾರ್ಹ ಹೆಚ್ಚಳ ಕಂಡುಬರಲಿದೆ. ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿ ಕಂಡುಬರಬಹುದು. ಉದ್ಯಮಿಗಳಿಗೆ ಹೊಸ ಒಪ್ಪಂದಗಳು ದೊರೆಯುವ ಸಾಧ್ಯತೆಯಿದೆ. ದೀರ್ಘಾವಧಿಯ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಕೆಲಸ ಮಾಡುವವರಿಗೆ ಬಡ್ತಿ ದೊರೆಯುವ ಸಾಧ್ಯತೆಯಿದೆ. ಹಲವು ವರ್ಷದ ನಿಮ್ಮ ವಾಹನ ಖರೀದಿಯ ಆಸೆಯನ್ನ ಈ ಸಮಯದಲ್ಲಿ ಈಡೇರಿಸಿಕೊಳ್ಳಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications