Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಆಗಸ್ಟ್‌ನಲ್ಲಿ ಎರಡು ಬಾರಿ ಗುರು ಸ್ಥಾನಪಲ್ಲಟ: ಈ ರಾಶಿಯವರಲ್ಲಿ ಆರ್ಥಿಕ, ವ್ಯಾಪಾರ ಲಾಭ!
ವೈದಿಕ ಜ್ಯೋತಿಷ್ಯದ ಪ್ರಕಾರ ನವಗ್ರಹಗಳ ಚಲನೆಯನ್ನು ಬಹಳ ಪ್ರಮುಖ ವಿದ್ಯಮಾನ ಎಂದು ಪರಿಗಣಿಸಲಾಗಿದೆ. ಹಾಗೆ ಗ್ರಹಗಳ ಚಲನೆಯು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು. ಹಾಗೆ ಈ ಗ್ರಹಗಳು ನಿರ್ಧಿಷ್ಟ ಸಮಯದಲ್ಲಿ ರಾಶಿ, ನಕ್ಷತ್ರಗಳ ಬದಲಾಯಿಸುವುದು ನೋಡಬಹುದು. ಈಗ ಗುರು ಗ್ರಹ ಆಗಸ್ಟ್‌ನಲ್ಲಿ ಎರಡು ಬಾರಿ ಸ್ಥಾನಪಲ್ಲಟ ಆಗಲಿದ್ದಾನೆ.
ಗುರು ಒಂದು ವರ್ಷದಲ್ಲಿ ಒಮ್ಮೆ ಗುರು ತನ್ನ ರಾಶಿ ಬದಲಾಯಿಸುತ್ತಾನೆ. ಹಾಗೆ ನಕ್ಷತ್ರ ಬದಲಾಯಿಸುತ್ತಾನೆ. ಪ್ರಸ್ತುತ ಗುರು ಭಗವಾನ್ ಮಿಥುನ ರಾಶಿಯಲ್ಲಿ ಪ್ರಯಾಣಿಸುತ್ತಿನೆ. ಹಾಗೆ ಗುರು ಈಗ ಪುನರ್ವಸು ನಕ್ಷತ್ರಕ್ಕೆ ಚಲಿಸಲಿದ್ದಾನೆ. ಆಗಸ್ಟ್ 13ರಂದು ಮೊದಲ ಹಂತವಾಗಿ ಪುನರ್ವಸು ನಕ್ಷತ್ರಕ್ಕೆ ಚಲಿಸಲಿದ್ದಾನೆ.

ಹಾಗೆ ಗುರು ಇದೇ ಆಗಸ್ಟ್ 30ರಂಂದು ಪುನರ್ವಸು ನಕ್ಷತ್ರದಲ್ಲಿ ಎರಡನೇ ಪಾದದಲ್ಲಿ ಚಲಿಸಲಿದ್ದಾನೆ. ಇದು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡುವುದು ನೋಡಬಹುದು. ವಿಶೇಷವಾಗಿ ಕೆಲವು ರಾಶಿಗಳಿಗೆ ಹಲವು ಬಗೆಯಲ್ಲಿ ಇದು ಲಾಭದಾಯಕವಾಗುತ್ತಿದೆ. ವೃತ್ತಿ, ಹಣಕಾಸು, ದಾಂಪತ್ಯ, ಕೌಟುಂಬಿಕ ವಿಚಾರ, ಔದ್ಯೋಗಿಕ ವಿಚಾರದಲ್ಲಿ ಇದು ಲಾಭ ತರಲಿದೆ.
ಮೇಷ ರಾಶಿ
ಆಗಸ್ಟ್‌ನಲ್ಲಿ ಎರಡು ಬಾರಿ ಸಂಭವಿಸುವ ಗುರುವಿನ ಸ್ಥಾನಪಲ್ಲಟವು ಮೇಷ ರಾಶಿ ಜನರಿಗೆ ಬಹಳ ಲಾಭದಾಯಕವಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಯಶಸ್ಸು ಪಡೆಯುತ್ತಾರೆ. ನಿಮ್ಮ ಆರ್ಥಿಕ ಸ್ಥಿತಿಯು ಸುಧಾರಿಸಲಿದೆ. ಹೂಡಿಕೆಗಳು ಲಾಭದಾಯಕವಾಗುತ್ತವೆ. ಹಾಗೆ ನಿಮ್ಮ ಹಣಕಾಸು ಕುರಿತ ಸಂಕಷ್ಟಗಳು ಒಂದೊಂದಾಗಿಯೇ ನಿವಾರಣೆಯಾಗಲಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಬಡ್ತಿ, ಸಂಬಳ ಹೆಚ್ಚಳ, ವರ್ಗಾವಣೆ ಅಂತಹ ಕಾರ್ಯಗಳು ನಿಮಗೆ ಸುಲಭವಾಗಿ ಒಲಿಯಲಿವೆ. ಆರೋಗ್ಯದಲ್ಲಿ ಸುಧಾರಣೆ ನೋಡುವಿರಿ. ಬಹಳ ಸಮಯದಿಂದ ನಿಮಗೆ ಬರಬೇಕಿದ್ದ ಹಣಕಾಸು ನಿಮ್ಮ ಕೈ ಸೇರಲಿದೆ. ಪ್ರಯಾಣಗಳಲ್ಲಿ ಶುಭಕರ.
ಕರ್ಕ ರಾಶಿ
ಆಗಸ್ಟ್‌ನಲ್ಲಿ ಎರಡು ಬಾರಿ ಸಂಭವಿಸುವ ಗುರು ಸಂಚಾರವು ಈ ಕರ್ಕ ರಾಶಿಯ ಜನರಿಗೆ ಅನುಕೂಲಕರ ದಿನಗಳ ತರಲಿದೆ, ನಿಮ್ಮ ಒತ್ತಡಗಳು ಕಡಿಮೆಯಾಗುತ್ತವೆ, ಔದ್ಯೋಗಿಕ ವಿಚಾರವಾಗಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಮನದಲ್ಲಿ ಶಾಂತಿ ನೆಲೆಸಲಿದೆ. ಹೊಸ ಆಸ್ತಿ ಖರೀದಿ, ಮನೆ ನಿರ್ಮಾಣದಂತಹ ಕೆಲಸದಲ್ಲಿ ನಿಮಗೆ ಶುಭಕರ ಸಮಯವಾಗಲಿದೆ. ಉದ್ಯಮಿಗಳಿಗೆ ಈ ಸಮಯ ಬಹಳ ಅನುಕೂಲ. ವ್ಯಾಪಾರಿಗಳು ಕೂಡ ಲಾಭದಾಯಕ ದಿನಗಳ ನೋಡುವಿರಿ. ದಾಂಪತ್ಯದಲ್ಲಿನ ಸಮಸ್ಯೆಯೊಂದು ನಿವಾರಣೆಯಾಗುವ ನಿರೀಕ್ಷೆ ಇಡಬಹುದು. ದಾಂಪತ್ಯ ವಿಚಾರವಾಗಿ ನಿಮಗೆ ಶುಭ ತರುವ ಸಮಯವಾಗಿರಲಿದೆ. ಮೂಳೆ ಸಂಬಂಧಿತ ಅನಾರೋಗ್ಯ ಸಮಸ್ಯೆ ನಿವಾರಣೆಯಾಗಲಿದೆ.
ಮೀನ ರಾಶಿ
ಆಗಸ್ಟ್‌ನಲ್ಲಿ ಗುರುವಿನ ಸಂಚಾರವು ಮೀನ ರಾಶಿಯವರಿಗೆ ಸುವರ್ಣ ಸಮಯವಾಗಿರುತ್ತದೆ. ಗುರುವು ಮೀನ ರಾಶಿಯ ಅಧಿಪತಿಯಾಗಿರುವುದರಿಂದ, ನಿಮ್ಮಲ್ಲಿ ಧನಾತ್ಮಕ ಪರಿಣಾಮಗಳ ನೋಡಬಹುದು. ನಿರುದ್ಯೋಗಿಗಳಿಗೆ ಈ ಸಮಯದಲ್ಲಿ ಉತ್ತಮ ಅವಕಾಶಗಳು ಸಿಗಬಹುದು. ನೀವು ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಿದ್ದರೆ ಮತ್ತು ಪ್ರಯತ್ನಿಸುತ್ತಿದ್ದರೆ, ನಿಮಗೆ ಉತ್ತಮ ಫಲಿತಾಂಶಗಳು ಸಿಗುತ್ತವೆ. ಆರ್ಥಿಕ ಸಮಸ್ಯೆಗಳು ದೂರಾಗುವ ಸಂಭಾವನೀಯ ಅವಕಾಶಗಳ ಪಡೆಯಲಿದ್ದೀರಿ. ವಿದ್ಯಾರ್ಥಿಗಳಿಗೆ ಈ ಸಮಯವು ಲಾಭದಾಯಕ ಹಾಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಮಂದಿಗೆ ಈ ಸಮಯವು ಬಹಳ ಅನುಕೂಲಕರ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ.)



Click it and Unblock the Notifications
