Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಆಗಸ್ಟ್‌ನಲ್ಲಿ ಗುರು ನಕ್ಷತ್ರ ಬದಲಾವಣೆ: ಈ ರಾಶಿಯವರಿಗೆ ಕಾಡಲಿದೆ ಸಮಸ್ಯೆಗಳು!
ಆಗಸ್ಟ್ ತಿಂಗಳು ಗ್ರಹಗಳ ಸಂಚಾರ ಮತ್ತು ಚಲನೆಯಲ್ಲಿನ ಬದಲಾವಣೆಯ ವಿಷಯದಲ್ಲಿ ತುಂಬಾ ಉತ್ತಮವಾಗಿರಲಿದೆ. ಹಲವು ಗ್ರಹಗಳಿ ತಮ್ಮ ರಾಶಿ, ನಕ್ಷತ್ರಗಳ ಬದಲಾವಣೆ ಮಾಡುವುದು ಈ ತಿಂಗಳಲ್ಲಿ ನೋಡಬಹುದು. ಇದರಿಂದ ಎಲ್ಲಾ ರಾಶಿಗಳ ಮೇಲೆಯೂ ಶುಭ ಹಾಗೂ ಅಶುಭ ಯೋಗಗಳು ರೂಪುಗೊಳ್ಳುತ್ತದೆ. ಹಾಗೆ ಹಲವರಲ್ಲಿ ಬದಲಾವಣೆ ಉಂಟಾಗುವುದು ಸಹ ನೋಡಬಹುದು.
ಇನ್ನು ಆಗಸ್ಟ್ ತಿಂಗಳಲ್ಲಿ ಗುರು ಎರಡು ಬಾರಿ ತನ್ನ ನಕ್ಷತ್ರ ಬದಲಾವಣೆ ಮಾಡಲಿದ್ದಾನೆ. ಆಗಸ್ಟ್ 13ರಂದು ಪುನರ್ವಸು ನಕ್ಷತ್ರದ ಮೊದಲ ಪಾದದಲ್ಲಿ ಚಲಿಸುತ್ತಾನೆ. ಹಾಗೆ ಆಗಸ್ಟ್ 30ರಂದು ಎರಡನೇ ಪಾದಕ್ಕೆ ಚಲಿಸುವುದು ಹಲವರಲ್ಲಿ ಪರಿಣಾಮ ಉಂಟು ಮಾಡಲಿದ್ದಾನೆ. ಗುರುವಿನ ಈ ಸಂಚಾರವು ಹಲವರಿಗೆ ಲಾಭದಾಯಕ ಹಾಗೆ ಹಲವರಿಗೆ ಸಮಸ್ಯೆಗಳನ್ನು ಕೂಡ ತರಬಹುದು.

ಹಾಗಾದರೆ ಯಾರಿಗೆಲ್ಲಾ ಇದು ಅಶುಭಕಾರಕಾಗಬಹುದು. ಯಾರಲ್ಲಿ ಒಂದಿಷ್ಟು ಸಮಸ್ಯೆಗಳ ತರಲು ಈ ಗುರು ಸ್ಥಾನ ಪಲ್ಲಟವು ಕಾರಣವಾಗಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಅದ್ರಲ್ಲೂ ಯಾವ ರಾಶಿಯವರಿಗೆ ಈ ಸಮಯ ಕಠಿಣ ಅಥವಾ ನಕಾರಾತ್ಮಕ ಘಟನೆಗಳಿಗೆ ಕಾರಣವಾಗಲಿದೆ ಎಂಬುದನ್ನು ನೋಡೋಣ.
ಮೇಷ ರಾಶಿ
ಗುರುವಿನ ಸ್ಥಾನ ಪಲ್ಲಟದಿಂದಾಗಿ ಮೇಷ ರಾಶಿಯವರಲ್ಲಿ ಕೆಲವೊಂದು ಅಶುಭ ವಿದ್ಯಮಾನಗಳಿಗೆ ಕಾರಣವಾಗಬಹುದು. ನಿಮ್ಮ ಹಣಕಾಸು ವಿಚಾರದಲ್ಲಿ ನೀವು ಅಂದಕೊಂಡಂತೆ ಎಲ್ಲವು ನೆರವೇರುವುದಿಲ್ಲ. ಹಾಗೆ ನಿಮಗೆ ವ್ಯಾಪಾರದ ವಿಚಾರದಲ್ಲಿ ಸಮಸ್ಯೆ ಕಾಡಬಹುದು. ಮಕ್ಕಳ ಓದಿನಲ್ಲಿ ಸಮಸ್ಯೆಗಳು ಎದುರಾಗಬಹುದು. ಹೂಡಿಕೆಗಳಿಗೆ ಸಂಬಂಧಿಸಿದಂತೆ ಅಡ್ಡಿಗಳು ಎದುರಾಗಬಹುದು. ನಿಮಗೆ ಸೇರಬೇಕಿದ್ದ ಬಾಕಿ ಹಣವು ಮತ್ತಷ್ಟು ವಿಲಂಬವಾಗಬಹುದು. ಅವಿವಾಹಿತರಲ್ಲಿ ಸಾಮಾನ್ಯ ದಿನಗಳು. ಪ್ರಯಾಣಗಳಲ್ಲಿ ನೀವು ಬಯಸಿದ್ದ ಫಲವು ಸಿಗದೆ ಇರಬಹುದು. ಯಾವುದೇ ವ್ಯವಹಾರಗಳಲ್ಲಿ ನಿಮಗೆ ಸಮಯದ ಅಭಾವ ಕಾಡಬಹುದು. ಮನೆಯಲ್ಲಿ ಮಿಶ್ರ ವಾತಾವರಣ ನೋಡಬಹುದು. ಕೆಲವು ದಿನ ನಿಮಗೆ ಅಶಾಂತಿ ಎದುರಾದರು ಕೆಲವೊಮ್ಮೆ ನೆಮ್ಮದಿ ಇರಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಲ್ಲಿ ಅದ್ರಲ್ಲೂ ಸ್ವಂತ ಉದ್ಯೋಗ ಮಾಡುವವರಿಗೆ ಇದು ಸೂಕ್ತ ಅಥವಾ ಲಾಭದಾಯಕ ಸಮಯ ಆಗಿರುವುದಿಲ್ಲ. ವ್ಯವಹಾರದಲ್ಲಿನ ಅಡ್ಡಿಗಳು ನಿಮಗೆ ಸಮಸ್ಯೆ ತರಬಹುದು. ಔದ್ಯೋಗಿಕ ಅಡೆತಡೆಗಳು ಹೆಚ್ಚಾಗಬಹುದು. ಹಳೆಯ ಹೂಡಿಕೆಗಳಿಂದ ನಿಮಗೆ ಬರಬೇಕಿದ್ದ ಲಾಭದ ಪ್ರಮಾಣ ಕಡಿಮೆಯಾಗಬಹುದು. ಅವಿವಾಹಿತರಲ್ಲಿ ಅನಗತ್ಯ ಖರ್ಚುಗಳು ಎದುರಾಗಬಹುದು. ನಿಮ್ಮ ಭವಿಷ್ಯದ ಕುರಿತಾದ ಖರ್ಚುಗಳ ಮಾಡುವಿರಿ. ವಾಹನ ವಿಚಾರದಲ್ಲಿ ಖರ್ಚುಗಳ ಎದುರಿಸಬೇಕಾಗುತ್ತದೆ. ಆರೋಗ್ಯದಲ್ಲೂ ಏರುಪೇರು ಸಂಭವವಿದೆ.
ವೃಶ್ಚಿಕ ರಾಶಿ
ಈ ರಾಶಿಯವರಿಗೆ ಸರಿಯಾದ ರೀತಿಯಲ್ಲಿ ಕೆಲಸಗಳ ಮುಗಿಸಲು ಆಗದೆ ಇರಬಹುದು. ಅಗತ್ಯ ಕೆಲಸದಲ್ಲಿದ್ದಾಗ ನಿಮ್ಮ ಏರುಪೇರುಗಳು ಸಂಭವಿಸಬಹುದು. ನಿಮ್ಮ ಹಲವು ಪ್ರಯೋಜನಗಳಲ್ಲಿ ಅತೀಯಾದ ಕೆಲಸಗಳ ಮಾಡಬೇಕಾಗುತ್ತದೆ. ಮನೆಗಾಗಿ ನೀವು ಖರೀದಿಸುವ ವಸ್ತುಗಳು ನಿಮಗೆ ತೃಪ್ತಿ ತರುವುದಿಲ್ಲ. ಅಧಿಕ ಹಣಕಾಸು ಖರ್ಚುಗಳು ಬರಬಹುದು. ಸಂಬಂಧಿಕರಿಂದ ನಿಮಗೆ ನೋವಿನ ವಿಚಾರಗಳ ಕೇಳಬೇಕಾಗಿ ಬರಬಹುದು. ಆರೋಗ್ಯದ ವಿಚಾರವಾಗಿ ಮಿಶ್ರ ಫಲವಿದೆ. ಉದ್ಯೋಗ ಬದಲಿಸುವುದು ಅಥವಾ ಹೊಸ ಉದ್ಯೋಗ ಹುಡುಕುತ್ತಿದ್ದವರಿಗೆ ಅನಿರೀಕ್ಷಿತ ಅಡ್ಡಿಗಳು ಎದುರಾಗಬಹುದು. ಬ್ಯಾಂಕಿಂಗ್, ಫೈನಾನ್ಸ್ ವಿಚಾರವಾಗಿ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಪ್ರಯಾಣಗಳು ನಿಮಗೆ ಖರ್ಚು ಹಾಗೂ ಅನಾರೋಗ್ಯಕ್ಕೆ ಕಾರಣವಾಗಬಹದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ.)



Click it and Unblock the Notifications











