Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಿಥುನ ರಾಶಿಗೆ ಗುರು ಸಂಚಾರ: ಈ ಮೂರು ರಾಶಿಯವರಲ್ಲಿ ಅತ್ಯಧಿಕ ಆರ್ಥಿಕ ಲಾಭ!!
ವೈದಿಕ ಶಾಸ್ತ್ರದಲ್ಲಿ ಗುರು ಗ್ರಹವನ್ನು ರಾಶಿಗಳ ಗುರು ಎಂದು ಪರಿಗಣಿಸಲಾಗಿದೆ, ಗುರುಬಲ ಹೊಂದಿರುವ ರಾಶಿಯಲ್ಲಿ ನೀವು ಜನಿಸಿದ್ದರೆ ನಿಮ್ಮ ಜೀವನದ ಯಾವಾಗಲು ಬೆಳಗುತ್ತಿರುತ್ತದೆ. ಎಲ್ಲಾ ರೀತಿಯಲ್ಲೂ ನಿಮಗೆ ಉತ್ತಮ ಲಾಭದಾಯಕ ದಿನಗಳು ಎದುರಾಗುವುದು ನೋಡಬಹುದಾಗಿದೆ. ನವಗ್ರಹಗಳಲ್ಲಿ ಗುರುವನ್ನು ಬಹಳ ಶ್ರೇಷ್ಠ ಗ್ರಹವೆಂದು ಪರಿಗಣಿಸಲಾಗಿದೆ. ಗುರು ಜ್ಞಾನ, ಸಂಪತ್ತು, ಐಶ್ವರ್ಯ, ಆಸ್ತಿಯ ಸಂಕೇತ ಎಂದೂ ಕೂಡ ಕರೆಯಲಾಗಿದೆ.
ಗುರು ಪ್ರತಿ ರಾಶಿಯಲ್ಲಿ ಬರೋಬ್ಬರಿ 1 ವರ್ಷ ಸಂಚರಿಸಲಿದೆ. ಇಷ್ಟು ನಿಧಾನ ಗತಿಯ ಸಂಚಾರವು ಎಲ್ಲಾ ರಾಶಿಯ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು, ಹಾಗೆ 12 ವರ್ಷಕ್ಕೊಮ್ಮೆ ಮಾತ್ರ ಒಂದು ರಾಶಿಯಲ್ಲಿ ಆತ ಚಲಿಸಲಿದ್ದಾನೆ. ಪ್ರಸ್ತುತ ಈಗ ಗುರು ಗ್ರಹವು ಮಿಥುನ ರಾಶಿಗೆ ಚಲಿಸುವ ಕಾಲ ಸನ್ನಿಹಿತವಾಗಿದೆ, ಈಗ ವೃಷಭ ರಾಶಿಯಲ್ಲಿರುವ ಗುರು ಮಿಥುನ ರಾಶಿಗೆ ಚಲಿಸಲಿದ್ದಾನೆ.

ಮೇ ತಿಂಗಳಲ್ಲಿ ಗುರುವಿನ ಚಲನೆ ಬದಲಾಗುತ್ತಿದೆ. ಆತ ಮಿಥುನ ರಾಶಿಗೆ ಚಲಿಸುತ್ತಿರುವುದು ಹಲವು ರಾಶಿಗಳಿಗೆ ಲಾಭದಾಯಕವಾಗಿ ಪರಿಣಮಿಸಲಿದೆ. ಹಾಗಾದ್ರೆ ಗುರುವಿನ ರಾಶಿ ಬದಲಾವಣೆಯು ಯಾವೆಲ್ಲಾ ರಾಶಿಯವರಿಗೆ ಲಾಭದಾಯಕವಾಗಲಿದೆ ಎನ್ನುವುದನ್ನು ನಾವಿಂದು ತಿಳಿದುಕೊಳ್ಳೋಣ.
ವೃಷಭ ರಾಶಿ
ಗುರು ಗ್ರಹವು ಮಿಥುನ ರಾಶಿಗೆ ಚಲಿಸುವುದು ವೃಷಭ ರಾಶಿಯವರಿಗೆ ಅತ್ಯಧಿಕ ಲಾಭಕ್ಕೆ ಕಾರಣವಾಗುತ್ತಿದೆ. ಗುರು ಚಲನೆಯು ನಿಮ್ಮಲ್ಲಿ ಹೊಸತನ ತರಲು ಕಾರಣವಾಗುತ್ತಿದೆ, ನೀವು ಹೊಸ ಉದ್ಯೋಗ, ಹೊಸ ಆಸ್ತಿ, ಹೊಸ ವಸ್ತುಗಳ ಖರೀದಿಗೆ ಮುಂದಾಗುತ್ತೀರಿ. ಇದು ನಿಮ್ಮ ಆರ್ಥಿಕ ಪ್ರಗತಿಯಲ್ಲಿ ಸಹಕಾರಿಯಾಗಲಿದೆ. ಹಾಗೆ ನಿಮ್ಮ ದೈನಂದಿನ ಕೆಲಸ ಕಾರ್ಯದಲ್ಲಿ ಪ್ರಗತಿ, ಯಶಸ್ಸು ನೋಡಬಹುದಾಗಿದೆ. ನೀವು ಅನುವಂಶೀಯವಾದ ವೃತ್ತಿಯಲ್ಲಿ ತೊಡಗಿದ್ದರೆ ಹಲವು ರೀತಿಯ ಲಾಭ ನೋಡಲಿದ್ದೀರಿ. ಕುಟುಂಬ ಸದಸ್ಯರೊಂದಿಗೆ ನಿಮ್ಮ ಸಂಬಂಧವು ಸಂತೋಷದಿಂದ ಕೂಡಿರಲಿದೆ. ನಿಮ್ಮಿಂದ ಬೇರೆಯವರು ನಿರೀಕ್ಷಿಸಿದದ್ದ ಬೇಡಿಯೊಂದನ್ನು ನೀವು ಪೂರೈಸಲಿದ್ದೀರಿ. ಉದ್ಯೋಗದ ಸ್ಥಳದಲ್ಲಿ ಹೊಸ ಜವಾಬ್ದಾರಿ ನಿಮ್ಮ ಹೆಗಲೇರಲಿದೆ.
ಸಿಂಹ ರಾಶಿ
ಗುರು ಗ್ರಹವು ಸಿಂಹ ರಾಶಿಯ 11 ನೇ ಮನೆಯಲ್ಲಿ ಸಂಚಾರ ಮಾಡಲಿದೆ. ಇದು ಈ ರಾಶಿ ಜನರ ಪ್ರತಿಯೊಂದು ಪ್ರಯತ್ನದಲ್ಲೂ ಉತ್ತಮಗೊಳಿಸಲಿದೆ. ನಿಮ್ಮಲ್ಲಿ ಯಾವುದೇ ಅಡೆತಡೆಯಿಲ್ಲದೆ ಕೆಲಸಗಳು ಪೂರ್ಣವಾಗಲಿದೆ. ನಿಮ್ಮ ಒತ್ತಡಗಳ ನಿವಾರಣೆಗೆ ಹೊಸ ಮಾರ್ಗಗಳು ಸೃಷ್ಟಿಯಾಗಲಿದೆ. ನೀವು ಕುಟುಂಬದಲ್ಲು ಎದುರಿಸುತ್ತಿರುವ ಸಮಸ್ಯೆಗಳು ನಿವಾರಣೆಯಾಗಲಿದೆ. ನಿಮ್ಮ ಮನದಲ್ಲಿರುವ ಬಹುದೊಡ್ಡ ಆಸೆಯೊಂದನ್ನು ನೀವು ನನಸಾಗಿಸಿಕೊಳ್ಳಲು ಇದು ಸಮಯವಾಗಲಿದೆ. ಹೂಡಿಕೆ, ಉಳಿತಾಯದಲ್ಲಿ ನಿಮ್ಮ ಆದಾಯ ಹೆಚ್ಚಾಗಲಿದೆ. ನಿಮ್ಮ ಕುಟುಂಬದಲ್ಲಿ ಶಾಂತಿ ಹಾಗೂ ಶುಭ ಕಾರ್ಯ ನಡೆಯಬಹುದು. ಹೊಸದಾದ ಉದ್ಯೋಗ ಹುಡುಕಿದರೆ ನಿಮ್ಮ ಆಕಾಂಕ್ಷೆಗೂ ಮೀರಿದ ಯಶ್ಸಸ್ಸು ಸಿಗಬಹುದು. ವ್ಯಾಪಾರಿಗಳು ಈ ಸಮಯದಲ್ಲಿ ಹೆಚ್ಚು ಲಾಭ ಪಡೆಯುತ್ತಾರೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.
ಧನು ರಾಶಿ
ಗುರು ಗ್ರಹವು ಧನು ರಾಶಿಯ 4 ನೇ ಮನೆಯಲ್ಲಿ ಸಾಗಲಿದೆ. ಇದು ಈ ರಾಶಿ ಜನರ ವೈವಾಹಿಕ ಜೀವನದಲ್ಲಿನ ಸಮಸ್ಯೆಗಳ ನಿವಾರಣೆ ಮಾಡಲಿದೆ. ವಿವಾಹಿತರ ಜೀವನದಲ್ಲಿ ಸಂತೋಷ ನೋಡಬಹುದು. ಈ ಸಮಯದಲ್ಲಿ ಗುಣಮಟ್ಟದ ಜೀವನ ಅನುಭವಿಸುತ್ತೀರಿ. ಅನಿರೀಕ್ಷಿತ ಮೂಲದಿಂದ ಧನಲಾಭಕ್ಕೆ ಕಾರಣವಾಗಲಿದೆ. ಗುರುವಿನ ಸಂಚಾರದಿಂದ ನಿಮ್ಮ ಆಸ್ತಿ ಸಂಬಂಧಿತ ಸಮಸ್ಯೆ ದೂರಾಗಲಿದೆ. ಹಾಗೆ ಎಲ್ಲಾ ಕೆಲಸಗಳಲ್ಲಿ ಅಡೆತಡೆ ನಿವಾರಣೆಯಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications