Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2026ರಲ್ಲಿ ಗುರು ಸ್ಥಾನಪಲ್ಲಟ: ಸಾಲದ ಪ್ರಮಾಣ ಇಳಿಕೆ, ಧನಲಾಭ ನೋಡುವ ರಾಶಿಗಳಿವು!
ವೈದಿಕ ಶಾಸ್ತ್ರದಲ್ಲಿ ಎಲ್ಲಾ ಗ್ರಹಗಳು ಹಾಗೆ ಎಲ್ಲಾ ರಾಶಿಗಳು ವ್ಯಕ್ತಿಯ ಜೀವನದ ಉದ್ದಕ್ಕೂ ಆಯನ ಆಗು ಹೋಗುಗಳಿಗೆ ಕಾರಣವಾಗುವ ಅಂಶಗಳು ಎಂದು ಪರಿಗಣಿಸಲಾಗಿದೆ. ಬಹಳಷ್ಟು ಸಮಯದಲ್ಲಿ ನಿಮ್ಮ ಎಲ್ಲಾ ಕರ್ಮ ಫಲಗಳು, ಕರ್ತವ್ಯಗಳು ನಿಮ್ಮ ಜಾತಕದ ಆಧಾರದ ಮೇಲೆಯೇ ನಿರ್ಧರಿತವಾಗಲಿವೆ. ಗ್ರಹಗಳಲ್ಲಿ ಸ್ಥಾನ ಪಲ್ಲಟವು ಜ್ಯೋತಿಷ್ಯದಲ್ಲಿ ಬಹಳ ಮುಖ್ಯ ವಿದ್ಯಮಾನವಾಗಿ ಪರಿಗಣಿಸಲಾಗುತ್ತದೆ.
ಸದ್ಯ 2026ರಲ್ಲಿಯೂ ಹಲವು ಗ್ರಹಗಳ ಸ್ಥಾನಪಲ್ಲಟ ನಾವು ನೋಡಬಹುದು. ಅದ್ರಲ್ಲೂ ಗುರು ಗ್ರಹದ ಚಲನೆಯು ಕೂಡ ಈ ವರ್ಷ ನಡೆಯಲಿದೆ. ಧನು ಮತ್ತು ಮೀನ ರಾಶಿಯ ಅಧಿಪತಿಯಾಗಿರುವ ಗುರು ಈ ವರ್ಷ ತನ್ನ ರಾಶಿ ಬದಲಾಯಿಸುತ್ತಾನೆ. ಶನಿ ಹಾಗೂ ಗುರು ಗ್ರಹವು ನಿಧಾನಗತಿಯಲ್ಲಿ ಚಲಿಸುವುದರಿಂದ ಈ ವರ್ಷ 1 ರಾಶಿ ಬದಲಾಯಿಸುವುದು ನೋಡಬಹುದು.

2026ರಲ್ಲಿ ಗುರು ಕರ್ಕ ಹಾಗೂ ಸಿಂಹ ರಾಶಿಗೆ ಪ್ರವೇಶಿಸುವುದು ನೋಡಬಹುದು. ಜೂನ್ 2ರಂದು ಕರ್ಕ ರಾಶಿಗೆ ಹಾಗೆ ಅಕ್ಟೋಬರ್ 31ರಂದು ಸಿಂಹ ರಾಶಿಗೆ ಚಲಿಸುವುದು ನೋಡಬಹುದು. ಇದು ಎಲ್ಲಾ ಗ್ರಹಗಳ ಜೀವನದ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು. ಗುರುವಿನ ಸಂಚಾರದಿಂದ ಹಲವು ರೀತಿಯ ಶುಭಗಳನ್ನು ನೋಡಬಹುದು.
ಗುರು ಸುಮಾರು 12 ವರ್ಷಗಳ ಬಳಿಕ ಸಿಂಹ ರಾಶಿಗೆ ಚಲಿಸುತ್ತಾನೆ. 2026ರಲ್ಲಿ ಈ ಅಪರೂಪದ ವಿದ್ಯಮಾನ ಸಂಭವಿಸುತ್ತಿದೆ. ಇದು ಉತ್ತಮ ಆರ್ಥಿಕ ಲಾಭಗಳ ತರುವುದು ನೋಡಬಹುದು. ಗುರು ಸಿಂಹ ರಾಶಿಗೆ ಚಲಿಸುವುದು ಯಾರಿಗೆಲ್ಲಾ ಶುಭದಾಯಕ ಅನ್ನೋದನ್ನು ತಿಳಿದುಕೊಳ್ಳೋಣ.
ವೃಷಭ ರಾಶಿ
2026 ರಲ್ಲಿನ ಗುರು ಸಂಚಾರವು ಹಲವು ರೀತಿಯಲ್ಲಿ ಲಾಭದಾಯಕ ಅಥವಾ ಶುಭದಾಯಕ ಆಗಲಿದೆ. ಗುರು ವೃಷಭ ರಾಶಿಯ 4ನೇ ಮನೆಗೆ ಸ್ಥಳಾಂತರವಾಗುವುದು ನೋಡಬಹುದು. ಇದರಿಂದ ಹಲವರಲ್ಲಿ ಇದು ಐಷಾರಾಮಿ ಸೌಲಭ್ಯಗಳ ತರಬಹುದು. ನಿಮ್ಮ ವಸ್ತುಗಳ ಮೇಲಿನ ಮೌಲ್ಯ ಹೆಚ್ಚಾಗಬಹುದು. ನೀವು ವಾಹನ ಖರೀದಿ ಅಥವಾ ಮಾರಾಟದಲ್ಲಿ ಲಾಭ ಮಾಡುವಿರಿ. ಆನುವಂಶಿಕ ಆಸ್ತಿಗಳನ್ನು ಪಡೆಯುವ ಸಾಧ್ಯತೆಗಳಿವೆ. ಅಲ್ಲದೆ ನೀವು ಕೆಲಸ ಮತ್ತು ವೃತ್ತಿಜೀವನದಲ್ಲಿ ಉತ್ತಮ ಪ್ರಗತಿಯನ್ನು ನೋಡುತ್ತೀರಿ.
ಧನು ರಾಶಿ
2026 ರಲ್ಲಿ ಗುರುವು ಧನು ರಾಶಿಯ 9ನೇ ಮನೆಗೆ ಸ್ಥಳಾಂತರಗೊಳ್ಳುತ್ತಾನೆ. ಇದರಿಂದಾಗಿ ಈ ರಾಶಿ ಜನರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿದೆ. ನಿಮ್ಮ ವಾಹನ ಖರೀದಿ ಅವಕಾಶಗಳು ಸಿಗಲಿದೆ. ಹಲವು ಸಮಯ ನಿಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳಬಹುದು. ಉದ್ಯಮಿಗಳು ಗೆಲುವಿನ ಹಾದಿ ಹಿಡಿಯಲಿದ್ದಾರೆ, ನಿಮ್ಮ ದೊಡ್ಡ ಕೆಲಸಗಳಲ್ಲಿ ಲಾಭಗಳ ನೋಡುವಿರಿ. ಅವಿವಾಹಿತರಿಗೆ ವಿವಾಹ ಸಂಬಂಧಿತ ಅಡ್ಡಿಗಳು ನಿವಾರಣೆಯಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದವರಿಗೆ ಅನುಕೂಲಕರ ದಿನಗಳಿವೆ.
ತುಲಾ ರಾಶಿ
2026 ರಲ್ಲಿ ಗುರುವು ತುಲಾ ರಾಶಿಯ 11 ನೇ ಮನೆಗೆ ಸ್ಥಳಾಂತರಗೊಳ್ಳುತ್ತಾನೆ. ಇದರಿಂದಾಗಿ ಈ ರಾಶಿ ಜನರ ಆದಾಯದಲ್ಲಿ ಹೆಚ್ಚಳ ನೋಡಬಹುದು. ನಿಮ್ಮ ಹೊಸ ಆದಾಯದಲ್ಲಿ ದ್ವಿಗುಣ ಲಾಭ ನೋಡಬಹುದು. ಹೂಡಿಕೆಗಳು ಲಾಭ ತರಲಿವೆ. ನಿಮ್ಮ ಉಳಿತಾಯ ಹೆಚ್ಚಳ ಆಗೋದು ನೋಡಬಹುದು. ಹಾಗೆ ವರ್ಷದಿಂದ ಇದ್ದ ಸಾಲವೊಂದನ್ನು ತೀರಿಸುವ ಸಮಯ ಇದಾಗಲಿದೆ. ನಾಯಕತ್ವ ಕೌಶಲಗಳು ಹೆಚ್ಚಾಗಲಿದೆ. ದಾಂಪತ್ಯ ವಿಚಾರದಲ್ಲಿ ಶುಭವಾಗುವುದು. ವಾಹನ ಸಂಬಂಧಿತ ಚಿಂತೆಗಳು ನಿವಾರಣೆಯಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications



