Latest Updates
-
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು?
ಕರ್ಕ ರಾಶಿಗೆ ಗುರು ಪ್ರಯಾಣ: ದೀಪಾವಳಿಯಿಂದ ಈ ರಾಶಿಯವರ ಅದೃಷ್ಟ ಬದಲು, ವರ್ಷವೆಲ್ಲಾ ಶುಭ!
ಅಕ್ಟೋಬರ್‌ನಲ್ಲಿ ಹಲವು ಗ್ರಹಗಳ ಚಲನೆಯನ್ನು ನೋಡಬಹುದು. ಅದ್ರಲ್ಲೂ ಗುರುವಿನ ಚಲನೆಯಿಂದಾಗಿ ಹಲವು ರೀತಿಯ ಬದಲಾವಣೆಗಳ ನೋಡಬಹುದು. ದೀಪಾವಳಿಯ ಸಮಯದಲ್ಲಿ ಹಲವು ಗ್ರಹಗಳ ಸ್ಥಾನಪಲ್ಲಟವು ವಿಶೇಷ ರೀತಿಯಾಗಿ ಲಾಭಕ್ಕೆ ಕಾರಣವಾಗಲಿದೆ. ಅದ್ರಲ್ಲೂ ಗುರು 13 ತಿಂಗಳ ಕಾಲ ಒಂದೇ ರಾಶಿಯಲ್ಲಿ ಚಲಿಸುತ್ತಾನೆ. ಇದರಿಂದಾಗಿ ದೀರ್ಘಕಾಲದ ಚಲನೆ ಹಾಗೆ ಹಲವು ಗ್ರಹಗಳೊಂದಿಗೆ ಸಂಯೋಗವಾಗುತ್ತಾನೆ.
ಈಗ ಅಕ್ಟೋಬರ್ 20 ರಂದು ದೀಪಾವಳಿ ಮತ್ತು ಅಕ್ಟೋಬರ್ 18 ರಂದು ಧಂತೇರಸ್ ಬರುತ್ತದೆ. ದೀಪಾವಳಿ ಮತ್ತು ಧಂತೇರಸ್ ನಡುವೆ, ಅಂದರೆ, ಅಕ್ಟೋಬರ್ 19 ರಂದು ಗುರು ತನ್ನ ಸ್ಥಾನ ಬದಲಾಯಿಸಲಿದ್ದಾನೆ. ಗುರುವಿನ ಉಚ್ಛ ರಾಶಿ ಕರ್ಕ ರಾಶಿಗೆ ಗುರು ಚಲಿಸಲಿದ್ದಾನೆ. ಕರ್ಕ ರಾಶಿಯಲ್ಲಿ 13 ತಿಂಗಳ ಕಾಲ ಗುರು ನೆಲೆಸಲಿದ್ದಾನೆ.

ಗುರು ಈಗ ಮಿಥುನ ರಾಶಿಯಲ್ಲಿದ್ದು, ಕರ್ಕ ರಾಶಿಗೆ ಚಲಿಸಿದಾಗ ಹಲವು ರಾಶಿಗಳ ಮೇಲೆ ಅದರ ಪರಿಣಾಮ ಉಂಟಾಗಲಿದೆ. ಅದ್ರಲ್ಲೂ ಕೆಲ ರಾಶಿಗಳಲ್ಲಿ ಆದಾಯ, ವೃತ್ತಿ, ದಾಂಪತ್ಯ, ಮನೆ ವಿಚಾರಗಳಲ್ಲಿ ಹಲವು ರೀತಿ ಶುಭ ವಿಚಾರಗಳು ನಡೆಯಲಿವೆ. ಈ ಗುರು ಗೋಚರದ ಸಮಯದಲ್ಲಿ ಯಾವ ರಾಶಿಯವರು ಲಾಭ ಮಾಡಲಿದ್ದಾರೆ? ಯಾರಿಗೆ ಶುಭಕರ ದಿನಗಳಿವೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಕರ್ಕ ರಾಶಿ
ಗುರು ತನ್ನ ಉಚ್ಛ ಸ್ಥಾನ ತಲುಪುವ ರಾಶಿ ಅಂದರೆ ಅದು ಕರ್ಕ ರಾಶಿಯಾಗಿದೆ. ಅಕ್ಟೋಬರ್ 19ರಂದು ಗುರು ಕರ್ಕ ರಾಶಿ ಪ್ರವೇಶಿಸಲಿದ್ದಾನೆ. ಕರ್ಕ ರಾಶಿಯ ಲಗ್ನ ಮನೆಯಲ್ಲಿ ಗುರು ಸಂಚರಿಸುತ್ತಾನೆ. ಹೀಗಾಗಿ ಕರ್ಕ ರಾಶಿಯವರು ಹಿಂದೆಂದೂ ನೋಡಿರದ ಲಾಭ ನೋಡುತ್ತಾರೆ. ಅವರ ಪ್ರತಿಯೊಂದು ಕೆಲಸದಲ್ಲೂ ಶುಭವಾಗುವುದು ನೋಡಬಹುದು. ಹಲವು ವರ್ಷದಿಂದ ಅವರ ಜೀವನದಲ್ಲಿ ಎದುರಾಗಿದ್ದ ಅಡ್ಡಿಗಳಲ್ಲಿ ಬಹುತೇಕ ಸಮಸ್ಯೆಗಳು ನಿವಾರಣೆಯಾಗಲಿವೆ. ಆರ್ಥಿಕವಾಗಿ, ವೈವಾಹಿಕ ವಿಚಾರವಾಗಿ, ವೃತ್ತಿ ಸಂಬಂಧಿತ ಯಾವುದೇ ಅಡ್ಡಿಗಳು ಈ ಸಮಯದಲ್ಲಿ ನಿವಾರಣೆಯಾಗಬಹುದು. ಉದ್ಯೋಗದಲ್ಲಿರುವವರು ಈ ಸಮಯದಲ್ಲಿ ಹೊಸ ಜವಾಬ್ದಾರಿಗಳನ್ನು ಪಡೆಯಬಹುದು. ಕೆಲಸದಲ್ಲಿ ಮೇಲಧಿಕಾರಿಗಳೊಂದಿಗಿನ ನಿಮ್ಮ ಸಂಬಂಧಗಳು ಬಲಗೊಳ್ಳುತ್ತವೆ. ನಿಮ್ಮ ಕೆಲಸದಲ್ಲಿ ಬಡ್ತಿ ಮತ್ತು ಪ್ರಗತಿಗೆ ಅವಕಾಶಗಳಿವೆ. ಸಮಾಜದಲ್ಲಿ ನೀವು ಬಯಸಿದಂತಹ ಗೌರವ ನಿಮಗೆ ಸಿಗಲಿದೆ. ಆಪ್ತರಿಂದ ದೊಡ್ಡ ಸಂತೋಷಗಳ ಪಡೆಯುತ್ತೀರಿ.
ತುಲಾ ರಾಶಿ
ಗುರುವಿನ ರಾಶಿ ಬದಲಾವಣೆಯಿಂದಾಗಿ ತುಲಾ ರಾಶಿಯ ಜನರಿಗೆ ಬಹಳ ಅನುಕೂಲವಿದೆ. ತುಲಾ ರಾಶಿಯ 10ನೇ ಮನೆಯಲ್ಲಿ ಗುರು ಚಲನೆ ನೋಡಬಹುದು. ಇದನ್ನು ಕರ್ಮದ ಮನೆ ಎಂದು ಪರಿಗಣಿಸಲಾಗಿದೆ. ಇದು ನಿಮ್ಮ ವೃತ್ತಿ, ವ್ಯವಹಾರ, ವ್ಯಾಪಾರ, ಉದ್ಯಮದಂತಹ ವಿಚಾರಗಳಲ್ಲಿ ಶುಭ ತರಲಿದೆ. ನೀವು ಸ್ವಂತ ಉದ್ಯೋಗ ಆರಂಭಿಸುವುದು, ಅಥವಾ ಆ ಸಂಬಂಧ ದೊಡ್ಡ ಒಪ್ಪಂದ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಬಹುದು. ನಿರುದ್ಯೋಗಿಗಳಾಗಿದ್ದರೆ ಈ ಸಮಯವು ನಿಮಗೆ ಅವಕಾಶಗಳ ತರುವ ಸಮಯ ಆಗಿರಲಿದೆ. ಪ್ರೀತಿ ವಿಚಾರಗಳು ನಿಮ್ಮ ಪರವಾದ ಫಲಿತಾಂಶ ತರಬಹುದು. ವ್ಯಾಪಾರಿಗಳು ಲಾಭದಾಯಕ ದಿಕ್ಕಿನತ್ತ ಸಾಗಲಿದ್ದಾರೆ.
ವೃಶ್ಚಿಕ ರಾಶಿ
ದೀಪಾವಳಿಯಂದು ಗುರುವು ತನ್ನ ರಾಶಿ ಬದಲಾಯಿಸುವುದು ವೃಶ್ಚಿಕ ರಾಶಿಗೆ ಅನುಕೂಲಕರ ದಿನಗಳ ಆರಂಭದ ಸೂಚನೆಯಾಗಿರಲಿದೆ. ನಿಮ್ಮ ಬಹು ದಿನಗಳ ಆಸೆಗಳನ್ನು ಈಡೇರಿಸಿಕೊಳ್ಳುವಿರಿ. ಹೊಸ ವಸ್ತುಗಳನ್ನು ಮನೆಗೆ ತರುವ ನಿಮ್ಮ ಬಯಕೆಗಳು ಈಡೇರಲಿವೆ. ಅವಿವಾಹಿತರಲ್ಲಿ ವಿವಾಹ ಸಂಬಂಧವಾಗಿ ಶುಭ ಸುದ್ದಿಗಳ ಕೇಳುವಿರಿ. ಸರ್ಕಾರಿ ಉದ್ಯೋಗ ಹುಡುಕುವ ಮಂದಿಗೆ ಇದು ಉತ್ತಮ ದಿನಗಳ ತರಲಿದೆ. ವೈವಾಹಿಕ ಜೀವನದಲ್ಲಿ ಸುಖ ಕಾಣುವಿರಿ. ನಿಮ್ಮ ವ್ಯವಹಾರಗಳಲ್ಲಿ ಲಾಭವಿದೆ. ನಿಮ್ಮ ಆದಾಯ ದುಪ್ಪಟ್ಟು ಮಾಡಿಕೊಳ್ಳುವ ದಾರಿಯಲ್ಲಿದ್ದ ಅಡ್ಡಿಗಳು ನಿವಾರಣೆಯಾಗಲಿದೆ. ಬಹು ಸಮಯದ ಅನಾರೋಗ್ಯಗಳು ನಿಮ್ಮಿಂದ ದೂರಾಗಬಹುದು.
(ಹಕ್ಕು ನಿರಾಕರಣೆ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications